ಹೂಡಿಕೆ ಎಂಬುವುದು ನಮ್ಮ ಜೀವನದಲ್ಲಿ ಅತೀ ಮುಖ್ಯವಾದ ಪಾತ್ರ ವಹಿಸುತ್ತದೆ. ನಾವಿಂದು ಮಾಡಿದ ಹೂಡಿಕೆಯೇ ಭವಿಷ್ಯಕ್ಕೆ ಸಹಕಾರಿ. ನಾವು ಯಾವುದೇ ಹೂಡಿಕೆ ಮಾಡದೆ, ಹಣ ಉಳಿತಾಯ ಮಾಡದೆ ದಿನದೂಡುತ್ತಾ ಹೋದರೆ ಭವಿಷ್ಯ ಕಷ್ಟ. ಹಾಗಿರುವಾಗ ನಮಗೆ 252 ರೂಪಾಯಿ ಹೂಡಿಕೆ ಮಾಡಿ 54 ಲಕ್ಷ ಪಡೆಯುವ ಅವಕಾಶವನ್ನು ಎಲ್‌ಐಸಿ ಯೋಜನೆ ನೀಡುತ್ತದೆ.
ಎಲ್‌ಐಸಿಯ ಜೀವನ್ ಲಾಬ್ ಯೋಜನೆಯು ಪಾಲಿಸಿದಾರರಿಗೆ ವಿಮೆ ಮತ್ತು ಉಳಿತಾಯ ಎರಡೂ ಪ್ರಯೋಜನ ನೀಡುತ್ತದೆ. ಹೆಚ್ಚುವರಿಯಾಗಿ, ಈ ಉಳಿತಾಯ ಯೋಜನೆಯಲ್ಲಿ ಬೋನಸ್ ಪಡೆಯಬಹುದು. ಹಾಗೆಯೇ ಅಂತಿಮವಾಗಿ ಉತ್ತಮ ಆದಾಯ ಲಭ್ಯವಾಗುತ್ತದೆ. ಈ ಎಲ್‌ಐಸಿ ಪಾಲಿಸಿಯು ನಿಮ್ಮ ಕುಟುಂಬಕ್ಕೂ ಆರ್ಥಿಕ ಸಹಾಯ ಮಾಡುತ್ತದೆ.

ಜೀವನ್ ಲಾಭ್ ಪಾಲಿಸಿ ವಿವರ
ಎಲ್‌ಐಸಿ ಜೀವನ್ ಲಾಭ್ ಯೋಜನೆ 936 (ಹಿಂದೆ ಎಲ್‌ಐಸಿ ಜೀವನ್ ಲಾಭ್ 836) ಎಂಬುವುದು ಒಂದು ಎಂಡೋಮೆಂಟ್ ಯೋಜನೆಯಾಗಿದೆ. ಇದರಲ್ಲಿ ಉಳಿತಾಯ, ವಿಮೆ ಎರಡೂ ಸೇರಿರುತ್ತದೆ. ಮೆಚ್ಯೂರಿಟಿ ವೇಳೆ ಉತ್ತಮ ರಿಟರ್ನ್ ಪಡೆಯಬಹುದಾಗಿದೆ. ಹಾಗೆಯೇ ಎಲ್‌ಐಸಿ ಸಂಸ್ಥೆಯ ಲಾಭದ ಒಂದು ಭಾಗವನ್ನು ನೀವು ಪಡೆಯಬಲ್ಲಿರಿ. ಅದರಿಂದಾಗಿ ಆದಾಯವು ಗರಿಷ್ಠಗೊಳಿಸಲು, ವಿಮಾ ರಕ್ಷಣೆ ಪಡೆಯಲು ಈ ಯೋಜನೆ ಉತ್ತಮ ಆಯ್ಕೆ.
ಎಲ್‌ಐಸಿ ಜೀವನ್ ಲಾಭ್: ಅರ್ಹತೆ
ಯೋಜನೆ ಹೂಡಿಕೆ ಕನಿಷ್ಠ ವಯೋಮಿತಿ: 8 ವರ್ಷಗಳು
ವಿಮಾ ಮೊತ್ತ: ಕನಿಷ್ಠ 2 ಲಕ್ಷ ರೂಪಾಯಿ
ಮೆಚ್ಯೂರಿಟಿ ವಯಸ್ಸು: ಗರಿಷ್ಠ 75 ವರ್ಷಗಳು
ಪಾಲಿಸಿ ಅವಧಿ: 16, 21 ಮತ್ತು 25 ವರ್ಷಗಳು
ಪ್ರೀಮಿಯಂ ಪಾವತಿಸುವ ಅವಧಿ: 10, 15 ಮತ್ತು 16 ವರ್ಷಗಳು
ಎಲ್‌ಐಸಿ ಜೀವನ್ ಲಾಭ್: ಪ್ರಯೋಜನಗಳು
ಡೆತ್ ಬೆನಿಫಿಟ್: ಎಲ್ಐಸಿ ಜೀವನ್ ಲಾಭ್ ಅಡಿಯಲ್ಲಿ ಡೆತ್ ಬೆನಿಫಿಟ್ ಲಭ್ಯವಿದೆ. ಮೂಲ ಮೊತ್ತದ ವಿಮಾ ಮೊತ್ತ ಅಥವಾ ವಾರ್ಷಿಕ ಪ್ರೀಮಿಯಂನ 7 ಪಟ್ಟು ಡೆತ್ ಬೆನಿಫಿಟ್ ಆಗಿ ಲಭಿಸುತ್ತದೆ.
ಮೆಚ್ಯೂರಿಟಿ ಬೆನಿಫಿಟ್: ಇದು ಮೂಲ ವಿಮಾ ಮೊತ್ತಕ್ಕೆ ಸಮನಾಗಿರುತ್ತದೆ. ಜೊತೆಗೆ ರಿವರ್ಷನರಿ ಬೋನಸ್ ಮತ್ತು ಅಂತಿಮ ಹೆಚ್ಚುವರಿ ಬೋನಸ್ ಸೇರಿರುತ್ತದೆ.
ತೆರಿಗೆ ಪ್ರಯೋಜನ: ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ಮಿತಿ 1.5 ಲಕ್ಷ ರೂಪಾಯಿವರೆಗಿನ ಪಾಲಿಸಿಗೆ ಪಾವತಿಸಿದ ಪ್ರೀಮಿಯಂ ಮತ್ತು ಮೆಚ್ಯೂರಿಟಿ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ.
ಎಲ್‌ಐಸಿ ಜೀವನ್ ಲಾಭ್: ಫೀಚರ್‌ಗಳು
* ಗ್ರಾಹಕರು ಸ್ವಲ್ಪ ಸಮಯದವರೆಗೆ ದೀರ್ಘಾವಧಿಯ ರಕ್ಷಣೆಗಾಗಿ ಪ್ರೀಮಿಯಂಗಳನ್ನು ಪಾವತಿಸಬೇಕು.
* ಈ ಯೋಜನೆಯಡಿಯಲ್ಲಿ ಎರಡು ವರ್ಷಗಳ ಸ್ಥಿರ ಪ್ರೀಮಿಯಂ ಪಾವತಿಯ ನಂತರ, ಪಾಲಿಸಿದಾರರು ಸಾಲ ಸೌಲಭ್ಯ ಪಡೆಯಬಹುದು.
* ಯೋಜನೆಯಲ್ಲಿ ಪಾಲಿಸಿದಾರರು 5, 10, ಅಥವಾ 15 ವರ್ಷಗಳಲ್ಲಿ ಡೆತ್, ಮೆಚ್ಯೂರಿಟಿ ಬೆನಿಫಿಟ್ ಪಡೆಯಬಹುದು.
* ಮಗುವಿಗಾಗಿ ಪಾಲಿಸಿ ಖರೀದಿಸುವುದಾರರು ಪಾಲಕರು ಪ್ಲಾನ್ ಜೊತೆಗೆ ಎಲ್‌ಐಸಿಯಿಂದ ಪ್ರೀಮಿಯಂ ವೇವರ್ ಬೆನಿಫಿಟ್ ರೈಡರ್ ಅನ್ನು ಖರೀದಿಸಬಹುದು. ಪೋಷಕರು ಮರಣಹೊಂದಿದರೆ ಭವಿಷ್ಯದ ಪ್ರೀಮಿಯಂಗಳನ್ನು ಮನ್ನಾ ಮಾಡಲಾಗುತ್ತದೆ. ಮಗುವಿಗೆ ಯೋಜನೆ ಪ್ರಯೋಜನ ಮೆಚ್ಯೂರಿಟಿ ವೇಳೆ ಲಭಿಸುತ್ತದೆ.
54 ಲಕ್ಷ ರೂಪಾಯಿ ಪಡೆಯುವ ಲೆಕ್ಕಾಚಾರ ಹೇಗೆ?
ನೀವು ಮಾಸಿಕವಾಗಿ 7,572 ರೂಪಾಯಿ ಅಥವಾ ದಿನಕ್ಕೆ 252 ರೂಪಾಯಿ ಹೂಡಿಕೆ ಮಾಡುವ ಮೂಲಕ 54 ಲಕ್ಷ ರೂಪಾಯಿಯನ್ನು ಮೆಚ್ಯೂರಿಟಿ ವೇಳೆ ಪಡೆಯಲು ಈ ಯೋಜನೆಯಲ್ಲಿ ಸಾಧ್ಯವಾಗುತ್ತದೆ. ಪಾಲಿಸಿದಾರರು ಮೃತಪಟ್ಟರೆ, ಕುಟುಂಬವು ಈ ಯೋಜನೆಯಿಂದ ಆರ್ಥಿಕ ಸಹಾಯ ಪಡೆಯಬಹುದು. ಹೆಚ್ಚುವರಿಯಾಗಿ ರಿವಾರ್ಡ್ ಇದೆ. ಹಾಗೆಯೇ ಪ್ರೀಮಿಯಂ ಮೊತ್ತ ಮತ್ತು ಅವಧಿ ಬದಲಾವಣೆಗೆ ಹೂಡಿಕೆದಾರರಿಗೆ ಅವಕಾಶವಿದೆ.


Click it and Unblock the Notifications