ನಾವು ಸಾಮಾನ್ಯವಾಗಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಹೆಚ್ಚು ಲಾಭವನ್ನು ಪಡೆಯಲು ಹೇಗೆ ಸಾಧ್ಯ ಎಂಬ ಬಗ್ಗೆ ಯೋಚನೆ ನಡೆಸುತ್ತಾ ಇರುತ್ತೇವೆ. ಹೆಚ್ಚು ಲಾಭವನ್ನು ಪಡೆಯಲು ಬಯಸುವವರಿಗೆ ಎಲ್‌ಐಸಿ ಅತೀ ಉತ್ತಮ ಆಯ್ಕೆ ಆಗಿದೆ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಅತಿದೊಡ್ಡ ವಿಮಾದಾರ ಸಂಸ್ಥೆಯಲ್ಲಿ ಒಂದಾದ ಭಾರತದ ಜೀವ ವಿಮಾ ನಿಗಮ (ಎಲ್‌ಐಸಿ) ಹೂಡಿಕೆದಾರರಿಗೆ ಬಹು ಪಾಲಿಸಿ ಆಯ್ಕೆಗಳನ್ನು ನೀಡುತ್ತದೆ.
ಈ ಎಲ್‌ಐಸಿ ಪಾಲಿಸಿಯು ಸುರಕ್ಷಿತ, ಅಪಾಯ-ಮುಕ್ತ ಹೂಡಿಕೆ ಆಯ್ಕೆಗಳನ್ನು ನೀಡುತ್ತವೆ. ಆರ್ಥಿಕ ಭದ್ರತೆ ಮತ್ತು ಮಕ್ಕಳ ಶಿಕ್ಷಣ, ಮದುವೆ ಮತ್ತು ನಿವೃತ್ತಿಯಂತಹ ಭವಿಷ್ಯದ ಯೋಜನೆಗಳನ್ನು ಗಮನದಲ್ಲಿ ಇರಿಸಿಕೊಂಡು ನೋಡಿದಾಗ ಈ ಎಲ್‌ಐಸಿ ಯೋಜನೆಗಳು ಜನರ ಜನಪ್ರಿಯ ಹೂಡಿಕೆಯ ಆಯ್ಕೆಯಾಗಿದೆ.
ಹೀಗಿರುವಾಗ ಯೋಜಿತ ಸಣ್ಣ ಹೂಡಿಕೆಗಳನ್ನು ನಿಯಮಿತವಾಗಿ ಮಾಡುವ ಮೂಲಕ ನಿಮಗೆ ಉತ್ತಮ ಆದಾಯವನ್ನು ಪಡೆಯಲು ಸಾಧ್ಯವಾಗುವ ಈ ಯೋಜನೆಗಳಲ್ಲಿ ಒಂದನ್ನು ನಾವು ನಿಮಗೆ ಪರಿಚಯಿಸಲಿದ್ದೇವೆ. ಅದುವೇ ಎಲ್ಐಸಿ ಜೀವನ್ ಲಾಭ್ ಪಾಲಿಸಿ ಆಗಿದೆ. ಎಲ್ಐಸಿ ಜೀವನ್ ಲಾಭ್ ಎಂಬ ಪಾಲಿಸಿಯು ಎಂಡೋಮೆಂಟ್ ಪಾಲಿಸಿಯಾಗಿದ್ದು, ವಿಮೆಯ ಮೇಲೆ ಉಳಿಸುವ ಆಯ್ಕೆಯನ್ನು ಹೊಂದಿದೆ. ಇದು ನಾನ್ ಲಿಂಕ್ಡ್, ವೈಯಕ್ತಿಕ, ಜೀವ ವಿಮೆ ಉಳಿತಾಯ ಯೋಜನೆಯಾಗಿದ್ದು, ಫೆಬ್ರವರಿ 1, 2020 ರಂದು ಎಲ್‌ಐಸಿ ಮೂಲಕ ಪ್ರಾರಂಭ ಮಾಡಲಾಗಿದೆ.
ಪಾಲಿಸಿದಾರರ ಮರಣದ ಸಂದರ್ಭದಲ್ಲಿ ಈ ಪ್ರಯೋಜನ ಸಿಗಲಿದೆ
ಈ ಪಾಲಿಸಿಯಲ್ಲಿ ಪಾಲಿಸಿದಾರರ ಮರಣ ಹೊಂದಿದರೆ, ಮರಣದ ತನಕ ಎಲ್ಲಾ ಪ್ರೀಮಿಯಂಗಳನ್ನು ಪಾವತಿಸಿದ್ದರೆ, ಆತನ ನಾಮಿನಿಗೆ ಡೆತ್ ಸಮ್ ಅಶೂರ್ಡ್, ಸರಳ ರಿವರ್ಷನರಿ ಬೋನಸ್ ಮತ್ತು ಡೆತ್ ಬೆನಿಫಿಟ್ ಆಗಿ ಅಂತಿಮ ಸೇರ್ಪಡೆ ಬೋನಸ್ ಸಿಗುತ್ತದೆ. ಅಂದರೆ, ನಾಮಿನಿಯು ಹೆಚ್ಚುವರಿ ವಿಮಾ ಮೊತ್ತವನ್ನು ಪಡೆಯುತ್ತಾನೆ. ವಿಮಾ ರಕ್ಷಣೆಯಲ್ಲಿ ವಿಮಾ ಮೊತ್ತವನ್ನು ಪಡೆಯುವುದರಿಂದ ನಾಮಿನಿ ಪ್ರಯೋಜನ ಪಡೆಯುತ್ತಾನೆ. ಇದಲ್ಲದೆ, ಎಲ್ಐಸಿ ಜೀವನ್ ಲಾಭ್ ಯೋಜನೆಯು ಪಾಲಿಸಿದಾರರಿಗೆ ಹೂಡಿಕೆಯ ವಿರುದ್ಧ ಸಾಲವನ್ನು ಪಡೆಯಲು ಅವಕಾಶವನ್ನು ನೀಡುತ್ತದೆ. 25, 21 ಅಥವಾ 16 ವರ್ಷಗಳ ಮೆಚ್ಯೂರಿಟಿ ಅವಧಿಯೊಂದಿಗೆ ಹೂಡಿಕೆಗಳನ್ನು ಮಾಡಬಹುದಾಗಿದೆ. ಇದರಲ್ಲಿ ಪಾಲಿಸಿದಾರರಿಂದ ಕ್ರಮವಾಗಿ 16, 15 ಮತ್ತು 10 ವರ್ಷಗಳ ಅವಧಿಯಲ್ಲಿ ನಿಯಮಿತ ಮತ್ತು ನಿರಂತರ ಹೂಡಿಕೆಯ ಅಗತ್ಯವಿರುತ್ತದೆ.
ಪ್ರೀಮಿಯಂ ಪಾವತಿ ಹೇಗೆ?
ಪ್ರೀಮಿಯಂ ಅನ್ನು ಪಾಲಿಸಿದಾರರು ವಾರ್ಷಿಕವಾಗಿ, ಅರ್ಧವಾರ್ಷಿಕವಾಗಿ, ತ್ರೈಮಾಸಿಕವಾಗಿ ಅಥವಾ ಪ್ರತಿ ತಿಂಗಳು ಪಾವತಿಸಬಹುದು. ಪ್ರೀಮಿಯಂಗಳ ಪಾವತಿಗೆ ಗ್ರೇಸ್ ಅವಧಿಯನ್ನು ಒದಗಿಸಲಾಗಿದೆ ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕ ಠೇವಣಿಗಳಿಗೆ 30 ದಿನಗಳು ಮತ್ತು ಮಾಸಿಕ ಪ್ರೀಮಿಯಂ ಪಾವತಿಗಳಿಗೆ 15 ದಿನಗಳು ಗ್ರೇಸ್ ಅವಧಿ ಇದೆ.
ತೆರಿಗೆ ವಿನಾಯಿತಿ ಕೂಡಾ ಇದೆ
ಪಾಲಿಸಿಯನ್ನು 8 ವರ್ಷದ ಚಿಕ್ಕ ವಯಸ್ಸಿನಿಂದಲೂ ಪಡೆಯಬಹುದು ಮತ್ತು 59 ವರ್ಷ ವಯಸ್ಸಿನವರೆಗೂ ಪಡೆಯಬಹುದು. ಎಲ್ಐಸಿ ಜೀವನ್ ಲಾಭ್ ಯೋಜನೆಯಡಿಯಲ್ಲಿ ರೂ. 2 ಲಕ್ಷಕ್ಕಿಂತ ಕಡಿಮೆ ಮೊತ್ತವನ್ನು ವಿಮೆ ಮಾಡಬಹುದು. ಯೋಜನೆಯಡಿಯಲ್ಲಿ ಹೂಡಿಕೆಯು ಗರಿಷ್ಠ ಮಿತಿಯನ್ನು ಹೊಂದಿಲ್ಲ. ಪಾಲಿಸಿಯ ಪ್ರಯೋಜನಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ರ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿಯನ್ನು ಸಹ ಒಳಗೊಂಡಿರುತ್ತದೆ.
ಪ್ರತಿದಿನ ರೂ 262 ಹೂಡಿಕೆಯಲ್ಲಿ 20 ಲಕ್ಷ ರೂ!
ರೂ 20 ಲಕ್ಷ ಹಣವನ್ನು ಪಡೆಯಲು ಪಾಲಿಸಿದಾರರು ರೂ 7,916 ರ ಮಾಸಿಕ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ. ಅಂದರೆ ದಿನಕ್ಕೆ 262 ಹೂಡಿಕೆ ಮಾಡಬೇಕಾಗುತ್ತದೆ. ಆ ಮೂಲಕ 16 ವರ್ಷಗಳ ಅವಧಿಗೆ ದೈನಂದಿನ ಆಧಾರದ ಮೇಲೆ ರೂ 262 ಹೂಡಿಕೆ ಮಾಡಬೇಕಾಗುತ್ತದೆ. 25 ವರ್ಷಗಳಲ್ಲಿ ಮೆಚ್ಯೂರಿಟಿಯಲ್ಲಿ, ಪಾಲಿಸಿದಾರರು 20 ಲಕ್ಷ ರೂಪಾಯಿ ಪಡೆಯಲಿದ್ದಾರೆ. ಹೂಡಿಕೆಯನ್ನು 25 ವರ್ಷಗಳವರೆಗೆ ಇಟ್ಟುಕೊಂಡರೆ ಹೂಡಿಕೆದಾರರಿಗೆ ಬೋನಸ್ ಕೂಡ ಸಿಗುತ್ತದೆ. (ಒನ್‌ಇಂಡಿಯಾ ಸುದ್ದಿ)


Click it and Unblock the Notifications