ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ 19 ರಂದು 2000 ರೂಪಾಯಿಯನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರವನ್ನು ತಿಳಿಸಿದೆ. ಹಾಗೆಯೇ ನೋಟು ಬದಲಾವಣೆ, ನೋಟು ಡೆಪಾಸಿಟ್ ಮಾಡಲು ಅಕ್ಟೋಬರ್ 15ರವರೆಗೆ ಅವಕಾಶ ನೀಡಲಾಗಿದೆ. ಆದರೆ ಈಗ 1000 ರೂಪಾಯಿ ನೋಟನ್ನು ಮತ್ತೆ ಚಲಾವಣೆಗೆ ತರಲಾಗುತ್ತಾ ಎಂಬ ಸುದ್ದಿಯಿದೆ.
2016ರಲ್ಲಿ ಮೋದಿ ಸರ್ಕಾರವು 500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳನ್ನು ದಿಡೀರ್ ಆಗಿ ಬ್ಯಾನ್ ಮಾಡಿದೆ. ಹಾಗೆಯೇ ಚಲಾವಣೆಯಲ್ಲಿರುವ ಶೇಕಡ 88 ಕ್ಕಿಂತ ಹೆಚ್ಚು ಕರೆನ್ಸಿಯನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಆದರೆ ಈಗ ಮತ್ತೆ 1000 ರೂಪಾಯಿ ನೋಟು ಚಲಾವಣೆಗೆ ಬರಲಿದೆಯೇ? ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

1000 ರೂಪಾಯಿ ನೋಟು ಚಲಾವಣೆಗೆ ಬರುತ್ತಾ?
ಮಾಹಿತಿ ಪ್ರಕಾರ ಆರ್‌ಬಿಐ ಆಗಲಿ ಅಥವಾ ಸರ್ಕಾರವಾಗಿ 1000 ರೂಪಾಯಿ ಕರೆನ್ಸಿ ನೋಟುಗಳನ್ನು ಮತ್ತೆ ಆರಂಭ ಮಾಡುವ ಯಾವುದೇ ನಿರ್ಧಾರವನ್ನು ಮಾಡಿಲ್ಲ. ಆರ್‌ಬಿಐ ಅಂತಹ ಯಾವುದೇ ಯೋಜನೆ ಅಥವಾ ತೀರ್ಮಾನವನ್ನು ಮಾಡಿಲ್ಲ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
"ಆರ್‌ಬಿಐ 1000 ರೂಪಾಯಿ ನೋಟು ಮರು ಪರಿಚಯಿಸುವ ನಿರ್ಧಾರವನ್ನು ಮಾಡಿಲ್ಲ, ಈ ಬಗ್ಗೆ ಯಾವುದೇ ಯೋಜನೆಯನ್ನು ಹೊಂದಿಲ್ಲ," ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಹೇಳಿದೆ.
2016 ರಲ್ಲಿ ಹಳೆಯ 500 ರೂಪಾಯಿ ನೋಟುಗಳ ಜೊತೆಗೆ 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಲಾಗಿದೆ. 1000 ರೂಪಾಯಿ ನೋಟುಗಳ ಬದಲಿಗೆ ಸರ್ಕಾರವು ಹೊಸ 2000 ರೂಪಾಯಿ ನೋಟುಗಳನ್ನು ಪರಿಚಯಿಸಿದೆ. ಹಾಗೆಯೇ ಹೊಸದಾಗಿ 500 ರೂಪಾಯಿ ನೋಟುಗಳನ್ನು ಕೂಡಾ ಪರಿಚಯಿಸಿದೆ.
ಆದರೆ 2000 ರೂಪಾಯಿ ನೋಟುಗಳನ್ನು ಈಗ ಆರ್‌ಬಿಐ ಚಲಾವಣೆಯಿಂದ ಹಿಂಪಡೆದಿದೆ. 2000 ರೂಪಾಯಿ ನೋಟುಗಳನ್ನು ಆರಂಭಿಕವಾಗಿ ಜನರು ಮತ್ತು ಸಂಸ್ಥೆಗಳು ಸೆಪ್ಟೆಂಬರ್ 30 ರೊಳಗೆ ಬದಲಾವಣೆ ಮಾಡಿಕೊಳ್ಳಲು ಅಥವಾ ಬ್ಯಾಂಕ್ ಖಾತೆಗಳಿಗೆ ಡೆಪಾಸಿಟ್ ಮಾಡಲು ತಿಳಿಸಲಾಗಿತ್ತು. ಆದರೆ ಗಡುವನ್ನು ಬಳಿಕ ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು.
ಅಕ್ಟೋಬರ್ 7 ರಿಂದ ಬ್ಯಾಂಕ್‌ನಲ್ಲಿ 2000 ರೂಪಾಯಿ ನೋಟು ಪಡೆಯುವುದನ್ನು ನಿಲ್ಲಿಸಲಾಗಿದೆ. ಅಕ್ಟೋಬರ್ 8 ರಿಂದ ಜನರು 19 ಆರ್‌ಬಿಐ ಕಚೇರಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವನ್ನು ಆರ್‌ಬಿಐ ನೀಡಿದೆ. ಒಂದು ಬಾರಿಗೆ 20 ಸಾವಿರ ರೂಪಾಯಿ ಮೌಲ್ಯದ 2 ಸಾವಿರ ರೂಪಾಯಿ ನೋಟುಗಳನ್ನು ಆರ್‌ಬಿಐ ಕಚೇರಿಗಳಲ್ಲಿ ಬದಲಾವಣೆ ಮಾಡುವ ಅವಕಾಶವಿದೆ.


Click it and Unblock the Notifications