ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಜೀವನ ಕಿರಣ ಎಂಬ ಹೊಸ ಜೀವ ವಿಮಾ ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯು ನಾನ್‌ಲಿಂಕ್ಡ್ ಮತ್ತು ನಾನ್‌ಪಾರ್ಟಿಸಿಪೇಟಿಂಗ್ ಆಗಿದೆ. ಅಂದರೆ ಷೇರು ಮಾರುಕಟ್ಟೆಯ ಲಾಭವನ್ನು ಹಂಚಿಕೆ ಮಾಡದ ಯೋಜನೆಯಾಗಿದೆ. ಯೋಜನೆಯು ಪ್ರೀಮಿಯಂ ಅನ್ನು ನಾವು ವಾಪಸ್ ಪಡೆಯಬಹುದು, ಜೀವ ರಕ್ಷಣೆಯನ್ನು ಪಡೆಯಬಹುದು. ಅಂದರೆ ಪಾಲಿಸಿದಾರರು ಪಾಲಿಸಿ ಅವಧಿಯ ಅಂತ್ಯದವರೆಗೆ ಬದುಕಿದ್ದರೆ, ತಮ್ಮ ಎಲ್ಲಾ ಪ್ರೀಮಿಯಂ ವಾಪಾಸ್ ಪಡೆಯಬಹುದು.
ಈ ಯೋಜನೆಯು 18 ರಿಂದ 65 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಭ್ಯವಿದೆ. ಕನಿಷ್ಠ 15 ಲಕ್ಷ ರೂಪಾಯಿ ವಿಮಾ ಮೊತ್ತವನ್ನು ಹೊಂದಿರುವ ಯೋಜನೆ ಇದಾಗಿದೆ. ಪಾಲಿಸಿ ಅವಧಿಯು 10 ರಿಂದ 40 ವರ್ಷಗಳವರೆಗೆ ಇರುತ್ತದೆ. ಪ್ರೀಮಿಯಂಗಳನ್ನು ಒಂದು ಬಾರಿಗೆ ಅಥವಾ ನಿಯಮಿತ ಕಂತುಗಳಲ್ಲಿ ಪಾವತಿ ಮಾಡಬಹುದಾಗಿದೆ. ಎಲ್‌ಐಸಿಯ ಜೀವನ ಕಿರಣ ಯೋಜನೆಯ ವಿಶಿಷ್ಟ ಗುರುತಿನ ಸಂಖ್ಯೆ (UIN) 512N353V01 ಆಗಿದೆ. ಯೋಜನೆಯನ್ನು ಜುಲೈ 27, 2023 ರಂದು ಪ್ರಾರಂಭಿಸಲಾಗಿದೆ. ಯೋಜನೆಯ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ...

ಜೀವನ ಕಿರಣ: ಪ್ರಮುಖ ಫೀಚರ್‌ಗಳು
* ಪ್ರೀಮಿಯಂ ಅನ್ನು ಪಾವತಿ ಮರುಪಾವತಿ ಮಾಡಲಾಗುತ್ತದೆ.
* ಕಡಿಮೆ ವೆಚ್ಚದಲ್ಲಿ ಅಧಿಕ ಅವಧಿಯ ಜೀವ ರಕ್ಷಣೆ
* 18 ರಿಂದ 65 ವರ್ಷ ವಯಸ್ಸಿನ ಯುವಕರಿಗೆ ಲಭ್ಯ
* ಕನಿಷ್ಠ ಮೊತ್ತ 15 ಲಕ್ಷ ರೂಪಾಯಿ ಆಗಿದೆ.
* 10 ರಿಂದ 40 ವರ್ಷಗಳ ಪಾಲಿಸಿ ಅವಧಿ
* ಧೂಮಪಾನಿಗಳಲ್ಲದವರಿಗೆ ಮತ್ತು ಧೂಮಪಾನಿಗಳಿಗೆ ವಿಭಿನ್ನ ಪ್ರೀಮಿಯಂ ದರಗಳು
* ಏಕ ಅಥವಾ ಸಾಮಾನ್ಯ ಪ್ರೀಮಿಯಂ ಪಾವತಿ ಆಯ್ಕೆಗಳು
* 50 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಿಮಾ ಮೊತ್ತಕ್ಕೆ ರಿಯಾಯಿತಿಗಳು ಲಭ್ಯವಿದೆ
* ನಿಯಮಿತ ಪ್ರೀಮಿಯಂ ಪಾಲಿಸಿಗಳಿಗೆ 3000 ರೂಪಾಯಿ ಮತ್ತು ಸಿಂಗಲ್ ಪ್ರೀಮಿಯಂ ಪಾಲಿಸಿಗಳಿಗೆ 30000 ರೂಪಾಯಿ ಕನಿಷ್ಠ ಕಂತಿನ ಪ್ರೀಮಿಯಂ ಮೊತ್ತವಾಗಿದೆ.
ಜೀವನ ಕಿರಣ: ಅರ್ಹತೆಯ ಅವಶ್ಯಕತೆಗಳು
* ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು.
* ಗರಿಷ್ಠ 65 ವರ್ಷ ವಯಸ್ಸಿನವರಾಗಿರಬೇಕು.
* 28 ವರ್ಷಗಳು ಮೆಚ್ಯೂರಿಟಿಗೆ ಕನಿಷ್ಠ ವಯಸ್ಸಾಗಿದೆ.
* ಮೆಚ್ಯೂರಿಟಿಯ ಗರಿಷ್ಠ ವಯಸ್ಸು 80 ವರ್ಷಗಳು ಆಗಿದೆ.
* ಪಾಲಿಸಿ ಅವಧಿ: 10 ರಿಂದ 40 ವರ್ಷಗಳು ಆಗಿದೆ.
ಆಪ್‌ಕ್ಷನಲ್ ರೈಡರ್ ಲಭ್ಯ
ಎಲ್‌ಐಸಿಯ ಜೀವನ ಕಿರಣ ಯೋಜನೆಯಲ್ಲಿ ಎರಡು ಆಪ್‌ಕ್ಷನಲ್ ರೈಡರ್‌ಗಳು ಲಭ್ಯವಿದೆ. ಅಪಘಾತದ ಸಾವು ಮತ್ತು ಅಂಗವೈಕಲ್ಯ ಪ್ರಯೋಜನ ರೈಡರ್, ಅಪಘಾತ ಪ್ರಯೋಜನದ ರೈಡರ್ ಎಂಬ ಎರಡು ಆಯ್ಕೆಗಳಿದೆ. ಎರಡೂ ರೈಡರ್‌ಗಳನ್ನು ಪ್ರಾರಂಭದಲ್ಲಿ ಯೋಜನೆಗೆ ಸೇರಿಸಬಹುದು. ಆದರೆ ಏಕ ಪ್ರೀಮಿಯಂ ಪಾಲಿಸಿಗಳೊಂದಿಗೆ ಅಪಘಾತ ಪ್ರಯೋಜನ ರೈಡರ್ ಲಭ್ಯವಿರುವುದಿಲ್ಲ. ಅಪಘಾತದಿಂದ ಸಾವಾದಾಗ ಮತ್ತು ಅಂಗವೈಕಲ್ಯವಾದಾಗ ಹೆಚ್ಚುವರಿ ಕವರೇಜ್ ಲಭ್ಯವಿರುತ್ತದೆ. ಅಪಘಾತ ಪ್ರಯೋಜನದ ರೈಡರ್ ಆಕಸ್ಮಿಕ ಮರಣದ ಸಂದರ್ಭದಲ್ಲಿ ಒಂದು ಅಧಿಕ ಮೊತ್ತವನ್ನು ಪಾವತಿಸಲಾಗುತ್ತದೆ.
ಎಲ್‌ಐಸಿಯ ಬಗ್ಗೆ ಮಾಹಿತಿ
ಭಾರತೀಯ ಜೀವ ವಿಮಾ ನಿಗಮವನ್ನು ಎಲ್‌ಐಸಿ ಎಂದು ಕರೆಯಲಾಗುತ್ತದೆ. ಲೈಫ್ ಇನ್ಶುರೆನ್ಸ್ ಆಫ್ ಇಂಡಿಯಾ ಆಕ್ಟ್ ಅನ್ನು ಜೂನ್ 1956 ರಲ್ಲಿ ಭಾರತದ ಸಂಸತ್ತು ಅನುಮೋದಿಸಿದ ನಂತರ, ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್ ಘಟಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಜುಲೈ 1956 ರಿಂದ, ಎಲ್ಐಸಿ ಪಾಲಿಸಿ ಜಾರಿಯಲ್ಲಿದೆ.
ಇದು ಭಾರತದ ಖಾಸಗಿ ವಿಮಾ ವಲಯದ ರಾಷ್ಟ್ರೀಕರಣಕ್ಕೆ ನೆರವಾಯಿತು. ಭಾರತದ ಎಲ್ಐಸಿಯನ್ನು ರಚಿಸಲು, 154 ಜೀವ ವಿಮಾ ಸಂಸ್ಥೆಗಳು, 16 ವಿದೇಶಿ ಕಂಪನಿಗಳು ಮತ್ತು 75 ಭವಿಷ್ಯನಿಧಿ ಕಂಪನಿಗಳನ್ನು ಒಟ್ಟು ಸೇರಿಸಲಾಗಿದೆ. ಇದು ಭಾರತದ ದೊಡ್ಡ ಹಣಕಾಸು ಸಂಸ್ಥೆಗಳಲ್ಲಿ ಒಂದಾಗಿದೆ. 2,529,390 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯಾಗಿದೆ. ಎಲ್ಐಸಿಯ ಕಾರ್ಪೊರೇಟ್ ಕಚೇರಿಯು ಮುಂಬೈ, ಮಹಾರಾಷ್ಟ್ರದಲ್ಲಿದೆ.


Click it and Unblock the Notifications