For Quick Alerts
ALLOW NOTIFICATIONS  
For Daily Alerts

ಗುಡ್‌ನ್ಯೂಸ್: ಭಾರತ-ಸಿಂಗಾಪುರದ ನಡುವೆ ಶೀಘ್ರ ಯುಪಿಐ ವಹಿವಾಟು ಆರಂಭ

|

ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ವಹಿವಾಟು ಭಾರತದಲ್ಲಿ ಅತೀ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ, ಜನರು ಹೆಚ್ಚಾಗಿ ಬಳಸುವ ಪಾವತಿ ವಿಧಾನವಾಗಿದೆ. ಆದರೆ ಭಾರತದ ನೆರೆಹೊರೆಯ ದೇಶದಲ್ಲಿರುವ, ವಿದೇಶದಲ್ಲಿರುವ ಭಾರತೀಯರಿಗೆ ನಾವು ಯುಪಿಐ ಮೂಲಕ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಈ ವಿಚಾರದಲ್ಲಿ ನಿಮಗೆ ಸಿಹಿಸುದ್ದಿಯೊಂದಿದೆ.

 

ಭಾರತ ಹಾಗೂ ಸಿಂಗಾಪುರದ ನಡುವೆ ಶೀಘ್ರವೇ ಯುಪಿಐ ವಹಿವಾಟು ಆರಂಭವಾಗಲಿದೆ. ಅಂದರೆ ಭಾರತದಿಂದ ಸಿಂಗಾಪುರಕ್ಕೆ ತೆರಳಿ ಅಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವವರು ತಮ್ಮ ಕುಟುಂಬಕ್ಕೆ ಸರಳ ಹಾಗೂ ಸುಲಭವಾಗಿ ಹಣವನ್ನು ಕಳುಹಿಸಲು ಶೀಘ್ರವೇ ಸಾಧ್ಯವಾಗಲಿದೆ. ಈಗಾಗಲೇ ಪೇನೌ ಹಾಗೂ ಯುಪಿಐ ನಡುವಿನ ಹೊಂದಾಣಿಕೆಯ ತಾಂತ್ರಿಕ ಕಾರ್ಯ ಯಶಸ್ವಿಯಾಗಿದೆ ಎಂದು ವರದಿಯಾಗಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಸಿಂಗಾಪುರದ ಮಾನೆಟರಿ ಅಥಾರಿಟಿಯು ಉಭಯ ದೇಶಗಳ ನಡುವೆ ಯುಪಿಐ ವಹಿವಾಟನ್ನು ಆರಂಭ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಿಂಗಾಪುರದಲ್ಲಿರುವ ಭಾರತೀಯರು ತಮ್ಮ ಪ್ರೀತಿಪಾತ್ರರ ಖಾತೆಗೆ ಹಣ ವರ್ಗಾವಣೆ ಮಾಡಲು ಬ್ಯಾಂಕ್‌ಗೆ ಓಡಾಟ ನಡೆಸಬೇಕಾಗಿಲ್ಲ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

 ಪೇನೌ-ಯುಪಿಐ ತಾಂತ್ರಿಕ ಬೆಸುಗೆ

ಪೇನೌ-ಯುಪಿಐ ತಾಂತ್ರಿಕ ಬೆಸುಗೆ

"ಪೇನೌ ಅನ್ನು ಯುಪಿಐ ಜೊತೆ ಕನೆಕ್ಟ್ ಮಾಡಲು ಸಿಂಗಾಪುರ ಬಯಸುತ್ತದೆ. ಕೆಲವೇ ತಿಂಗಳುಗಳಲ್ಲಿ ಈ ಕಾರ್ಯವು ಸಂಪೂರ್ಣವಾಗಲಿದೆ. ಈ ಎಲ್ಲ ಕಾರ್ಯಗಳು ಮುಗಿದ ಬಳಿಕ ಯಾರೇ ಆದರೂ ಸಿಂಗಾಪುರದಲ್ಲೇ ಇದ್ದು ಭಾರತದಲ್ಲಿರುವ ತಮ್ಮ ಕುಟುಂಬಸ್ಥರಿಗೆ ಸುಲಭವಾಗಿ ಹಣವನ್ನು ವರ್ಗಾವಣೆ ಮಾಡಬಹುದು," ಎಂದು ಸಿಂಗಾಪುರದ ಭಾರತದ ಆಯುಕ್ತರು ಪಿ ಕುಮಾರನ್ ಹೇಳಿಕೊಂಡಿದ್ದಾರೆ.

 ಪ್ರವಾಸಿಗರಿಗೆ ರಿಲೀಫ್

ಪ್ರವಾಸಿಗರಿಗೆ ರಿಲೀಫ್

"ಭಾರತದಿಂದ ಸಿಂಗಾಪುರಕ್ಕೆ ಬರುವ ಭಾರತದ ಪ್ರವಾಸಿಗರ ಬಳಿ ಹೆಚ್ಚಾಗಿ ರುಪೇ ಕಾರ್ಡ್ ಇರುವುದಿಲ್ಲ. ಕೆಲವೊಮ್ಮೆ ಭಾರತೀಯರಲ್ಲಿ ರುಪೇ ಕಾರ್ಡ್ ಇದ್ದರೂ ಕೂಡಾ ಅದು ಸಿಂಗಾಪುರದ, ಸ್ಥಳೀಯ ರುಪೇ ಕಾರ್ಡ್ ಆಗಿರುವುದಿಲ್ಲ. ಅದಕ್ಕಾಗಿ ಅವರು ಹೆಚ್ಚು ನಗದನ್ನು ಕೈಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಜನರು ಕೈಯಲ್ಲಿ ಅಧಿಕ ನಗದನ್ನು ಇಟ್ಟುಕೊಂಡು ಸುರಕ್ಷತೆಯ ಭಯದಲ್ಲಿ ಇರಬೇಕಾಗಿಲ್ಲ. ಡಿಜಿಟಲ್ ವ್ಯವಸ್ಥೆಗೆ ನಾವು ಶರಣಾದರೆ, ನಗದನ್ನು ಕೈಯಲ್ಲಿ ಇಟ್ಟುಕೊಳ್ಳಬೇಕಾಗುವುದಿಲ್ಲ. ಹಾಗೆಯೇ ಅಧಿಕ ಶುಲ್ಕವನ್ನು ಹೊಂದಿರುವ ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಅನ್ನು ಕೂಡಾ ಬಳಕೆ ಮಾಡಬೇಕಿಲ್ಲ," ಎಂದು ಕೂಡಾ ಪಿ ಕುಮಾರನ್ ತಿಳಿಸಿದ್ದಾರೆ.

 ಭಾರತದಲ್ಲಿ ಯುಪಿಐ ವಹಿವಾಟು ಏರಿಕೆ
 

ಭಾರತದಲ್ಲಿ ಯುಪಿಐ ವಹಿವಾಟು ಏರಿಕೆ

"ತಂತ್ರಜ್ಞಾನದಲ್ಲಿನ ನೂತನ ಪ್ರಗತಿಯು ಭಾರತದಲ್ಲಿ ಪಾವತಿ ವ್ಯವಸ್ಥೆಯಲ್ಲೇ ಪ್ರಮುಖ ಬದಲಾವಣೆಯನ್ನು ಉಂಟು ಮಾಡಿದೆ. ಭಾರತದ ನಗದು ವಹಿವಾಟು ಅರ್ಥವ್ಯವಸ್ಥೆ ಪ್ರಸ್ತುತ ಡಿಜಿಟಲ್ ವಹಿವಾಟಿನ ಅರ್ಥವ್ಯವಸ್ಥೆಯಾಗಿ ಬದಲಾಗಿದೆ. ನಗದು ಚಲಾವಣೆಯು ಕೂಡಾ ಕಡಿಮೆಯಾಗಿದೆ. ಜನರು ಬಹುತೇಕ ಎಲ್ಲ ವಹವಾಟನ್ನು ಡಿಜಿಟಲ್ ಆಗಿ ಮಾಡುತ್ತಾರೆ," ಎಂದು ಎಸ್‌ಬಿಐ ಹೇಳಿದೆ. ಅಕ್ಟೋಬರ್‌ನಲ್ಲಿ ಯುಪಿಐ ವಹಿವಾಟು ಸುಮಾರು ಶೇಕಡ 7ರಷ್ಟು ಏರಿಕೆಯಾಗಿದೆ, 12.11 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಸೆಪ್ಟೆಂಬರ್‌ನಲ್ಲಿ 11.16 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆದಿತ್ತು.

English summary

UPI Transfer Service to Start Between India and Singapore Soon, Details In Kannada

UPI Transactions: UPI Transfer Service to Start Between India and Singapore Soon. Details In Kannada. Read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X