ಪ್ರಸ್ತುತ ನಾವು ರೈಲಿನಲ್ಲಿ ಟಿಕೆಟ್ ಬುಕ್ ಮಾಡಿದರೆ ಯಾವುದೇ ಸೀಟ್ ಇಲ್ಲ ಎಂದಾದರೆ ವೇಟಿಂಗ್ ಲಿಸ್ಟ್‌ನಲ್ಲಿ ಇರುತ್ತೇವೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಈ ವೇಟಿಂಗ್ ಲಿಸ್ಟ್ ಅನ್ನು ಸಂಪೂರ್ಣವಾಗಿ ರದ್ದು ಮಾಡಲು ರೈಲ್ವೆ ಸಚಿವಾಲಯವು ಮುಂದಾಗಿದೆ.
ಹೌದು ರೈಲ್ವೇ ಸಚಿವಾಲಯವು 4-5 ವರ್ಷಗಳಲ್ಲಿ ವೇಟಿಂಗ್ ಲಿಸ್ಟ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ತನ್ನ ಮಹತ್ವಾಕಾಂಕ್ಷೆಯ ಗುರಿಯನ್ನು ಘೋಷಿಸಿದೆ. ಈ ನಿಟ್ಟಿನಲ್ಲಿ ಮೆಗಾ ಪ್ಲ್ಯಾನ್ ಅನ್ನು ರೈಲ್ವೇ ಸಚಿವಾಲಯ ಮಾಡಿಕೊಂಡಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಸಚಿವಾಲಯದೊಳಗಿನ ಮೂಲಗಳು ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಹರಿಸಲು ಸಮಗ್ರ ಯೋಜನೆಯನ್ನು ಬಹಿರಂಗಪಡಿಸಿವೆ. ವಿಶೇಷವಾಗಿ ಸಾಮಾನ್ಯ ಮತ್ತು ಸ್ಲೀಪರ್-ವರ್ಗದವರ ಸಮಸ್ಯೆ ಬಗೆಹರಿಸಲು ಯೋಜನೆಯನ್ನು ಸಚಿವಾಲಯ ರೂಪಿಸಿಕೊಂಡಿದೆ.
2023ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ, ಪ್ರಯಾಣಿಕರ ಹಂಚಿಕೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಡೇಟಾ ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಜನರಲ್ ಮತ್ತು ಸ್ಲೀಪರ್ ಕ್ಲಾಸ್‌ಗಳನ್ನು ಒಳಗೊಂಡಂತೆ ನಾನ್-ಎಸಿ ಕೋಚ್‌ಗಳು ಒಟ್ಟು ಪ್ರಯಾಣಿಕರಲ್ಲಿ ಶೇಕಡ 95.3 ರಷ್ಟು ಅಂದರೆ 372 ಕೋಟಿ ಪ್ರಯಾಣಿಕರನ್ನು ಹೊಂದಿದ್ದವು.
ಹಿಂದಿನ ವರ್ಷಕ್ಕೆ ಹೋಲಿಸಿದರೆ ರೈಲಿನಲ್ಲಿ 38 ಕೋಟಿ ಪ್ರಯಾಣಿಕರ ಗಣನೀಯ ಹೆಚ್ಚಳ ಕಂಡುಬಂದಿದೆ. ಇದು ಆರ್ಥಿಕವಾಗಿ ನೋಡಿದಾಗ ಪ್ರಯಾಣದ ಆಯ್ಕೆಗಳಿಗೆ ಜನರು ಕಡಿಮೆ ದರದ ಪ್ರಯಾಣದ ಆಯ್ಕೆಯಾದ ರೈಲುಗಳನ್ನು ಅಧಿಕವಾಗಿ ಆಯ್ಕೆ ಮಾಡುವುದು ಕಂಡು ಬರುತ್ತಿದೆ.
ಇನ್ನು ಎಸಿ ಕೋಚ್‌ಗಳು ಒಟ್ಟು ಪ್ರಯಾಣಿಕರಲ್ಲಿ ಶೇಕಡ 4.7 ರಷ್ಟು ಪ್ರಯಾಣಿಕರನ್ನು ಹೊಂದಿದೆ. ಅಂದರೆ 18.2 ಕೋಟಿ ಪ್ರಯಾಣಿಕರನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಎಸಿ ಕೋಚ್‌ನಲ್ಲಿನ ಪ್ರಯಾಣಿಕರ ಸಂಖ್ಯೆಯನ್ನು ನಾವು ನೋಡಿದಾಗ ಹಿಂದಿನ ವರ್ಷಕ್ಕೆ ಹೋಲಿಸಿದಾಗ ಈ ವರ್ಷ 3.1 ಕೋಟಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ.
ಪ್ರಯಾಣಿಕರ ಸಂಖ್ಯೆಯಲ್ಲಿಯೂ ಒಟ್ಟಾರೆ ಏರಿಕೆಯಾಗಿದೆ. 41.1 ಕೋಟಿಯನ್ನು ಪ್ರಯಾಣಿಕರ ಪ್ರಮಾಣ ಅಧಿಕವಾಗಿದೆ. ನಾನ್ ಎಸಿ ಪ್ರಯಾಣಿಕರಲ್ಲಿ (ಸಾಮಾನ್ಯ ಮತ್ತು ಸ್ಲೀಪರ್ ವರ್ಗ) ಶೇಕಡ 92.5 ರಷ್ಟು ಹೆಚ್ಚಳವಾಗಿದೆ.
ಹಣಕಾಸು ಸರಿದೂಗಿಸಲು ಜನರ ಆಯ್ಕೆ
ನಮ್ಮ ಬಜೆಟ್‌ಗೆ ಅನುಗುಣವಾಗಿ ಪ್ರಯಾಣವನ್ನು ಪ್ಲ್ಯಾನ್ ಮಾಡಲು ಬಯಸುವ ಜನರಿಗೆ ಪ್ರಸ್ತುತ ರೈಲು ಉತ್ತಮ ಆಯ್ಕೆಯಾಗಿದೆ. ಈ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಭಾರತೀಯ ರೈಲ್ವೇ ತನ್ನ ಸೇವೆಗಳನ್ನು ಗಣನೀಯವಾಗಿ ವಿಸ್ತರಿಸಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಡ್‌ಗೂ ಮುಂಚಿನ ದಿನಗಳಿಗೆ ನಾವು ಹೋಲಿಕೆ ಮಾಡಿದರೆ, ಈಗ ಹೆಚ್ಚುವರಿ 562 ರೈಲುಗಳು ಭಾರತೀಯ ರೈಲ್ವೆ ನೆಟ್‌ವರ್ಕ್‌ನಾದ್ಯಂತ ಪ್ರತಿದಿನ ಕಾರ್ಯನಿರ್ವಹಿಸುತ್ತಿವೆ. ಈಗ ರೈಲ್ವೇ ಸಚಿವಾಲಯವು 4-5 ವರ್ಷಗಳಲ್ಲಿ ವೇಟಿಂಗ್ ಲಿಸ್ಟ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕುವತ್ತ ಗಮನ ಹರಿಸಿದೆ.
ಕೋವಿಡ್‌ನ ಮುಂಚಿನ ರೈಲುಗಳ ಸಂಖ್ಯೆ ಮತ್ತು ಈಗ ಇರುವ ರೈಲುಗಳ ಸಂಖ್ಯೆಯನ್ನು ನಾವು ಹೋಲಿಸಿದರೆ ಗಮನಾರ್ಹ ಬದಲಾವಣೆ ಕಾಣಬಹುದಾಗಿದೆ. ಮೇಲ್/ಎಕ್ಸ್‌ಪ್ರೆಸ್ ರೈಲುಗಳ ಪ್ರಮಾಣವು 1,768 ರಿಂದ 2,122 ಕ್ಕೆ ಏರಿಕೆಯಾಗಿದೆ. ಸಬ್‌ಅರ್ಬನ್ ರೈಲುಗಳು 5,626 ರಿಂದ 5,774 ಕ್ಕೆ ಜಿಗಿತ ಕಂಡಿದೆ.
ಇನ್ನು ಪ್ಯಾಸೆಂಜರ್ ರೈಲುಗಳು ಸಂಖ್ಯೆಯು 2,792 ರಿಂದ 2,852 ಕ್ಕೆ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಪ್ರತಿದಿನ 10,748 ರೈಲುಗಳು ಓಡಾಟ ಮಾಡುತ್ತಿದೆ. ರೈಲ್ವೇ ಸಚಿವಾಲಯದ ಈಗಿನ ಯೋಜನೆಯು ಪ್ರಸ್ತುತ ಇರುವ ಬೇಡಿಕೆಯನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಮುಂದಿನ ದಿನಗಳಲ್ಲಿ ವೇಟಿಂಗ್ ಲಿಸ್ಟ್ ಎಂಬುವುದು ಇಲ್ಲವಾಗುತ್ತದೆ.


Click it and Unblock the Notifications