ಭಾರತೀಯ ಜೀವ ವಿಮಾ ನಿಗಮದ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಇಂದು ಚಂದಾದಾರಿಕೆಗಾಗಿ ತೆರೆಯಲಾಗಿದೆ. ಈ ಐಪಿಒ ಮೇ 9 ರಂದು ಮುಕ್ತಾಯಗೊಳ್ಳಲಿದೆ. ಮುಂಚಿತವಾಗಿ ಆಂಕರ್ ಹೂಡಿಕೆದಾರರಿಂದ ಸುಮಾರು 5,627 ಕೋಟಿ ರೂಪಾಯಿ ಗಳಿಸಲಾಗಿದೆ. ಈಗ ಮೊದಲ ದಿನದಂದೇ ಎಲ್‌ಐಸಿ ಐಪಿಒದಲ್ಲಿ ಪಾಲಿಸಿದಾರರಿಗಾಗಿ ಹಾಗೂ ಉದ್ಯೋಗಿಗಳಿಗೆ ಮೀಸಲಾಗಿಟ್ಟಿದ್ದ ವಿಭಾಗದಲ್ಲಿ ಸಂಪೂರ್ಣವಾಗಿ ಚಂದಾದಾರಿಕೆ ನಡೆದಿದೆ.
ಭಾರತೀಯ ಮಾರುಕಟ್ಟೆಗಳ ಇತಿಹಾಸದಲ್ಲಿ ಅತಿದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ),ಮೇ 4 ರಂದು ಬಿಡ್ಡಿಂಗ್‌ನ ಮೊದಲ ದಿನದಲ್ಲಿ 67 ಪ್ರತಿಶತದಷ್ಟು ಚಂದಾದಾರಿಕೆಯಾಗಿದೆ. ಮೊದಲ ದಿನವೇ ಷೇರು ಕೊಳ್ಳಲು ಭಾರೀ ಪೈಪೋಟಿ ನಡೆದಿದೆ.
ಸಂಜೆ 6:48 ರ ಹೊತ್ತಿಗೆ, ಎಲ್ಐಸಿಯ ಐಪಿಒ ಹರಾಜಿನ ಮೊದಲ ದಿನದ ಎಂಟು ಗಂಟೆಗಳಲ್ಲಿ ಶೇಕಡಾ 65 ರಷ್ಟು ಚಂದಾದಾರಿಕೆಯಾಗಿದೆ. ಮೊದಲ ದಿನ ಮಧ್ಯಾಹ್ನದವರೆಗೆ ಶೇಕಡ 39 ಷೇರಿಗೆ ಅರ್ಜಿ ಸಲ್ಲಿಕೆಯಾಗಿದೆ. ಚಂದಾದಾರಿಕೆ ಆರಂಭವಾದ ಹತ್ತು ನಿಮಿಷದಲ್ಲೇ ಶೇಕಡ 1ರಷ್ಟು ಚಂದಾದಾರಿಕೆಗೆ ಅರ್ಜಿ ಸಲ್ಲಿಸಲಾಗಿದೆ.

ಬಿಡ್ಡಿಂಗ್ ಆರಂಭವಾದ ಅರ್ಧ ಗಂಟೆಯಲ್ಲೇ ಶೇಕಡ 4ರಷ್ಟು ಮಂದಿ ಚಂದಾದಾರಿಕೆ ಮಾಡಿಕೊಂಡಿದ್ದಾರೆ. ಇನ್ನು ಒಂದು ಗಂಟೆಯಲ್ಲೇ ಶೇಕಡ 12ರಷ್ಟು ಚಂದಾದಾರಿಕೆಗೆ ಅರ್ಜಿಗಳು ಸಲ್ಲಿಕೆಯಾಗಿದೆ. ಎಲ್‌ಐಸಿ ಐಪಿಒ ಮೇ 9 ರಂದು ಮುಕ್ತಾಯಗೊಳ್ಳಲಿದೆ. ಆದರೆ ಮೊದಲ ದಿನದಂದು ನಡೆದ ಚಂದದಾರಿಕೆಯೇ ಮುಂದುವರಿದರೆ ಎರಡನೇ ದಿನವೇ ಚಂದಾದಾರಿಕೆ ಸಂಪೂರ್ಣವಾಗುವ ನಿರೀಕ್ಷೆ ಇದೆ.
ಎಲ್‌ಐಸಿ ಷೇರುಗಳು ಮೇ 17 ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಲಿಸ್ಟ್ ಆಗುವ ಸಾಧ್ಯತೆಯಿದೆ. ನಿಮ್ಮ ಷೇರುಗಳನ್ನು ಮೇ 16 ರೊಳಗೆ ನಿಮ್ಮ ಡಿಮ್ಯಾಟ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ. ನೀವು ಅರ್ಜಿ ಸಲ್ಲಿಸಿದಷ್ಟು ಷೇರು ನಿಮಗೆ ಲಭ್ಯವಾಗದಿದ್ದರೆ ನಿಮ್ಮ ಹಣವನ್ನು ಮೇ 13 ರೊಳಗೆ ಮರುಪಾವತಿಸಲಾಗುತ್ತದೆ.
ಷೇರು ಮಾರಾಟದ ಬಗ್ಗೆ ತಿಳಿಸಲು ಎಲ್ಐಸಿ ತನ್ನ ಪಾಲಿಸಿದಾರರನ್ನು SMS ಮತ್ತು ಇತರ ಮಾಧ್ಯಮದ ಮೂಲಕ ಸಂಪರ್ಕಿಸಿದೆ. ಮುದ್ರಣ ಮತ್ತು ಟಿವಿ ಜಾಹೀರಾತುಗಳು ಸೇರಿದಂತೆ ವಿವಿಧ ಚಾನೆಲ್‌ಗಳ ಮೂಲಕ ಎಲ್‌ಐಸಿ ಹಲವಾರು ತಿಂಗಳುಗಳಿಂದ ಐಪಿಒ ಬಗ್ಗೆ ತಿಳಿಸುತ್ತಿದೆ.


Click it and Unblock the Notifications