ಮೇ 2020ರ ಬಳಿಕ ಮೊದಲ ಬಾರಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಏರಿಕೆ ಮಾಡಿದೆ. ಬುಧವಾರ ಆರ್‌ಬಿಐ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ಗಳಿಂದ 4.40 ಪ್ರತಿಶತಕ್ಕೆ ಹೆಚ್ಚಿಸಿದೆ. ವಿತ್ತೀಯ ನೀತಿ ಸಮಿತಿಯ ಅನಿರ್ದಿಷ್ಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಹಾಗೆಯೇ ಇದು ತಕ್ಷಣದಿಂದಲೇ ಜಾರಿಗೆ ಬಂದಿದೆ.
ರೆಪೋ ದರದ ಏರಿಕೆ ಬಳಿಕ ಗೃಹ ಸಾಲದ ಇಎಂಐ ಏರಿಕೆ ಆಗಲಿದೆ ಎಂಬ ಬಗ್ಗೆ ಚರ್ಚೆಗಳು ನಡೆದಿದೆ. ಹಾಗೆಯೇ ಬ್ಯಾಂಕ್ ಆಫ್ ಬರೋಡಾ ಹಾಗೂ ಐಸಿಐಸಿಐ ಬ್ಯಾಂಕ್ ರೆಪೋ ದರ ಲಿಂಕ್ಡ್ ಗೃಹ ಸಾಲಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿದೆ. ಇನ್ನು ಹಲವಾರು ಬ್ಯಾಂಕ್‌ಗಳು ಬಡ್ಡಿದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ಈ ನಡುವೆ ರೆಪೋ ದರ ಏರಿಕೆಯಿಂದಾಗಿ ಎಫ್‌ಡಿಯಲ್ಲಿ ಹೆಚ್ಚು ರಿಟರ್ನ್ ದೊರೆಯುವ ಸಾಧ್ಯತೆ ಇದೆ.
ಸಾಲದ ಇಎಂಐ ದರ ಏರಿಕೆಯ ನಡುವೆ ಹೂಡಿಕೆಯ ಬಡ್ಡಿದರವು ಏರಿಕೆ ಕೂಡಾ ಹೆಚ್ಚಾಗಲಿದೆ ಎಂಬುವುದು ಒಳ್ಳೆಯ ಸುದ್ದಿಯಾಗಿದೆ. ರೆಪೋ ದರವು ಸಾಮಾನ್ಯವಾಗಿ ಬ್ಯಾಂಕ್‌ನಿಂದ ಪಡೆದ ಸಾಲಗಳು ಹಾಗೂ ಫಿಕ್ಸಿಡ್ ಡೆಪಾಸಿಟ್‌ಗಳ ಮೇಲೆ ಪರಿಣಾಮವನ್ನು ಉಂಟು ಮಾಡಲಿದೆ. ದರಗಳಲ್ಲಿನ ನಿಜವಾದ ಬದಲಾವಣೆಗಳು ಬ್ಯಾಂಕ್‌ಗಳಿಗೆ ಅವಲಂಭಿತವಾಗಿದೆ.

ಫಿಕ್ಸಿಡ್ ಡೆಪಾಸಿಟ್‌ಗೆ ಸುಸಮಯವೇ?
ಫಿಕ್ಸಿಡ್ ಡೆಪಾಸಿಟ್‌ಗಳು ಸುರಕ್ಷಿತ ಹೂಡಿಕೆಯ ಆಯ್ಕೆಗಳಾಗಿದ್ದು ಅದು ಗ್ರಾಹಕರಿಗೆ ಖಾತರಿಯ ಲಾಭವನ್ನು ನೀಡುತ್ತದೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಉಳಿತಾಯ ಠೇವಣಿಗಳ ಮೇಲೆ ಪಾವತಿಸಬೇಕಾದ ಇತ್ತೀಚಿನ ಬಡ್ಡಿ ದರ/ಕಾರ್ಡ್ ದರ ಮತ್ತು ವಿವಿಧ ಮೆಚುರಿಟಿಗಳ ಅವಧಿ ಠೇವಣಿಗಳನ್ನು ಬಳಸಿಕೊಂಡು ಠೇವಣಿಗಳ ದರವನ್ನು ಲೆಕ್ಕ ಹಾಕಬೇಕು.
ರೆಪೋ ದರ ಹೆಚ್ಚಳವಾದ ಕಾರಣ ಅನಿಶ್ಚಿತ ಸಾಲಗಳು ಮತ್ತು ಹೊಸ ಸಾಲಗಳು ಹೆಚ್ಚು ಬಡ್ಡಿದರವನ್ನು ಹೊಂದಿರಲಿದೆ. ಈಗಾಗಲೇ ಸಾಲ ಪಡೆದಿರುವವರಿಗೆ ಇಎಂಐಗಳು ಮತ್ತು ಬಡ್ಡಿ ದರಗಳು ಬದಲಾಗದೆ ಇರುತ್ತವೆ. ಬಡ್ಡಿದರಗಳು ಹೆಚ್ಚಾದಾಗ, ಅಲ್ಪಾವಧಿಯ ಮತ್ತು ಮಧ್ಯಮ ಅವಧಿಯ ಎಫ್‌ಡಿ ದರಗಳು ಮೊದಲು ಹೆಚ್ಚಳವನ್ನು ಕಾಣುತ್ತವೆ. ದೀರ್ಘಾವಧಿಯ ಠೇವಣಿ ದರಗಳು ನಂತರ ಹೆಚ್ಚಳವಾಗಲಿದೆ. ಆದರೆ ಬ್ಯಾಂಕ್‌ಗಳು ಈ ದರ ಪಾಲನೆಗೆ ಕೊಂಚ ಸಮಯವನ್ನು ತೆಗೆದುಕೊಳ್ಳಬಹುದು. ಇನ್ನು ಮುಂಬರುವ ತಿಂಗಳುಗಳಲ್ಲಿ ಹೀಗೆಯೇ ರೆಪೋ ದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications