ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಅತಿದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಬುಧವಾರ ಪ್ರಾರಂಭ ಮಾಡಿದೆ. ಮೇ 4 ರಂದು ಚಂದಾದಾರಿಕೆ ಆರಂಭವಾಗಲಿದ್ದು, ಮೇ 9ರವರೆಗೆ ಚಂದಾದಾರಿಕೆ ತೆರೆದಿರಲಿದೆ. ಇಂದು (ಮೇ 5) ಎರಡನೇ ದಿನವಾಗಿದ್ದು, ಈವರೆಗೆ ಶೇಕಡ 85ರಷ್ಟು ಬಿಡ್ಡಿಂಗ್ ಆಗಿದೆ.
ಮಧ್ಯಾಹ್ನ 12:18 ರ ಹೊತ್ತಿಗೆ, ಹೂಡಿಕೆದಾರರು 13.17 ಕೋಟಿ ಷೇರುಗಳಿಗೆ ಬಿಡ್ ಮಾಡಿದ್ದಾರೆ. ಆಫರ್‌ನಲ್ಲಿರುವ ಒಟ್ಟು 16.20 ಕೋಟಿ ಷೇರುಗಳಿಗೆ ಹೋಲಿಸಿದರೆ, ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಈಗಾಗಲೇ ಸಂಪೂರ್ಣವಾಗಿ ಚಂದಾದಾರರಾಗಿದ್ದಾರೆ.
ಪಾಲಿಸಿದಾರರು 2.47 ಪಟ್ಟು, ಉದ್ಯೋಗಿಗಳು 1.63 ಪಟ್ಟು, ಚಿಲ್ಲರೆ ಹೂಡಿಕೆದಾರರು 0.75 ಪಟ್ಟು, ಸಾಂಸ್ಥಿಕವಲ್ಲದ ಹೂಡಿಕೆದಾರರು 0.32 ಪಟ್ಟು ಮತ್ತು ಅರ್ಹ ಸಾಂಸ್ಥಿಕ ಖರೀದಿದಾರರು 0.34 ಪಟ್ಟು ಚಂದಾದಾರರಾಗಿದ್ದಾರೆ.

ಎಲ್‌ಐಸಿ ಐಪಿಒ ಪ್ರಮುಖ ಅಪ್‌ಡೇಟ್ಸ್
ಎಲ್‌ಐಸಿ ಐಪಿಒಗಾಗಿ ಒಟ್ಟು ಮೌಲ್ಯವನ್ನು 21,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದು ಇಲ್ಲಿಯವರೆಗೆ ದೇಶದ ಅತಿದೊಡ್ಡ ಐಪಿಒ ಆಗಿದೆ. ಉದ್ಯೋಗಿಗಳಿಗೆ ಸುಮಾರು 15.81 ಲಕ್ಷ ಷೇರುಗಳನ್ನು ಮತ್ತು ಪಾಲಿಸಿದಾರರಿಗೆ ಸುಮಾರು 2.21 ಕೋಟಿ ಷೇರುಗಳನ್ನು ಕಾಯ್ದಿರಿಸಲಾಗಿದ್ದು ಅದು ಸಂಪೂರ್ಣವಾಗಿ ಚಂದಾದಾರಿಕೆಯಾಗಿದೆ.
ಈ ಎಲ್‌ಐಸಿ ಐಪಿಒ ಮೂಲಕ ಕೇಂದ್ರ ಸರ್ಕಾರವು ನಿಗಮದಲ್ಲಿನ ತನ್ನ 3.5 ಪ್ರತಿಶತ ಪಾಲನ್ನು ಮಾರಾಟ ಮಾಡಲಿದೆ. ಪ್ರತಿ ಷೇರಿಗೆ ರೂ 902 - 949 ರ ಬೆಲೆ ಇದ್ದು ಒಟ್ಟು ಸುಮಾರು 21,000 ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
ಭಾರತೀಯ ಮಾರುಕಟ್ಟೆಗಳ ಇತಿಹಾಸದಲ್ಲಿ ಅತಿದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ),ಮೇ 4 ರಂದು ಬಿಡ್ಡಿಂಗ್‌ನ ಮೊದಲ ದಿನದಲ್ಲಿ 67 ಪ್ರತಿಶತದಷ್ಟು ಚಂದಾದಾರಿಕೆಯಾಗಿದೆ. ಮೊದಲ ದಿನವೇ ಷೇರು ಕೊಳ್ಳಲು ಭಾರೀ ಪೈಪೋಟಿ ನಡೆದಿದೆ.
ಸಂಜೆ 6:48 ರ ಹೊತ್ತಿಗೆ, ಎಲ್ಐಸಿಯ ಐಪಿಒ ಹರಾಜಿನ ಮೊದಲ ದಿನದ ಎಂಟು ಗಂಟೆಗಳಲ್ಲಿ ಶೇಕಡಾ 65 ರಷ್ಟು ಚಂದಾದಾರಿಕೆಯಾಗಿದೆ. ಮೊದಲ ದಿನ ಮಧ್ಯಾಹ್ನದವರೆಗೆ ಶೇಕಡ 39 ಷೇರಿಗೆ ಅರ್ಜಿ ಸಲ್ಲಿಕೆಯಾಗಿದೆ. ಚಂದಾದಾರಿಕೆ ಆರಂಭವಾದ ಹತ್ತು ನಿಮಿಷದಲ್ಲೇ ಶೇಕಡ 1ರಷ್ಟು ಚಂದಾದಾರಿಕೆಗೆ ಅರ್ಜಿ ಸಲ್ಲಿಸಲಾಗಿದೆ.
ಬಿಡ್ಡಿಂಗ್ ಆರಂಭವಾದ ಅರ್ಧ ಗಂಟೆಯಲ್ಲೇ ಶೇಕಡ 4ರಷ್ಟು ಮಂದಿ ಚಂದಾದಾರಿಕೆ ಮಾಡಿಕೊಂಡಿದ್ದಾರೆ. ಇನ್ನು ಒಂದು ಗಂಟೆಯಲ್ಲೇ ಶೇಕಡ 12ರಷ್ಟು ಚಂದಾದಾರಿಕೆಗೆ ಅರ್ಜಿಗಳು ಸಲ್ಲಿಕೆಯಾಗಿದೆ. ಎಲ್‌ಐಸಿ ಐಪಿಒ ಮೇ 9 ರಂದು ಮುಕ್ತಾಯಗೊಳ್ಳಲಿದೆ. ಆದರೆ ಮೊದಲ ದಿನದಂದು ನಡೆದ ಚಂದದಾರಿಕೆಯೇ ಮುಂದುವರಿದರೆ ಎರಡನೇ ದಿನವೇ ಚಂದಾದಾರಿಕೆ ಸಂಪೂರ್ಣವಾಗುವ ನಿರೀಕ್ಷೆ ಇದೆ.


Click it and Unblock the Notifications