ಉಳಿತಾಯ ಮಾಡುವ ವಿಚಾರಕ್ಕೆ ಬಂದಾಗ ಜನರು ಸಾಮಾನ್ಯವಾಗಿಯೇ ಎಲ್ಲಿ ಅಧಿಕ ಬಡ್ಡಿದರವನ್ನು ಪಡೆಯಲು ಸಾಧ್ಯ ಎಂದು ನೋಡುತ್ತಾರೆ. ಈ ಲೆಕ್ಕಾಚಾರದಲ್ಲಿ ನೋಡಿದಾಗ ಹೆಚ್ಚಿನ ಜನರು ಅಧಿಕ ಬಡ್ಡಿದರವನ್ನು ನೀಡುವ ಫಿಕ್ಸಿಡ್ ಡೆಪಾಸಿಟ್ ಅನ್ನು ಆಯ್ಕೆ ಮಾಡುತ್ತಾರೆ. ಆದರೆ ಅಧಿಕ ಬಡ್ಡಿದರ ಪಡೆಯಲು ಬೇರೆ ಆಯ್ಕೆ ಇದೆ ಎಂಬುವುದು ನಿಮಗೆ ತಿಳಿದಿದೆಯೇ?
ಕಳೆದ ಒಂದು ವರ್ಷದ ಅವಧಿಯಲ್ಲಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್‌ಗಳಲ್ಲಿ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಆರ್‌ಬಿಐ ರೆಪೋ ದರ ಹೆಚ್ಚಿಸಿದಂತೆ ಎಫ್‌ಡಿ ಬಡ್ಡಿದರವನ್ನು ಕೂಡಾ ಏರಿಕೆ ಮಾಡಲಾಗಿದೆ. ಆದ್ದರಿಂದಾಗಿ ಹೆಚ್ಚಿನ ಜನರು ಎಫ್‌ಡಿ ಮೇಲೆ ಹೂಡಿಕೆ ಮಾಡುವ ಆಯ್ಕೆಯನ್ನು ಮಾಡುತ್ತಾಆರೆ.

ಆದರೆ ಈ ಎಫ್‌ಡಿ ಬಡ್ಡಿದರಕ್ಕಿಂತ ಸರ್ಕಾರಿ ಯೋಜನೆಗಳು ಅಧಿಕ ಬಡ್ಡಿದರವನ್ನು ನೀಡುತ್ತದೆ ಎಂಬುವುದು ನಿಮಗೆ ತಿಳಿದಿದೆಯೆ?. ಹಾಗೆಯೇ ಸುರಕ್ಷಿತ ಕೂಡಾ ಹೌದು. ಹಾಗೆಯೇ ಒಂದು ಬಾರಿ ಹೂಡಿಕೆಯನ್ನು ಮಾಡಿದರೆ ಬಳಿಕ ಅವಧಿಯ ಕೊನೆಯವರೆಗೂ ಬಡ್ಡಿದರವು ಒಂದೇ ಆಗಿರುತ್ತದೆ. ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಒದಗಿಸಲು ಈ ಪೈಕಿ ಕೆಲವು ಸರ್ಕಾರಿ ಯೋಜನೆಗಳನ್ನು ಪ್ರಾರಂಭ ಮಾಡಲಾಗಿದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಕಿಸಾನ್ ವಿಕಾಸ್ ಪತ್ರ (ಕೆವಿಪಿ)
ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಸರ್ಕಾರದಿಂದ ಬೆಂಬಲಿತವಾದ ಹೂಡಿಕೆ ಯೋಜನೆಯಾಗಿದ್ದು, ಅದು ಪ್ರಮಾಣಪತ್ರವಾಗಿ ಲಭ್ಯವಾಗುತ್ತದೆ. ಇದು ಭಾರತೀಯ ಅಂಚೆ ಕಛೇರಿಯ ನಿಗದಿತ ದರದ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಹೂಡಿಕೆಯ ಬಳಿಕ ನಿಮ್ಮ ಹೂಡಿಕೆಯು ದ್ವಿಗುಣಗೊಳ್ಳುತ್ತದೆ.
ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಪ್ರಮಾಣಪತ್ರಗಳು ಪ್ರಸ್ತುತ ಕೆಲವು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಭಾರತೀಯ ಅಂಚೆ ಕಚೇರಿಗಳ ಮೂಲಕ ಮಾತ್ರ ಖರೀದಿ ಮಾಡಲು ಲಭ್ಯವಿದೆ. ಪ್ರಸ್ತುತ ಬಡ್ಡಿದರವು ಶೇಕಡ 7.5ರಷ್ಟಿದೆ.
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್
ಭಾರತೀಯ ಅಂಚೆ ಕಛೇರಿಯ ಮತ್ತೊಂದು ಸಣ್ಣ ಉಳಿತಾಯ ಯೋಜನೆಯು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರವಾಗಿದೆ. 5 ವರ್ಷದ ಅವಧಿಯ ಬಡ್ಡಿದರವು ಶೇಕಡ 7ರಿಂದ ಶೇಕಡ 7.7ಕ್ಕೆ ಏರಿಕೆಯಾಗಿದೆ. ಏಪ್ರಿಲ್ 1 ಮತ್ತು ಜೂನ್ 30, 2023 ರ ನಡುವೆ ಮಾಡಿದ ಯಾವುದೇ ಹೂಡಿಕೆಗೆ, ಮುಂದಿನ 5 ವರ್ಷಗಳವರೆಗೆ ದರವನ್ನು ಲಾಕ್ ಮಾಡಿರಲಾಗುತ್ತದೆ. ಅಂದರೆ ಸ್ಥಿರ ಬಡ್ಡಿದರವಿರುತ್ತದೆ.
ಸುಕನ್ಯ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ)
ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ) ಸರ್ಕಾರ ಬೆಂಬಲಿತ ಸಣ್ಣ ಉಳಿತಾಯ ಯೋಜನೆಯಾಗಿದೆ. ಬೇಟಿ ಬಚಾವೋ ಬೇಟಿ ಪಢಾವೋ ಅಡಿಯಲ್ಲಿ ಹೆಣ್ಣು ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿ ಮಾಡಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವು ಶೇಕಡ 7.60ರಿಂದ ಶೇಕಡ 8ಕ್ಕೆ ಏರಿಕೆಯಾಗಿದೆ. ಈ ಯೋಜನೆಯಲ್ಲಿ 80c ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಕೂಡಾ ಪಡೆಯಬಹುದಾಗಿದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್)
ಅಂತಿಮವಾಗಿ ಜನಪ್ರಿಯ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಬಗ್ಗೆ ನಾವು ತಿಳಿಯದಿದ್ದರೆ ಹೇಗೆ?. ಪಿಪಿಎಫ್ ಶೇಕಡ 7.1ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯು ಭಾರತ ಸರ್ಕಾರದಿಂದ ಬೆಂಬಲಿತವಾಗಿದೆ. ಹಾಗೆಯೇ ಯಾವುದೇ ಅಪಾಯವಿಲ್ಲದ ಸುರಕ್ಷಿತ ಯೋಜನೆ ಇದಾಗಿದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ (ಪಿಪಿಎಫ್) ಮಾಡಿದ ಹೂಡಿಕೆ, ಪಡೆದ ಬಡ್ಡಿದರ ಹಾಗೂ ಮೆಚ್ಯೂರಿಟಿ ಬಳಿಕ ಪಡೆಯುವ ಸಂಪೂರ್ಣ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ. ಈ ಯೋಜನೆಯ ಕನಿಷ್ಠ ಅವಧಿ 15 ವರ್ಷವಾಗಿದೆ. ಹಾಗೆಯೇ ಕನಿಷ್ಠ ಹಣದ ಮಿತಿ 500 ರೂಪಾಯಿ ಆಗಿದೆ. ಗರಿಷ್ಠವಾಗಿ ಹೂಡಿಕೆದಾರರು ವಾರ್ಷಿಕವಾಗಿ 1.5 ಲಕ್ಷ ರೂಪಾಯಿಯನ್ನು ಮಾಡುವ ಅವಕಾಶವಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್‌ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್‌ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್‌ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications