ಸತತ ಎರಡು ದಿನಗಳ ಕಾಲ ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಇಂದು ಇಳಿಕೆ ಕಂಡಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ದರವು 350 ರೂಪಾಯಿ ಕಡಿಮೆಯಾಗಿ, ರೂ. 47,750ಕ್ಕೆ ಕುಸಿದಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ದರವು ರೂ. 370 ಇಳಿಕೆ ಕಂಡು, 52,100 ಆಗಿದೆ.
ಪ್ರಸ್ತುತ, ಯುಎಸ್ ಉದ್ಯೋಗ ಮಾರುಕಟ್ಟೆಯು ಅಂತರರಾಷ್ಟ್ರೀಯ ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತಿದೆ. ಇದು ಭಾರತದಲ್ಲಿಯೂ ಪರಿಣಾಮ ಬೀರಿದೆ. ಇತ್ತೀಚೆಗೆ, ಎಡಿಪಿ ರಾಷ್ಟ್ರೀಯ ಉದ್ಯೋಗ ವರದಿಯು ಯುಎನ್ ನಾನ್‌ಫಾರ್ಮ್ ವೇತನದಾರರು ಏಪ್ರಿಲ್‌ನಿಂದ ಮೇ ತಿಂಗಳಲ್ಲಿ 128,000 ರಷ್ಟು ಏರಿಕೆಯಾಗಿದೆ ಎಂದು ಬಹಿರಂಗಪಡಿಸಿದೆ.
ಉದ್ಯೋಗ ಪರಿಸ್ಥಿತಿ ಮತ್ತು ಅಂತರರಾಷ್ಟ್ರೀಯ ಚಿನ್ನದ ಮಾರುಕಟ್ಟೆಯು ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಪ್ರಭಾವ ಬೀರಿರುವುದರ ಬಗ್ಗೆ ಮಾತನಾಡಿದ, ಟಿಡಿ ಸೆಕ್ಯುರಿಟೀಸ್ ಸರಕು ತಂತ್ರದ ಜಾಗತಿಕ ಮುಖ್ಯಸ್ಥ ಬಾರ್ಟ್ ಮೆಲೆಕ್ "ಮೇ ಉದ್ಯೋಗಗಳ ವರದಿಯು ಆರ್ಥಿಕ ವೇಗವನ್ನು ಪ್ರತಿನಿಧಿಸುತ್ತದೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಿಂದ ನಿರೀಕ್ಷಿತ ತೀವ್ರ ಕುಸಿತವು ಸರಿಯಾಗುವಂತೆ ತೋರುತ್ತಿಲ್ಲ," ಎಂದು ತಿಳಿಸಿದ್ದಾರೆ.

"ಈ ವರದಿಯ ಬಳಿಕ ದರಗಳು ಏರಿಕೆ ಕಂಡಿತು. ಆದರೆ ಹಳದಿ ಲೋಹದ ದರ ಮಾತ್ರ ಇಳಿಕೆ ಕಂಡಿದೆ. ಪ್ರತಿ ಔನ್ಸ್‌ಗೆ 1,860 ಡಾಲರ್‌ನಷ್ಟು ಇದೆ. ಭಾರತದಲ್ಲಿ ಚಿನ್ನದ ದರಗಳಲ್ಲಿ ಯಾವುದೇ ಕುಸಿತವು ಚಿಲ್ಲರೆ ಬೇಡಿಕೆಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಎಂದು ಅಭಿಪ್ರಾಯಿಸಿದ್ದಾರೆ.
ಯುಎಸ್‌ನಲ್ಲಿ ಹಣದುಬ್ಬರ ಹೆಚ್ಚಳ
ಪ್ರಸ್ತುತ ಯುಎಸ್‌ನಲ್ಲಿ ಹಣದುಬ್ಬರ ದರವು ತುಂಬಾ ಹೆಚ್ಚಾಗಿದೆ. ಆದರೆ ಕಳೆದ ತಿಂಗಳಲ್ಲಿ ಇದು ಬಹಳ ಸಮಯದ ನಂತರ ಸ್ವಲ್ಪ ಕಡಿಮೆಯಾಗಿದೆ. ಇದು ಷೇರು ಮಾರುಕಟ್ಟೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಈ ಹಣದುಬ್ಬರದ ಸಂದರ್ಭವು ಚಿನ್ನದ ಮೇಲೆ ಹೂಡಿಕೆಯು ಸುರಕ್ಷಿತವಾಗಿರುತ್ತದೆ ಎಂದು ನಂಬಲಾಗಿದೆ. ಆದರೆ ಅನೇಕ ತಜ್ಞರು ಆರ್ಥಿಕ ಹಿಂಜರಿತ ಉಂಟಾಗುವ ಆತಂಕವನ್ನು ಹೊಂದಿದ್ದಾರೆ.
ಜೂನ್ 3ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 500 ರೂಪಾಯಿ ಏರಿಕೆಯಾಗಿದ್ದು 48,100 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 540 ಹೆಚ್ಚಳವಾಗಿದ್ದು ಪ್ರಸ್ತುತ 52,470 ರೂಪಾಯಿ ಆಗಿದೆ. ಈ ನಡುವೆ ಬೆಳ್ಳಿ ಬೆಲೆಯೂ ಏರಿದೆ. ಒಂದು ಕೆಜಿ ಬೆಳ್ಳಿ ದರವು 1,300 ರೂಪಾಯಿ ಹಿಗ್ಗಿ ಪ್ರಸ್ತುತ 62,700 ರೂಪಾಯಿ ಆಗಿದೆ.


Click it and Unblock the Notifications