ಜನರು ಹೂಡಿಕೆ ವಿಚಾರದಲ್ಲಿ ಜಾಗ್ರತೆಯಾಗಿ ಇದ್ದಷ್ಟು ಒಳ್ಳೆಯದು. ಹೆಚ್ಚಾಗಿ ಸುರಕ್ಷಿತ ಹೂಡಿಕೆಗೆ ನಾವು ಆದ್ಯತೆ ನೀಡಬೇಕಾಗುತ್ತದೆ. ಇಂಡಿಯಾ ಪೋಸ್ಟ್ ಹಲವಾರು ಹೂಡಿಕೆ ಯೋಜನೆಗಳನ್ನು ಹೊಂದಿದ್ದ ಈ ಯೋಜನೆಯು ಉತ್ತಮ ರಿಟರ್ನ್ ನೀಡುವುದು ಮಾತ್ರವಲ್ಲ ಅಧಿಕ ಸುರಕ್ಷಿತ ಕೂಡಾ ಹೌದು.
ಭಾರತೀಯ ಅಂಚೆ ಕಚೇರಿಯ ಅಪಾಯವಿಲ್ಲದ ಹೂಡಿಕೆ ಯೋಜನೆಗಳ ಪೈಕಿ ಗ್ರಾಮ ಸುರಕ್ಷ ಯೋಜನೆ ಕೂಡಾ ಒಂದಾಗಿದೆ. ಈ ಗ್ರಾಮೀಣ ಅಂಚೆ ಕಚೇರಿ ಜೀವ ವಿಮಾ ಯೋಜನೆಯು ಮೊದಲ ಬಾರಿಗೆ 1995ರಲ್ಲಿ ಜಾರಿಗೆ ತರಲಾಗಿದೆ. ಭಾರತದ ಗ್ರಾಮೀಣ ಪ್ರದೇಶದ ಜನರಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಇನ್ನು ಹೂಡಿಕೆಯ ವಿಚಾರಕ್ಕೆ ಬಂದಾಗ ನಾವು ಸುರಕ್ಷಿತ ಹೂಡಿಕೆ ಮಾತ್ರವಲ್ಲದೆ ಕಡಿಮೆ ಹೂಡಿಕೆ ಮಾಡಿ ಅಧಿಕ ಲಾಭ ಎಲ್ಲಿ ಪಡೆಯಲು ಸಾಧ್ಯ ಎಂದು ನೋಡುತ್ತೇವೆ. ಈ ಅಂಚೆ ಕಚೇರಿಯ ಗ್ರಾಮ ಸುರಕ್ಷ ಯೋಜನೆ ಅಂತಹುದ್ದೆ ಒಂದು ಯೋಜನೆಯಾಗಿದೆ. ಇಲ್ಲಿ ನಾವು ಕಡಿಮೆ ಹಣ ಹೂಡಿಕೆ ಮಾಡಿ ಅಧಿಕ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಪ್ರತಿ ದಿನ 50 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ರೂಪಾಯಿ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗಲಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....
ಜೀವ ವಿಮಾ ಯೋಜನೆಯೂ ಹೌದು
ಈ ಗ್ರಾಮ ಸುರಕ್ಷ ಯೋಜನೆಯು ಜೀವ ವಿಮಾ ಯೋಜನೆಯೂ ಕೂಡಾ ಹೌದು. 1995ರಲ್ಲಿ ಆರಂಭವಾದ ಈ ಯೋಜನೆಯು ಗ್ರಾಮೀಣ ಜನರಿಗೆ ವಿಮಾ ಸುರಕ್ಷತೆಯ ಯೋಜನೆಯಾಗಿದೆ. ಈ ಬಗ್ಗೆ ಇಂಡಿಯಾ ಪೋಸ್ಟ್ ವೆಬ್‌ಸೈಟ್‌ನಲ್ಲಿ, "ಗ್ರಾಮೀಣ ಜನರಿಗೆ ವಿಮಾ ಸುರಕ್ಷತೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಗ್ರಾಮೀಣ ಪ್ರದೇಶದ ದುರ್ಬಲ ವರ್ಗಕ್ಕೆ ಹಾಗೂ ಮಹಿಳೆಯರಿಗೆ ಸಹಾಯ ಮಾಡುವುದು ಕೂಡಾ ಇದರ ಉದ್ದೇಶವಾಗಿದೆ. ವಿಮೆಯ ಬಗ್ಗೆ ಜಾಗೃತಿ ಮೂಡಿಸುವುದು ಕೂಡಾ ಮುಖ್ಯವಾಗಿದೆ," ಎಂದು ಉಲ್ಲೇಖ ಮಾಡಲಾಗಿದೆ. ಹೂಡಿಕೆದಾರರು ಮೂರು ವರ್ಷಗಳ ಕಾಲ ಹೂಡಿಕೆ ಮಾಡಿ ಬಳಿಕ ಹೂಡಿಕೆಯನ್ನು ಸರೆಂಡರ್ ಮಾಡುವ ಆಯ್ಕೆಯನ್ನು ಮಾಡಿಕೊಳ್ಳಬಹುದು. ಆದರೆ ಗ್ರಾಮ ಸುರಕ್ಷ ಯೋಜನೆ ಅಡಿಯಲ್ಲಿ ಯಾವುದೇ ಪ್ರಯೋಜನ ಹೂಡಿಕೆದಾರರಿಗೆ ಹೂಡಿಕೆ ಸರೆಂಡರ್ ಮಾಡಿದ ಬಳಿಕೆ ಲಭ್ಯವಾಗುವುದಿಲ್ಲ.
ಲೆಕ್ಕಾಚಾರ ಹೇಗಿರಲಿದೆ ನೋಡಿ
ಈ ಯೋಜನೆಯಲ್ಲಿ ಹೂಡಿಕೆದಾರರು ದಿನಕ್ಕೆ 50 ರೂಪಾಯಿ ಹೂಡಿಕೆ ಮಾಡಿದರೆ ಸುಮಾರು 35 ಲಕ್ಷ ರೂಪಾಯಿ ಮೆಚ್ಯೂರಿಟಿ ವೇಳೆಗೆ ಪಡೆಯಲು ಸಾಧ್ಯವಾಗಲಿದೆ. ನೀವು 10 ಲಕ್ಷದವರೆಗೆ ಎಷ್ಟು ಬೇಕಾದರೂ ಹೂಡಿಕೆ ಮಾಡಬಹುದು. ಹೂಡಿಕೆಯ ಮೊತ್ತ ನಿಮ್ಮ ಆಯ್ಕೆಯಾಗಿದೆ. ಕನಿಷ್ಠ ಮೊತ್ತ 10 ಸಾವಿರ ರೂಪಾಯಿ ಆಗಿದೆ. ನೀವು ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಯೋಜನೆಗೆ ಸೇರ್ಪಡೆಯಾಗಬಹುದು. ಪ್ರತಿ ದಿನ 50 ರೂಪಾಯಿಯಂತೆ ಮಾಸಿಕವಾಗಿ 1,515 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ನೀವು ಈ ಯೋಜನೆಗೆ 19 ವರ್ಷದಲ್ಲೇ ಸೇರ್ಪಡೆಯಾದರೆ ನಿಮಗೆ 55 ವರ್ಷ ಆಗುವವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಮೆಚ್ಯೂರಿಟಿ ವೇಳೆ 35 ಲಕ್ಷ ರೂಪಾಯಿ ಲಭ್ಯವಾಗಲಿದೆ.
ಪ್ರೀಮಿಯಂ ಪಾವತಿಗೆ 30 ದಿನಗಳ ಅವಕಾಶ
ನೀವು ಪ್ರೀಮಿಯಂ ಪಾವತಿ ಮಾಡಲು 30 ದಿನಗಳ ಅವಕಾಶವನ್ನು ನೀಡಲಾಗುತ್ತದೆ. ನೀವು ಪ್ರಿಮೀಯಂ ಅನ್ನು ಪಾವತಿ ಮಾಡುವಲ್ಲಿ ತಪ್ಪಿದರೆ ನೀವು ಹಣವನ್ನು ಪಾವತಿ ಮಾಡಿ ಯೋಜನೆಯನ್ನು ಮರು ಆರಂಭ ಮಾಡಬಹುದಾಗಿದೆ. ನೀವು 19 ವರ್ಷದಲ್ಲಿ ಈ ಯೋಜನೆಗೆ ಹೂಡಿಕೆ ಮಾಡಲು ಆರಂಭ ಮಾಡಿದರೆ ಮಾಸಿಕ ಪ್ರೀಮಿಯಂ 1,463 ಆಗಲಿದೆ. ನೀವು 58 ವರ್ಷಗಳ ಕಾಲ ಹೂಡಿಕೆ ಮಾಡಬೇಕಾಗುತ್ತದೆ. ನೀವು ಒಟ್ಟಾಗಿ 10 ಲಕ್ಷ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ.
ಗ್ರಾಮ ಸುರಕ್ಷ ಯೋಜನೆಯ ನೀತಿ, ನಿಯಮ
* 19ರಿಂದ 55 ವರ್ಷದವರೆಗಿನ ಯಾವುದೇ ಭಾರತೀಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು
* 10 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡುವ ಅವಕಾಶವಿದೆ.
* ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ, ವಾರ್ಷಿಕವಾಗಿ ಹೂಡಿಕೆ ಮಾಡುವ ಅವಕಾಶವಿದೆ.
* 19 ವರ್ಷದಿಂದ 55 ವರ್ಷದವರೆಗೆ 1515 ರೂಪಾಯಿ ಮಾಸಿಕ ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆ 31.60 ಲಕ್ಷ ರೂಪಾಯಿ ಪಡೆಯಬಹುದು
* 60 ವರ್ಷದವೆಗೆ ಮಾಸಿಕ 1411 ಹೂಡಿಕೆ ಮಾಡಿದರೆ 34.60 ಲಕ್ಷ ರೂಪಾಯಿ ರಿಟರ್ನ್ ಅನ್ನು ಗಳಿಸಲು ಸಾಧ್ಯವಾಗಲಿದೆ.


Click it and Unblock the Notifications