ಹಬ್ಬದ ಸೀಸನ್ ಮತ್ತೆ ಆರಂಭವಾಗಲಿದೆ. ನವರಾತ್ರಿಯಿಂದ ಹಬ್ಬದ ಸೀಸನ್ ಆರಂಭವಾದರೆ, ಅದಾದ ನಂತರ ದಸರಾ, ದೀಪಾವಳಿ ಮತ್ತು ಛತ್ ಪೂಜೆ ಹೀಗೆ ಹಲವಾರು ಹಬ್ಬಗಳು ಒಂದಾದ ಬಳಿಕ ಒಂದು ಬರುತ್ತದೆ. ಸುಮಾರು ಒಂದೂವರೆ ತಿಂಗಳ ಕಾಲ ಹಲವಾರು ಹಬ್ಬದ ಆಚರಣೆಗಳು ನಡೆಯಲಿದೆ.
ಹಬ್ಬದ ಸೀಸನ್‌ನಲ್ಲಿ ಸರಕುಗಳ ಬೇಡಿಕೆಯು ಮಾರುಕಟ್ಟೆಯಲ್ಲಿ ವೇಗವಾಗಿ ಹೆಚ್ಚಾಗುತ್ತದೆ. ಆದ್ದರಿಂದ, ಈ ಸಂದರ್ಭದಲ್ಲಿ ಪೂರ್ಣ ಸಮಯ ಅಥವಾ ಅರೆಕಾಲಿಕ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ಈ ಅವಕಾಶದ ಲಾಭವನ್ನು ಪಡೆಯಬಹುದು. ಲಾಭ ಗಳಿಸಬಹುದಾದ ಕೆಲವು ಉತ್ತಮ ವ್ಯಾಪಾರದ ಬಗ್ಗೆ ನಾವಿಲ್ಲಿ ವಿವರಣೆ ನೀಡಿದ್ದೇವೆ, ಮುಂದೆ ಓದಿ...

1. ಮಣ್ಣಿನ ದೀಪಗಳು
ನವರಾತ್ರಿಯಿಂದ ದೀಪಾವಳಿಯವರೆಗೆ, ಹಬ್ಬದ ಸಮಯದಲ್ಲಿ ಇಡೀ ದೇಶವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಹಾಗಾಗಿ, ದೀಪಾವಳಿ ಸಂದರ್ಭದಲ್ಲಿ ಮಣ್ಣಿನ ದೀಪಗಳಿಗೆ ಸಾಕಷ್ಟು ಬೇಡಿಕೆ ಇರುತ್ತದೆ. ಆದ್ದರಿಂದ, ಮಣ್ಣಿನ ದೀಪಗಳನ್ನು ಸ್ವತಃ ತಯಾರಿಸುವ ಮೂಲಕ ಅಥವಾ ಅವುಗಳನ್ನು ಖರೀದಿಸುವ ಮೂಲಕ ನೀವು ಈ ವ್ಯವಹಾರವನ್ನು ಪ್ರಾರಂಭಿಸಬಹುದು. ಸಣ್ಣ ಯಂತ್ರವನ್ನು ಬಳಸಿಕೊಂಡು ಮನೆಯಲ್ಲಿ ಮಣ್ಣಿನ ದೀಪಗಳನ್ನು ಸುಲಭವಾಗಿ ತಯಾರಿಸಬಹುದು. ಕಡಿಮೆ ಹೂಡಿಕೆಯೊಂದಿಗೆ, ಉತ್ತಮ ಲಾಭವನ್ನು ಗಳಿಸಬಹುದು.
2. ಅಲಂಕಾರಿಕ ವಸ್ತುಗಳು
ದೀಪಾವಳಿಯ ಸಂದರ್ಭದಲ್ಲಿ ಮನೆ, ಅಂಗಡಿಗಳನ್ನು ಅಲಂಕರಿಸಲಾಗುತ್ತದೆ. ಹಾಗಾಗಿ ಗೃಹಾಲಂಕಾರ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಇವುಗಳಲ್ಲಿ ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಸೇರಿವೆ. ನೀವು ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ನೀವು ಅವುಗಳನ್ನು ನೇರವಾಗಿ ವೋಲ್‌ಸೆಲ್ ಮಾರುಕಟ್ಟೆಯಿಂದ ಖರೀದಿಸಬಹುದು. ರಿಟೇಲ್ ವ್ಯಾಪಾರದಲ್ಲಿ ಮಾರಾಟ ಮಾಡಬಹುದು. ಇವುಗಳನ್ನು ಯಾವುದೇ ಮಾರುಕಟ್ಟೆಯ ಹೊರಗೆ ಬಂಡಿಗಳ ಮೇಲೆ ಇರಿಸುವ ಮೂಲಕ ತೆರೆದ ಸ್ಥಳದಲ್ಲಿಯೂ ಮಾರಾಟ ಮಾಡಬಹುದು.
3. ಎಲೆಕ್ಟ್ರಾನಿಕ್ ದೀಪಗಳು
ನವರಾತ್ರಿ, ದಸರಾ ಮತ್ತು ದೀಪಾವಳಿಯಂದು ಪ್ರತಿ ಬೀದಿ, ಮನೆ ಮತ್ತು ಮೂಲೆ ಮೂಲೆಗಳನ್ನು ಅಲಂಕಾರಿಕ ದೀಪಗಳಿಂದ ಬೆಳಗಿಸಲಾಗುತ್ತದೆ. ವರ್ಷದ ಈ ಸಮಯದಲ್ಲಿ ಎಲೆಕ್ಟ್ರಾನಿಕ್ ದೀಪಗಳಿಗೆ ಸಾಕಷ್ಟು ಬೇಡಿಕೆಯಿದೆ. ವ್ಯಾಪಾರ ಮಾಡಲು ಈ ದೀಪಗಳನ್ನು ನಗರಗಳಿಂದ ವೋಲ್‌ಸೇಲ್ ಆಗಿ ಖರೀದಿಸಿ ರಿಟೇಲ್ ಆಗಿ ಮಾರಾಟ ಮಾಡಬಹುದು. ಈ ವ್ಯಾಪಾರದಲ್ಲಿ ಉತ್ತಮ ಲಾಭ ಲಭ್ಯವಾಗುತ್ತದೆ. ಇದಲ್ಲದೆ, ಈ ಅಲಂಕಾರಿಕ ದೀಪಗಳನ್ನು ತೆರೆದ ಸ್ಥಳದಲ್ಲಿ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು.
4. ಪ್ರತಿಮೆ ಮತ್ತು ಮೇಣದಬತ್ತಿ
ದೀಪಾವಳಿಯ ಸಂದರ್ಭದಲ್ಲಿ ಅಥವಾ ಲಕ್ಷ್ಮಿ ಪೂಜೆಯ ದಿನದಂದು ಲಕ್ಷ್ಮಿ ಮತ್ತು ಗಣೇಶ ಮುಂತಾದ ದೇವತೆಗಳ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತದೆ. ಜೇಡಿಮಣ್ಣಿನಿಂದ ಅಥವಾ ಇತರ ಉತ್ಪನ್ನಗಳಿಂದ ಮಾಡಿದ ವಿಗ್ರಹಗಳನ್ನು ಮಾರಾಟ ಮಾಡುವ ಮೂಲಕ ಉತ್ತಮ ಲಾಭವನ್ನು ಗಳಿಸಬಹುದು. ಮೇಣದಬತ್ತಿಗಳು ಮತ್ತು ಕೃತಕ ಹೂವಿನ ಮಾಲೆಗಳನ್ನು ವಿನ್ಯಾಸಗೊಳಿಸುವ ವ್ಯವಹಾರವೂ ಒಳ್ಳೆಯದು.


Click it and Unblock the Notifications