ಸಾಮಾನ್ಯವಾಗಿ ವಿಮೆಯ ಬಗ್ಗೆ ಮಾತನಾಡುವಾಗ ಮೊದಲು ನಮ್ಮ ನೆನಪಿಗೆ ಬರುವುದು ದೇಶದ ಅತೀ ದೊಡ್ಡ ವಿಮಾ ಸಂಸ್ಥೆ ಎಲ್‌ಐಸಿ. ಇತ್ತೀಚೆಗೆ ಷೇರು ಪೇಟೆಗೆ ಇಳಿದು ನಿರಂತರವಾಗಿ ಇಳಿಕೆ ಕಾಣುತ್ತಿರುವ ಎಲ್‌ಐಸಿ ಸಂಸ್ಥೆಯ ಪಾಲಿಸಿಗೆ ಮಾತ್ರ ಅಧಿಕ ಬೇಡಿಕೆ ಇದೆ. ಏಕೆಂದರೆ ಇದು ಸುರಕ್ಷಿತ ಹೂಡಿಕೆ ಎಂಬ ನಂಬಿಕೆ ಜನರಲ್ಲಿ ಇದೆ.
ಎಲ್‌ಐಸಿಯ ಧನ ರೇಖಾ ವಿಮಾ ಪಾಲಿಸಿಯು ನಾನ್-ಲಿಂಕ್ಡ್, ನಾನ್-ಪಾರ್ಟಿಸಿಪೇಟಿಂಗ್ ಪಾಲಿಸಿಯಾಗಿದೆ. ಇದು ವಿಮಾ ರಕ್ಷಣೆ ಮಾತ್ರವಲ್ಲದೆ ಉಳಿತಾಯಕ್ಕೆ ಸುರಕ್ಷಿತವಾಗಿದೆ. ಅಷ್ಟು ಮಾತ್ರವಲ್ಲದೇ ಈ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಸಾವನ್ನಪ್ಪಿದರೆ, ಕುಟುಂಬಕ್ಕೆ ಹಣಕಾಸಿನ ಬೆಂಬಲ ಲಭ್ಯವಾಗಲಿದೆ.
ಈ ಪಾಲಿಸಿಯ ಅಡಿಯಲ್ಲಿ ಕನಿಷ್ಠ ಮೂಲ ವಿಮಾ ಮೊತ್ತ ರೂ. 2,00,000 ಆಗಿದೆ. ಆದರೆ ಗರಿಷ್ಠ ಮೂಲ ವಿಮಾ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಆದರೆ ಮೂಲ ವಿಮಾ ಮೊತ್ತವು 25,000ರ ದ್ವಿಗುಣವಿರಬೇಕಾಗಿದೆ. ಈ ಯೋಜನೆಯ ಪ್ರಯೋಜನ, ಅರ್ಹತೆ ಮತ್ತು ಇತರೆ ವಿಚಾರಗಳ ಬಗ್ಗೆ ನಾವು ಇಲ್ಲಿ ಚರ್ಚಿಸಿದ್ದೇವೆ. ಮುಂದೆ ಓದಿ...
ಎಲ್‌ಐಸಿ ಧನ ರೇಖಾ ಯೋಜನೆಯ ಅರ್ಹತೆ
ಎಲ್ಐಸಿ ಉಲ್ಲೇಖಿಸಿರುವಂತೆ ಪಾಲಿಸಿ ಅವಧಿಯು 20 ವರ್ಷಗಳು, 30 ವರ್ಷಗಳು ಮತ್ತು 40 ವರ್ಷಗಳಾಗಿದೆ. ಇದರಲ್ಲಿ ಸಿಂಗಲ್ ಪ್ರೀಮಿಯಂ ಅವಕಾಶವಿಲ್ಲ. ಸೀಮಿತ ಪ್ರೀಮಿಯಂ 20 ವರ್ಷಗಳ ಪಾಲಿಸಿ ಅವಧಿಗೆ 10 ವರ್ಷಗಳು, 30 ವರ್ಷಗಳ ಪಾಲಿಸಿ ಅವಧಿಗೆ 15 ವರ್ಷಗಳು ಮತ್ತು 40 ವರ್ಷಗಳ ಪಾಲಿಸಿ ಅವಧಿಗೆ 20 ವರ್ಷಗಳು ಆಗಿದೆ. ಈ ಪಾಲಿಸಿ ಖರೀದಿ ಮಾಡಲು ಕನಿಷ್ಠ ವಯಸ್ಸು ಬೇರೆ ಬೇರೆ ರೀತಿಯಾಗಿದೆ. 20 ವರ್ಷಗಳ ಪಾಲಿಸಿ ಅವಧಿಗೆ 8 ವರ್ಷ ವಯೋಮಿತಿ, 30 ವರ್ಷಗಳ ಪಾಲಿಸಿ ಅವಧಿಗೆ 3 ವರ್ಷಗಳ ವಯೋಮಿತಿ, 40 ವರ್ಷಗಳ ಪಾಲಿಸಿ ಅವಧಿಗೆ 90 ದಿನಗಳ ವಯೋಮಿತಿ ಇದೆ.
ಪ್ರೀಮಿಯಂ ಪಡೆಯಲು ಗರಿಷ್ಠ ವಯೋಮಿತಿಯು ಬೇರೆ ಬೇರೆ ರೀತಿಯಲ್ಲಿದೆ. 30 ವರ್ಷಗಳ ಪಾಲಿಸಿ ಅವಧಿಗೆ 45 ವರ್ಷಗಳು ಮತ್ತು 40 ವರ್ಷಗಳ ಪಾಲಿಸಿ ಅವಧಿಗೆ 35 ವರ್ಷಗಳ ವಯೋಮಿತಿ ಇದೆ. ಮೆಚ್ಯೂರಿಟಿಯಲ್ಲಿ ಕನಿಷ್ಠ ವಯಸ್ಸು ಕೂಡ ಬೇರೆ ಬೇರೆ ರೀತಿಯಾಗಿದೆ. 20 ವರ್ಷಗಳ ಪಾಲಿಸಿ ಅವಧಿಗೆ 28 ವರ್ಷಗಳು, 30 ವರ್ಷಗಳ ಪಾಲಿಸಿ ಅವಧಿಗೆ 33 ವರ್ಷಗಳು ಮತ್ತು 40 ವರ್ಷಗಳ ಪಾಲಿಸಿ ಅವಧಿಗೆ 40 ವರ್ಷಗಳ ಕನಿಷ್ಠ ವಯೋಮಿತಿ ಇದೆ.
ವಿಮಾ ಅವಧಿಯಲ್ಲಿ ಪಾಲಿಸಿದಾರರು ಮರಣಹೊಂದಿದರೆ?
ಪಾಲಿಸಿದಾರನು ಪಾಲಿಸಿ ಅವಧಿಯಲ್ಲಿ ಮರಣಹೊಂದಿದರೆ ಎಲ್‌ಐಸಿ ಧನ ರೇಖಾ ಯೋಜನೆಯ ಡೆತ್ ಬೆನಿಫಿಟ್ ನಿಮಗೆ ಲಭ್ಯವಾಗಲಿದೆ. ಸಾವಿನ ವಿಮಾ ಮೊತ್ತಕ್ಕೆ ಅರ್ಹರಾಗಿರುತ್ತಾರೆ. ಒಂದೇ ಪ್ರೀಮಿಯಂ ಪಾವತಿಗೆ, 'ಸಾವಿನ ವಿಮಾ ಮೊತ್ತ'ವನ್ನು ಮೂಲ ವಿಮಾ ಮೊತ್ತದ ಶೇಕಡ 125 ಎಂದು ಗೊತ್ತು ಮಾಡಲಾಗಿದೆ. ಸೀಮಿತ ಪ್ರೀಮಿಯಂ ಪಾವತಿಗಾಗಿ, 'ಸಾವಿನ ವಿಮಾ ಮೊತ್ತ' ಮೂಲ ವಿಮಾ ಮೊತ್ತದ ಶೇಕಡ 125 ಎಂದು ಗೊತ್ತುಪಡಿಸಲಾಗಿದೆ. ಹಾಗೆಯೇ ವಾರ್ಷಿಕ ಪ್ರೀಮಿಯಂನ 7 ಪಟ್ಟು ಹೆಚ್ಚು ಎಂದು ಗುರುತಿಸಲಾಗುತ್ತದೆ. ಸೀಮಿತ ಪ್ರೀಮಿಯಂ ಪಾವತಿಯ ಅಡಿಯಲ್ಲಿ ಡೆತ್ ಬೆನಿಫಿಟ್ ಯಾವುದೇ ಹೆಚ್ಚುವರಿ ಪ್ರೀಮಿಯಂ ಅನ್ನು ಹೊರತುಪಡಿಸಿ ಪಾವತಿಸಿದ ಒಟ್ಟು ಪ್ರೀಮಿಯಂಗಳ ಶೇಡಕ 105ಕ್ಕಿಂತ ಕಡಿಮೆಯಾಗಿರುವುದಿಲ್ಲ.
ಮೆಚ್ಯೂರಿಟಿ ಪ್ರಯೋಜನ ಏನಿದೆ?
ಈ ಪಾಲಿಸಿಯಲ್ಲಿ ಸರ್ವವೈಲ್ ಹಾಗೂ ಮೆಚ್ಯೂರಿಟಿ ಪ್ರಯೋಜನ ಲಭ್ಯವಾಗಲಿದೆ. ವಿವಿಧ ಪಾಲಿಸಿ ಅವಧಿಗೆ ನಿಗದಿತ ಶೇಕಡಾವಾರು ಮೊತ್ತವನ್ನು ಎಲ್‌ಐಸಿ ಪಾವತಿಸುತ್ತದೆ. 20 ವರ್ಷಗಳ ಪಾಲಿಸಿ ಅವಧಿಗೆ, 10ನೇ ಮತ್ತು 15ನೇ ಪಾಲಿಸಿ ವರ್ಷದ ಅಂತ್ಯದಲ್ಲಿ ಮೂಲ ವಿಮಾ ಮೊತ್ತದ ಶೇಕಡ 10 ಪಾವತಿ ಮಾಡುತ್ತದೆ. 30 ವರ್ಷಗಳ ಪಾಲಿಸಿ ಅವಧಿಗೆ, 15ನೇ, 20ನೇ ಮತ್ತು 25ನೇ ಪಾಲಿಸಿ ವರ್ಷದ ಅಂತ್ಯದಲ್ಲಿ ಮೂಲ ವಿಮಾ ಮೊತ್ತದ ಶೇಕಡ 15 ಅನ್ನು ಸರ್ವವೈಲ್ ಬೆನೆಫಿಟ್ ಆಗಿ ಪಾವತಿಸುತ್ತದೆ. 40 ವರ್ಷಗಳ ಪಾಲಿಸಿ ಅವಧಿಗೆ, 20ನೇ, 25ನೇ, 30ನೇ ಮತ್ತು 35ನೇ ಪಾಲಿಸಿ ವರ್ಷದ ಅಂತ್ಯದಲ್ಲಿ ಮೂಲ ವಿಮಾ ಮೊತ್ತದ ಶೇಕಡ 20 ಅನ್ನು ಸರ್ವವೈಲ್ ಬೆನಿಫಿಟ್ ಆಗಿ ಪಾವತಿ ಮಾಡುತ್ತದೆ.
ಪಾಲಿಸಿ ಸಾಲ, ತೆರಿಗೆ ಮತ್ತು ಉಚಿತ ಲಾಕ್-ಇನ್ ಅವಧಿ
ಹೂಡಿಕೆದಾರರಾಗಿ, ನೀವು ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ಸಾಲವನ್ನು ತೆಗೆದುಕೊಳ್ಳಬಹುದು. ಆದರೆ ಕೆಲವು ಷರತ್ತುಗಳು ಇದೆ. ಪಾಲಿಸಿ ಪೂರ್ಣಗೊಂಡ 3 ತಿಂಗಳ ನಂತರ ಅಥವಾ ಫ್ರೀ-ಲುಕ್ ಅವಧಿಯ ಮುಕ್ತಾಯದ ನಂತರ ಪಾಲಿಸಿ ಅವಧಿಯಲ್ಲಿ ಯಾವುದೇ ಸಮಯದಲ್ಲಿ ನೀವು ಸಾಲವನ್ನು ತೆಗೆದುಕೊಳ್ಳಬಹುದು. ತೆರಿಗೆಯನ್ನು ಪಾಲಿಸಿದಾರರು ಪಾವತಿ ಮಾಡಬೇಕಾಗುತ್ತದೆ. ಸಾಲದ ಮೊತ್ತವನ್ನು ಹೂಡಿಕೆದಾರರು ಪಾವತಿಸಬೇಕಾದ ಪ್ರೀಮಿಯಂಗಳನ್ನು ಹೊರತುಪಡಿಸಿ ಬೇರೆಯೇ ಸಂಗ್ರಹ ಮಾಡಲಾಗುತ್ತದೆ. ಇತರ ಪಾಲಿಸಿಗಳಂತೆ, ಹೂಡಿಕೆದಾರರು ಪಾಲಿಸಿಯಿಂದ ತೃಪ್ತರಾಗದಿದ್ದರೆ, ಪಾಲಿಸಿ ಬಾಂಡ್‌ನ ಸ್ವೀಕೃತಿಯ ದಿನಾಂಕದಿಂದ 15 ದಿನಗಳಲ್ಲಿ (ಆನ್‌ಲೈನ್ ಮಾರಾಟದ ಸಂದರ್ಭದಲ್ಲಿ 30 ದಿನಗಳು) ಅದನ್ನು ಎಲ್‌ಐಸಿಗೆ ಹಿಂತಿರುಗಿಸಬಹುದು.


Click it and Unblock the Notifications