ಪ್ರಸ್ತುತ ಎಲ್ಲ ವಸ್ತುಗಳ ದರವು ಕೂಡಾ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಿರುವಾಗ ಒಂದು ಉದ್ಯೋಗದಲ್ಲಿ ಲಭ್ಯವಾಗುವ ವೇತನವು ಸಾಲದೆ, ಇನ್ನೊಂದು ಉದ್ಯೋಗದ ಹುಡುಕಾಟದಲ್ಲಿ ಇರುವವರು ಅಧಿಕ ಮಂದಿಯಿದ್ದಾರೆ. ಇಂದಿನ ದಿನಗಳಲ್ಲಿ ಸೈಡ್ ಇನ್‌ಕಮ್ ಮುಖ್ಯವಲ್ಲ, ಅದು ಅಗತ್ಯವಾಗಿದೆ.
ನಿಮ್ಮ ಸೈಡ್ ಇನ್‌ಕಮ್ ಪಡೆಯುವ ಬ್ಯುಜಿನೆಸ್ ಪ್ರಾರಂಭಿಸಲು ನೀವು ಯೋಜಿಸುತ್ತಿದ್ದರೆ, ನಿಮಗೆ ಸ್ವಲ್ಪ ಅವಧಿಯ ಉದ್ಯೋಗಗಳು ಕೂಡಾ ಇದೆ. ನೀವು ಫ್ರೀ ಟೈಮ್‌ನಲ್ಲಿ ನೀವು ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಹಣದುಬ್ಬರವು ಬೆಳೆಯುತ್ತಿರುವಾಗ ಈ ಸೈಡ್ ಇನ್‌ಕಮ್ ಹೊಂದುವುದು ಅತೀ ಮುಖ್ಯವಾಗುತ್ತದೆ. ದೈನಂದಿನ ಖರ್ಚುಗಳನ್ನು ಪೂರೈಸಲು ಇದು ಅತ್ಯುತ್ತಮ ಆದಾಯ ಮೂಲಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. 5 ಸೈಡ್ ಇನ್‌ಕಮ್ ಐಡಿಯಾಗಳು ಇಲ್ಲಿದೆ ಮುಂದೆ ಓದಿ...

ಛಾಯಾಗ್ರಹಣ ವ್ಯವಹಾರ ಪ್ರಾರಂಭಿಸಿ
ನೀವು ಛಾಯಾಗ್ರಹಣದಲ್ಲಿರುವ ಉತ್ಸಾಹವನ್ನು ಹೊಂದಿದ್ದರೆ, ನಿಮ್ಮ ಸ್ಥಳೀಯ ಪ್ರದೇಶದಲ್ಲಿ ನೀವು ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಣೆ ಮಾಡಬಹುದು. ಪ್ರತಿ ಫೋಟೋಶೂಟ್‌ಗೆ ನೀವು 2-5 ಸಾವಿರ ರೂಪಾಯಿಗಳನ್ನು ಗಳಿಸಬಹುದಾಗಿದೆ. ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಮಾರಾಟ ಮಾಡುವ ಮೂಲಕ ನೀವು ಆದಾಯವನ್ನು ಹೆಚ್ಚಳ ಮಾಡಬಹುದು. ನೀವು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಚಿತ್ರಗಳನ್ನು ಪೋಸ್ಟ್ ಮಾಡಬಹುದು. ಯಾರಾದರೂ ನಿಮ್ಮ ಫೋಟೋಗಳನ್ನು ಡೌನ್‌ಲೋಡ್ ಮಾಡಿದಾಗ ಅಥವಾ ಮಾರಾಟ ಮಾಡಿದಾಗ ನೀವು ಕಮಿಷನ್ ಪಡೆಯುತ್ತೀರಿ.
ನಿಮ್ಮ ಬಟ್ಟೆ ಬ್ಯುಜಿನೆಸ್ ಪ್ರಾರಂಭಿಸಿ
ಬಟ್ಟೆ ಉದ್ಯಮವು ಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರವಾಗಿದೆ. ಪ್ರತಿ ವರ್ಷ ಇ-ಕಾಮರ್ಸ್ ವಿಭಾಗದಲ್ಲಿ ಬಟ್ಟೆ ಉದ್ಯಮ ಯಶಸ್ವಿಯಾಗಿ ಬೆಳೆಯುತ್ತಿದೆ. ಪ್ರಿಂಟ್-ಆನ್-ಡಿಮಾಂಡ್ ಮಾಡೆಲ್ ಅನ್ನು ಬಳಸುವ ಮೂಲಕ ಖರ್ಚು ಮಾಡಿದ ಮೊತ್ತವನ್ನು ಪಡೆಯಬಹುದಾಗಿದೆ. ಈ ವ್ಯವಹಾರದಲ್ಲಿ ನೀವು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಅಗತ್ಯವಿಲ್ಲ. ನೀವು ಆನ್‌ಲೈನ್ ಮೂಲಕ ವಹಿವಾಟು ಮಾಡಬಹುದು. ಆನ್‌ಲೈನ್ ಮೂಲಕವೇ ಗ್ರಾಹಕರು ಆರ್ಡರ್ ಮಾಡಿ, ಬೇಡಿಕೆಗೆ ಅನುಗುಣವಾಗಿ ಗ್ರಾಹಕರಿಗೆ ಉತ್ಪನ್ನವನ್ನು ನೀಡಬಹುದು.
ಈವೆಂಟ್ ಪ್ಲಾನರ್ ಆಗಿ ಕಾರ್ಯನಿರ್ವಹಣೆ ಮಾಡಿ
ಇತ್ತೀಚಿನ ದಿನಗಳಲ್ಲಿ ಜನರು ಸಣ್ಣ ಸಮಾರಂಭಗಳನ್ನು ಮಾಡುತ್ತಾರೆ. ಅದಕ್ಕಾಗಿ ಈವೆಂಟ್ ಪ್ಲ್ಯಾನರ್‌ಗಳನ್ನು ಆಯೋಜನೆ ಮಾಡಿಕೊಳ್ಳುತ್ತಾರೆ. ಈವೆಂಟ್ ಮ್ಯಾನೆಜ್‌ಮೆಂಟ್ ಒಂದು ದೊಡ್ಡ ವ್ಯವಹಾರವಾಗಿಯೇ ಮುಂದುವರಿದಿದೆ. ಇದು ಆದಾಯವನ್ನು ಗಳಿಸುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಹುಟ್ಟುಹಬ್ಬ, ಮದುವೆ, ವಾರ್ಷಿಕೋತ್ಸವ ಅಥವಾ ಯಾವುದೇ ಇತರ ಸಂದರ್ಭವಾಗಿರಲಿ, ಜನರಿಗೆ ಈವೆಂಟ್ ಪ್ಲಾನರ್‌ಗಳು ಅಗತ್ಯವಿರುತ್ತದೆ. ಆದರಿಂದ ನೀವು ಈ ಬ್ಯುಜಿನೆಸ್ ಅನ್ನು ಪ್ರಾರಂಭಿಸಿ.
ಗಿಗ್ ಇಕಾನಮಿ ಬಗ್ಗೆ ತಿಳಿದಿದೆಯೇ?
ಗಿಗ್ ಇಕಾನಮಿ ಗಮನಾರ್ಹವಾಗಿ ಬೆಳೆಯುತ್ತಿದೆ. ಹೆಚ್ಚುವರಿ ಹಣವನ್ನು ಗಳಿಸುವ ಪರಿಪೂರ್ಣ ಮಾರ್ಗವೆಂದರೆ ನೀವು ಗಿಗ್ ಇಕಾನಮಿಯ ಭಾಗವಾಗುವುದು ಆಗಿದೆ. ನೀವು ಊಬರ್, ಲಿಫ್ಟ್, ಓಲಾ ಮೊದಲಾದ ಚಾಲಕರಾಗಿ ಪಾರ್ಟ್‌ಟೈಮ್ ಕೆಲಸ ಮಾಡಬಹುದು. ಊಬರ್ ಈಟ್ಸ್, ಜೊಮ್ಯಾಟೊ, ಸ್ವಿಗ್ಗಿ ಮೊದಲಾದವುಗಳ ಆಹಾರ ಡೆಲಿವರಿ ಮಾಡುವ ಸಂಸ್ಥೆಯಲ್ಲಿ ಕೆಲಸ ಮಾಡಬಹುದು.
ಫ್ರೀಲ್ಯಾನ್ಸಿಂಗ್ ಸೇವೆ ಆರಂಭಿಸಿ
ನೀವು ಯಾವುದೇ ಸ್ಕಿಲ್‌ನಲ್ಲಿ ಉತ್ತಮವಾಗಿದ್ದರೆ, ಈ ಆ ಸ್ಕಿಲ್ ಅನ್ನು ಬಳಸಿಕೊಂಡೆ ಫ್ರೀಲ್ಯಾನ್ಸಿಂಗ್ ಕಾರ್ಯವನ್ನು ಮಾಡಬಹುದು. ಬರವಣಿಗೆ, ಸಂಪಾದನೆ, ವೆಬ್‌ಸೈಟ್ ವಿನ್ಯಾಸ ಇತರೆ ಕಾರ್ಯಗಳಲ್ಲಿ ನೀವು ಬರವಣಿಗೆ, ಸಂಪಾದನೆ, ವೆಬ್‌ಸೈಟ್ ವಿನ್ಯಾಸ ಅಥವಾ ಇತರೆ ಕಾರ್ಯಗಳಲ್ಲಿ ಫ್ರೀಲ್ಯಾನ್ಸಿಂಗ್ ಮಾಡಬಹುದು. ನೀವು ಗಂಟೆಗೆ ಶುಲ್ಕ ವಿಧಿಸಲು ಬಯಸಬಹುದು.


Click it and Unblock the Notifications