Cost Of Living: ಭಾರತದಲ್ಲಿ ಜನರ ಜೀವನ ವೆಚ್ಚ ಎಷ್ಟು, ಬೆಂಗಳೂರಿಗರು ಎಷ್ಟು ಖರ್ಚು ಮಾಡ್ತಾರೆ ಗೊತ್ತೆ?

ಜೀವನ ವೆಚ್ಚ (Cost Of Living) ಎನ್ನುವುದು ವಸತಿ, ಆಹಾರ, ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತು ಸಾಮಾನ್ಯವಾಗಿ ತೆರಿಗೆಗಳಂತಹ ವಿವಿಧ ವೆಚ್ಚಗಳನ್ನು ಸೇರಿಸಿ ನಿರ್ದಿಷ್ಟ ಸ್ಥಳದಲ್ಲಿ ಬದುಕಲು ಒಬ್ಬ ವ್ಯಕ್ತಿಗೆ ಅಗತ್ಯವಿರುವ ಹಣವಾಗಿದೆ. ಭಾರತವು ವಾಸಿಸಲು ಅತ್ಯುತ್ತಮ ದೇಶಗಳಲ್ಲಿ 109ನೇ ಸ್ಥಾನದಲ್ಲಿದೆ. ಆದರೆ ಜೀವನ ವೆಚ್ಚಕ್ಕೆ ಬಂದಾಗ 197 ದೇಶಗಳಲ್ಲಿ 188 ನೇ ಸ್ಥಾನದಲ್ಲಿದೆ.

ಯುನೈಟೆಡ್ ಸ್ಟೇಟ್ಸ್‌ಗೆ ಹೋಲಿಸಿದರೆ, ಭಾರತವು ಶೇಕಡ 70 ರಷ್ಟು ಕಡಿಮೆ ಜೀವನ ವೆಚ್ಚವನ್ನು ಹೊಂದಿದೆ. ಭಾರತದಲ್ಲಿನ ಆಸ್ತಿಗಳ ಬಾಡಿಗೆ ವೆಚ್ಚವು ಸುಮಾರು ಶೇಕಡ 89 ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ಜನರ ಜೀವನ ವೆಚ್ಚ ಎಷ್ಟಿದೆ, ಜೀವನ ಸಾಗಿಸಲು ಒಂದು ಕುಟುಂಬಕ್ಕೆ ವಾರ್ಷಿಕವಾಗಿ ಎಷ್ಟು ಹಣ ಬೇಕಾಗುತ್ತದೆ ಎಂಬ ಮಾಹಿತಿಯನ್ನು ನಂಬಿಯೋ ವೆಬ್‌ಸೈಟ್‌ ನೀಡಿದೆ.

 Cost Of Living: ಬೆಂಗಳೂರಿಗರು ವಾರ್ಷಿಕ ಎಷ್ಟು ಖರ್ಚು ಮಾಡ್ತಾರೆ?

ನಂಬಿಯೋ ವೆಬ್‌ಸೈಟ್‌ನ ಪ್ರಕಾರ ಭಾರತದಲ್ಲಿ ವೆಚ್ಚವು ನಗರ ಮತ್ತು ಗ್ರಾಮೀಣ ಪ್ರದೇಶಗಳಿಂದ ಬದಲಾಗುತ್ತದೆ. ಸರಾಸರಿ ಭಾರತೀಯರು ಸುಮಾರು ಬಾಡಿಗೆ ವೆಚ್ಚವಿಲ್ಲದೆ 27,800 ರೂಪಾಯಿಯಲ್ಲಿ ಜೀವನ ಸಾಗಿಸಬಹುದಾಗಿದೆ. ನಾಲ್ಕು ಜನರ ಕುಟುಂಬವಾದರೆ ಬಾಡಿಗೆ ಮೊತ್ತ ಬಿಟ್ಟು ಅಂದಾಜು 95,100 ರೂಪಾಯಿಯಲ್ಲಿ ಜೀವನ ಸಾಗಿಸಬಹುದಾಗಿದೆ.

ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವು ವಿಶ್ವದ ಸರಾಸರಿಗಿಂತ 2.35 ಪಟ್ಟು ಕಡಿಮೆಯಾಗಿದೆ. ತೆರಿಗೆ ಕಡಿತದ ನಂತರ ಸರಾಸರಿ ಭಾರತೀಯರು ಗಳಿಸುವ ಸಂಬಳವು ಒಂದೂವರೆ ತಿಂಗಳು ಬದುಕಲು ಸಾಕಾಗುತ್ತದೆ ಎಂದು ನಂಬಿಯೋ ವೆಬ್‌ಸೈಟ್ ಹೇಳುತ್ತದೆ.

ಯಾವುದು ಅತೀ ದುಬಾರಿ ನಗರ?

ಸ್ಟ್ಯಾಟಿಸ್ಟಾ ಪ್ರಕಾರ, ಭಾರತದಲ್ಲಿ ನಗರಗಳಿಗೆ ಜೀವನ ವೆಚ್ಚ ಸೂಚ್ಯಂಕ 2023ರ ಪ್ರಕಾರ ನೋಯ್ಡಾವು ಅತ್ಯಂತ ದುಬಾರಿ ನಗರವೆನಿಸಿದೆ. ಈ ನಗರ 27.7 ರೇಟಿಂಗ್‌ ಹೊಂದಿದೆ. ಈ ನಗರದ ನಂತರದ ಸ್ಥಾನದಲ್ಲಿ 26.9 ರೇಟಿಂಗ್‌ನೊಂದಿಗೆ ಗುರುಗ್ರಾಮ ಇದೆ. ಉತ್ತರದ ಎರಡೂ ನಗರಗಳು ಮುಂಬೈ ಅನ್ನು ಮೀರಿಸಿದೆ. ಮುಂಬೈನ ರೇಟಿಂಗ್ 25.9 ಮತ್ತು ದೆಹಲಿ 25.2 ರಷ್ಟಿದೆ. ಕೊಯಮತ್ತೂರು ಮತ್ತು ಇಂದೋರ್ ಅತೀ ಕಡಿಮೆ ವೆಚ್ಚದ ನಗರ ಎಂದು ಪರಿಗಣಿಸಲಾಗಿದ್ದು ರೇಟಿಂಗ್ 21 ಆಗಿದೆ.

ನೋಯ್ಡಾ ಅತಿ ಹೆಚ್ಚು ಜೀವನ ವೆಚ್ಚವನ್ನು ಹೊಂದಿದೆ. ಈ ನಗರದಲ್ಲಿ ಸರಾಸರಿ ಭಾರತದ ವೆಚ್ಚಕ್ಕೆ ಹೋಲಿಸಿದರೆ ಶೇಕಡ 22 ರಷ್ಟು ಹೆಚ್ಚಾಗಿದೆ. ನೋಯ್ಡಾದಲ್ಲಿ ಒಬ್ಬ ವ್ಯಕ್ತಿಗೆ ಬಾಡಿಗೆ ಇಲ್ಲದೆ ಪ್ರತಿ ತಿಂಗಳು 34,075 ರೂಪಾಯಿ ಬೇಕಾಗುತ್ತದೆ. ನಾಲ್ಕು ಜನರ ಕುಟುಂಬಕ್ಕೆ ಬಾಡಿಗೆ ಇಲ್ಲದೆ 1,17,200 ರೂಪಾಯಿ ಬೇಕಾಗುತ್ತದೆ.

ನೋಯ್ಡಾದಲ್ಲಿ ಯುಟಿಲಿಟಿ ಖರ್ಚು (ವಿದ್ಯುತ್, ನೀರು ಮೊದಲಾದವು) ಪ್ರತಿ ತಿಂಗಳು 6,128 ರೂಪಾಯಿ ಆಗಿದೆ. ನಗರ ಕೇಂದ್ರ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆ ಅಂದಾಜು 14,600 ರೂಪಾಯಿ ಆಗಿದೆ. ನಗರ ಕೇಂದ್ರದ ಹೊರ ಭಾಗದಲ್ಲಿ ಬಾಡಿಗೆ ಮನೆಗೆ ಅಂದಾಜು 10,400 ರೂಪಾಯಿ ಇದೆ. ನೋಯ್ಡಾದಲ್ಲಿ ಸರಾಸರಿ ವೇತನವು ದೇಶದ ಅತಿದೊಡ್ಡ ತೆರಿಗೆ ಪಾವತಿದಾರರ ನಗರಕ್ಕಿಂತ ಸುಮಾರು ಶೇಕಡ 9.8 ರಷ್ಟು ಅಧಿಕವಾಗಿದೆ.

ಬೆಂಗಳೂರಿನ ಜನರಿಗೆ ವಾರ್ಷಿಕ ಎಷ್ಟು ಹಣ ಅಗತ್ಯ?

ಉಳಿದ ನಗರಗಳಿಗೆ ಹೋಲಿಸಿದರೆ, ನಾಲ್ಕು ಜನರ ಕುಟುಂಬಕ್ಕೆ ಬೆಂಗಳೂರಿನಲ್ಲಿ ಜೀವನ ವೆಚ್ಚ ಸುಮಾರು 1,29,546 ರೂಪಾಯಿ ಆಗಿದೆ. ಇದು ಬಾಡಿಗೆ ಮೊತ್ತವನ್ನು ಬಿಟ್ಟು ಆಗಿದೆ. ಮುಂಬೈಗಿಂತ ಬೆಂಗಳೂರಿನಲ್ಲಿ ಜೀವನ ವೆಚ್ಚ ಶೇಕಡ 17 ಅಧಿಕವಾಗಿದೆ. ಬೆಂಗಳೂರಿನಲ್ಲಿ ಒಬ್ಬ ವ್ಯಕ್ತಿಗೆ ಗರಿಷ್ಠವೆಂದರೆ ಮಾಸಿಕ ಯುಟಿಲಿಟಿ ವೆಚ್ಚ 4,900 ರೂಪಾಯಿ, ದಿನಸಿ ವೆಚ್ಚ 3,500 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ ಬಾಡಿಗೆ ವೆಚ್ಚಗಳು ಮುಂಬೈಗಿಂತ ತುಲನಾತ್ಮಕವಾಗಿ ಕಡಿಮೆ ಆಗಿದೆ. ಬೆಂಗಳೂರಿನ ನಗರ ಕೇಂದ್ರದಲ್ಲಿ ಅಪಾರ್ಟ್‌ಮೆಂಟ್‌ಗೆ ಸರಾಸರಿ ಬಾಡಿಗೆ 31,000 ರೂಪಾಯಿ ಆಗಿದೆ. ನಗರ ಕೇಂದ್ರದ ಹೊರ ಭಾಗದಲ್ಲಾದರೆ ಗರಿಷ್ಠ ಬಾಡಿಗೆ ಸರಾಸರಿ 18,500 ರೂಪಾಯಿ ಆಗಿದೆ.

ಭಾರತದ ಎಲ್ಲಾ ಪ್ರಮುಖ ಮೆಗಾ-ಸಿಟಿಗಳಿಗೆ ವ್ಯತಿರಿಕ್ತವಾಗಿ, ಬೆಂಗಳೂರಿನ ಸರಾಸರಿ ನಿವ್ವಳ ಸಂಬಳ ಅತೀ ಅಧಿಕವಾಗಿದೆ. ಬೆಂಗಳೂರಿನಲ್ಲಿ ಮಾಸಿಕ ಸರಾಸರಿ ನಿವ್ವಳ ವೇತನ 1.2 ಲಕ್ಷ ರೂಪಾಯಿ ಆಗಿದೆ. ಭಾರತದಲ್ಲಿ ಅತೀ ಕಡಿಮೆ ದುಬಾರಿ ನಗರವಾದ ಕೊಯಮತ್ತೂರು ನಗರಕ್ಕಿಂತ ನಾಲ್ಕು ಪಟ್ಟು ಅಧಿಕ ವೇತನ ಬೆಂಗಳೂರಿನಲ್ಲಿ ನೀಡಲಾಗುತ್ತದೆ.

ಮುಂಬೈನಲ್ಲಿ ಜೀವನ ಸಾಗಿಸಲು ಎಷ್ಟು ಹಣ ಬೇಕು?

ಮುಂಬೈನಲ್ಲಿ ಜೀವನ ಸಾಗಿಸಲು ನಾಲ್ಕು ಜನರ ಕುಟುಂಬಕ್ಕೆ 1,10,233 ರೂಪಾಯಿ ವಾರ್ಷಿಕವಾಗಿ ಬೇಕಾಗುತ್ತದೆ ಎಂದು ವರದಿ ಹೇಳುತ್ತದೆ. ಇದರಲ್ಲೇ ದಿನಸಿ ವೆಚ್ಚ ಮಾಸಿಕ 3000 ರೂಪಾಯಿ ಮತ್ತು ಯುಟಿಲಿಟಿ ವೆಚ್ಚ ಮಾಸಿಕ 5,600 ರೂಪಾಯಿ ಸೇರಿರುತ್ತದೆ. ಆದರೂ ಕೂಡಾ ಮುಂಬೈನ ನಗರ ಕೇಂದ್ರದಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆ ದುಬಾರಿಯಾಗಿದೆ.

ಮುಂಬೈನ ನಗರ ಕೇಂದ್ರದಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆ ಬೆಂಗಳೂರಿಗಿಂತ ಸುಮಾರು ಶೇಕಡ 66 ರಷ್ಟು ಅಧಿಕವಾಗಿದೆ. ನೋಯ್ಡಾಕ್ಕಿಂತ 2.3 ಪಟ್ಟು ಹೆಚ್ಚಾಗಿದೆ. ನಗರ ಕೇಂದ್ರದಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆ 49,000 ರೂಪಾಯಿ ಆಗಿದೆ. ನಗರದ ಹೊರ ಭಾಗದಲ್ಲಿ ಅಪಾರ್ಟ್‌ಮೆಂಟ್ ಬಾಡಿಗೆ ಸರಾಸರಿ 27,500 ರೂಪಾಯಿ ಆಗಿದೆ. ಮುಂಬೈನಲ್ಲಿ ಸರಾಸರಿ ವೇತನ ಮಾಸಿಕ 67,000 ರೂಪಾಯಿ ಆಗಿದ್ದು, ಇದು ಬೆಂಗಳೂರಿನ ಸರಾಸರಿ ವೇತನಕ್ಕಿಂತ ಅರ್ಧದಷ್ಟು ಕಡಿಮೆಯಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+