ರಾಷ್ಟ್ರೀಯ ಪಿಂಚಣಿ ಯೋಜನೆಯು ನಿವೃತ್ತಿಯ ಸಂದರ್ಭದಲ್ಲಿ ಒತ್ತಡರಹಿತವಾದ ಪರಿಹಾರವನ್ನು ನೀಡುತ್ತದೆ. ಮಾತ್ರವಲ್ಲದೇ ಮಾಸಿಕ ಪಿಂಚಣಿಗಳನ್ನು ಸುಮಾರು 1 ಲಕ್ಷ ರೂಪಾಯಿವರೆಗೂ ಒದಗಿಸುತ್ತದೆ. ಸರ್ಕಾರಿ, ಖಾಸಗಿ ವಲಯದ ಉದ್ಯೋಗಿಯಾಗಿರಲಿ ಅಥವಾ ಬೇರೆ ಯಾರೇ ಆಗಿರಲಿ ಈ ಯೋಜನೆಯಲ್ಲಿ ಮುಕ್ತವಾಗಿ ಹೂಡಿಕೆ ಮಾಡಬಹುದಾಗಿದೆ.
18 ರಿಂದ 70 ವರ್ಷ ವಯಸ್ಸಿನ ನಾಗರಿಕರು ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಭಾಗಿಗಳಾಗಬಹುದು. ಉದ್ಯೋಗಸ್ಥರಿಗೆ ನಿವೃತ್ತಿಯಾಗುವುದು ಮಾನಸಿಕವಾಗಿ ಒತ್ತಡ ನೀಡುವುದರಿಂದ ಈ ಯೋಜನೆ ಮುಂದೆ ಆರ್ಥಿಕ ಸಬಲತೆಗೆ ಆದರ್ಶ ನಿವೃತ್ತಿಯ ಹೂಡಿಕೆಯ ಆಯ್ಕೆಯಾಗಿದೆ.

ಎನ್‌ಪಿಎಸ್‌ನ ಪ್ರಮುಖ ಅಂಶಗಳು :
ಎಲ್ಲರಿಗೂ ಮುಕ್ತ : ಇದು ಕೇವಲ ಸರ್ಕಾರಿ ನೌಕರರಿಗೆ ಸೀಮಿತವಾಗಿರದೆ, ಖಾಸಗಿ ವಲಯದ ಕೆಲಸಗಾರರು ಮತ್ತು ವ್ಯಕ್ತಿಗಳು ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಬಹುದಾಗಿದೆ.
ಎನ್‌ಪಿಎಸ್ ಯೋಜನೆಗೆ ವಯೋಮಿತಿ: 18 ರಿಂದ 70 ವರ್ಷದೊಳಗಿನ ನಾಗರಿಕರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಭಾಗವಹಿಸಬಹುದು.
ದೀರ್ಘಾವಧಿಯ ಹೂಡಿಕೆ: ಎನ್‌ಪಿಎಸ್ ಸ್ವಯಂಪ್ರೇರಿತವಾಗಿರುವ ಮತ್ತು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಇದು ಆರ್ಥಿಕ ಭದ್ರತೆಯನ್ನು ಖಚಿತಪಡಿಸುತ್ತದೆ.
ಗ್ಲೋಬಲ್ ಇನ್ವೆಸ್ಟ್ ಮೆಂಟ್: ಎನ್‌ಪಿಎಸ್ ಇನ್ನೊಂದು ಅನುಕೂಲವೆಂದರೆ ಈ ಪಿಂಚಣಿ ಯೋಜನೆಯಲ್ಲಿ ಎನ್‌ಆರ್‌ಐಗಳು ಕೂಡ ಹೂಡಿಕೆ ಮಾಡಬಹುದು.
ಅವಧಿ: ಪಿಂಚಣಿ ಯೋಜನೆಯಾಗಿ, 60 ವರ್ಷದವರೆಗೆ ಹೂಡಿಕೆಯನ್ನು ಮುಂದುವರಿಸಬೇಕು ಅಥವಾ 20 ವರ್ಷಗಳ ಮೆಚ್ಯೂರಿಟಿ ಅವಧಿ ಅಗತ್ಯವಿದೆ.
ಹೂಡಿಕೆಯ ಮೇಲಿನ ಲಾಭ: ಈ ಯೋಜನೆಯು ಶೇಕಡ 9 ರಿಂದ ಶೇಕಡ 12 ವರೆಗಿನ ಸರಾಸರಿ ಆದಾಯವನ್ನು ನೀಡುತ್ತದೆ.
ಮಾಸಿಕ ಪಿಂಚಣಿ ಲೆಕ್ಕಾಚಾರ: 30 ವರ್ಷಗಳವರೆಗೆ ಮಾಸಿಕ 10,000 ರೂಪಾಯಿ ಹೂಡಿಕೆ ಮಾಡುವುದರಿಂದ 1 ಲಕ್ಷ ರೂಪಾಯಿ ಮಾಸಿಕ ಪಿಂಚಣಿ ಸಿಗುತ್ತದೆ.
ಈಕ್ವಿಟಿ ಎಕ್ಸ್‌ಫೋಸರ್ (Equity exposure): ಈ ಯೋಜನೆಯು ಶೇಕಡ 50 ರಿಂದ ಶೇಕಡ 75 ರ ರೇಂಜ್‌ನಲ್ಲಿ ಈಕ್ವಿಟಿ ಎಕ್ಸ್‌ಫೋಸರ್ ಅಥವಾ Equity exposure ಒದಗಿಸುತ್ತದೆ.
ತೆರಿಗೆ ಪ್ರಯೋಜನಗಳು: ಸೆಕ್ಷನ್ 80ಸಿಸಿಡಿ (1) ಅಡಿಯಲ್ಲಿ 50,000 ರೂಪಾಯಿ ಮತ್ತು ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷ ರೂಪಾಯಿವರೆಗೆ ತೆರಿಗೆ ಉಳಿತಾಯ ಮಾಡಬಹುದು.
ಆರ್ಥಿಕ ಸ್ವಾತಂತ್ರ್ಯ ಮತ್ತು ತೆರಿಗೆ ಪ್ರಯೋಜನಗಳನ್ನು ನೀಡುವ ವಿಶ್ವಾಸಾರ್ಹ ಆಯ್ಕೆಯಾದ ರಾಷ್ಟ್ರೀಯ ಪಿಂಚಣಿ ಯೋಜನೆಯೊಂದಿಗೆ ನಿಮ್ಮ ನಿವೃತ್ತಿಯನ್ನು ಸುಭದ್ರಗೊಳಿಸಬಹುದು.


Click it and Unblock the Notifications