ಹೂಡಿಕೆ ಮಾಡಿ ಹಣವನ್ನು ಉಳಿತಾಯ ಮಾಡಿಕೊಳ್ಳುವುದು ಅತೀ ಮುಖ್ಯವಾಗುತ್ತದೆ. ಅದಕ್ಕಾಗಿ ನಮಗೆ ಬೇರೆ ಬೇರೆ ಆಯ್ಕೆಗಳು ಇದೆ. ಆ ಪೈಕಿ ಫಿಕ್ಸಿಡ್ ಡೆಪಾಸಿಟ್ ಅಥವಾ ಎಫ್‌ಡಿ ಕೂಡಾ ಒಂದಾಗಿದೆ. ಎಫ್‌ಡಿಯಲ್ಲಿ ಹಲವಾರು ಪ್ರಯೋಜನಗಳು ಇದೆ. ಆದರೆ ನಾವು ಎಫ್‌ಡಿಯನ್ನು ಆಯ್ಕೆ ಮಾಡುವಾಗ ಅಧಿಕ ಬಡ್ಡಿದರವನ್ನು ನೀಡುವ ಎಫ್‌ಡಿ ಆಯ್ಕೆ ಮಾಡಿಕೊಳ್ಳುವುದು ಅತೀ ಮುಖ್ಯವಾಗುತ್ತದೆ.
ಹಲವಾರು ಬ್ಯಾಂಕುಗಳಲ್ಲಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾದವರಿಗೆ ಶೇಕಡ 9ಕ್ಕಿಂತ ಅಧಿಕ ಬಡ್ಡಿದರವನ್ನು ನೀಡಲಾಗುತ್ತದೆ. ಅನೇಕರು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರಿಗೆ ಎಫ್‌ಡಿ ಮೇಲೆ ಶೇಕಡ 8 ಕ್ಕಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಇಲ್ಲಿ ನಾವು ಸರ್ಕಾರಿ ಬ್ಯಾಂಕ್ ನೀಡುವ ಎಫ್‌ಡಿಯನ್ನು ನಮೂದಿಸಿದ್ದೇವೆ, ಇಲ್ಲಿದೆ ವಿವರ ಮುಂದೆ ಓದಿ...

1. ಬ್ಯಾಂಕ್ ಆಫ್ ಇಂಡಿಯಾ (ಬಿಒಐ)
ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ಎಫ್‌ಡಿಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿದೆ. ಹೊಸ ದರಗಳು ಜುಲೈ 28 ರಿಂದ ಜಾರಿಗೆ ಬರುತ್ತವೆ ಎಂದು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ತಿಳಿಸಿದೆ. ಈ ನೂತನ ಎಫ್‌ಡಿ ಬಡ್ಡಿದರವು 400 ದಿನಗಳ (ಮಾನ್ಸೂನ್ ಡೆಪಾಸಿಟ್) ಹೊಸ ವಿಶೇಷ ಎಫ್‌ಡಿ ಮೇಲೆ ಅನ್ವಯವಾಗುತ್ತದೆ.
ಪರಿಷ್ಕರಣೆಯ ನಂತರ, ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರಿಟಿ ಹೊಂದುವ ಎಫ್‌ಡಿ ಮೇಲೆ ಶೇಕಡ 3 ರಿಂದ ಶೇಕಡ 7.25 ರಷ್ಟು ಬಡ್ಡಿದರವನ್ನು ನೀಡುತ್ತದೆ. ಬ್ಯಾಂಕ್ ಸಾಮಾನ್ಯ ಜನರಿಗೆ ಹೊಸದಾಗಿ ಪರಿಚಯಿಸಲಾದ 400 ದಿನಗಳ (ಮಾನ್ಸೂನ್ ಡೆಪಾಸಿಟ್) ಎಫ್‌ಡಿ ಅವಧಿಯ ಮೇಲೆ ಶೇಕಡ 7.35ರಷ್ಟು ಬಡ್ಡಿದರ ನೀಡುತ್ತದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಡೆಪಾಸಿಟ್ ಮೇಲೆ ಈ ಬಡ್ಡಿದರ ಅನ್ವಯವಾಗುತ್ತದೆ.
ಹಿರಿಯ ನಾಗರಿಕರು ನಿಯಮಿತ ಎಫ್‌ಡಿ ದರಗಳ ಮೇಲೆ ಹೆಚ್ಚುವರಿ ಶೇಕಡ 0.50ರಷ್ಟು ಬಡ್ಡಿಯನ್ನು ಪಡೆಯಬಹುದಾಗಿದೆ. 3 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ ಎಲ್ಲಾ ಎಫ್‌ಡಿಗಳಿಗೆ ಹಿರಿಯ ನಾಗರಿಕರು ಪ್ರಸ್ತುತ ಇರುವ 50 ಬಿಪಿಎಸ್ ಹೆಚ್ಚುವರಿ ಬಡ್ಡಿದರದ ಮೇಲೆ ಹೆಚ್ಚುವರಿ 25 ಬಿಪಿಎಸ್ ಬಡ್ಡಿ ದರವನ್ನು ಪಡೆಯಬಹುದಾಗಿದೆ.
2. ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ)
ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇಕಡ 3.5 ರಿಂದ ಶೇಕಡ 7.25 ರವರೆಗೆ ಬಡ್ಡಿದರವನ್ನು ಸಾಮಾನ್ಯ ಜನರಿಗೆ ನೀಡುತ್ತದೆ. ಬ್ಯಾಂಕ್ ಹಿರಿಯ ನಾಗರಿಕರಿಗೆ ಎರಡು ವಿಭಾಗಗಳಲ್ಲಿ ಬಡ್ಡಿದರವನ್ನು ನೀಡುತ್ತದೆ. ಹಿರಿಯ ನಾಗರಿಕರು (60 ವರ್ಷಗಳವರೆಗೆ) ಮತ್ತು ಸೂಪರ್ ಹಿರಿಯ ನಾಗರಿಕರು (ವಯಸ್ಸು 80 ವರ್ಷಗಳು ಮತ್ತು ಮೇಲ್ಪಟ್ಟವರು) ನೀಡುತ್ತದೆ. ಬ್ಯಾಂಕ್ ಪ್ರಕಾರ, ಮೇಲಿನ ಬಡ್ಡಿ ದರಗಳು ಜೂನ್ 01, 2023 ರಿಂದ ಜಾರಿಗೆ ಬರುತ್ತವೆ.
ಹಿರಿಯ ನಾಗರಿಕರಿಗೆ, ಬ್ಯಾಂಕ್ ಶೇಕಡೆ 4 ರಿಂದ ಶೇಕಡ 7.75 ರವರೆಗೆ ಬಡ್ಡಿದರವನ್ನು ನೀಡುತ್ತದೆ. ಆದರೆ ಸೂಪರ್ ಹಿರಿಯ ನಾಗರಿಕರಿಗೆ ಶೇಕಡ 4.30ರಿಂದ ಶೇಕಡ 8.05 ರವರೆಗೆ ಬಡ್ಡಿದರವನ್ನು ನೀಡಲಾಗುತ್ತದೆ. ಮೇಲಿನ ಬಡ್ಡಿ ದರಗಳು 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಡೆಪಾಸಿಟ್‌ಗೆ ಅನ್ವಯವಾಗುತ್ತದೆ.
444 ದಿನಗಳ ವಿಶೇಷ ಡೆಪಾಸಿಟ್ ಅವಧಿಗೆ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ ಶೇಕಡ 7.25 ರಷ್ಟು ಬಡ್ಡಿದರವನ್ನು, ಹಿರಿಯ ನಾಗರಿಕರಿಗೆ ಶೇಕಡ 7.75ರಷ್ಟು ಬಡ್ಡಿದರವನ್ನು, ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಶೇಕಡ 8.05ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. 2 ವರ್ಷಗಳು ಮತ್ತು 3 ವರ್ಷಗಳವರೆಗಿನ ಅವಧಿಯ ಎಫ್‌ಡಿ ಮೇಲೆ ಸಾಮಾನ್ಯ ಜನರಿಗೆ ಶೇಕಡ 7, ಹಿರಿಯ ನಾಗರಿಕರಿಗೆ ಶೇಕಡ 7.50ರಷ್ಟು ಮತ್ತು ಸೂಪರ್ ಸೀನಿಯರ್ ನಾಗರಿಕರಿಗೆ ಶೇಕಡ 7.80ರಷ್ಟು ಬಡ್ಡಿದರವನ್ನು ನೀಡುತ್ತದೆ.
3. ಕೆನರಾ ಬ್ಯಾಂಕ್
ಕೆನರಾ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಎಫ್‌ಡಿಗಳ ಮೇಲೆ ಹೆಚ್ಚಿನ ಬಡ್ಡಿ ದರಗಳನ್ನು ನೀಡುವ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಬ್ಯಾಂಕ್ ಎರಡು ರೀತಿಯ ಎಫ್‌ಡಿ ಹೊಂದಿದೆ. ಕಾಲೇಬಲ್ ಮತ್ತು ನಾನ್ ಕಾಲೇಬಲ್ ಎಫ್‌ಡಿ ಆಗಿದೆ. ಕಾಲೇಬಲ್ ಎಫ್‌ಡಿ ಯೋಜನೆಯಲ್ಲಿ 7 ದಿನಗಳಿಂದ 10 ವರ್ಷಗಳ ಡೆಪಾಸಿಟ್ ಮೇಲೆ ಬ್ಯಾಂಕ್ ಸಾಮಾನ್ಯ ಜನರಿಗೆ ಶೇಕಡ 4ರಿಂದ 7.25 ರವರೆಗೆ ಬಡ್ಡಿದರವನ್ನು ನೀಡುತ್ತದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಬಡ್ಡಿದರಗಳು 05 ಏಪ್ರಿಲ್ 2023 ರಿಂದ ಜಾರಿಗೆ ಬರುತ್ತವೆ.
4. ಬ್ಯಾಂಕ್ ಆಫ್ ಬರೋಡಾ
ಬ್ಯಾಂಕ್ ಆಫ್ ಬರೋಡಾ 4 ನೇ ಅತೀ ಹೆಚ್ಚು ಬಡ್ಡಿದರ ನೀಡುವ ಸರ್ಕಾರಿ ಬ್ಯಾಂಕ್ ಆಗಿದೆ. ಸಾಮಾನ್ಯ ಜನರಿಗಾಗಲಿ ಅಥವಾ ಹಿರಿಯ ನಾಗರಿಕರಾಗಲಿ ಈ ಬ್ಯಾಂಕ್ ಎಫ್‌ಡಿ ಮೇಲೆ ಹೆಚ್ಚಿನ ಬಡ್ಡಿ ದರಗಳನ್ನು ನೀಡುವ ಪಟ್ಟಿಯಲ್ಲಿರುವ ಬ್ಯಾಂಕ್. ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ಅವಧಿಗೆ 2 ಕೋಟಿ ರೂಪಾಯಿ ಕಡಿಮೆ ಮೊತ್ತದ ಮೇಲೆ ಸಾಮಾನ್ಯ ಜನರಿಗೆ ಶೇಕಡ 3 ರಿಂದ ಶೇಕಡ 7.25 ರವರೆಗೆ ಬಡ್ಡಿದರ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 3.50 ರಿಂದ ಶೇಕಡ 7.75 ರವರೆಗೆ ಬಡ್ಡಿದರವನ್ನು ನೀಡಲಾಗುತ್ತದೆ. ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಬಡ್ಡಿದರಗಳು ಮೇ 12, 2023 ರಿಂದ ಜಾರಿಗೆ ಬರುತ್ತವೆ.
5. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾಮಾನ್ಯ ಜನರಿಗೆ ಶೇಕಡ 3ರಿಂದ ಶೇಕಡ 7.10 (400 ದಿನಗಳ ವಿಶೇಷ ಯೋಜನೆ) ರವರೆಗೆ ಬಡ್ಡಿದರ ನೀಡುತ್ತದೆ. ಇದು ಅಮೃತ ಕಲಶ ಎಂಬ ವಿಶೇಷ ಎಫ್‌ಡಿಯಾಗಿದ್ದು, 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿಗೆ ಅನ್ವಯವಾಗುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 3.50ರಿಂದ ಶೇಕಡ 7.60ರವರೆಗೆ ಬಡ್ಡಿದರ ನೀಡಲಾಗುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications