ದಿನಕ್ಕೆ 252 ರೂ. ಹೂಡಿಕೆ ಮಾಡಿ 20 ಲಕ್ಷ ಪಡೆಯಿರಿ!
ನಾವು ಹೂಡಿಕೆ ಮಾಡುವ ಸಂದರ್ಭದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಅತೀ ಮುಖ್ಯ. ನೀವು ಸುರಕ್ಷತೆಯಾಗಿ ಹೂಡಿಕೆ ಮಾಡಿ ಅಧಿಕ ಹಣವನ್ನು ಗಳಿಸಲು ಬಯಸಿದರೆ ನಿಮಗೆ ಎಲ್‌ಐಸಿ ಯೋಜನೆ ಉತ್ತಮವಾಗಿದೆ. ಎಲ್‌ಐಸಿ ನಿಮಗೆ ದಿನಕ್ಕೆ 252 ರೂ. ಹೂಡಿಕೆ ಮಾಡಿ 20 ಲಕ್ಷ ಪಡೆಯುವ ಅವಕಾಶವನ್ನು ನೀಡಿದೆ.
ಹೌದು ಭಾರತೀಯ ಜೀವ ವಿಮಾ ನಿಗಮದ (LIC) ಜೀವನ್ ಲಾಭ್ ಪಾಲಿಸಿ ನಿಮಗೆ ಕಡಿಮೆ ಹೂಡಿಕೆ ಮಾಡಿ ಅಧಿಕ ಹಣ ಹಿಂದಕ್ಕೆ ಪಡೆಯಲು ಉತ್ತಮ ಆಯ್ಕೆಯಾಗಿದೆ. ಎಲ್‌ಐಸಿಯ ಜೀವನ್ ಲಾಭ್ ಪಾಲಿಸಿಯಲ್ಲಿ ಸ್ವಲ್ಪ ಹೂಡಿಕೆ ಮಾಡುವ ಮೂಲಕ, ನೀವು ಮೆಚ್ಯೂರಿಟಿ ಸಮಯದಲ್ಲಿ ಲಕ್ಷ ರೂಪಾಯಿಗಳವರೆಗೆ ಪಡೆಯಬಹುದು.
ಉದಾಹರಣೆಗೆ, LIC ಜೀವನ್ ಲಾಭ್ ಪಾಲಿಸಿಯಲ್ಲಿ ನೀವು ದಿನಕ್ಕೆ 251.7 ರೂಪಾಯಿಗಳಷ್ಟು ಹೂಡಿಕೆ ಮಾಡಿದರೆ ಮೆಚ್ಯೂರಿಟಿ ಸಂದರ್ಭದಲ್ಲಿ ಸುಮಾರು 20 ಲಕ್ಷ ರೂಪಾಯಿಗಳನ್ನು ಪಡೆಯಬಹುದು. ಈ ಹೂಡಿಕೆ ಯೋಜನೆಯು ರಕ್ಷಣೆ ಹಾಗೂ ಆದಾಯ ತೆರಿಗೆ ಉಳಿತಾಯದೊಂದಿಗೆ ಸೀಮಿತ ಪ್ರೀಮಿಯಂ ಪಾವತಿ ಆಯ್ಕೆಗಳನ್ನು ನಿಮಗೆ ನೀಡುತ್ತದೆ. ಆದರೆ ನೀವು ಹೂಡಿಕೆ ಮಾಡುವ ಮೊದಲು ಹೂಡಿಕೆ ಯೋಜನೆಯ ಸಂಪೂರ್ಣ ವಿವರಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಅಲ್ಲವೇ? ಇಲ್ಲಿದೆ ಎಲ್ಐಸಿ ಜೀವನ್ ಲಾಭ್ ಪಾಲಿಸಿಗೆ ಸಂಬಂಧಿಸಿದ ಎಲ್ಲಾ ವಿವರಗಳು ಮುಂದೆ ಓದಿ...

ಪಾಲಿಸಿಯ ಅವಧಿ ನೀವೇ ನಿರ್ಧಾರ ಮಾಡಬಹುದು
ಎಲ್ಐಸಿ ಜೀವನ್ ಲಾಭ್ ಯೋಜನೆಯಲ್ಲಿ ಕನಿಷ್ಠ ವಿಮಾ ಮೊತ್ತ 2 ಲಕ್ಷ ರೂಪಾಯಿ ಆಗಿದೆ. ಹೂಡಿಕೆದಾರರು 16 ರಿಂದ 25 ವರ್ಷಗಳ ನಡುವಿನ ಪಾಲಿಸಿ ಶ್ರೇಣಿಯ ನಡುವೆ ಆಯ್ಕೆಯನ್ನು ಮಾಡಿಕೊಳ್ಳಬಹುದು. 10 ರಿಂದ 16 ವರ್ಷಗಳವರೆಗೆ ಇರಬಹುದಾದ ಪ್ರೀಮಿಯಂ ಪಾವತಿಯ ಅವಧಿಯನ್ನು ಸಹ ನಿರ್ಧಾರ ಮಾಡಬಹುದು.

ಕನಿಷ್ಠ ವಯೋಮಿತಿ ಎಷ್ಟು?
ಎಲ್ಐಸಿ ಜೀವನ್ ಲಾಭ್ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯೋಮಿತಿ 8 ವರ್ಷಗಳು ಆಗಿದೆ. ಹಾಗೆಯೇ ಗರಿಷ್ಠ ವಯೋಮಿತಿ 59 ವರ್ಷ ಆಗಿದೆ. ವಿಮಾ ಕಂಪನಿಯು ಹೂಡಿಕೆದಾರರಿಗೆ ತಮ್ಮ ಪ್ರೀಮಿಯಂಗಳನ್ನು ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ನಿಯಮಿತವಾಗಿ ಪಾವತಿ ಮಾಡಲು ಅವಕಾಶ ನೀಡುತ್ತದೆ.

ಕೊನೆಯ ದಿನದ ಬಳಿಕವೂ ಇದೆ ಪಾವತಿಗೆ ಅವಕಾಶ!
ಇನ್ನು ಎಲ್‌ಐಸಿ ಜೀವನ್ ಲಾಬ್ ಪಾಲಿಸಿಯಲ್ಲಿ ಮಾಸಿಕ ಪಾವತಿಗಳಿಗೆ 15 ದಿನಗಳು ಹೆಚ್ಚಿನ ಅವಧಿಯಾಗಿದೆ (ಗ್ರೇಸ್ ಪಿರೇಯಡ್). ಈ ಹೆಚ್ಚಿನ ಅವಧಿ ಎಂದರೆ ನೀವು ಪ್ರೀಮಿಯಂ ಪಾವತಿ ಮಾಡುವ ಕೊನೆಯ ದಿನಾಂಕದ ನಂತರದ 15 ದಿನಗಳ ಹೆಚ್ಚಿನ ಅವಕಾಶ ಅವಧಿ ಆಗಿದೆ. ನೀವು ಪ್ರೀಮಿಯಂ ಪಾವತಿಯನ್ನು ಕೊನೆಯ ದಿನಾಂಕಕ್ಕೂ ಮುನ್ನ ಮಾಡಲು ಸಾಧ್ಯವಾಗದಿದ್ದರೆ, ಈ ಹೆಚ್ಚಿನ ಅವಧಿಯಲ್ಲಿ ಮಾಡಲು ಅವಕಾಶ ನೀಡಲಾಗುತ್ತದೆ. ಇದಲ್ಲದೇ ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕ ಪಾವತಿಗಳನ್ನು ಆಯ್ಕೆ ಮಾಡುವ ಹೂಡಿಕೆದಾರರಿಗೆ ಎಲ್‌ಐಸಿ 30 ದಿನಗಳ ಗ್ರೇಸ್ ಪಿರೇಡ್ ಅನ್ನು ನೀಡುತ್ತದೆ. ಹೂಡಿಕೆದಾರರು ಪ್ರೀಮಿಯಂಗಳ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ಹೂಡಿಕೆದಾರರ ಮರಣದ ಸಂದರ್ಭದಲ್ಲಿ, ವಿಮಾ ಮೊತ್ತವನ್ನು ನಾಮಿನಿಗೆ ಪಾವತಿಸಲಾಗುತ್ತದೆ.

20 ಲಕ್ಷ ರೂಪಾಯಿ ಪಡೆಯುವುದು ಹೇಗೆ?
ಹೂಡಿಕೆದಾರರು 20 ನೇ ವಯಸ್ಸಿನಲ್ಲಿ ಎಲ್ಐಸಿ ಜೀವನ್ ಲಾಭ್ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರೆ 16 ವರ್ಷಗಳವರೆಗೆ ದಿನಕ್ಕೆ ರೂ 251.7 ಪಾವತಿ ಮಾಡಬೇಕಾಗುತ್ತದೆ. ಅವನು ಅಥವಾ ಅವಳು ಪ್ರಿಮೀಯಂ ಸಮಯದಲ್ಲಿ ರೂ 20 ಲಕ್ಷಗಳನ್ನು ಪಡೆಯುತ್ತಾರೆ. ಈ ಮೂಲಕ ನೀವು ಭಾರತೀಯ ಜೀವ ವಿಮಾ ನಿಗಮದ (LIC) ಜೀವನ್ ಲಾಭ್ ಪಾಲಿಸಿಯಲ್ಲಿ 252 ರೂ. ಪಾವತಿ ಮಾಡಿ 20 ಲಕ್ಷ ರೂಪಾಯಿ ಪಡೆಯಬಹುದು.