ಬೆಂಗಳೂರು ಐಟಿ ಹಬ್ ಆಗಿದ್ದು, ಇಲ್ಲಿ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಬೇರೆ ಬೇರೆ ರಾಜ್ಯ, ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಬರುತ್ತಾರೆ. ಈ ನಗರವನ್ನೇ ತನ್ನ ಮನೆಯಿರುವ ಊರನ್ನಾಗಿ ಮಾಡುವುದು ಹಲವಾರು ಮಂದಿಯ ಕನಸು ಎಂದರೆ ತಪ್ಪಾಗಲಾರದು. ಇದರಿಂದಾಗಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾರುಕಟ್ಟೆಯು ನಿರಂತರವಾಗಿ ಬೆಳವಣಿಗೆಯನ್ನು ಕಾಣುತ್ತಿದೆ.
ಬೆಂಗಳೂರಿನಲ್ಲಿ ಮನೆ ನಿರ್ಮಾಣವು ಕೂಡಾ ಅಧಿಕವಾಗುತ್ತಿದೆ. ಆದರೆ ಈ ಮೆಟ್ರೋ ನಗರದಲ್ಲಿ ಮನೆ ನಿರ್ಮಾಣ ಮಾಡುವುದೆಂದರೆ ನಾವು ಖಂಡಿತವಾಗಿಯೂ ಕೊಂಚ ಸೂಕ್ಷ್ಮವಾಗಿ ಆರ್ಥಿಕ ಯೋಜನೆಯನ್ನು ಹಾಕಿಕೊಳ್ಳಬೇಕಾಗುತ್ತದೆ. ಸ್ಕ್ವೇರ್ ಫೀಟ್ ದರ ಸೇರಿದಂತೆ ತೆರಿಗೆ, ಶುಲ್ಕ ಮೊದಲಾದವುಗಳನ್ನು ಕೂಡಾ ನಾವು ಲೆಕ್ಕಾಚಾರ ಮಾಡಿಕೊಳ್ಳಬೇಕಾಗುತ್ತದೆ. ಬೆಂಗಳೂರಿನಲ್ಲಿ ಮನೆ ನಿರ್ಮಾಣಕ್ಕೆ ಎಷ್ಟು ವೆಚ್ಚವಾಗಲಿದೆ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಬೆಂಗಳೂರಿನಲ್ಲಿ ಪ್ರತಿ ಸ್ಕ್ವೇರ್ ಫೀಟ್ ಲೆಕ್ಕಾಚಾರ
ಬೆಂಗಳೂರಿನಲ್ಲಿ ಬೇಡಿಕೆ ಅಧಿಕವಾಗಿರುವ ಕಾರಣದಿಂದಾಗಿ ಪ್ರತಿ ಸ್ಕ್ವೇರ್ ಫೀಟ್ ಬೆಲೆಯೂ ಕೂಡಾ ಅಧಿಕವಾಗಿದೆ. ಪ್ರತಿ ಸ್ಕ್ವೇರ್ ಫೀಟ್‌ಗೆ 1500 ರೂಪಾಯಿಯಿಂ 1900 ರೂಪಾಯಿ ನಡುವೆ ಇದೆ. ಆದರೆ ಪ್ರದೇಶಕ್ಕೆ ಅನುಗುಣವಾಗಿ ಇದು ಬದಲಾವಣೆಯಾಗುತ್ತದೆ. ನೀವು ಉತ್ತಮ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಲು ಬಯಸಿದರೆ ದರವು ಇನ್ನಷ್ಟು ಅಧಿಕವಾಗಬಹುದು. ಇತ್ತೀಚೆಗೆ ಸರ್ವೆಯೊಂದರ ಪ್ರಕಾರ ಬೆಂಗಳೂರಿನ ಕೇಂದ್ರ ಭಾಗದಲ್ಲಿ ವಸತಿ ಆಸ್ತಿಯ ಬೆಲೆಯು ಭಾರೀ ಏರಿಕೆಯಾಗಿದೆ ಎಂದು ಉಲ್ಲೇಖಿಸಿದೆ. ಕಡಿಮೆ ಅವಧಿಯಲ್ಲಿಯೇ ಪ್ರತಿ ಸ್ಕ್ವೇರ್ ಫೀಟ್ ಬೆಲೆಯು 2500 ರೂಪಾಯಿಯಿಂದ 3500 ರೂಪಾಯಿ ನಡುವೆ ಇದೆ.
ಬಿಬಿಎಂಪಿ ಮತ್ತು ಬಿಡಿಎ ಅನುಮೋದನೆ ಶುಲ್ಕ
ನಾವು ಮನೆಯನ್ನು ನಿರ್ಮಾಣ ಮಾಡುವುದೆಂದರೆ ಮನೆ ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿ ಮತ್ತು ಪ್ರದೇಶಕ್ಕೆ ಹಣ ಉಳಿಸುವುದು ಮಾತ್ರವಲ್ಲ, ಇತರೆ ವೆಚ್ಚಗಳು ಕೂಡಾ ಇರುತ್ತದೆ. ಬಿಬಿಎಂಪಿಯಿಂದ ನೀವು ಮನೆ ನಿರ್ಮಾಣಕ್ಕೆ ಅನುಮೋದನೆಯನ್ನು ಪಡೆಯಲು ಶೇಕಡ 10 ರಷ್ಟು ಬಜೆಟ್ ಆದರೂ ನೀವು ಇರಿಸಿಕೊಳ್ಳಬೇಕಾಗುತ್ತದೆ.
* ಗ್ರೌಂಡ್ ಫ್ಲೋರ್, ಜಿ+1 ಸ್ಟೋರ್ ಮನೆ - ಕ್ರಮವಾಗಿ 80,000, 1 ಲಕ್ಷ ರೂಪಾಯಿ ಬಿಬಿಎಂಪಿ ಶುಲ್ಕ
* ಜಿ+2 ಮತ್ತು ಜಿ+3 ಲೆವೆಲ್ ಬಿಲ್ಡಿಂಗ್ 2.5ರಿಂದ 3 ಲಕ್ಷ ರೂಪಾಯಿ ಶುಲ್ಕ
* ಜಿ+4 ಲೆವೆಲ್ ಬಿಲ್ಡೀಂಗ್‌ಗೆ 3 ಲಕ್ಷದಿಂದ 5 ಲಕ್ಷ ರೂಪಾಯಿವರೆಗೆ ಶುಲ್ಕ ಇರುತ್ತದೆ.
ಮನೆ ನಿರ್ಮಾಣಕ್ಕೆ ಅಡಿಪಾಯ ವೆಚ್ಚ
ನಿಮ್ಮ ಮನೆ ನಿರ್ಮಾಣಕ್ಕೆ ಎಷ್ಟು ಅಡಿಪಾಯ ಶುಲ್ಕ ಆಗುತ್ತದೆ ಎಂದು ನೀವು ಲೆಕ್ಕಾಚಾರ ಹಾಕಿಕೊಳ್ಳುವುದು ಅತೀ ಮುಖ್ಯವಾಗುತ್ತದೆ. ನಿಮ್ಮ ಮನೆಗೆ ಸ್ಥಳ ಹುಡುಕುವಾದ ಅಲ್ಲಿ ಬೇಕಾದ ಎಲ್ಲ ಸೌಲಭ್ಯಗಳು ಇದೆಯೇ ಎಂದು ನೀವು ಮೊದಲು ನೋಡಿಕೊಳ್ಳಬೇಕು. ಪ್ರತಿ ಸ್ಕ್ವೇರ್ ಫೀಟ್‌ಗೆ ಸರಿಯಾಗಿ ಹಣವನ್ನು ನೀಡುತ್ತಿದ್ದೀರಾ ಎಂದು ಬೇರೆ ಬೇರೆ ಮೂಲಗಳಿಂದ ಬೆಲೆ ತಿಳಿದು ಖಚಿತಪಡಿಸಿಕೊಳ್ಳಿ.
ಮೂಲ ವೆಚ್ಚಗಳ ಬಗ್ಗೆ ತಿಳಿದಿರಿ
ನೀವು ಎರಡನೆಯದಾಗಿ ಪ್ಲಂಬಿಂಗ್ ಖರ್ಚು ಕೂಡಾ ಬಜೆಟ್‌ನಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ಅಡಿಪಾಯ ವೆಚ್ಚ ತಿಳಿದ ಬಳಿಕ ನೀವು ಕಂಬಗಳ ವೆಚ್ಚವನ್ನು ಲೆಕ್ಕಾಚಾರ ಮಾಡಿಕೊಳ್ಳಬೇಕಾಗುತ್ತದೆ. ಇದು ಎಂದಿಗೂ ಅತೀ ಮುಖ್ಯ. ಯಾಕೆಂದರೆ ಈ ಕಂಬಗಳೇ ಇಡೀ ಮನೆಯ ಆಧಾರವಾಗಿರುತ್ತದೆ.
ಬೆಂಗಳೂರಿನಲ್ಲಿ ಮನೆ ನಿರ್ಮಾಣಕ್ಕೆ ಒಟ್ಟಾರೆ ವೆಚ್ಚ
* ಅಡಿಪಾಯ: ಕಾಂಕ್ರಿಟ್ ಮೊದಲಾದವುಗಳು ಸೇರಿ ಒಟ್ಟಾರೆಯಾಗಿ 2,12,000 ರೂಪಾಯಿ
* ಸ್ಟೀಲ್ ರಚನೆ: ಕಂಬ, ಇತರೆ ಇತರೆ 55 ಸಾವಿರ ರೂಪಾಯಿ
* ಛಾವಣಿ: ಒಟ್ಟಾರೆಯಾಗಿ 150000 ರೂಪಾಯಿ
* ಸೂಪರ್ ಸ್ಟ್ರಕ್ಚರ್: 150000 ರೂಪಾಯಿ
* ಗೋಡೆಗಳು: 130000 ರೂಪಾಯಿ
* ಟೈಲ್ಸ್: 140000 ರೂಪಾಯಿ
* ಮರದ ಕೆಲಸಗಳು: ಬಾಗಿಲು, ಕಿಟಕಿ, ಮೊದಲಾದವು 435000 ರೂಪಾಯಿ
* ಪೇಟಿಂಗ್: ಇಂಟಿರಿಯರ್, ಪೇಂಟ್ ಮೊದಲಾದವು 290000 ರೂಪಾಯಿ
* ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕಾರ್ಯ: 300000 ರೂಪಾಯಿ
* ಲಿಫ್ಟ್: 4-15 ಲಕ್ಷ ರೂಪಾಯಿ


Click it and Unblock the Notifications