ನಾವು ಎಂದಿಗೂ ಕೂಡಾ ಹೂಡಿಕೆ ವಿಚಾರಕ್ಕೆ ಬಂದಾಗ ಎಲ್ಲಿ ಹೂಡಿಕೆಮ ಮಾಡಿದರೆ ನಮಗೆ ಅತೀ ಹೆಚ್ಚು ಲಾಭ ಲಭ್ಯವಾಗುತ್ತದೆ ಎಂದು ನೋಡುತ್ತೇವೆ. ಆದರೆ ಲಾಭದ ಹಿಂದೆ ಹೋಗಿ ನಮ್ಮ ಹಣದ ಸುರಕ್ಷತೆಯನ್ನು ಮರೆತರೆ ಹೇಗೆ ಹೇಳಿ?. ನಾವು ಮಾಡುವ ಹೂಡಿಕೆಯು ಸುರಕ್ಷಿತವಾಗಿರಬೇಕು ಹಾಗೂ ಉತ್ತಮ ರಿಟರ್ನ್ ಲಭ್ಯವಾಗಬೇಕೆಂದರೆ ನಮ್ಮ ಮುಂದೆ ಬರುವ ಆಯ್ಕೆಯೇ ಎಲ್‌ಐಸಿ.
ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಭಾರತದಲ್ಲೆ ಅತೀ ದೊಡ್ಡ ವಿಮಾ ಸಂಸ್ಥೆಯಾಗಿದೆ. ನಮ್ಮ ಅಗತ್ಯಕ್ಕೆ ತಕ್ಕುದಾದ ಹಲವಾರು ವಿಮಾ ಯೋಜನೆಗಳನ್ನು ಎಲ್‌ಐಸಿ ಹೊಂದಿದೆ. ಎಲ್‌ಐಸಿ ಎಂದರೆ ಬರೀ ವಿಮೆ ಮಾತ್ರವಲ್ಲದೆ, ಉಳಿತಾಯ ಮಾಡುವ ಆಯ್ಕೆಯು ಇದೆ. ಟರ್ಮ್ ಇನ್ಶೂರೆನ್ಸ್, ಎಂಡೊಮೆಂಟ್ ಪ್ಲ್ಯಾನ್, ಮನಿ- ಬ್ಯಾಕ್ ಪಾಲಿಸಿ, ಲೈಫ್ ಪ್ಲ್ಯಾನ್, ಹೀಗೆ ಹಲವಾರು ವಿಮಾ ಪಾಲಿಸಿಗಳು ಇದೆ.

ಇದು ಮಾತ್ರವಲ್ಲದೆ ಎಲ್‌ಐಸಿಯು ವಿಶೇಷ ಪ್ಲ್ಯಾನ್‌ಗಳು ಕೂಡಾ ಇದೆ. ಕುಟುಂಬ, ನಿವೃತ್ತಿ, ಗುಂಪು ವಿಮೆ ಯೋಜನೆಗಳಂತಹ ವಿಶೇಷ ಪ್ಲ್ಯಾನ್‌ಗಳು ಎಲ್‌ಐಸಿಯಲ್ಲಿದೆ. ಹಾಗಿರುವಾಗ ನೀವು ಮಾಸಿಕವಾಗಿ 833 ರೂಪಾಯಿ ಹೂಡಿಕೆ ಮಾಡಿ, ಅಂತಿಮವಾಗಿ ಮೆಚ್ಯೂರಿಟಿ ವೇಳೆ 1 ಕೋಟಿ ರೂಪಾಯಿ ಪಡೆಯುವ ಪ್ಲ್ಯಾನ್ ಬಗ್ಗೆ ತಿಳಿದಿದೆಯೇ?, ಇಲ್ಲಿದೆ ವಿವರ ಮುಂದೆ ಓದಿ...
ಎಲ್‌ಐಸಿ ಧನ ರೇಖಾ ಪಾಲಿಸಿ
ಎಲ್‌ಐಸಿಯ ಧನ ರೇಖಾ ವಿಮಾ ಪಾಲಿಸಿಯು ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಪಾಲಿಸಿಯಾಗಿದೆ. ಹಾಗೆಯೇ ಮನಿ- ಬ್ಯಾಕ್ ಪಾಲಿಸಿ ಕೂಡಾ ಹೌದು. ಹಾಗೆಯೇ ಈ ಪಾಲಿಸಿಯನ್ನು ಡೆತ್ ಬೆನಿಫಿಟ್ ಹಾಗೂ ಮೆಚ್ಯೂರಿಟಿ ಬೆನಿಫಿಟ್ ಲಭ್ಯವಾಗುತ್ತದೆ. ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಸಾವನ್ನಪ್ಪಿದರೆ, ಪಾಲಿಸಿದಾರರ ಕುಟುಂಬಕ್ಕೆ ಹಣಕಾಸು ಸಹಾಯ ಲಭ್ಯವಾಗಲಿದೆ.
ಇದು ವಿಮಾ ರಕ್ಷಣೆ ಮಾತ್ರವಲ್ಲದೆ ಉಳಿತಾಯಕ್ಕೆ ಸುರಕ್ಷಿತವಾಗಿದೆ. ಈ ಪಾಲಿಸಿಯ ಅಡಿಯಲ್ಲಿ ಕನಿಷ್ಠ ಮೂಲ ವಿಮಾ ಮೊತ್ತ ರೂ. 2,00,000 ಆಗಿದೆ. ಆದರೆ ಗರಿಷ್ಠ ಮೂಲ ವಿಮಾ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಆದರೆ ಮೂಲ ವಿಮಾ ಮೊತ್ತವು 25,000ರ ದ್ವಿಗುಣವಿರಬೇಕಾಗಿದೆ.
ಪಾಲಿಸಿ ಅವಧಿಯಲ್ಲಿ, ಪಾಲಿಸಿದಾರರ ಸರ್ವವೈಲ್‌ಗೆ ನಿಯತಕಾಲಿಕವಾಗಿ ಪಾವತಿಯನ್ನು ಮಾಡಲಾಗುತ್ತದೆ. ಉಳಿದಿರುವ ಮೊತ್ತವನ್ನು ಪಾಲಿಸಿಯ ಮುಕ್ತಾಯದ ಸಮಯದಲ್ಲಿ ನೀಡಲಾಗುತ್ತದೆ. ಸಾಲ ಸೌಲಭ್ಯವೂ ಕೂಡಾ ಈ ಪಾಲಿಸಿಯಲ್ಲಿ ಲಭ್ಯವಿದೆ. ಹೂಡಿಕೆದಾರರಾಗಿ, ನೀವು ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ಸಾಲವನ್ನು ತೆಗೆದುಕೊಳ್ಳಬಹುದು.
ಎಲ್‌ಐಸಿ ಧನ ರೇಖಾ ಪಾಲಿಸಿ ಅರ್ಹತೆ
ಆರಂಭ ವಯಸ್ಸು: 26 ವರ್ಷ
ಮೂಲ ಮೊತ್ತ: 10 ಲಕ್ಷ ರೂಪಾಯಿ
ಪಾಲಿಸಿ ಅವಧಿ: 20 ವರ್ಷ
ಪ್ರೀಮಿಯಂ ಪಾವತಿ ಅವಧಿ: 10 ವರ್ಷ
6 ನೇ ವರ್ಷದಿಂದ ಖಾತರಿ ಸೇರ್ಪಡೆ: 1000 ರೂಪಾಯಿಗೆ 50 ರೂಪಾಯಿ
ಎಲ್‌ಐಸಿ ಧನ ರೇಖಾ ಲೆಕ್ಕಾಚಾರ
ನಿಮಗೆ 30 ವರ್ಷ ವಯಸ್ಸಾದಾಗ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದಾದರೆ ವಾರ್ಷಿಕವಾಗಿ 8,754 ರೂಪಾಯಿ ಪ್ರೀಮಿಯಂ ಅನ್ನು ಪಾವತಿ ಮಾಡಬೇಕಾಗುತ್ತದೆ. ಅದು 50 ಲಕ್ಷ ರೂಪಾಯಿಯ ಪಾಲಿಸಿಗಾಗಿ ಮಾಡುವ ಪಾವತಿ ಆಗಿರುತ್ತದೆ. ಹೆಚ್ಚುವರಿಯಾಗಿ ಡೆತ್ ಬೆನಿಫಿಟ್ ನಿಮಗೆ ಲಭ್ಯವಾಗಲಿದೆ.
ಪಾಲಿಸಿದಾರರು 40ನೇ ವಯಸ್ಸಿನಲ್ಲಿ ಅಚಾನಕ್ ಆಗಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ಡೆತ್ ಬೆನಿಫಿಟ್ ಅನ್ನು ನೀಡಲಾಗುತ್ತದೆ. ಈ ಎಲ್‌ಐಸಿ ಧನ ರೇಖಾ ಪಾಲಿಸಿ ಅಡಿಯಲ್ಲಿ ಪಾಲಿಸಿದಾರರು ಅಚಾನಕ್ ಆಗಿ ಸಾವನ್ನಪ್ಪಿದರೆ ಪಾಲಿಸಿದಾರರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪಾಲಿಸಿ ಮೊತ್ತ ನೀಡಲಾಗುತ್ತದೆ. ಇನ್ನು ಡೆತ್ ಬೆನಿಫಿಟ್ ಆಗಿ ಹೆಚ್ಚುವರಿ 50 ಲಕ್ಷ ರೂಪಾಯಿ ನೀಡಲಾಗುತ್ತದೆ. ಒಟ್ಟಾಗಿ 1 ಕೋಟಿ ರೂಪಾಯಿ ನೀಡಲಾಗುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications