ನೀವು ಹಣವನ್ನು ಉಳಿತಾಯ ಮಾಡಲು ಉತ್ತಮ ಮಾರ್ಗ ಸರ್ಕಾರಿ ಯೋಜನೆಗಳಾಗಿದೆ. ಸರ್ಕಾರದ ಹಲವಾರು ಯೋಜನೆಗಳಿದ್ದು ಅದರಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಲಕ್ಷಾಧಿಪತಿಗಳು ಆಗಲು ಸಾಧ್ಯವಾಗುತ್ತದೆ. ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಖಂಡಿತವಾಗಿಯೂ ಮಿಲಿಯನೇರ್ ಆಗಲು ಸಾಧ್ಯವಿದೆ.
ಹೌದು, ಆ ಯೋಜನೆಯೇ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಆಗಿದೆ. ಭಾರತದ ಅತೀ ಪ್ರಖ್ಯಾತ ಯೋಜನೆಗಳಲ್ಲಿ ಪಿಪಿಎಫ್ ಕೂಡಾ ಒಂದಾಗಿದೆ. ಪಿಪಿಎಫ್ ಬರೀ ನಿಮ್ಮ ಹಣವನ್ನು ಉಳಿತಾಯ ಮಾಡಲು ನಿಮಗೆ ಸಹಾಯ ಮಾಡುವುದು ಮಾತ್ರವಲ್ಲ. ಈ ಮೂಲಕ ನೀವು ಪಾವತಿಬೇಕಾದ ಆದಾಯ ತೆರಿಗೆ ಮೊತ್ತದಿಂದ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ.

ಉದ್ಯೋಗ ಮಾಡುವ ಅಥವಾ ಮಾಡದ ಯಾವುದೇ ವ್ಯಕ್ತಿಯು ಪಿಪಿಎಫ್ ಖಾತೆಯನ್ನು ತೆರೆಯಬಹುದಾಗಿದೆ ಮತ್ತು ವಾರ್ಷಿಕವಾಗಿ ಬರೀ 500 ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಈ ಪಿಪಿಎಫ್ ಯೋಜನೆಯಲ್ಲಿ ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ ಹೂಡಿಕೆ ಮಿತಿಯು 500 ರೂಪಾಯಿ ಆಗಿದೆ. ಹಾಗೆಯೇ ಗರಿಷ್ಠ ಹೂಡಿಕೆ ಮಿತಿಯು 1.5 ಲಕ್ಷ ರೂಪಾಯಿ ಆಗಿದೆ.
ಈ ಹೂಡಿಕೆಯನ್ನು ನೀವು ಒಂದೇ ಬಾರಿಗಾದರೂ ಮಾಡಬಹುದು ಅಥವಾ ಮಾಸಿಕವಾಗಿಯೂ ಮಾಡಬಹುದು. ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಯೋಜನೆಯು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು, ಇದರ ಕನಿಷ್ಠ ಅವಧಿ 15 ವರ್ಷವಾಗಿದೆ. ಈ ಅವಧಿಯನ್ನು 5 ವರ್ಷಗಳ ಅವಧಿಯಂತೆ ನಿಮ್ಮ ಇಚ್ಛೆಗೆ ಅನುಸಾರವಾಗಿ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.
ನೀವು ಮಾಸಿಕವಾಗಿ ಬರೀ 100 ರೂಪಾಯಿ ಹೂಡಿಕೆ ಮಾಡುವ ಮೂಲಕವೇ ಪಿಪಿಎಫ್ ಖಾತೆಯನ್ನು ತೆರೆಯಲು ಸಾಧ್ಯವಾಗುತ್ತದೆ. ನೀವು 1.5 ಲಕ್ಷ ರೂಪಾಯಿ ಮೊತ್ತವನ್ನು ಹೂಡಿಕೆ ಮಾಡಿದರೆ ಅದಕ್ಕೆ ಬಡ್ಡಿದರ ಇರುವುದಿಲ್ಲ, ಹಾಗೆಯೇ ತೆರಿಗೆ ಉಳಿತಾಯಕ್ಕೆ ಇದು ಅರ್ಹವಾಗಿರುವುದಿಲ್ಲ.
ಪಿಪಿಎಫ್ ಖಾತೆಯನ್ನು ಬರೀ ಒಬ್ಬ ವ್ಯಕ್ತಿಯ ಹೆಸರಲ್ಲಿ ಮಾತ್ರ ತೆರೆಯಬಹುದಾಗಿದೆ. ಆದರೆ ಖಾತೆದಾರರು ನಾಮಿನಿಯನ್ನು ಸೇರ್ಪಡೆ ಮಾಡಬಹುದಾಗಿದೆ. ಖಾತೆಯನ್ನು ತೆರೆದ ಸಂದರ್ಭದಲ್ಲಿ ಅಥವಾ ನಂತರದಲ್ಲಿ, ಯಾವುದೇ ಸಂದರ್ಭದಲ್ಲಿ ನೀವು ನಾಮಿನಿ ಸೇರ್ಪಡೆ ಮಾಡಬಹುದಾಗಿದೆ.
ಅರ್ಹತೆಯನ್ನು ತಿಳಿಯಿರಿ
ಭಾರತದ ನಾಗರಿಕರಾದ ಯಾವುದೇ ವ್ಯಕ್ತಿಯು ಪಿಪಿಎಫ್ ಖಾತೆಯನ್ನು ತೆರೆಯಬಹುದಾಗಿದೆ. ಆದರೆ ಒಬ್ಬ ವ್ಯಕ್ತಿಯು ಒಂದು ಪಿಪಿಎಫ್ ಖಾತೆಯನ್ನು ತೆರೆಯಲು ಮಾತ್ರ ಸಾಧ್ಯವಿದೆ. ಒಂದಕ್ಕಿಂತ ಅಧಿಕ ಖಾತೆಯನ್ನು ತೆರೆಯುವಂತಿಲ್ಲ.
ಪಿಪಿಎಫ್ ಖಾತೆ ಎಲ್ಲಿ ತೆರೆಯುವುದು?
ನೀವು ಅಂಚೆ ಕಚೇರಿಗಳಲ್ಲಿ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಸೇರಿದಂತೆ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನೀವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಖಾತೆಗಳನ್ನು ತೆರೆಯಲು ಸಾಧ್ಯವಾಗುತ್ತದೆ.
ಪಿಪಿಎಫ್ ಖಾತೆ ತೆರೆಯುವುದು ಹೇಗೆ ನೋಡಿ
ಹಂತ 1: ಇಂಟರ್‌ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಲಾಗಿನ್ ಆಗಿ.
ಹಂತ 2: Open a PPF Account ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 3: ಈ ಖಾತೆಯನ್ನು ನಿಮಗಾಗಿ ನೀವು ತೆರೆಯುವುದಾದರೆ Self Account ಎಂದು ಕ್ಲಿಕ್ ಮಾಡಿ. ಅಪ್ರಾಪ್ತ ವ್ಯಕ್ತಿಯ ಪರವಾಗಿ ನೀವು ಖಾತೆಯನ್ನು ತೆರೆಯುವುದಾದರೆ Minor Account ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 4: ಅರ್ಜಿ ಫಾರ್ಮ್‌ನಲ್ಲಿ ಎಲ್ಲ ಅಗತ್ಯ ಮಾಹಿತಿಗಳನ್ನು ಮೊದಲು ಉಲ್ಲೇಖ ಮಾಡಿ.
ಹಂತ 5: ಒಂದು ಹಣಕಾಸು ವರ್ಷದಲ್ಲಿ ನೀವು ಹೂಡಿಕೆ ಮಾಡಲು ಬಯಸುವ ಮೊತ್ತವನ್ನು ಕೂಡಾ ನಮೂದಿಸಿ.
ಹಂತ 6: ಅರ್ಜಿಯನ್ನು ಸಲ್ಲಿಕೆ ಮಾಡಿ. ನಿಮ್ಮ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಆ ಒಟಿಪಿಯನ್ನು ನಮೂದಿಸಿ.
ಹಂತ 7: ಇದಾದ ಕೂಡಲೇ ನಿಮ್ಮ ಪಿಪಿಎಫ್ ಖಾತೆ ತೆರೆಯಲಿದೆ. ನಿಮ್ಮ ಸ್ಕ್ರೀನ್‌ನಲ್ಲಿ ಪಿಪಿಎಫ್ ಖಾತೆಯ ಸಂಖ್ಯೆಯು ಕಾಣಿಸಲಿದೆ.
ಹಂತ 8: ಎಲ್ಲ ಮಾಹಿತಿಗಳನ್ನು ಒಳಗೊಂಡ ದಾಖಲೆಯನ್ನು ನಿಮಗೆ ಇಮೇಲ್ ಕೂಡಾ ಮಾಡಲಾಗುತ್ತದೆ.


Click it and Unblock the Notifications