ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದ್ದು ಸಣ್ಣ ಉಳಿತಾಯ ಯೋಜನೆ ಇದಾಗಿದೆ. ಪಿಪಿಎಫ್ ಹೂಡಿಕೆಯಿಂದ ರಿಟರ್ನ್ ಅನ್ನು ಪಡೆಯಲು ಕೂಡಾ ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ನಾವು ಪ್ರತಿ ತಿಂಗಳು 5ನೇ ತಾರೀಖಿಗೂ ಮುನ್ನ ಹೂಡಿಕೆ ಮಾಡಿದರೆ ನಮಗೆ ಪ್ರಯೋಜನ ಲಭ್ಯವಾಗಲಿದೆ.
ಪಿಪಿಎಫ್‌ನಲ್ಲಿ ನಾವು ಒಂದು ಬಾರಿಗೆ 5 ವರ್ಷಗಳ ಹೂಡಿಕೆ ಮಾಡಬಹುದು. ಅದಾದ ಬಳಿಕ ಎರಡು ಬಾರಿ ಹೂಡಿಕೆ ಅವಧಿಯನ್ನು ವಿಸ್ತರಣೆ ಮಾಡಬಹುದು. ಅಂದರೆ ಒಟ್ಟಾಗಿ 15 ವರ್ಷಗಳ ಕಾಲ ಪಿಪಿಎಫ್ ಖಾತೆಯಲ್ಲಿ ನಾವು ಹೂಡಿಕೆ ಮಾಡಲು ಸಾಧ್ಯವಾಗುತ್ತದೆ. ಹೂಡಿಕೆದಾರರು ವಾರ್ಷಿಕವಾಗಿ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಲು ಸಾಧ್ಯವಾಗುತ್ತದೆ.
ನೀವು ಸಾಮಾನ್ಯ ಜನರು ಪಡೆಯುವುದಕ್ಕಿಂತ ಅಧಿಕ ರಿಟರ್ನ್ ಅನ್ನು ಪಡೆಯಬೇಕಾದರೆ ನೀವು ಪ್ರತಿ ತಿಂಗಳು 5ಕ್ಕೂ ಮುನ್ನ ಹೂಡಿಕೆಯನ್ನು ಮಾಡಬೇಕಾಗುತ್ತದೆ. ತಿಂಗಳ 5ನೇ ತಾರೀಖಿನ ಬಳಿಕ ನೀವು ಪಿಪಿಎಫ್ ಖಾತೆಯಲ್ಲಿ ಹೂಡಿಕೆ ಮಾಡಿದರೆ ಆ ತಿಂಗಳ ಬಡ್ಡಿದರ ನಷ್ಟವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಪಿಪಿಎಫ್ ಲೆಕ್ಕಾಚಾರ ಹೇಗೆ ನೋಡಿ
ಒಬ್ಬ ವ್ಯಕ್ತಿಯು ಏಪ್ರಿಲ್ 20ರಂದು ಪಿಪಿಎಫ್ ಖಾತೆಯಲ್ಲಿ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಒಂದು ಹಣಕಾಸು ವರ್ಷದಲ್ಲಿನ 12 ತಿಂಗಳ ಬದಲಾಗಿ 11 ತಿಂಗಳ ಬಡ್ಡಿದರ ಮಾತ್ರ ನಿಮಗೆ ಲಭ್ಯವಾಗುತ್ತದೆ. ಅಂದರೆ 2023-24 ಹಣಕಾಸು ವರ್ಷದಲ್ಲಿ 9,762.50 ರೂಪಾಯಿ ಬಡ್ಡಿದರದ ಮೂಲಕ ಲಭ್ಯವಾಗುತ್ತದೆ. ಆದರೆ ನೀವು ಪ್ರತಿ ತಿಂಗಳು 5 ತಾರೀಖಿಗೂ ಮುನ್ನ ಪಿಪಿಎಫ್ ಹೂಡಿಕೆ ಮಾಡಿದರೆ, ಒಟ್ಟಾಗಿ 10,650 ರೂಪಾಯಿ ರಿಟರ್ನ್ ನಿಮಗೆ ಲಭ್ಯವಾಗುತ್ತದೆ.
ಪ್ರಸ್ತುತ ಪಿಪಿಎಫ್ ಮೊತ್ತ ಸ್ಥಿರವಾಗಿದೆ, ಅಂದರೆ ಶೇಕಡ 7.1ರಷ್ಟಿದೆ. ಪ್ರತಿ ವರ್ಷವೂ ಕೂಡಾ ಸರ್ಕಾರ ಪಿಪಿಎಫ್‌ನ ಬಡ್ಡಿದರವನ್ನು ನಿರ್ಧಾರ ಮಾಡುತ್ತದೆ. ಒಂದು ಹಣಕಾಸು ವರ್ಷದ ಕೊನೆಯಲ್ಲಿ ಅಂದರೆ ಮಾರ್ಚ್ 31ರಂದು ಈ ಬಡ್ಡಿದರವನ್ನು ಸರ್ಕಾರವು ಎಲ್ಲ ಪಿಪಿಎಫ್ ಖಾತೆಗೆ ಪಾವತಿ ಮಾಡುತ್ತದೆ.
ತೆರಿಗೆ ಉಳಿತಾಯ ಮಾಡುವ ಹಲವಾರು ಸರ್ಕಾರಿ ಯೋಜನೆಗಳ ಪೈಕಿ ಪಿಪಿಎಫ್ ಕೂಡಾ ಒಂದಾಗಿದೆ. ಈ ಯೋಜನೆಯಲ್ಲಿ ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಈ ಯೋಜನೆಯು ಸಣ್ಣ ಉಳಿತಾಯ ಯೋಜನೆಯಲ್ಲಿ ಬರುವ ಕಾರಣದಿಂದಾಗಿ ಇದು ತೆರಿಗೆ ಪ್ರಯೋಜನ ನೀಡುವ ಯೋಜನೆಯಾಗಿದೆ. ಈ ಯೋಜನೆಯು ವೈಯಕ್ತಿಕ ಹೂಡಿಕೆದಾರರಿಗೆ ಉತ್ತಮ ಯೋಜನೆಯಾಗಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications