ಹೂಡಿಕೆ ಎಂಬುವುದು ನಮ್ಮ ಜೀವನದಲ್ಲಿ ಅತೀ ಮುಖ್ಯವಾದ ಪಾತ್ರ ವಹಿಸುತ್ತದೆ. ನಾವಿಂದು ಮಾಡಿದ ಹೂಡಿಕೆಯೇ ಭವಿಷ್ಯಕ್ಕೆ ಸಹಕಾರಿ. ನಾವು ಯಾವುದೇ ಹೂಡಿಕೆ ಮಾಡದೆ, ಹಣ ಉಳಿತಾಯ ಮಾಡದೆ ದಿನದೂಡುತ್ತಾ ಹೋದರೆ ಭವಿಷ್ಯ ಕಷ್ಟ. ಹಾಗಿರುವಾಗ ನಮಗೆ 296ರೂಪಾಯಿ ಹೂಡಿಕೆ ಮಾಡಿ 60 ಲಕ್ಷ ಪಡೆಯುವ ಅವಕಾಶವನ್ನು ಎಲ್‌ಐಸಿ ಯೋಜನೆ ನೀಡುತ್ತದೆ.
ದೇಶದ ಅತಿ ದೊಡ್ಡ ಸರ್ಕಾರಿ ವಿಮಾ ಕಂಪನಿಯಾದ ಎಲ್‌ಐಸಿ ಹಲವು ಯೋಜನೆಗಳನ್ನು ನೀಡುತ್ತದೆ. ಈ ಯೋಜನೆಗಳು ಜನರಿಗೆ ವಿಮೆಯ ಜೊತೆಗೆ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತದೆ. ಅಂತಹ ಒಂದು ಯೋಜನೆಯು ಎಲ್‌ಐಸಿಯ ಜೀವನ ಲಾಭ ಯೋಜನೆ ಆಗಿದೆ. ಈ ಯೋಜನೆಯಲ್ಲಿ ಸರಿಯಾಗಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ವೇಳೆ ಅಧಿಕ ಮೊತ್ತವನ್ನು ಪಡೆಯಬಹುದಾಗಿದೆ. ಇಲ್ಲಿದೆ ವಿವರ ಮುಂದೆ ಓದಿ...

ಎಲ್ಐಸಿ ಜೀವನ ಲಾಭ ಪ್ರಯೋಜನಗಳು
ಎಲ್‌ಐಸಿ ಜೀವನ ಲಾಭ ಒಂದು ನಾನ್-ಲಿಂಕ್ಡ್, ವೈಯಕ್ತಿಕ ಜೀವ ವಿಮಾ ಯೋಜನೆಯಾಗಿದೆ. ಇದರಲ್ಲಿ, ವಿಮಾದಾರರಿಗೆ ಜೀವ ರಕ್ಷಣೆಯ ಜೊತೆಗೆ ಉಳಿತಾಯ ಮಾಡುವ ಅವಕಾಶವೂ ಸಿಗುತ್ತದೆ. ಈ ಯೋಜನೆಯ ಪ್ರಯೋಜನವೆಂದರೆ ಇದು ಮೆಚ್ಯೂರಿಟಿಯ ಮೇಲೆ ಒಟ್ಟು ಮೊತ್ತವನ್ನು ನೀಡುತ್ತದೆ. ಅದೇ ಸಮಯದಲ್ಲಿ, ವಿಮಾ ಅವಧಿಯ ಸಮಯದಲ್ಲಿ ವಿಮಾದಾರನು ಮರಣಹೊಂದಿದರೆ, ನಂತರ ವಿಮಾ ಮೊತ್ತವನ್ನು ಕುಟುಂಬ ಸದಸ್ಯರು ಅಥವಾ ಅವಲಂಬಿತರಿಗೆ ಎಲ್ಐಸಿ ಮೂಲಕ ನೀಡಲಾಗುತ್ತದೆ.
ಮರಣ ಮತ್ತು ಮೆಚ್ಯೂರಿಟಿ ಪ್ರಯೋಜನಗಳು
ಎಲ್‌ಐಸಿಯ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಪಾಲಿಸಿದಾರರ ಮರಣದ ಸಂದರ್ಭದಲ್ಲಿ ಡೆತ್ ಬೆನಿಫಿಟ್ ಅನ್ನು ನೀಡಲಾಗುತ್ತದೆ. ಇದು ವಿಮಾ ಮೊತ್ತದ 7 ಪಟ್ಟು ಅಥವಾ ಪಾವತಿಸಿದ ವಾರ್ಷಿಕ ಪ್ರೀಮಿಯಂ ಮೊತ್ತದಲ್ಲಿ ಯಾವುದು ಹೆಚ್ಚೋ ಅದು ಆಗುತ್ತದೆ. ಡೆತ್ ಬೆನಿಫಿಟ್ ಅನ್ನು ಪಾಲಿಸಿದಾರನ ಮರಣದವರೆಗೆ ಪಾವತಿಸಿದ ಪ್ರೀಮಿಯಂಗಳ ಶೇಕಡ 105 ಕ್ಕಿಂತ ಕಡಿಮೆಯಿರಬಾರದು.
ಇದು ಮಧ್ಯಂತರ ಬೋನಸ್ ಮತ್ತು ಅಂತಿಮ ಹೆಚ್ಚುವರಿ ಬೋನಸ್ ಅನ್ನು ಸಹ ಒಳಗೊಂಡಿದೆ. ಈ ಪಾಲಿಸಿಯಲ್ಲಿ ಮೆಚ್ಯೂರಿಟಿ ಪ್ರಯೋಜನವೂ ಲಭ್ಯವಿದೆ. ಮೆಚ್ಯೂರಿಟಿ ನಂತರ ವಿಮಾ ಮೊತ್ತದ ಜೊತೆಗೆ, ಮಧ್ಯಂತರ ಬೋನಸ್ ಮತ್ತು ಅಂತಿಮ ಹೆಚ್ಚುವರಿ ಬೋನಸ್ ಅನ್ನು ಸಹ ಪಾಲಿಸಿದಾರರಿಗೆ ಪಾವತಿಸಲಾಗುತ್ತದೆ.
ಮೆಚ್ಯೂರಿಟಿಯಲ್ಲಿ 60 ಲಕ್ಷ ಹೇಗೆ ಪಡೆಯುವುದು?
ಒಬ್ಬ ವ್ಯಕ್ತಿಯು 25 ವರ್ಷಗಳ ವಯಸ್ಸಿನಲ್ಲಿ 25 ವರ್ಷಗಳವರೆಗೆ ಎಲ್‌ಐಸಿ ಜೀವನ್ ಲಾಭ್ ಪ್ರಯೋಜನವನ್ನು ಖರೀದಿ ಮಾಡಿದರೆ, ಪ್ರತಿದಿನ 296 ರೂಪಾಯಿ ಅಥವಾ ಮಾಸಿಕವಾಗಿ 8,893 ರೂಪಾಯಿ ಅಥವಾ ವಾರ್ಷಿಕ 1,04,497 ಡೆಪಾಸಿಟ್ ಮಾಡಬೇಕಾಗುತ್ತದೆ. ಇದರ ನಂತರ, ಮೆಚ್ಯೂರಿಟಿಯ ಬಳಿಕ ವಿಮಾದಾರರು ಸುಮಾರು 60 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಇದರಲ್ಲೇ ಮಧ್ಯಂತರ ಬೋನಸ್ ಮತ್ತು ಅಂತಿಮ ಹೆಚ್ಚುವರಿ ಬೋನಸ್ ಸೇರಿರುತ್ತದೆ.


Click it and Unblock the Notifications