ನಾವು ಕೂಡಾ ಶ್ರೀಮಂತರಾಗಬೇಕು ಎಂದು ಯಾರು ಬಯಸುವುದಿಲ್ಲ ಹೇಳಿ?. ಶ್ರೀಮಂತರಾಗಬೇಕು ಎಂಬುವುದು ಹಲವಾರು ಇಂದಿನ ಯುವಜನರಲ್ಲಿ ಇರುವ ಸಾಮಾನ್ಯ ಬಯಕೆಯಾಗಿದೆ. ಹಣಕಾಸಿನ ಅರಿವು ವಿವಿಧ ಹಣಕಾಸಿನ ಕಾರ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ನಿರ್ವಹಣೆ ಮಾಡುವುದು ಆಗಿದೆ. ಈ ಹಣಕಾಸಿನ ಅರಿವು ಮುಖ್ಯವಾಗುತ್ತದೆ. ಬಜೆಟ್, ನಿವೃತ್ತಿ ಯೋಜನೆಗಳು, ಸಾಲವನ್ನು ನಿರ್ವಹಿಸುವುದು ಮತ್ತು ವೈಯಕ್ತಿಕ ಖರ್ಚುಗಳನ್ನು ನಿರ್ವಹಣೆ ಮಾಡುವುದು ಎಲ್ಲವೂ ಮುಖ್ಯವಾಗುತ್ತದೆ.
ಪ್ರತಿಯೊಬ್ಬರೂ ಆರ್ಥಿಕವಾಗಿ ಸ್ವತಂತ್ರರಾಗಿರುವುದು ಬಹಳ ಮುಖ್ಯ. ನೀವು ಎಷ್ಟು ಬೇಗನೆ ಹಣವನ್ನು ಉಳಿತಾಯ ಮಾಡಲು ಆರಂಭ ಮಾಡುತ್ತೀರೋ ಅಷ್ಟು ಅಧಿಕ ಸಂಪತ್ತನ್ನು ಸಂಗ್ರಹಿಸಲು, ಶ್ರೀಮಂತರಾಗಲು ಸಾಧ್ಯವಾಗುತ್ತದೆ. 2019ರಿಂದ ಏಪ್ರಿಲ್ 25ರಂದು ರಾಷ್ಟ್ರೀಯ ಹಣಕಾಸು ಜಾಗೃತಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ನಡುವೆ ನೀವು ಶ್ರೀಮಂತರಾಗಬೇಕೆಂದಾದರೆ ಇಲ್ಲಿದೆ ಟಿಪ್ಸ್ ಮುಂದೆ ಓದಿ...

ಈ ಹತ್ತು ಟಿಪ್ಸ್‌ಗಳು ನಿಮಗಾಗಿ
1. ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆಗೂ ಮುನ್ನ ಎಚ್ಚರ: ನೀವು ಈಕ್ವಿಟಿ ಹೂಡಿಕೆದಾರರಾಗಿದ್ದರೆ, ಮಾರುಕಟ್ಟೆಯ ಸಮಯವನ್ನು ನಿರ್ಧರಿಸಲು ಪ್ರಯತ್ನಿಸಬೇಡಿ. ಮಾರುಕಟ್ಟೆ ಸಮಯದಲ್ಲಿ ಷೇರು ಮಾರುಕಟ್ಟೆಯ ಭವಿಷ್ಯ ಊಹಿಸುವ ಪ್ರಯತ್ನವಿದೆ. ಈ ಆಧಾರದಲ್ಲಿ ಹೂಡಿಕೆ ನಿರ್ಧಾರಗಳನ್ನು ಮಾಡಲಾಗುತ್ತದೆ. ಆದರೆ ಇದು ಈಕ್ವಿಟಿ ಹೂಡಿಕೆದಾರರಿಗೆ ಅಪಾಯಕಾರಿ ತಂತ್ರವಾಗಿದೆ.
2. ಹೂಡಿಕೆಯಲ್ಲಿ ವೈವಿಧ್ಯತೆ ಇರಲಿ: ನೀವು ಒಂದೆ ಕಡೆ ಎಲ್ಲ ಹೂಡಿಕೆಯನ್ನು ಮಾಡಬೇಡಿ. ಬದಲಾಗಿ ಈಕ್ವಿಟಿ, ರಿಯಲ್ ಎಸ್ಟೇಟ್, ಚಿನ್ನ ಮತ್ತು ಬೆಳ್ಳಿ ಮೇಲೆ ಹೂಡಿಕೆ ಮಾಡಿ. ಈಕ್ವಿಟಿ ಹೂಡಿಕೆಗಿಂತ ಹಳದಿ ಲೋಹದ ಮೇಲೆ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಿ. ಮಾರುಕಟ್ಟೆ ಏರಿಳಿತ ನೋಡಿಕೊಂಡು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ ಎಂದು ಹಣಕಾಸು ತಜ್ಞ ಸಿದ್ಧಾರ್ಥ್ ಮೌರ್ಯ ಹೇಳಿದ್ದಾರೆ.
3. ಅನಿಶ್ಚಿತ ಸಮಯಕ್ಕಾಗಿ ಹಣ: ತುರ್ತು ಅಥವಾ ಆಕಸ್ಮಿಕ ನಿಧಿಯು ನಿಮ್ಮ ಒಟ್ಟಾರೆ ಹಣಕಾಸಿನ ಒಂದು ಭಾಗವಾಗಿದೆ. ತುರ್ತು ನಿಧಿ ಇದ್ದರೆ ಅದು ನಿಮ್ಮ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯವಾಗುತ್ತದೆ. ನೀವು ಭವಿಷ್ಯಕ್ಕಾಗಿ ಉಳಿತಾಯ ಮಾಡಿರುವ ಮೊತ್ತವು ಉಳಿಯಬೇಕಾದರೆ ತುರ್ತು ಸ್ಥಿತಿಗಾಗಿ ಪ್ರತ್ಯೇಕ ಹಣ ಹೊಂದಿರುವುದು ಮುಖ್ಯವಾಗುತ್ತದೆ. ಪ್ರತಿ ಕುಟುಂಬವು ತುರ್ತು ನಿಧಿಯನ್ನು ಹೊಂದಿರುವುದು ಮುಖ್ಯವಾಗುತ್ತದೆ. ತುರ್ತು ನಿಧಿ ಇಲ್ಲವಾದರೆ ನೀವು ಸಾಲದ ಸುಳಿಯಲ್ಲಿ ಸಿಲುಕಬಹುದು ಅಥವಾ ಎಲ್ಲ ಉಳಿತಾಯವನ್ನು ಕಳೆದುಕೊಳ್ಳಬಹುದು.
4. ಖಚಿತ ರಿಟರ್ನ್ ನೀಡುವ ಯೋಜನೆ ಆಯ್ಕೆ ಮಾಡಿ: ನೀವು ಹೂಡಿಕೆ ಮಾಡುವಾಗ ಖಚಿತ ರಿಟರ್ನ್ ನೀಡುವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಬ್ಯಾಂಕ್ ಎಫ್‌ಡಿ, ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್), ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಮಾಸಿಕ ಆದಾಯ ಖಾತೆ (ಪಿಒಎಂಐಎಸ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್ಎಸ್‌ಸಿ), ಸುಕನ್ಯಾ ಸಮೃದ್ಧಿ ಖಚಿತ ರಿಟರ್ನ್ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಿ.
5. ನಿಮ್ಮ ಇಪಿಎಫ್‌ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಿ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಭಾರತ ಸರ್ಕಾರದ ನಿವೃತ್ತಿ ಉಳಿತಾಯ ಯೋಜನೆಯಾಗಿದೆ. ಉದ್ಯೋಗಿಗಳಿಗೆ ಇದು ಅತ್ಯುತ್ತಮ ಹೂಡಿಕೆ ಅವಕಾಶವಾಗಿದೆ. ಇಪಿಎಫ್ ಅನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನಿರ್ವಹಿಸುತ್ತದೆ. ನಿಮ್ಮ ಇಪಿಎಫ್‌ನಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಿದರೆ ಉತ್ತಮ.
6. ಜೀವ ವಿಮೆಯನ್ನು ಮಾಡಿಕೊಳ್ಳಿ: ಈ ಅನಿಶ್ಚಿತ ಸಂದರ್ಭದಲ್ಲಿ ಜೀವ ವಿಮೆ ಮತ್ತು ಟರ್ಮ್ ಲೈಫ್ ಇನ್ಶೂರೆನ್ಸ್ ಪಾಲಿಸಿ ಎಲ್ಲರಿಗೂ ಅವಶ್ಯಕವಾಗಿದೆ. ನೀವು ಇಲ್ಲದಿರುವಾಗ ನಿಮ್ಮ ಕುಟುಂಬದ ಆರ್ಥಿಕ ಭವಿಷ್ಯವನ್ನು ಸುರಕ್ಷಿತವಾಗಿರಿಸಲು ವಿಮೆ ಹೊಂದಿರುವುದು ಮುಖ್ಯವಾಗುತ್ತದೆ. ಇದರಿಂದಾಗಿ ನಿಮ್ಮ ಕುಟುಂಬವು ಆರೋಗ್ಯ ತುರ್ತು ಸಂದರ್ಭದಲ್ಲಿ ಸುರಕ್ಷಿತವಾಗಿರುತ್ತದೆ.
7. ನಿಮ್ಮ ಸ್ವಂತ ಹಣಕಾಸಿನ ವೆಚ್ಚಗಳ ಲೆಕ್ಕವಿರಲಿ: ನಿಮ್ಮ ಹಣಕಾಸಿನ ಯಶಸ್ಸು ನಿಮ್ಮ ವೈಯಕ್ತಿಕ ಯಶಸ್ಸಿನಂತೆಯೇ ಇರಬೇಕು. ನಿಮ್ಮ ಹಣಕಾಸಿನ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ನೀವು ತಿಳಿದಿರಬೇಕಾಗುತ್ತದೆ. ನೀವು ಯಾವುದಕ್ಕೆ ಖರ್ಚು ಮಾಡುತ್ತಿದ್ದೀರಿ, ಆರ್ಥಿಕ ವಿಚಾರದಲ್ಲಿ ಯಾವ ನಿರ್ಧಾರಗಳನ್ನು ಮಾಡುತ್ತಿದ್ದೀರಿ ಎಂದು ತಿಳಿದುಕೊಳ್ಳಿ. ಇದು ನಿಮಗೆ ಸಹಾಯಕವಾಗಲಿದೆ.
8. ಎಲ್ಲಿ ಎಷ್ಟು ಹೂಡಿಕೆ ಮಾಡುವುದು ನೋಡಿ: ಎಲ್ಲರಿಗೂ ಒಂದೇ ರೀತಿಯ ಹಣಕಾಸು ಸುರಕ್ಷತೆ ಇರಲಾರದು. ಹಾಗೆಯೇ ಆದಾಯವು ಒಂದೇ ರೀತಿ ಇರಲಾರದು. ಪ್ರತಿಯೊಬ್ಬರು ಕೂಡಾ ಒಂದೇ ರೀತಿಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು, ಎಷ್ಟು ಹೂಡಿಕೆ ಮಾಡಬೇಕು ಎಂಬುವುದನ್ನು ನೀವು ವೃತ್ತಿಪರರ ಸಹಾಯದೊಂದಿಗೆ ನಿರ್ವಹಣೆ ಮಾಡುವುದು ಉತ್ತಮ.
9. 'ಆರ್ಥಿಕವಾಗಿ' ಸ್ವತಂತ್ರರಾಗಿರಿ: ನೀವು ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಲು ಬಯಸುವುದಾದರೆ ಹೆಚ್ಚಿನ ಆದಾಯವನ್ನು ಪಡೆಯುವ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸ ಮಾಡುವುದು ಮುಖ್ಯವಾಗುತ್ತದೆ. ನೀವು ವ್ಯರ್ಥ ಮಾಡುವ ಪ್ರತಿಯೊಂದು ಡಾಲರ್‌ಗೆ ನೀವೇ ಜವಾಬ್ದಾರರಾಗಿರುತ್ತೀರಿ. ಅಗತ್ಯವಿಲ್ಲದೆ ಸಾಲ ಮಾಡದಿರಿ. ಮಾರುಕಟ್ಟೆ ನಷ್ಟದಲ್ಲಿರುವಾಗ ಹೂಡಿಕೆ ಮಾಡಬೇಡಿ.
10. ಆರ್ಥಿಕ ನಷ್ಟದ ಭಯ ಬೇಡ: ನಿಮ್ಮ ನಷ್ಟಗಳಿಂದಲೂ ನೀವು ಕಲಿಯುವುದು ಇದೆ. ಅನಗತ್ಯವಾಗಿ ನೀವು ಖರ್ಚು ಮಾಡುವ ಅಗತ್ಯವಿಲ್ಲದ ಸರಕುಗಳನ್ನು ಖರೀದಿಸಲು ನೀವು ಮುಂದಾಗಬಹುದು. ಹಣವನ್ನು ಉಳಿಸುವ ಸಾಮರ್ಥ್ಯ ಹೊಂದಿರುವ ಒಂದು ದೊಡ್ಡ ತಂತ್ರವೇ ಹೌದು. ದಿನನಿತ್ಯದ ಜೀವನದಲ್ಲಿ ಹಣಕಾಸನ್ನು ಹೇಗೆ ಬಳಸುವುದು ಎಂದು ನೋಡಿಕೊಳ್ಳಿ. ಹಣಕಾಸು ಕೊರತೆಯ ಬಗ್ಗೆ ಚಿಂತಿಸದೆ ಆರ್ಥಿಕವಾಗಿ ನಿರ್ವಹಣೆ ಮಾಡುವೆಡೆ ಅಧಿಕ ಗಮನಹರಿಸಿ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

International Women's Day: ಮಹಿಳೆಯರೇ ಇಲ್ಲಿ ಗಮನಿಸಿ; ಇಲ್ಲಿದೆ ಬೆಸ್ಟ್ 5 ಹೂಡಿಕೆ ಯೋಜನೆಗಳು!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications