ದಸರಾ ಹಬ್ಬ ಆರಂಭವಾಗಿದೆ. ಇದು ಹೊಸ ಆರಂಭದ ಸಮಯವಾಗಿದೆ. ಈ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಪ್ರಯಾಣದ ಬಗ್ಗೆಯೂ ನೀವು ಆತ್ಮಾವಲೋಕನ ಮಾಡಲು ಸೂಕ್ತ ಕ್ಷಣವಾಗಿದೆ. ಅನೇಕ ಮಂದಿ ಶೀಘ್ರವಾಗಿ ನಿವೃತ್ತಿಯನ್ನು ಪಡೆದು ಜೀವನ ಸಾಗಿಸಲು ಬಯಸುತ್ತಾರೆ.
ಇಂತಹ ಜನರಿಗೆ ದಸರಾದ ಶುಭ ಸಂದರ್ಭದಲ್ಲಿಗಿಂತ ಉತ್ತಮ ದಿನವಿಲ್ಲ. ಈ ದಸರಾದಲ್ಲಿ, ನೀವು ಹಬ್ಬದ ಉತ್ಸಾಹವನ್ನು ನಿಮ್ಮ ಆರ್ಥಿಕ ಪ್ಲ್ಯಾನ್‌ಗೆ ಬಳಕೆ ಮಾಡಬಹುದು. ನೀವು ಶೀಘ್ರ ನಿವೃತ್ತಿಗಾಗಿ ಈ ದಸರಾದಲ್ಲಿ ಹಣಕಾಸು ಯೋಜನೆ ಹೇಗೆ ಮಾಡುವುದು ಎಂಬ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ, ಮುಂದೆ ಓದಿ..

ಮೊದಲು ಶೀಘ್ರ ನಿವೃತ್ತಿ ಅರ್ಥಮಾಡಿಕೊಳ್ಳಿ
ಆರಂಭಿಕ ನಿವೃತ್ತಿಯು ನಿವೃತ್ತಿ ವಯಸ್ಸಿಗಿಂತ ಮುಂಚಿತವಾಗಿಯೇ ನಿವೃತ್ತಿಯನ್ನು ಪಡೆಯುವುದು ಆಗಿದೆ. ಇದು ಜೀವನ ಮತ್ತು ಹಣಕಾಸುಗಳಿಗೆ ಸಮಗ್ರ ವಿಧಾನವಾಗಿದೆ. ಶೀಘ್ರ ನಿವೃತ್ತಿಯು ಪಡೆಯುವಾಗ ನಿಮ್ಮಲ್ಲಿ ಸಂಗ್ರಹಿಸಿದ ಉಳಿತಾಯ ಮತ್ತು ನಿಖರವಾಗಿ ಯೋಜಿಸಲಾದ ಹೂಡಿಕೆಗಳು ಇರುವುದು ಅತೀ ಮುಖ್ಯವಾಗುತ್ತದೆ. ಇದು ಉದ್ಯೋಗದ ಅವಶ್ಯಕತೆಯನ್ನು ದೂರಮಾಡುತ್ತದೆ.
ಈ ಆರ್ಥಿಕ ಬದಲಾವಣೆಯು ರಾತ್ರೋರಾತ್ರಿ ಸಂಭವಿಸದು. ಇದು ಶಿಸ್ತುಬದ್ಧ ಉಳಿತಾಯ, ಚುರುಕಾದ ಹೂಡಿಕೆ ಮತ್ತು ಜೀವನ ಸಾಗಿಸುವ ವಿಧಾನದ ಮೇಲೆ ಅವಲಂಭಿತವಾಗಿರುತ್ತದೆ. ನೀವು ಸರಿಯಾದ ನಿರ್ಧಾರವನ್ನು ಮಾಡಿದರೆ, ಭವಿಷ್ಯದಲ್ಲಿ ಲಾಭ ಪಡೆಯಲು ಸಾಧ್ಯವಾಗುತ್ತದೆ.
1. ಸ್ಪಷ್ಟ ಆರ್ಥಿಕ ಗುರಿ ಹೊಂದಿರಿ
ಶ್ರೀರಾಮನು ಸೀತೆಯನ್ನು ರಕ್ಷಿಸಲು ಸ್ಪಷ್ಟವಾದ ಉದ್ದೇಶವನ್ನು ಹೊಂದಿದ್ದಂತೆಯೇ, ನಿಮ್ಮ ನಿವೃತ್ತಿಗಾಗಿ ನಿಮಗೆ ಸ್ಪಷ್ಟವಾದ ದೃಷ್ಟಿ ಬೇಕು. ನಿಮ್ಮ ನಿವೃತ್ತಿ ಜೀವನವನ್ನು ನೀವು ಹೇಗೆ ಊಹಿಸುತ್ತೀರಿ?. ನೀವು ನಿವೃತ್ತಿ ಸಂದರ್ಭದಲ್ಲಿ ಪ್ರಯಾಣ ಮಾಡುವ ಪ್ಲ್ಯಾನ್ ಅನ್ನು ಹೊಂದಿದ್ದರೆ, ಸ್ಪಷ್ಟ ಆರ್ಥಿಕ ಗುರಿ ಹೊಂದಿರುವುದು ಅತೀ ಮುಖ್ಯವಾಗುತ್ತದೆ. ಅದಕ್ಕಾಗಿ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ.
2. ಶೀಘ್ರ, ಸ್ಥಿರವಾಗಿ ಉಳಿಸಲು ಪ್ರಾರಂಭಿಸಿ
ಆರಂಭಿಕ ನಿವೃತ್ತಿಗಾಗಿ ನೀವು ಶೀಘ್ರವೇ ಹೂಡಿಕೆಯನ್ನು ಅಥವಾ ಉಳಿತಾಯವನ್ನು ಕೂಡಾ ಮಾಡಬೇಕಾಗುತ್ತದೆ. ನೀವು ಎಷ್ಟು ಬೇಗ ಉಳಿತಾಯವನ್ನು ಪ್ರಾರಂಭಿಸುತ್ತೀರೋ ಅಷ್ಟು ಸಮಯ ನಿಮ್ಮ ಹಣವು ಹೆಚ್ಚಳವಾಗುತ್ತಾ ಸಾಗುತ್ತದೆ. ನೀವು ಸಣ್ಣ ಮೊತ್ತದಿಂದ ಪ್ರಾರಂಭಿಸಿದರೂ ಸಹ, ಸ್ಥಿರವಾದ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಎಷ್ಟು ಉಳಿತಾಯ ಮಾಡುತ್ತೀರಿ ಎಂಬುವುದು ಮುಖ್ಯವಲ್ಲ, ಎಷ್ಟು ಸಮಯದವರೆಗೆ ಉಳಿತಾಯ ಮಾಡುತ್ತೀರಿ ಎಂಬುವುದು ಮುಖ್ಯವಾಗುತ್ತದೆ.
3. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ
ಕೇವಲ ಉಳಿತಾಯವು ಸಾಕಾಗುವುದಿಲ್ಲ, ನಿಮ್ಮ ಉಳಿತಾಯವನ್ನು ನೀವು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕಾಗುತ್ತದೆ!. ಉತ್ತಮ ಹೂಡಿಕೆಗಳು ನಿಮ್ಮ ಸಂಪತ್ತಿನ ಬೆಳವಣಿಗೆಗೆ ಕಾರಣವಾಗುತ್ತದೆ. ಷೇರುಗಳು, ಬಾಂಡ್‌ಗಳು ಮತ್ತು ರಿಯಲ್ ಎಸ್ಟೇಟ್‌ನಂತಹ ಹೂಡಿಕೆ ಆಯ್ಕೆಯನ್ನು ಮಾಡಿಕೊಳ್ಳಬಹುದು. ಆದರೆ ತಜ್ಞರಲ್ಲಿ ಮಾಹಿತಿ ಪಡೆದಿರಬೇಕಾಗುತ್ತದೆ.
4. ಸಾಲವನ್ನು ಕಡಿಮೆ ಮಾಡಿ
ರಾಮನು ಹತ್ತು ತಲೆಯ ರಾಕ್ಷಸ ರಾವಣನನ್ನು ಸಂಹಾರ ಮಾಡಿದಂತೆಯೇ ನಿಮ್ಮ ಆರ್ಥಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಬಹುದಾದ ಅನೇಕ ಸಾಲವನ್ನು ವಿನಾಶ ಮಾಡುವುದು ಅತೀ ಮುಖ್ಯವಾಗುತ್ತದೆ. ಕ್ರೆಡಿಟ್ ಕಾರ್ಡ್‌ಗಳು ಅಥವಾ ವೈಯಕ್ತಿಕ ಸಾಲದ ಅಧಿಕ ಬಡ್ಡಿದರವು ನಿಮ್ಮ ಉಳಿತಾಯಕ್ಕೆ ಅಡ್ಡಿಯಾಗುತ್ತದೆ.
5. ಆರೋಗ್ಯ ರಕ್ಷಣೆಗಾಗಿ ಯೋಜನೆ
ಆರೋಗ್ಯ ರಕ್ಷಣೆಯು ಬೆಳೆಯುವ ವೆಚ್ಚವಾಗಿದೆ. ನಮ್ಮ ಉಳಿತಾಯದ ಮೇಲೆ ಹೊರೆಯಾಗಬಹುದು. ನಾವು ವಯಸ್ಸಾದಂತೆ, ವೈದ್ಯಕೀಯ ಅಗತ್ಯಗಳು ಹೆಚ್ಚಾಗುತ್ತದೆ. ನಿವೃತ್ತಿ ಉಳಿತಾಯ ಕಡಿಮೆಯಾಗಬಹುದು. ಆದ್ದರಿಂದಾಗಿ ನಿಮ್ಮ ಆರೋಗ್ಯ ಅಗತ್ಯಗಳಿಗಾಗಿ ಯೋಜನೆ ಮಾಡಿ. ಸಮಗ್ರ ಆರೋಗ್ಯ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಿ.
6. ಆದಾಯದ ಮೂಲ ರಚಿಸಿ
ನಿಮ್ಮ ಹೂಡಿಕೆಗಳು ನಿವೃತ್ತಿಯಲ್ಲಿ ಗಮನಾರ್ಹ ಆದಾಯದ ಮೂಲವಾಗಿದ್ದರೂ, ಇದು ಹೆಚ್ಚುವರಿ ಭದ್ರತೆಯನ್ನು ಒದಗಿಸುತ್ತದೆ. ಸ್ಟಾಕ್‌ಗಳ ಮೂಲಕ, ಡೆಪಾಸಿಟ್‌ಗಳ ಮೂಲಕ ಅಥವಾ ಹೆಚ್ಚು ಬೇಡಿಕೆಯಿಲ್ಲದ ಸೈಡ್ ವ್ಯಾಪಾರದ ಮೂಲಕ ಆದಾಯದ ಮೂಲವನ್ನು ರಚನೆ ಮಾಡಿಕೊಳ್ಳಿ.
7. ರಿವೀವ್ ಮಾಡಿ, ಅಡ್ಜೆಸ್ಟ್ ಮಾಡಿಕೊಳ್ಳಿ
ಶೀಘ್ರವಾಗಿ ನಿವೃತ್ತಿಯನ್ನು ಪಡೆಯುವಾಗ ನೀವು ಹಲವಾರು ತಯಾರಿಗಳನ್ನು ಮಾಡಬೇಕಾಗುತ್ತದೆ. ನಿಮ್ಮ ಹಣಕಾಸಿನ ಗುರಿಗಳು, ಹೂಡಿಕೆ ತಂತ್ರಗಳು ಮತ್ತು ಉಳಿತಾಯ ಮೊತ್ತವನ್ನು ನಿಯಮಿತವಾಗಿ ಪರಿಶೀಲನೆ ಮಾಡಬೇಕು. ಅಡ್ಜೆಸ್ಟ್ ಮಾಡಿಕೊಂಡು ಹೂಡಿಕೆ ಮಾಡಬೇಕಾಗುತ್ತದೆ.
8. ಕನಿಷ್ಠವಾಗಿರಲಿ ಯಾವುದೇ ಆದರೂ...
ಶೀಘ್ರವಾಗಿ ನಿವೃತ್ತಿ ಪಡೆಯುವಾಗ ಸಾಮಾನ್ಯವಾಗಿಯೇ ಕೆಲವು ಜೀವನಶೈಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಕನಿಷ್ಠ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಎಂದರೆ ನಿಮ್ಮನ್ನು ನೀವು ವಂಚಿತಗೊಳಿಸುವುದು ಎಂದಲ್ಲ ಆದರೆ ನಿಜವಾಗಿಯೂ ಮುಖ್ಯ ಯಾವುದು ಎಂದು ನಿರ್ಧಾರ ಮಾಡುವುದು ಆಗಿದೆ.
9. ನೀವೇ ಶಿಕ್ಷಣ ಪಡೆಯಿರಿ
ಆರ್ಥಿಕ ಸಾಕ್ಷರತೆ ಸಶಕ್ತವಾಗಿದೆ. ಉಳಿತಾಯ, ಹೂಡಿಕೆಗಳು ಮತ್ತು ಹಣಕಾಸು ಯೋಜನೆಗಳ ಬಗ್ಗೆ ನೀವು ಹೆಚ್ಚು ಅರ್ಥಮಾಡಿಕೊಂಡರೆ, ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನೀವು ಉತ್ತಮವಾಗಿ ಸಜ್ಜಾಗುತ್ತೀರಿ. ನಿಮ್ಮ ಹಣಕಾಸಿನ ಜ್ಞಾನವನ್ನು ಹೆಚ್ಚಿಸಲು ನಿಯಮಿತವಾಗಿ ಪುಸ್ತಕಗಳನ್ನು ಓದಿ, ಸೆಮಿನಾರ್‌ಗಳಿಗೆ ಹಾಜರಾಗಿ ಅಥವಾ ಆನ್‌ಲೈನ್ ಕೋರ್ಸ್‌ಗಳನ್ನು ಮಾಡಿ.
ಇಲ್ಲಿ ಗಮನಿಸಿ: ಈ ಮೇಲಿನ ಲೇಖನವು ಮಾರುಕಟ್ಟೆ ತಜ್ಞರ ಸಲಹೆ, ಶಿಫಾರಸಿನ ಆಧಾರದಲ್ಲಿ ಪ್ರಕಟಿಸಲಾಗಿದೆ. ಈ ಸ್ಟಾಕ್‌ಗಳನ್ನು ಖರೀದಿಸಲು ಲೇಖಕರು ಮತ್ತು ಗ್ರೇನಿಯಮ್ ಸಲಹೆ ನೀಡಿರುವುದಲ್ಲ. ಲೇಖನದ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರಗಳಿಂದ ಯಾವುದೇ ನಷ್ಟ ಉಂಟಾದರೂ ಅದಕ್ಕೆ ಗ್ರೇನಿಯಮ್ ಸಂಸ್ಥೆಯಾಗಲಿ, ಲೇಖಕರು ಆಗಲಿ ಜವಾಬ್ದಾರರಾಗಿರುವುದಿಲ್ಲ. ಯಾವುದೇ ಹೂಡಿಕೆ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮಾಣೀಕೃತ ತಜ್ಞರ ಸಲಹೆ ಪಡೆಯಲು ಗುಡ್‌ರಿಟರ್ನ್ಸ್ ತಿಳಿಸುತ್ತದೆ.


Click it and Unblock the Notifications