ಅಂತಾರಾಷ್ಟ್ರೀಯ ಹಣಕಾಸು ವಹಿವಾಟು ನಡೆಸುವುದು ಪ್ರಸ್ತುತ ಕೊಂಚ ಸರಳವಾಗಿದೆ. ಭಾರತದ ಫಿನ್‌ಟೆಕ್ ಸಂಸ್ಥೆಯಾದ ಫೋನ್‌ಪೇ ಅಂತರಾಷ್ಟ್ರೀಯ ವಹಿವಾಟನ್ನು ಸರಳಗೊಳಿಸಿದೆ. ಅತೀ ಅಧಿಕ ಯುಪಿಐ ವಹವಾಟು ನಡೆಯುವ ಭಾರತದ ಮೊದಲ ಫಿನ್‌ಟೆಕ್ ಸಂಸ್ಥೆ ಫೋನ್‌ಪೇ ಆಗಿದ್ದು ಹೊಸ ಫೀಚರ್ ಅನ್ನು ಪರಿಚಯಿಸಿದೆ.
ಪ್ರಸ್ತುತ ವಿದೇಶಕ್ಕೆ ಪ್ರಯಾಣ ಮಾಡುವ ಎಲ್ಲ ಪ್ರಯಾಣಿಕರು ಯುಪಿಐ ಮೂಲಕ ವಿದೇಶದಲ್ಲಿ ವಹಿವಾಟು ನಡೆಸಲು ಸಾಧ್ಯವಾಗುತ್ತದೆ. ಈ ಹಿಂದೆ ಬೇರೆ ದೇಶಗಳಲ್ಲಿ ನಾವು ಅಂತಾರಾಷ್ಟ್ರೀಯ ಕ್ರೆಡಿಟ್ ಅಥವಾ ಫಾರೆಕ್ಸ್ ಕಾರ್ಡ್ ಮೂಲಕ ಹಣಕಾಸು ವಹಿವಾಟನ್ನು ಮಾಡಬೇಕಾಗಿತ್ತು. ಆದರೆ ಈಗಿನ ಫೋನ್‌ಪೇಯ ನೂತನ ಫೀಚರ್ ಪ್ರಕಾರ ಓವರ್‌ಸೀಸ್ ವಹಿವಾಟನ್ನು ಮಾಡಿದಾಗ ಹಣವು ಬಳಕೆದಾರರ ಭಾರತದ ಖಾತೆಯಿಂದ ಡೆಬಿಟ್ ಆಗಲಿದೆ.
ಗುಡ್‌ನ್ಯೂಸ್: ಭಾರತ-ಸಿಂಗಾಪುರದ ನಡುವೆ ಶೀಘ್ರ ಯುಪಿಐ ವಹಿವಾಟು ಆರಂಭ
ಈವರೆಗೆ ನೇಪಾಲ, ಭೂತಾನ್, ಯುಎಇ, ಮೌರಿಟಾಸ್, ಸಿಂಗಾಪುರವು ಈ ಸ್ಥಳೀಯ ಕ್ಯೂಆರ್ ಕೋಡ್‌ಗೆ ಬೆಂಬಲವನ್ನು ನೀಡಿದ ದೇಶಗಳಾಗಿದೆ. ಇದು ಇನ್ನಷ್ಟು ದೇಶಗಳಿಗೆ ವಿಸ್ತಾರವಾಗುವ ನಿರೀಕ್ಷೆಯಿದೆ. ಈ ಹಿಂದೆ ಸಿಂಗಾಪುರವು ಇದಕ್ಕೆ ಉತ್ತೇಜನವನ್ನು ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಫೋನ್‌ಪೇನ ಸಹ ಸಂಸ್ಥಾಪಕ ರಾಹುಲ್ ಛಾರಿ, "ವಿಶ್ವದ ಎಲ್ಲ ದೇಶಗಳು ಕೂಡಾ ಯುಪಿಐ ವಹಿವಾಟಿನ ಲಾಭವನ್ನು ಪಡೆಯಲಿ ಎಂಬ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಯುಪಿಐ ಮೊದಲ ಹೆಜ್ಜೆಯಾಗಿದೆ. ಈ ಕ್ರಮವು ಗೇಮ್‌ಚೇಂಜರ್ ಆಗಲಿದೆ ಎಂಬ ನಂಬಿಕೆ ನನಗಿದೆ. ಭಾರತೀಯರು ವಿದೇಶದಲ್ಲಿ ಮಾಡಬೇಕಾದ ಪಾವತಿ ವಿಧಾನವನ್ನೇ ಇದು ಬದಲಾವಣೆ ಮಾಡಲಿದೆ ಎಂಬ ನಂಬಿಕೆಯಿದೆ," ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಯುಪಿಐ ವಹಿವಾಟು ಹೇಗೆ?
ಫೋನ್‌ಪೇನ ನೂತನ ಯುಪಿಐ ವಹಿವಾಟು ಆಯ್ಕೆಯ ಮೂಲಕ ಬಳಕೆದಾರರು ವಿದೇಶಿ ಮೆರ್ಚೆಂಟ್‌ಗಳಿಗೆ ಪಾವತಿಯನ್ನು ಮಾಡುವ ಆಯ್ಕೆಯಿದೆ. ಆದ್ದರಿಂದಾಗಿ ಗ್ರಾಹಕರು ವಿದೇಶಿ ಪ್ರಯಾಣ ಮಾಡುವುದಕ್ಕೂ ಮುನ್ನ ಫಾರೆಕ್ಸ್ ಕಾರ್ಡ್, ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್‌ಗಾಗಿ ಒದ್ದಾಡಬೇಕಾಗಿಲ್ಲ.
ಈ ಹೊಸ ಫೀಚರ್ ಅನ್ನು ಬಳಸಬೇಕಾದರೆ ನಾವು ಆಪ್‌ನಲ್ಲಿ ಯುಪಿಐ ಅಂತಾರಾಷ್ಟ್ರೀಯ ಆಯ್ಕೆಯನ್ನು (UPI international) ಆಕ್ಟಿವೇಟ್ ಮಾಡಬೇಕಾಗುತ್ತದೆ. ಬಳಕೆದಾರರು ತಮ್ಮ ವಿದೇಶಿ ಪ್ರವಾಸಕ್ಕೂ ಮುನ್ನ ಅಥವಾ ವಿದೇಶಕ್ಕೆ ತಲುಪಿದ ಬಳಿಕ ಈ ಸೇವೆಯನ್ನು ಸಕ್ರಿಯಗೊಳಿಸಬಹುದು.
ಫೋನ್‌ಪೇಯನ್ನು 2015ರಲ್ಲಿ ಆರಂಭ ಮಾಡಲಾಗಿದ್ದು, ಅದಾದ ಬಳಿಕ ದೇಶದ ಅತೀ ದೊಡ್ಡ ಯುಪಿಐ ಪಾವತಿ ಆಪ್ ಆಗಿದೆ. ಭಾರತದಲ್ಲಿ ನಡೆಯುವ ಒಟ್ಟು ಯುಪಿಐ ವಹಿವಾಟಿನಲ್ಲಿ ಈ ಸಂಸ್ಥೆಯ ಷೇರು ಅಧಿಕವಾಗಿದೆ. ಶೇಕಡ 49ಕ್ಕೂ ಅಧಿಕ ಯುಪಿಐ ವಹಿವಾಟು ಫೋನ್‌ಪೇ ಆಪ್ ಮೂಲಕ ನಡೆಯುತ್ತಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾಪೋರೇಷನ್ ಆಫ್ ಇಂಡಿಯಾದ ವರದಿ ಉಲ್ಲೇಖಿಸಿದೆ.
ಭಾರತ-ಸಿಂಗಾಪುರದ ನಡುವೆ ಶೀಘ್ರ ಯುಪಿಐ ವಹಿವಾಟು ಆರಂಭ
ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ವಹಿವಾಟು ಭಾರತದಲ್ಲಿ ಅತೀ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ, ಜನರು ಹೆಚ್ಚಾಗಿ ಬಳಸುವ ಪಾವತಿ ವಿಧಾನವಾಗಿದೆ. ಆದರೆ ಭಾರತದ ನೆರೆಹೊರೆಯ ದೇಶದಲ್ಲಿರುವ, ವಿದೇಶದಲ್ಲಿರುವ ಭಾರತೀಯರಿಗೆ ನಾವು ಯುಪಿಐ ಮೂಲಕ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಭಾರತ ಹಾಗೂ ಸಿಂಗಾಪುರದ ನಡುವೆ ಶೀಘ್ರವೇ ಯುಪಿಐ ವಹಿವಾಟು ಆರಂಭವಾಗಲಿದೆ. ಅಂದರೆ ಭಾರತದಿಂದ ಸಿಂಗಾಪುರಕ್ಕೆ ತೆರಳಿ ಅಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವವರು ತಮ್ಮ ಕುಟುಂಬಕ್ಕೆ ಸರಳ ಹಾಗೂ ಸುಲಭವಾಗಿ ಹಣವನ್ನು ಕಳುಹಿಸಲು ಶೀಘ್ರವೇ ಸಾಧ್ಯವಾಗಲಿದೆ ಎಂದು ಈ ಹಿಂದೆ ವರದಿಯಾಗಿದೆ.


Click it and Unblock the Notifications