ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಎರಡು ಹಂತದ ಸವರನ್ ಗೋಲ್ಡ್ ಬಾಂಡ್‌ಗಳನ್ನು (ಎಸ್‌ಜಿಬಿ) ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಹಣಕಾಸು ವರ್ಷ 2023-24ರ ಸಿರೀಸ್ I ರ ಚಂದಾದಾರಿಕೆಯು ಜೂನ್ 19-23, 2023ರಲ್ಲಿ ನಡೆಯಲಿದೆ. ಇನ್ನು ಸವರನ್ ಗೋಲ್ಡ್ ಬಾಂಡ್‌ನ ಸಿರೀಸ್ IIರ ಚಂದಾದಾರಿಕೆಯು ಸೆಪ್ಟೆಂಬರ್ 11-15, 2023ರಲ್ಲಿ ನಡೆಯಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೇಳಿಕೆಯಲ್ಲಿ ತಿಳಿಸಿದೆ.
ಸಿರೀಸ್ ಒಂದರ ಸಂಚಿಕೆ ದಿನಾಂಕವು ಜೂನ್ 17 ಆಗಿದೆ. ಎರಡನೇ ಸೀರಿಸ್‌ನ ಸಂಚಿಕೆ ದಿನಾಂಕ ಸೆಪ್ಟೆಂಬರ್ 20 ಆಗಿದೆ ಎಂದು ಆರ್‌ಬಿಐ ತಿಳಿಸಿದೆ. ಎಸ್‌ಜಿಬಿಯನ್ನು ನಿಗದಿತ ವಾಣಿಜ್ಯ ಬ್ಯಾಂಕುಗಳಲ್ಲಿ, (ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳು, ಪೇಮೆಂಟ್ ಬ್ಯಾಂಕ್‌ಗಳು, ಸ್ಥಳೀಯ ಗ್ರಾಮೀಣ ಬ್ಯಾಂಕುಗಳನ್ನು ಹೊರತುಪಡಿಸಿ), ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ (ಎಸ್‌ಎಚ್‌ಸಿಐಎಲ್) ಚಂದಾದಾರಿಕೆ ಮಾಡಬಹುದಾಗಿದೆ.

ಇನ್ನು ಕ್ಲಿಯರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಸಿಸಿಐಎಲ್), ನಿಗದಿತ ಅಂಚೆ ಕಚೇರಿಯಲ್ಲಿ, ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಲಿಮಿಟೆಡ್‌ನಲ್ಲಿಯೂ ಸವರನ್ ಗೋಲ್ಡ್ ಬಾಂಡ್ ಯೋಜನೆ 2023-24ರ ಚಂದಾದಾರಿಕೆ ಮಾಡಬಹುದಾಗಿದೆ. ಸರ್ಕಾರ ಬೆಂಬಲಿತ ಗೋಲ್ಡ್ ಬಾಂಡ್ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ..
ಯೋಜನೆಯ ಬಗ್ಗೆ ಪ್ರಮುಖ ಮಾಹಿತಿ ಇಲ್ಲಿದೆ
ಅರ್ಹತೆ: ಸವರನ್ ಗೋಲ್ಡ್ ಬಾಂಡ್ ಅನ್ನು ಭಾರತದಲ್ಲಿ ನೆಲೆಸಿರುವ ನಾಗರಿಕರು, ಹಿಂದೂ ಅವಿಭಜಿತ ಕುಟುಂಬ (ಎಚ್‌ಯುಎಫ್), ಟ್ರಸ್ಟ್, ವಿಶ್ವವಿದ್ಯಾನಿಲಯ, ಚಾರಿಟೇಬಲ್ ಇನ್‌ಸ್ಟಿಟ್ಯೂಷನ್‌ಗಳು ಚಂದಾದಾರಿಕೆ ಮಾಡಿಕೊಳ್ಳಬಹುದಾಗಿದೆ.
ಮೌಲ್ಯ: ಸವರನ್ ಗೋಲ್ಡ್ ಬಾಂಡ್‌ಗಳನ್ನು ಒಂದು ಗ್ರಾಂ ನ ಆಧಾರದಲ್ಲಿ ನೀಡಲಾಗುತ್ತದೆ. ಕನಿಷ್ಠ ಖರೀದಿ ಒಂದು ಗ್ರಾಂ ಆಗಿದೆ.
ಅವಧಿ: ಸವರನ್ ಗೋಲ್ಡ್ ಬಾಂಡ್ 8 ವರ್ಷಗಳ ಅವಧಿಯ ಬಾಂಡ್ ಆಗಿದೆ. ಆದರೆ ಐದು ವರ್ಷಗಳು ಕಳೆದ ಬಳಿಕ ಮೆಚ್ಯೂರಿಟಿಗೂ ಮುನ್ನ ವಿತ್‌ಡ್ರಾ ಮಾಡಿಕೊಳ್ಳುವ ಅವಕಾಶವಿದೆ. ಬಡ್ಡಿಯನ್ನು ಪಾವತಿ ಮಾಡಲಾಗುವ ದಿನಾಂಕದಂದು ಈ ವಿತ್‌ಡ್ರಾ ಅವಕಾಶವನ್ನು ನೀಡಲಾಗುತ್ತದೆ.
ಹೂಡಿಕೆ ಮಿತಿ: ಕನಿಷ್ಠ ಹೂಡಿಕೆ ಮಿತಿಯು ಒಂದು ಗ್ರಾಂ ಚಿನ್ನವಾಗಿದೆ. ಗರಿಷ್ಠವಾಗಿ ಒಬ್ಬ ವ್ಯಕ್ತಿ ಹಾಗೂ ಹಿಂದೂ ಅವಿಭಜಿತ ಕುಟುಂಬಕ್ಕೆ 4 ಕೆಜಿ ಚಿನ್ನದ ಮೇಲೆ ಹೂಡಿಕೆ ಮಾಡುವ ಅವಕಾಶವಿದೆ. ಟ್ರಸ್ಟ್ ಮತ್ತು ಇತರೆ ಸಂಸ್ಥೆಗಳು ಆದಲ್ಲಿ 20 ಕೆಜಿ ಚಿನ್ನಕ್ಕೆ ಹೂಡಿಕೆ ಮಾಡಬಹುದು. ಚಂದಾದಾರಿಕೆಗಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಹೂಡಿಕೆದಾರರಿಂದ ಸೆಲ್ಫ್ ಡಿಕ್ಲೆರೇಷನ್ ಅನ್ನು ಪಡೆಯಲಾಗುತ್ತದೆ.
ದರ ಎಷ್ಟಿದೆ?: 999 ಶುದ್ಧತೆಯ ಚಿನ್ನದ ವಹಿವಾಟಿನ ಅಂತ್ಯದ ಸರಾಸರಿ ದರದ ಆಧಾರದಲ್ಲಿ ಎಸ್‌ಜಿಬಿಯ ದರವನ್ನು ನಿರ್ಧಾರ ಮಾಡಲಾಗುತ್ತದೆ. ಇದು ಭಾರತೀಯ ರೂಪಾಯಿಯ ಲೆಕ್ಕಾಚಾರದಲ್ಲಿರುತ್ತದೆ. ಭಾರತದ ಬುಲ್ಲಿಯನ್ ಆಂಡ್ ಜ್ಯುವೆಲರ್ಸ್ ಅಸೋಸಿಯೇಷನ್ ಲಿಮಿಡೆಟ್ (ಐಬಿಜೆಬಿ) ಚಂದಾದಾರಿಕೆ ಆರಂಭವಾಗುವ ವಾರದಲ್ಲಿನ ಮೂರು ದಿನಗಳ ಅವಧಿಯಲ್ಲಿ ಬಿಡುಗಡೆ ಮಾಡುವ ಚಿನ್ನದ ದರದ ಆಧಾರದಲ್ಲಿ ಈ ಎಸ್‌ಜಿಬಿ ದರವನ್ನು ನಿರ್ಧಾರ ಮಾಡಲಾಗುತ್ತದೆ. ಆನ್‌ಲೈನ್‌ನಲ್ಲಿ ಚಂದಾದಾರಿಕೆ ಮಾಡುವ ಅವಕಾಶವಿದೆ. ಎಸ್‌ಜಿಬಿಯ ವಿತರಣೆಯ ಬೆಲೆ ಪ್ರತಿ ಗ್ರಾಂಗೆ 50 ರೂಪಾಯಿಗಳಷ್ಟು ಕಡಿಮೆ ಇರುತ್ತದೆ.
ರಿಡೆಂಪ್ಶನ್ ದರ: ಐಬಿಜೆಎ ಲಿಮಿಟೆಡ್ ಪ್ರಕಟಿಸಿದ ಹಿಂದಿನ ಮೂರು ಕೆಲಸದ ದಿನಗಳ 999 ಶುದ್ಧತೆಯ ಚಿನ್ನದ ಅಂತಿಮ ಬೆಲೆಯ ಸರಾಸರಿಯನ್ನು ಆಧರಿಸಿದ ರಿಡೆಂಪ್ಶನ್ ಬೆಲೆ ನಿರ್ಧಾರ ಮಾಡಲಾಗುತ್ತದೆ, ಅದು ಭಾರತೀಯ ರೂಪಾಯಿಗಳಲ್ಲಿರುತ್ತದೆ.
ಬಡ್ಡಿದರ: ಹೂಡಿಕೆದಾರರಿಗೆ ವಾರ್ಷಿಕವಾಗಿ ಶೇಕಡ 2.50ರಷ್ಟು ನಿಗದಿತ ಬಡ್ಡಿದರವನ್ನು ಅರ್ಧ ವಾರ್ಷಿವಕಾಗಿ ಪಾವತಿ ಮಾಡಲಾಗುತ್ತದೆ.


Click it and Unblock the Notifications