ಎಲ್ಐಸಿ ಹೂಡಿಕೆಯು ನಮ್ಮ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾಗಿದೆ. ಜನರಿಗೆ ಜೀವ ವಿಮೆ ಪ್ರಯೋಜನ ನೀಡುವ ಈ ಸಂಸ್ಥೆಯು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಎಲ್‌ಐಸಿಯು ಬಿಮಾ ರತ್ನ ಎಂಬ ಹೊಸ ಜೀವ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ.
ಇದು ರಕ್ಷಣೆ ಹಾಗೂ ಉಳಿತಾಯ ಎರಡೂ ಪ್ರಯೋಜನವನ್ನು ನೀಡುವ ವೈಯಕ್ತಿಕ ಉಳಿತಾಯ ಜೀವ ವಿಮಾ ಯೋಜನೆಯಾಗಿದೆ. ಈ ಹೊಸ ಯೋಜನೆಯನ್ನು ಮೇ 27, 2022 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯು ಪಾಲಿಸಿದಾರರ ಕುಟುಂಬಕ್ಕೆ ಹಣಕಾಸಿನ ನೆರವನ್ನು ಒದಗಿಸುತ್ತದೆ.
ಪೂರ್ವನಿರ್ಧರಿತ ಅವಧಿಯವರೆಗೆ ಪಾಲಿಸಿದಾರರ ಅಕಾಲಿಕ ಮರಣದ ಸಂದರ್ಭದಲ್ಲಿ ಪಾಲಿಸಿದಾರರ ಜೀವಿತಾವಧಿಯಲ್ಲಿ ವಿವಿಧ ಹಣಕಾಸಿನ ಅಗತ್ಯಗಳನ್ನು ಪೂರೈಸುತ್ತದೆ. ಸಾಲ ಸೌಲಭ್ಯದ ಮೂಲಕ, ಈ ವಿಧಾನವು ಪ್ರಯೋಜನಕಾರಿಯಾಗಿದೆ. ಈ ಯೋಜನೆಯ ಪ್ರಮುಖ ವಿವರಗಳು ಇಲ್ಲಿದೆ ಮುಂದೆ ಓದಿ...
ಎಲ್ಐಸಿ ಬಿಮಾ ರತ್ನ ಖರೀದಿಸುವುದು ಹೇಗೆ?
ಈ ಯೋಜನೆಯನ್ನು ಪ್ರಸ್ತುತ ಕಾರ್ಪೊರೇಟ್ ಏಜೆಂಟ್‌ಗಳು, ವಿಮೆ, ಮಾರುಕಟ್ಟೆ ಸಂಸ್ಥೆಗಳು (IMF), ಬ್ರೋಕರ್‌ಗಳು, CPSC-SPV ಮತ್ತು POSP-LI ಈ ಮಧ್ಯವರ್ತಿಗಳಿಂದ ಖರೀದಿ ಮಾಡಬಹುದು. ಕಾರ್ಪೊರೇಟ್ ಏಜೆಂಟ್‌ಗಳು, ವಿಮಾ ಮಾರ್ಕೆಟಿಂಗ್ ಸಂಸ್ಥೆಗಳು (IMF) ಮತ್ತು ದಲ್ಲಾಳಿಗಳಿಂದ ಖರೀದಿಸಬಹುದು.
ಡೆತ್ ಬೆನಿಫಿಟ್ ಕೂಡಾ ಲಭ್ಯ
ಅಪಾಯದ ಪ್ರಾರಂಭದ ದಿನಾಂಕದ ನಂತರ ಪಾಲಿಸಿ ಅವಧಿಯೊಳಗೆ ಜೀವ ವಿಮಾದಾರರ ಮರಣದ ಸಂದರ್ಭದಲ್ಲಿ "ಸಾವಿನ ವಿಮಾ ಮೊತ್ತ" ಮತ್ತು ಗ್ಯಾರಂಟಿಡ್ ಸೇರ್ಪಡೆಗಳನ್ನು ಪಾವತಿಸಲಾಗುತ್ತದೆ. "Sum Assured on Death" ಎಂದರೆ ಮೂಲ ವಿಮಾ ಮೊತ್ತದ 125 ಪ್ರತಿಶತದಷ್ಟು ಅಥವಾ ವಾರ್ಷಿಕ ಪ್ರೀಮಿಯಂನ ಏಳು ಪಟ್ಟು ಹೆಚ್ಚಾಗಿದೆ. ಎಲ್‌ಐಸಿ ಬ್ರೋಷರ್ ಪ್ರಕಾರ, "ಈ ಡೆತ್ ಬೆನಿಫಿಟ್ ಪಾವತಿಯು ಮರಣದ ದಿನಾಂಕದವರೆಗೆ ಪಾವತಿಸಿದ ಒಟ್ಟು ಪ್ರೀಮಿಯಂಗಳ (ಯಾವುದೇ ಹೆಚ್ಚುವರಿ ಪ್ರೀಮಿಯಂ, ಯಾವುದೇ ರೈಡರ್ ಪ್ರೀಮಿಯಂ (ಗಳು) ಮತ್ತು ತೆರಿಗೆಗಳನ್ನು ಹೊರತುಪಡಿಸಿ) 105 ಶೇಕಡಕ್ಕಿಂತ ಕಡಿಮೆಯಿರಬಾರದು," ಎಂದು ವಿಮೆ ಹೇಳಿದೆ.
ಸರ್ವೈವಲ್ ಬೆನಿಫಿಟ್, ಮೆಚುರಿಟಿ ಬೆನಿಫಿಟ್
ಪಾಲಿಸಿಯು ಜಾರಿಯಲ್ಲಿದ್ದರೆ, ಪಾಲಿಸಿ ಅವಧಿಯಲ್ಲಿ ಜೀವ ವಿಮಾದಾರರು ಜೀವಂತವಾಗಿದ್ದರೆ ಪ್ರತಿ ನಿರ್ದಿಷ್ಟ ಅವಧಿಯಲ್ಲಿ ಮೂಲ ವಿಮಾ ಮೊತ್ತದ ನಿರ್ದಿಷ್ಟ ಪ್ರಮಾಣವನ್ನು ಪಾವತಿಸಲಾಗುತ್ತದೆ. ಎಲ್‌ಐಸಿ ಬಿಮಾ ರತ್ನ ಬ್ರೋಷರ್‌ನ ಪ್ರಕಾರ, "ಜೀವ ವಿಮಾದಾರರು ಪಾಲಿಸಿಯು ಜಾರಿಯಲ್ಲಿದ್ದರೆ, ಸಂಚಿತ ಗ್ಯಾರಂಟಿ ಸೇರ್ಪಡೆಗಳ ಜೊತೆಗೆ ಮೆಚ್ಯೂರಿಟಿಯ ಮೇಲೆ ವಿಮಾ ಮೊತ್ತವನ್ನು ಪಾವತಿಸಬೇಕಾಗುತ್ತದೆ. "ಮೆಚ್ಯೂರಿಟಿಯ ಮೇಲೆ ವಿಮಾ ಮೊತ್ತವು" ಮೂಲ ವಿಮಾ ಮೊತ್ತದ ಶೇಕಡ 50ಕ್ಕೆ ಸಮಾನವಾಗಿರುತ್ತದೆ," ಎಂದು ಉಲ್ಲೇಖ ಮಾಡಲಾಗಿದೆ.
ಗ್ಯಾರಂಟಿಡ್ ಅಡಿಷನ್
ಮೊದಲ ವರ್ಷದಿಂದ ಐದನೇ ವರ್ಷದವರೆಗೆ ಪ್ರತಿ ರೂ 1000 ಮೂಲ ವಿಮಾ ಮೊತ್ತಕ್ಕೆ 50 ರೂಗಳ ಖಾತರಿಯ ಹೆಚ್ಚಳವನ್ನು ಎಲ್‌ಐಸಿ ಪಾವತಿಸುತ್ತದೆ. 6 ರಿಂದ 10 ನೇ ಪಾಲಿಸಿ ವರ್ಷದವರೆಗೆ, ಎಲ್ಐಸಿ ರೂ 1000 ಮೂಲ ಮೊತ್ತಕ್ಕೆ ರೂ 55 ಪಾವತಿಸುತ್ತದೆ. 11 ರಿಂದ 25 ನೇ ಪಾಲಿಸಿ ವರ್ಷದಲ್ಲಿ, ಹೆಚ್ಚಳವು ರೂ 1000 ಮೂಲ ವಿಮಾ ಮೊತ್ತಕ್ಕೆ ರೂ 60 ಆಗಿರುತ್ತದೆ. ವಿಮೆಯು ಇನ್ನೂ ಜಾರಿಯಲ್ಲಿರುವಾಗ ಸಾವು ಸಂಭವಿಸಿದರೆ, ಮರಣದ ವರ್ಷದಲ್ಲಿ ಖಾತರಿಪಡಿಸಿದ ಸೇರ್ಪಡೆಯು ಸಂಪೂರ್ಣ ಪಾಲಿಸಿ ವರ್ಷಕ್ಕೆ ಇರುತ್ತದೆ. ಪ್ರೀಮಿಯಂಗಳನ್ನು ಸಮಯಕ್ಕೆ ಪಾವತಿ ಮಾಡದಿದ್ದರೆ ಪಾಲಿಸಿಯ ಅಡಿಯಲ್ಲಿ ಖಾತರಿಪಡಿಸಿದ ಹೆಚ್ಚಳವನ್ನು ಸ್ಥಗಿತ ಮಾಡಲಾಗುತ್ತದೆ.
ಅಪಾಯದ ಕವರೇಜ್ ಸಂದರ್ಭ
ಜೀವ ವಿಮಾದಾರರ ಪ್ರವೇಶದ ವಯಸ್ಸು 8 ವರ್ಷಗಳಿಗಿಂತ ಕಡಿಮೆಯಿದ್ದರೆ, ಈ ಯೋಜನೆಯಡಿಯಲ್ಲಿ ಅಪಾಯದ ಕವರೇಜ್ ಪ್ರಾರಂಭದ ದಿನಾಂಕದಿಂದ 2 ವರ್ಷಗಳ ನಂತರ ಪ್ರಾರಂಭವಾಗುತ್ತದೆ ಅಥವಾ ಪಾಲಿಸಿಗೆ ಎರಡು ವರ್ಷವಾದ ಬಳಿಕ ಆರಂಭವಾಗುತ್ತದೆ. ಪಾಲಿಸಿದಾರರಿಗೆ ಎಂಟು ವರ್ಷವಾದಾಗ ರಿಸ್ಕ್ ಕವರೇಜ್ ಆರಂಭವಾಗಲಿದೆ. ಈ ಮೂರು ವಿಭಾಗದಲ್ಲಿ ಯಾವುದು ಮೊದಲು ಬರುತ್ತದೋ ಅದನ್ನು ಅನ್ವಯ ಮಾಡಲಾಗುತ್ತದೆ. 8 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ರಿಸ್ಕ್ ಕವರೇಜ್ ತಕ್ಷಣದಿಂದ ಜಾರಿಗೆ ಬರಲಿದೆ.
ವಿಮಾದಾರರು ಅಪ್ರಾಪ್ತರಾಗಿದ್ದರೆ?
ವಿಮಾದಾರರು ಅಪ್ರಾಪ್ತರಾಗಿದ್ದರೆ, 18 ವರ್ಷಗಳು ಪೂರ್ಣಗೊಂಡ ನಂತರ ಅಥವಾ ತಕ್ಷಣವೇ ಪಾಲಿಸಿಯು ಸ್ವಯಂಚಾಲಿತವಾಗಿ ಜೀವ ವಿಮಾದಾರರ ಹಿಡಿತಕ್ಕೆ ಬರುತ್ತದೆ. ಸ್ವಯಂಚಾಲಿತವಾಗಿ ಹಸ್ತಾಂತರದ ನಡುವಿನ ಒಪ್ಪಂದವೆಂದು ಪರಿಗಣಿಸಲಾಗುತ್ತದೆ. ಎಲ್‌ಐಸಿ ಸೆಟ್ಲ್‌ಮೆಂಟ್ ಆಯ್ಕೆಯು 5 ವರ್ಷಗಳ ಅವಧಿಗೆ ಕಂತುಗಳಲ್ಲಿ ಮೆಚ್ಯೂರಿಟಿ ಬೆನಿಫಿಟ್ ಅನ್ನು ಪಡೆಯುವ ಆಯ್ಕೆಯಾಗಿದೆ. ಪಾಲಿಸಿದಾರರು/ಜೀವ ವಿಮಾದಾರರು ಎಲ್‌ಐಸಿ ನೀಡಿದ ಮೊತ್ತದ ಪಟ್ಟಿಯಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ತಿಂಗಳಿಗೆ ಐದು ಸಾವಿರ, ತ್ರೈಮಾಸಿಕ 15,000, ಅರ್ಧ ವಾರ್ಷಿಕ 25 ಸಾವಿರ, ವರ್ಷಕ್ಕೆ 50000 ಆಗಿದೆ.


Click it and Unblock the Notifications