Jeevan Utsav: ಎಲ್‌ಐಸಿಯ ಹೊಸ ಪಾಲಿಸಿ ಬಿಡುಗಡೆ, ಅರ್ಹತೆ, ಪ್ರೀಮಿಯಂ ವಿವರ ತಿಳಿಯಿರಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಎಲ್‌ಐಸಿ) ವೈಯಕ್ತಿಕ ಉಳಿತಾಯ ಮತ್ತು ಸಂಪೂರ್ಣ ಜೀವ ವಿಮೆಯನ್ನು ಒಳಗೊಂಡಿರುವ ಒಂದು ಹೊಸ ಯೋಜನೆಯನ್ನು ಪರಿಚಯಿಸಿದೆ. ಎಲ್‌ಐಸಿಯ ಈ ಹೊಸ ಯೋಜನೆ ಹೆಸರು ಜೀವನ ಉತ್ಸವವಾಗಿದ್ದು ನವೆಂಬರ್ 29, 2023 ರಿಂದ ಜಾರಿಗೆ ಬರುತ್ತದೆ.

ಈ ಯೋಜನೆಯು ನಾನ್-ಲಿಂಕ್ಡ್ ಮತ್ತು ನಾನ್-ಪಾರ್ಟಿಪೇಟಿಂಗ್ ಆಗಿದೆ. ಹಾಗೆಯೇ ಜೀವಿತಾವಧಿಯಲ್ಲಿ ವ್ಯಾಪಕವಾದ ಜೀವ ವಿಮಾ ರಕ್ಷಣೆಯನ್ನು ನೀಡುತ್ತದೆ. ಯೋಜನೆಯು ಪ್ರೀಮಿಯಂ-ಪಾವತಿ ಅವಧಿಯ ಉದ್ದಕ್ಕೂ ಖಾತರಿಪಡಿಸಿದ ಸೇರ್ಪಡೆಗಳನ್ನು ಒಳಗೊಂಡಿರುವ ಸೀಮಿತ ಪ್ರೀಮಿಯಂಗಳನ್ನು ಪಾವತಿಸಲು ಅವಕಾಶ ನೀಡುತ್ತದೆ. ಈ ಯೋಜನೆಯ ಫೀಚರ್ ಇಲ್ಲಿದೆ ಮುಂದೆ ಓದಿ....

 ಎಲ್‌ಐಸಿಯ ಹೊಸ ಪಾಲಿಸಿ ಬಿಡುಗಡೆ, ಅರ್ಹತೆ, ಪ್ರೀಮಿಯಂ ವಿವರ

ಯೋಜನೆಯ ವಿವರ ಇಲ್ಲಿದೆ

* ಈ ಯೋಜನೆಯು 90 ದಿನಗಳು ಮತ್ತು 65 ವರ್ಷ ವಯಸ್ಸಿನ ವ್ಯಕ್ತಿಗಳಿಗಾಗಿ ಮಾತ್ರ ಇದೆ. ಈ ಯೋಜನೆಯು ಖಚಿತವಾದ ಆದಾಯವನ್ನು ನೀಡುತ್ತದೆ.

* ಪ್ರೀಮಿಯಂ ಪಾವತಿಸುವ ಅವಧಿಯು ಕನಿಷ್ಠ ಐದು ವರ್ಷಗಳು ಮತ್ತು ಗರಿಷ್ಠ 16 ವರ್ಷಗಳಾಗಿರಬೇಕು.

* ಪ್ರೀಮಿಯಂ ಪಾವತಿಸಿದ ಪ್ರತಿ ಪಾಲಿಸಿ ವರ್ಷದ ಕೊನೆಯಲ್ಲಿ, ಪ್ರತಿ ಸಾವಿರ ಮೂಲ ಮೊತ್ತಕ್ಕೆ 40 ರೂಪಾಯಿ ಖಾತರಿಯ ಸೇರ್ಪಡೆಗಳು ಪ್ರೀಮಿಯಂ ಪಾವತಿಸುವ ಅವಧಿಯ ಉದ್ದಕ್ಕೂ ಲಭ್ಯವಾಗುತ್ತದೆ.

* ಜೀವ ವಿಮಾದಾರರು ಪ್ರೀಮಿಯಂ ಪಾವತಿಸುವ ಅವಧಿಯನ್ನು ಮೀರಿ ಬದುಕಿದ್ದರೆ, ಪಾಲಿಸಿದಾರರು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ.

ಆಯ್ಕೆ I: ನಿಯಮಿತ ಆದಾಯದ ಲಾಭ

ಇದು ಪ್ರತಿ ಪಾಲಿಸಿಯ ವರ್ಷದ ಅಂತ್ಯದಲ್ಲಿ ಪಾವತಿಸಲಾದ ಮೂಲ ವಿಮಾ ಮೊತ್ತದ ಶೇಕಡ 10 ರಷ್ಟು ಆದಾಯವನ್ನು ನೀಡುತ್ತದೆ. ಮುಂದೂಡಿಕೆ ಅವಧಿಯ ನಂತರ ಮೂರರಿಂದ ಆರು ವರ್ಷಗಳವರೆಗೆ ಈ ಆದಾಯ ಲಭ್ಯವಾಗುತ್ತದೆ.

ಆಯ್ಕೆ II: ಫ್ಲೆಕ್ಸಿ ಆದಾಯ ಪ್ರಯೋಜನ

ಪಾಲಿಸಿದಾರರು ಫ್ಲೆಕ್ಸಿ ಆದಾಯದ ಪ್ರಯೋಜನವನ್ನು ಆಯ್ಕೆ ಮಾಡಬಹುದು. ಇದರಲ್ಲಿ ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಇದರಲ್ಲಿ ಶೇಕಡ 10 ರಷ್ಟು ಮೂಲ ವಿಮಾ ಮೊತ್ತವನ್ನು ಸಂಗ್ರಹಿಸಬಹುದು ಮತ್ತು ನಂತರ ಹಿಂಪಡೆಯಬಹುದು. ಎಲ್‌ಐಸಿ ಈ ಮುಂದೂಡಲ್ಪಟ್ಟ ಫ್ಲೆಕ್ಸಿ ಆದಾಯ ಪಾವತಿಗಳ ಮೇಲೆ ವಾರ್ಷಿಕವಾಗಿ ಶೇಕಡ 5.5 ಬಡ್ಡಿದರ ನೀಡುತ್ತದೆ.

ಡೆತ್ ಬೆನಿಫಿಟ್ ಮತ್ತು ಇತರೆ ಮಾಹಿತಿ

• ಪಾಲಿಸಿಯು ಸಕ್ರಿಯವಾಗಿದ್ದರೆ ಅಪಾಯದ ಪ್ರಾರಂಭದ ನಂತರ ಜೀವ ವಿಮಾದಾರರ ಮರಣದ ಸಂದರ್ಭದಲ್ಲಿ, "ಸಾವಿನ ವಿಮಾ ಮೊತ್ತ" ಕ್ಕೆ ಸಮನಾದ ಡೆತ್ ಬೆನಿಫಿಟ್ ಅನ್ನು ಅನ್ನು ಸಂಚಿತ ಗ್ಯಾರಂಟಿ ಸೇರ್ಪಡೆಗಳೊಂದಿಗೆ ಪಾವತಿಸಲಾಗುತ್ತದೆ. ಈ ಡೆತ್ ಬೆನಿಫಿಟ್ ಸಾವಿನ ದಿನಾಂಕದವರೆಗೆ ಪಾವತಿಸಿದ ಒಟ್ಟು ಪ್ರೀಮಿಯಂಗಳ ಶೇಕಡ 105 ಕ್ಕಿಂತ ಕಡಿಮೆಯಿರುವುದಿಲ್ಲ. "ಸಾವಿನ ವಿಮಾ ಮೊತ್ತ" "ಮೂಲ ವಿಮಾ ಮೊತ್ತ" ಅಥವಾ "ವಾರ್ಷಿಕ ಪ್ರೀಮಿಯಂನ 7 ಪಟ್ಟು ಆಗಿರುತ್ತದೆ. ಈ ಪೈಕಿ ಯಾವುದು ಅಧಿಕವೋ ಅದು.

• ಮೆಚ್ಯೂರಿಟಿ ಪ್ರಯೋಜನಗಳು ಈ ಯೋಜನೆಯ ಅಡಿಯಲ್ಲಿ ಅನ್ವಯಿಸುವುದಿಲ್ಲ. ಏಕೆಂದರೆ ನೀವು ಮಾಡಿದ ಆಯ್ಕೆಯ ಆಧಾರದ ಮೇಲೆ ನಿಯಮಿತ/ಫ್ಲೆಕ್ಸಿ ಆದಾಯದ ಪ್ರಯೋಜನಗಳು ಜೀವಿತಾವಧಿಯಲ್ಲಿ ಮುಂದುವರಿಯುತ್ತದೆ.

• ಹೆಚ್ಚುವರಿ ಲಿಕ್ವಿಡಿಟಿಯನ್ನು ಸಾಲದ ಮೂಲಕ ಪಡೆಯಬಹುದು.

• ಆಕರ್ಷಕವಾದ ಹೆಚ್ಚಿನ ವಿಮಾ ಮೊತ್ತದ ರಿಯಾಯಿತಿಯನ್ನು ನೀಡಲಾಗುತ್ತದೆ.

• ಈ ಉತ್ಪನ್ನವು ಕಡಿಮೆ ಮತ್ತು ಹೊಂದಿಕೊಳ್ಳುವ ಪ್ರೀಮಿಯಂ ಪಾವತಿ ಅವಧಿಗೆ ದೀರ್ಘಕಾಲದ ಬೇಡಿಕೆಯನ್ನು ಪರಿಹರಿಸುತ್ತದೆ.

• ಐದು ಆಪ್‌ಷನಲ್ ರೈಡರ್‌ಗಳಿಗೆ ಈ ಯೋಜನೆಯನ್ನು ಒದಗಿಸಲಾಗಿದೆ. ಪಾಲಿಸಿದಾರರು ಎಲ್‌ಐಸಿಯ ಆಕಸ್ಮಿಕ ಮರಣ ಮತ್ತು ಅಂಗವೈಕಲ್ಯ ಪ್ರಯೋಜನ ರೈಡರ್ ಅಥವಾ ಎಲ್‌ಐಸಿಯ ಅಪಘಾತ ಪ್ರಯೋಜನದ ರೈಡರ್ ಅನ್ನು ಆಯ್ಕೆ ಮಾಡಬಹುದು.

ಹೆಚ್ಚುವರಿಯಾಗಿ, ಉಳಿದ ಮೂರು ರೈಡರ್‌ಗಳು-ಎಲ್‌ಐಸಿಯ ಹೊಸ ಟರ್ಮ್ ಅಶ್ಯೂರೆನ್ಸ್ ರೈಡರ್, ಎಲ್‌ಐಸಿಯ ಹೊಸ ಕ್ರಿಟಿಕಲ್ ಇಲ್ನೆಸ್ ಬೆನಿಫಿಟ್ ರೈಡರ್ ಮತ್ತು ಎಲ್‌ಐಸಿಯ ಪ್ರೀಮಿಯಂ ವೇವರ್ ಬೆನಿಫಿಟ್ ರೈಡರ್ ಅರ್ಹತೆಯ ಷರತ್ತುಗಳಿಗೆ ಒಳಪಟ್ಟು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಲಭ್ಯವಿದೆ.

• ಯೋಜನೆಯು ನಾನ್‌ ಲಿಂಕ್ಡ್ ಮತ್ತು ನಾನ್‌ ಪಾರ್ಟಿಸಿಪೇಟಿಂಗ್ ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+