ನಿವೃತ್ತಿಯಲ್ಲಿ ನಾವು ಯಾವುದೇ ಹಣಕಾಸು ತೊಂದರೆ ಇಲ್ಲದೆ ಜೀವನವನ್ನು ಸಾಗಿಸಬೇಕಾದರೆ, ನಾವು ಮೊದಲೇ ಹೂಡಿಕೆ ಮಾಡುವುದು ಅತೀ ಮುಖ್ಯವಾಗಿದೆ. ನಾವು ಸಣ್ಣ ವಯಸ್ಸಿನಲ್ಲೇ ಮಾಡುವ ಹೂಡಿಕೆಯು ನಮ್ಮ ವೃದ್ಧಾಪ್ಯಕ್ಕೆ ಸಹಾಯವಾಗಲಿದೆ. ಇನ್ನು ಈಗಾಗಲೇ ವರದಿಯೊಂದು ದೇಶದಲ್ಲಿ ಶೇಕಡ 40 ರಷ್ಟು ಹಿರಿಯ ನಾಗರಿಕರು ಕಡುಬಡವರಾಗಿದ್ದಾರೆ ಎಂದು ಹೇಳಿದೆ.
ಆದರೆ ನೀವು ವೃದ್ಧಾಪ್ಯದಲ್ಲಿಯೂ ಹೂಡಿಕೆ ಮಾಡಿ ಅದರಿಂದ ಆದಾಯವನ್ನು ಗಳಿಸುವ ಹಲವಾರು ಅವಕಾಶಗಳು ನಿಮಗಿದೆ. ಹಿರಿಯ ನಾಗರಿಕರಿಗೆ ಸುರಕ್ಷಿತವಾದ, ಆರ್ಥಿಕ ಭದ್ರತೆಯನ್ನು ನೀಡುವ ವಿವಿಧ ಹೂಡಿಕೆ ಆಯ್ಕೆಗಳು ಇದೆ. ಹಿರಿಯ ನಾಗರಿಕರಿಗೆ ಇರುವ ಹೂಡಿಕೆ ಆಯ್ಕೆಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಫಿಕ್ಸಿಡ್ ಡೆಪಾಸಿಟ್: ಸುರಕ್ಷಿತ ಹೂಡಿಕೆ
ಎಫ್‌ಡಿ ಎಂದು ಕರೆಯಲಾಗುವ ಫಿಕ್ಸಿಡ್ ಡೆಪಾಸಿಟ್‌ಗಳು ಭಾರತದಲ್ಲಿನ ಕೆಲವು ಸುರಕ್ಷಿತ ಹೂಡಿಕೆ ಆಯ್ಕೆಗಳಾಗಿವೆ. ಹಿರಿಯ ನಾಗರಿಕರಿಕರಿಗೆ ಹೆಚ್ಚಿನ ಬಡ್ಡಿದರವನ್ನು ಫಿಕ್ಸಿಡ್ ಡೆಪಾಸಿಟ್ ನೀಡುತ್ತದೆ. ಹಾಗೆಯೇ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಕೂಡಾ ಸಾಧ್ಯವಾಗುತ್ತದೆ. ಸಾಮಾನ್ಯವಾಗಿಯೇ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿದರ ನೀಡುತ್ತದೆ.
ಮ್ಯೂಚುಯಲ್ ಫಂಡ್‌ಗಳು: ಬ್ಯಾಲೆನ್ಸಿಂಗ್ ರಿಸ್ಕ್ ಮತ್ತು ರಿಟರ್ನ್
ಮ್ಯೂಚುವಲ್ ಫಂಡ್ ಮತ್ತೊಂದು ಹೂಡಿಕೆ ಆಯ್ಕೆಯಾಗಿದೆ. ಅಪಾಯ ಮತ್ತು ಆದಾಯದ ಸಮತೋಲಿತ ಮಿಶ್ರಣವನ್ನು ಹೊಂದಿದೆ. ಈಕ್ವಿಟಿ, ಸಾಲ ಮತ್ತು ಚಿನ್ನದಂತಹ ವಿವಿಧ ವಲಯಗಳಲ್ಲಿ ಹೂಡಿಕೆಯನ್ನು ಹಿರಿಯ ನಾಗರಿಕರು ಮಾಡಬಹುದಾಗಿದೆ. ಮ್ಯೂಚುವಲ್ ಫಂಡ್‌ನಲ್ಲಿ ಸಿಸ್ಟಮ್ಯಾಟಿಕ್ ಇನ್‌ವೆಸ್ಟ್‌ಮೆಂಟ್ ಪ್ಲ್ಯಾನ್ (ಎಸ್‌ಐಪಿ) ಆಯ್ಕೆಯು ಶಿಸ್ತುಬದ್ಧ ಹೂಡಿಕೆಗೆ ಅವಕಾಶ ನೀಡುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು: ನಿವೃತ್ತಿಯ ನಂತರದ ಯೋಜನೆಗಳು
60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಿರಿಯ ನಾಗರಿಕ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಭಾರತದಲ್ಲಿ ಸುರಕ್ಷಿತ ಮತ್ತು ಹೆಚ್ಚು ಲಾಭದಾಯಕ ಹೂಡಿಕೆಯ ಆಯ್ಕೆಗಳಲ್ಲಿ ಒಂದಾಗಿದೆ. ಇದು ಆಕರ್ಷಕ ಬಡ್ಡಿ ದರವನ್ನು ನೀಡುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನ ನೀಡುತ್ತದೆ. ಹೂಡಿಕೆಯ ಮೊತ್ತದ ಮೇಲೆ ತ್ರೈಮಾಸಿಕವಾಗಿ ಬಡ್ಡಿಯನ್ನು ಪಾವತಿಸಲಾಗುತ್ತದೆ.
ಹೂಡಿಕೆ ಮಾಡಿ ಅತ್ಯುತ್ತಮ ಲಾಭವನ್ನು ಪಡೆಯಬೇಕಾದರೆ ಹಿರಿಯ ನಾಗರಿಕರು ಹೂಡಿಕೆಯನ್ನು ಬೇರೆ ಬೇರೆ ಕಡೆ ಮಾಡುವುದು ಉತ್ತಮವಾಗಿದೆ. ಇದರಿಂದಾಗಿ ಅಪಾಯ ಹಾಗೂ ಆದಾಯದ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಅತೀ ಮುಖ್ಯವಾಗಿದೆ. ಇದರಿಂದ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಬಹುದು.
ಎಫ್‌ಡಿಗಳು, ಮ್ಯೂಚುಯಲ್ ಫಂಡ್‌ಗಳು ಮತ್ತು ಎಸ್‌ಸಿಎಸ್‌ಎಸ್‌ಗಳು ಹಿರಿಯರಿಗೆ ಇರುವ ಅತೀ ಉತ್ತಮ ಹೂಡಿಕೆ ಆಯ್ಕೆಗಳಾಗಿದೆ. ಆದರೆ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವಾಗ ಎಂದಿಗೂ ಕೂಡಾ ತಜ್ಞರ ಸಲಹೆಯನ್ನು ಪಡೆಯುವುದು ಅತೀ ಅಗತ್ಯವಾಗಿದೆ.


Click it and Unblock the Notifications