ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಲವಾರು ಯೋಜನೆಗಳನ್ನು ಹೊಂದಿದೆ. ಎಲ್‌ಐಸಿಯಲ್ಲಿ ವಿಮಾ ಯೋಜನೆಗಳು ಸೇರಿದಂತೆ ಹಲವಾರು ಉಳಿತಾಯ ಯೋಜನೆಗಳು ಕೂಡಾ ಇದೆ. ಬೇರೆ ಬೇರೆ ವಯೋಮಿತಿಯವರಿಗೆ ಅನುಗುಣವಾಗಿ, ಗ್ರಾಹಕರಿಗೆ ಬೇಕಾದಂತಹ ಯೋಜನೆಗಳನ್ನು ಎಲ್‌ಐಸಿಯು ಹೊಂದಿದೆ.
ಇವುಗಳಲ್ಲಿ ಎಲ್‌ಐಸಿ ಜೀವನ್ ಲಾಭ್ ಯೋಜನೆ (ಟೇಬಲ್ -936) ವಿಮಾ ರಕ್ಷಣೆಯನ್ನು ಹೊಂದಿದೆ. ಹಾಗೆಯೇ ಉಳಿತಾಯದ ಅನುಕೂಲವನ್ನು ಕೂಡಾ ಈ ಯೋಜನೆಯನ್ನು ಹೊಂದಿದೆ. ಅಂದರೆ ಈ ಯೋಜನೆಯ ಮೂಲಕ ನೀವು ಹಣವನ್ನು ಉಳಿತಾಯ ಮಾಡಲು ಕೂಡಾ ಸಾಧ್ಯವಾಗಲಿದೆ.

ನೀವು ಎಲ್‌ಐಸಿಯ ಜೀವನ್ ಲಾಭ್ ಯೋಜನೆಯಲ್ಲಿ ಮಾಸಿಕವಾಗಿ 7,960 ರೂಪಾಯಿ ಅಥವಾ ದಿನಕ್ಕೆ 265 ರೂಪಾಯಿ ಹೂಡಿಕೆ ಮಾಡುವ ಮೂಲಕ ಮೆಚ್ಯೂರಿಟಿ ವೇಳೆಗೆ 54 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಯ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಎಲ್‌ಐಸಿ ಜೀವನ್ ಲಾಭ್ ಯೋಜನೆ
ಎಲ್‌ಐಸಿ ಜೀವನ್ ಲಾಭ್ ಯೋಜನೆಯು ನಿಮಗೆ ಜೀವ ವಿಮೆಯ ಜೊತೆಗೆ ಹಣವನ್ನು ಉಳಿತಾಯ ಮಾಡುವ ಅವಕಾಶವನ್ನು ನೀಡುವುದು ಮಾತ್ರವಲ್ಲದೆ, ನಿಮ್ಮ ಕುಟುಂಬಕ್ಕೂ ಸುರಕ್ಷತೆಯನ್ನು ಒದಗಿಸುತ್ತದೆ. ಅಂದರೆ ಪಾಲಿಸಿದಾರರು ಸಾವನ್ನಪ್ಪಿದರೆ ಕುಟುಂಬಕ್ಕೆ ಡೆತ್ ಬೆನಿಫಿಟ್ ಅನ್ನು ಎಲ್‌ಐಸಿ ಜೀವನ್ ಲಾಭ್ ಯೋಜನೆಯು ನೀಡುತ್ತದೆ.
ಇನ್ನು ಪಾಲಿಸಿದಾರರು ಮೆಚ್ಯೂರಿಟಿ ಅವಧಿಯವರೆಗೆ ಬದುಕಿದ್ದರೆ, ಮೆಚ್ಯೂರಿಟಿಯಾಗಿ ಅಧಿಕ ಪ್ರಮಾಣದ ಮೊತ್ತವು ನಿಮಗೆ ಲಭ್ಯವಾಗುತ್ತದೆ. ಇನ್ನು ಈ ಯೋಜನೆಯಲ್ಲಿ ನೀವು ಎಷ್ಟು ಮೊತ್ತವನ್ನು ಹೂಡಿಕೆ ಮಾಡಬಹುದು ಎಂಬುವುದನ್ನು ನೀವೇ ನಿರ್ಧಾರ ಮಾಡಬಹುದು. ಹಾಗೆಯೇ ವಿಮಾ ಪಾಲಿಸಿಯ ಅವಧಿಯನ್ನು ಕೂಡಾ ನೀವೇ ಆಯ್ಕೆ ಮಾಡಬಹುದು.
ಉದಾಹರಣೆಯೊಂದಿಗೆ ಇಲ್ಲಿದೆ ವಿವರ
18 ವರ್ಷದಿಂದ 59 ವರ್ಷದವರೆಗಿನ ಜನರು ಈ ಎಲ್‌ಐಸಿ ಜೀವನ್ ಲಾಭ್ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿದ್ದಾರೆ. ಉದಾಹರಣೆಯೊಂದಿಗೆ ಇಲ್ಲಿ ವಿವರಣೆಯನ್ನು ನಾವು ನೀಡಿದ್ದೇವೆ. 25ನೇ ವಯಸ್ಸಿನಲ್ಲಿ ಈ ಯೋಜನೆಗೆ ನೀವು ಹೂಡಿಕೆ ಮಾಡಲು ಆರಂಭ ಮಾಡಿದರೆ, ವಿಮಾ ಮೊತ್ತವು 20 ಲಕ್ಷ ರೂಪಾಯಿ ಆಗಿರುತ್ತದೆ.
ಒಟ್ಟಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು 54 ಲಕ್ಷ ರೂಪಾಯಿಯನ್ನು ಮೆಚ್ಯೂರಿಟಿ ವೇಳೆ ಪಡೆಯಲು ಸಾಧ್ಯವಾಗುತ್ತದೆ. ನೀವು ಮೆಚ್ಯೂರಿಟಿ ವೇಳೆ ಇಷ್ಟೊಂದು ಪ್ರಮಾಣದ ಮೊತ್ತವನ್ನು ಪಡೆಯಬೇಕಾದರೆ 16 ವರ್ಷಗಳವರೆಗೆ ಪ್ರೀಮಿಯಂಗಳನ್ನು ಪಾವತಿ ಮಾಡಬೇಕಾಗುತ್ತದೆ. ಆದರೆ ಪಾಲಿಸಿಯ ಮೆಚ್ಯೂರಿಟಿ ಅವಧಿಯು 25 ವರ್ಷ ಆಗಿರುತ್ತದೆ.
ಎಲ್‌ಐಸಿ ಜೀವನ್ ಲಾಭ್ ಯೋಜನೆಗೆ ನೀವು ಮಾಸಿಕವಾಗಿ 7,960 ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಜಿಎಸ್‌ಟಿ ಸೇರ್ಪಡೆಯಾದಂತೆ ಪ್ರತಿ ದಿನ 265 ರೂಪಾಯಿವರೆಗೆ ನೀವು ಹೂಡಿಕೆ ಮಾಡಿದಂತೆ ಆಗುತ್ತದೆ. 25 ವರ್ಷಗಳ ಕಾಲ ನೀವು ಹೂಡಿಕೆ ಮಾಡಿದರೆ, ಒಟ್ಟಾಗಿ 14,67,118 ರೂಪಾಯಿ ನೀವು ಪ್ರೀಮಿಯಂ ಪಾವತಿ ಮಾಡಿದಂತೆ ಆಗುತ್ತದೆ.
ಅದಕ್ಕೆ ಹೆಚ್ಚುವರಿಯಾಗಿ ಮೊತ್ತ ಸೇರ್ಪಡೆಯಾಗಿ ಮೆಚ್ಯೂರಿಟಿ ವೇಳೆಗೆ ನಿಮಗೆ 54 ಲಕ್ಷ ರೂಪಾಯಿ ಲಭ್ಯವಾಗುತ್ತದೆ. ಅಂತಿಮವಾಗಿ ಬೋನಸ್ ರೂಪದಲ್ಲಿ 9 ಲಕ್ಷ ರೂಪಾಯಿ ಲಭ್ಯವಾಗುತ್ತದೆ. ಪಾಲಿಸಿಯ ಮೂಲಕ ವಿಮಾದಾರರು 10, 15, ಅಥವಾ 16 ವರ್ಷಗಳ ಅವಧಿಯ ಪ್ರೀಮಿಯಂ ಅನ್ನು ಆಯ್ಕೆ ಮಾಡಿಕೊಳ್ಳಬಹುದು. 16, 21, ಅಥವಾ 25 ವರ್ಷಗಳ ನಂತರ ಪಾಲಿಸಿ ಅವಧಿಯು ಪೂರ್ಣಗೊಂಡ ನಂತರ, ಒಟ್ಟು ಮೊತ್ತವು ನಿಮಗೆ ಲಭ್ಯವಾಗುತ್ತದೆ.
ವಿಮಾದಾರರು ಸಾವನ್ನಪ್ಪಿದರೆ ನಾಮಿನಿದಾದರರಿಗೆ ವಿಮಾ ಮೊತ್ತ ಹಾಗೂ ಬೋನಸ್ ಲಭ್ಯವಾಗುತ್ತದೆ. ಪಾಲಿಸಿದಾರರ ಮರಣದ ನಂತರ ವಿಮಾ ಮೊತ್ತವು ವಾಪಾಸ್ ಲಭ್ಯವಾಗುತ್ತದೆ. ಪಾಲಿಸಿ ಮೊತ್ತ ಮತ್ತು ಪ್ರೀಮಿಯಂ ಲಭ್ಯವಾಗುತ್ತದೆ.


Click it and Unblock the Notifications