ನಮ್ಮ ವೃದ್ಧಾಪ್ಯ ಜೀವನವು ಸರಳವಾಗಿ, ಯಾವುದೇ ತೊಂದರೆ ಇಲ್ಲದೆ ನಡೆಯಬೇಕಾದರೆ ನಾವು ಅದಕ್ಕಾಗಿ ಈಗಲೇ ಹಣವನ್ನು ಉಳಿತಾಯ ಮಾಡುವುದು ಅತೀ ಮುಖ್ಯವಾಗುತ್ತದೆ. ನಾವು ಹೀಗೆ ಹೂಡಿಕೆ ಮಾಡಿ ಹಣ ಉಳಿತಾಯ ಮಾಡಿದರೆ, ಅದು ನಮ್ಮ ನಿವೃತ್ತಿ ಜೀವನದಲ್ಲಿ ಸಹಾಯವಾಗಲಿದೆ. ನೀವು ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಲಕ್ಷಾಂತರ ರೂಪಾಯಿ ಪಿಂಚಣಿ ಪಡೆಯಬಹುದು.
ಆಗಸ್ಟ್ 2022 ರಲ್ಲಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಪರಿಚಯಿಸಿದ ಎಲ್‌ಐಸಿ ಸರಳ ಪಿಂಚಣಿ ಯೋಜನೆ, ನಾನ್‌ಲಿಂಕ್ಡ್, ನಾನ್‌ಪಾರ್ಟಿಸಿಪೇಟಿಂಗ್ ಸಿಂಗಲ್ ಪ್ರೀಮಿಯಂ ವರ್ಷಾಶನ ಯೋಜನೆಯಾಗಿದೆ. ಪ್ರಾರಂಭದಿಂದ ಸರಿಸುಮಾರು ಶೇಕಡ 5 ರಷ್ಟು ವರ್ಷಾಶನ ನೀಡುತ್ತದೆ. ಪಾಲಿಸಿದಾರರು ತಾವು ಜೀವಿಸಿರುವವರೆಗೆ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಆಧಾರದ ಮೇಲೆ ಪಾವತಿಯನ್ನು ಪಡೆಯಬಹುದು.

ಅರ್ಹತಾ ಮಾನದಂಡ: 40 ರಿಂದ 80 ವರ್ಷ ವಯಸ್ಸಿನ ವ್ಯಕ್ತಿಗಳು ಈ ವರ್ಷಾಶನ ಪಿಂಚಣಿ ಯೋಜನೆಗೆ ಚಂದಾದಾರರಾಗಲು ಅಥವಾ ಖರೀದಿಸಲು ಅರ್ಹರಾಗಿರುತ್ತಾರೆ.
ಪಿಂಚಣಿ ಕ್ಯಾಲ್ಕುಲೇಟರ್
ಅಧಿಕೃತ ಎಲ್‌ಐಸಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಎಲ್‌ಐಸಿ ಸರಳ ಪಿಂಚಣಿ ಯೋಜನೆಯ ವಿವರಗಳ ಪ್ರಕಾರ, ಪಾಲಿಸಿದಾರರು 2.50 ಲಕ್ಷ ರೂಪಾಯಿಯನ್ನು ಒಂದು ಬಾರಿಗೆ ಏಕ ಪ್ರೀಮಿಯಂ ಮೂಲಕ ಪಾವತಿ ಮಾಡಿದರೆ, ಮಾಸಿಕವಾಗಿ 1000 ರೂಪಾಯಿ ಅಥವಾ ವಾರ್ಷಿಕವಾಗಿ 12 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯಬಹುದಾಗಿದೆ.
ಉದಾಹರಣೆಗೆ, ಒಂದೇ ಪ್ರೀಮಿಯಂ ಆಗಿ 10 ಲಕ್ಷ ರೂಪಾಯಿ ಹೂಡಿಕೆ ಮಾಡುವ ಮೂಲಕ ಹೂಡಿಕೆದಾರರು 50,250 ರೂಪಾಯಿ ವಾರ್ಷಿಕ ಪಿಂಚಣಿ ಪಡೆಯಬಹುದಾಗಿದೆ. ಅದೇ ರೀತಿ, 1 ಲಕ್ಷ ರೂಪಾಯಿ ವಾರ್ಷಿಕ ಪಿಂಚಣಿ ಪಡೆಯಲು, ಹೂಡಿಕೆದಾರರು 20 ಲಕ್ಷ ರೂಪಾಯಿ ಏಕ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ.
ಎಲ್‌ಐಸಿ ಸರಳ ಪಿಂಚಣಿ ಯೋಜನೆಯ ಪ್ರಮುಖ ವಿವರ
ಸಾಲದ ಪ್ರಯೋಜನ: ಎಲ್‌ಐಸಿ ಯೋಜನೆ ಪ್ರಾರಂಭವಾದ ಆರು ತಿಂಗಳ ನಂತರ ಪಾಲಿಸಿದಾರರು ಸಾಲ ಸೌಲಭ್ಯವನ್ನು ಪಡೆಯಬಹುದು.
ಎಕ್ಸಿಟ್ ಆಯ್ಕೆ: ಪ್ರಾರಂಭದಿಂದ ಆರು ತಿಂಗಳ ನಂತರ ಎಲ್‌ಐಸಿ ಸರಳ ಪಿಂಚಣಿ ಯೋಜನೆಯಿಂದ ಎಕ್ಸಿಟ್ ಆಗಲು ಅವಕಾಶವಿದೆ.
ಬಡ್ಡಿದರ: ವರ್ಷಾಶನ ಯೋಜನೆಯು ಸುಮಾರು ಶೇಕಡ 5 ರಷ್ಟು ವಾರ್ಷಿಕ ಆದಾಯವನ್ನು ನೀಡುತ್ತದೆ.
ಪಿಂಚಣಿ ಪ್ರಯೋಜನ: ಈ ಯೋಜನೆಯು ಸಂಪೂರ್ಣ ಜೀವನದ ಪಾಲಿಸಿಯಾಗಿದೆ. ಪ್ರಾರಂಭದ ನಂತರ ಸಂಪೂರ್ಣ ಜೀವನಕ್ಕೆ ಪಾಲಿಸಿದಾರರು ವಾರ್ಷಿಕ ಅಥವಾ ಮಾಸಿಕ ಪಿಂಚಣಿಗೆ ಅರ್ಹರಾಗಿದ್ದಾರೆ.
ನಾಮಿನಿಗೆ ಡೆತ್ ಬೆನಿಫಿಟ್: ಪಾಲಿಸಿದಾರನ ಮರಣದ ಸಂದರ್ಭದಲ್ಲಿ, ಮೂಲ ಪ್ರೀಮಿಯಂ ಮೊತ್ತವನ್ನು ನಾಮಿನಿಗೆ ನೀಡಲಾಗುತ್ತದೆ.
ಮೆಚ್ಯೂರಿಟಿ ಪ್ರಯೋಜನವಿಲ್ಲ: ಎಲ್‌ಐಸಿ ಸರಳ ಪಿಂಚಣಿ ಯೋಜನೆಯು ಮೆಚ್ಯೂರಿಟಿ ಪ್ರಯೋಜನವನ್ನು ಒದಗಿಸುವುದಿಲ್ಲ. ಪಾಲಿಸಿದಾರರು ಜೀವಂತವಾಗಿರುವವರೆಗೆ ಪಿಂಚಣಿ ಪಾವತಿ ಆಗುತ್ತದೆ.


Click it and Unblock the Notifications