ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಅತಿದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಬುಧವಾರ ಪ್ರಾರಂಭ ಮಾಡಿದೆ. ಮೇ 4 ರಂದು ಚಂದಾದಾರಿಕೆ ಆರಂಭವಾಗಿದ್ದು, ಮೊದಲ ದಿನ ಮಧ್ಯಾಹ್ನದವರೆಗೆಯೇ ಶೇಕಡ 39 ಷೇರಿಗೆ ಅರ್ಜಿ ಸಲ್ಲಿಕೆಯಾಗಿದೆ.
ಎಲ್ಐಸಿ ಐಪಿಒ ಮಧ್ಯಾಹ್ನ 1:27ರ ಸುಮಾರಿಗೆ 38 ಪ್ರತಿಶತ ಚಂದಾದಾರಿಕೆಯನ್ನು ದಾಖಲಿಸಿದೆ. ಎಲ್ಐಸಿ ಪಾಲಿಸಿದಾರರು ವಿಮಾದಾರರ ಐಪಿಒದಲ್ಲಿ ಸದ್ಯಕ್ಕೆ ಅಧಿಕ ಖರೀದಿ ಮಾಡಿದ್ದಾರೆ. ಪಾಲಿಸಿದಾರರಿಗೆ ಕಾಯ್ದಿರಿಸಿದ ಐಪಿಒದಲ್ಲಿ ಶೇಕಡ 1.29 ಪಟ್ಟು ಚಂದಾದಾರರಾಗಿದ್ದಾರೆ.
ಉದ್ಯೋಗಿಗಳಿಗೆ ಕಾಯ್ದಿರಿಸಿದ ಭಾಗವು ಶೇಕಡಾ 67 ರಷ್ಟು ಚಂದಾದಾರರಾಗಿದ್ದರೆ, ಚಿಲ್ಲರೆ ಹೂಡಿಕೆದಾರರ ಭಾಗವು ಶೇಕಡಾ 40 ರಷ್ಟು ಚಂದಾದಾರಿಕೆಯಾಗಿದೆ. ಸಾಂಸ್ಥಿಕವಲ್ಲದ ಹೂಡಿಕೆದಾರರು ತಮ್ಮ ಭಾಗದ 9 ಪ್ರತಿಶತದಷ್ಟು ಚಂದಾದಾರರಾಗಿದ್ದಾರೆ. ಆದರೆ ಅರ್ಹ ಸಾಂಸ್ಥಿಕ ಖರೀದಿದಾರರು 3.95 ಕೋಟಿ ಷೇರುಗಳ ಹಂಚಿಕೆ ಕೋಟಾದಲ್ಲಿ 3 ಪ್ರತಿಶತವನ್ನು ಖರೀದಿಸಿದ್ದಾರೆ.

ಎಲ್‌ಐಸಿ ಐಪಿಒ
ಎಲ್‌ಐಸಿ ಐಪಿಒಗಾಗಿ ಒಟ್ಟು ಮೌಲ್ಯವನ್ನು 21,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದು ಇಲ್ಲಿಯವರೆಗೆ ದೇಶದ ಅತಿದೊಡ್ಡ ಐಪಿಒ ಆಗಿದೆ. ಚಂದಾದಾರಿಕೆ ಆರಂಭವಾದ ಹತ್ತು ನಿಮಿಷದಲ್ಲೇ ಶೇಕಡ 1ರಷ್ಟು ಚಂದಾದಾರಿಕೆಗೆ ಅರ್ಜಿ ಸಲ್ಲಿಸಲಾಗಿದೆ. ಬಿಡ್ಡಿಂಗ್ ಆರಂಭವಾದ ಅರ್ಧ ಗಂಟೆಯಲ್ಲೇ ಶೇಕಡ 4ರಷ್ಟು ಮಂದಿ ಚಂದಾದಾರಿಕೆ ಮಾಡಿಕೊಂಡಿದ್ದಾರೆ. ಇನ್ನು ಒಂದು ಗಂಟೆಯಲ್ಲೇ ಶೇಕಡ 12ರಷ್ಟು ಚಂದಾದಾರಿಕೆಗೆ ಅರ್ಜಿಗಳು ಸಲ್ಲಿಕೆಯಾಗಿದೆ.
ಉದ್ಯೋಗಿಗಳಿಗೆ ಸುಮಾರು 15.81 ಲಕ್ಷ ಷೇರುಗಳನ್ನು ಮತ್ತು ಪಾಲಿಸಿದಾರರಿಗೆ ಸುಮಾರು 2.21 ಕೋಟಿ ಷೇರುಗಳನ್ನು ಕಾಯ್ದಿರಿಸಲಾಗಿದೆ. ಆಸಕ್ತ ಚಂದಾದಾರರು ಲಾಟ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು, ಒಂದು ಎಲ್‌ಐಸಿ ಐಪಿಒ ಲಾಟ್ 15 ಎಲ್‌ಐಸಿ ಷೇರುಗಳನ್ನು ಒಳಗೊಂಡಿರುತ್ತದೆ. ಒಬ್ಬ ಅರ್ಜಿದಾರರು ಕನಿಷ್ಠ ಒಂದು ಮತ್ತು ಗರಿಷ್ಠ 14 ಲಾಟ್‌ಗಳಿಗೆ ಅರ್ಜಿ ಸಲ್ಲಿಸಬಹುದು.
ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಸಲು ಕನಿಷ್ಠ ಮೊತ್ತ 14,235 ರೂಪಾಯಿ ಆಗಿದೆ. ನಿಮ್ಮ ಷೇರುಗಳನ್ನು ಮೇ 16 ರೊಳಗೆ ನಿಮ್ಮ ಡಿಮ್ಯಾಟ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ನೀವು ಅರ್ಜಿ ಸಲ್ಲಿಸಿದಷ್ಟು ಷೇರು ನಿಮಗೆ ಲಭ್ಯವಾಗದಿದ್ದರೆ ನಿಮ್ಮ ಹಣವನ್ನು ಮೇ 13 ರೊಳಗೆ ಮರುಪಾವತಿಸಲಾಗುತ್ತದೆ.


Click it and Unblock the Notifications