ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹೊಸ ಯೋಜನೆಯನ್ನು ಜಾರಿ ಮಾಡಿದೆ. ಗ್ರೂಪ್ ಪೋಸ್ಟ್ ರಿಟೈರ್ಮೆಂಟ್ ಮೆಡಿಕಲ್ ಬೆನಿಫಿಟ್ ಸ್ಕೀಮ್ ಅನ್ನು ಎಲ್‌ಐಸಿ ಘೋಷಣೆ ಮಾಡಿದೆ. ಎಲ್‌ಐಸಿಯ ಈ ಹೊಸ ಯೋಜನೆಯು ಮೇ 2, 2023ರಂದು ಜಾರಿಗೆ ಬರಲಿದೆ. ಈ ಯೋಜನೆಯು ಯಾವುದೇ ಸಂಸ್ಥೆಯಲ್ಲಿ 50 ಅಥವಾ ಅದಕ್ಕಿಂತ ಉದ್ಯೋಗಿಗಳು ಇದ್ದಾರೋ ಅಲ್ಲಿ ಅನ್ವಯವಾಗಲಿದೆ.
ಎಲ್‌ಐಸಿಯ ಗ್ರೂಪ್ ಪೋಸ್ಟ್ ರಿಟೈರ್ಮೆಂಟ್ ಮೆಡಿಕಲ್ ಬೆನಿಫಿಟ್ ಸ್ಕೀಮ್ ನಾನ್ ಲಿಂಕ್ಡ್, ನಾನ್ ಪಾರ್ಟಿಸಿಪೇಟಿಂಗ್, ಜೀವ, ಗುಂಪು ಉಳಿತಾಯ ವಿಮಾ ಯೋಜನೆ ಇದಾಗಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಪ್ರಕಾರ ಉದ್ಯೋಗಿಗಳಿಗೆ ನಿವೃತ್ತಿಯ ನಂತರದ ವೈದ್ಯಕೀಯ ಪ್ರಯೋಜನಕ್ಕೆ ಈ ಯೋಜನೆಯು ಸಹಾಯ ಮಾಡುತ್ತದೆ. ಈ ಯೋಜನೆಯ ಬಗ್ಗೆ ಅಧಿಕ ಮಾಹಿತಿ ಈ ಕೆಳಗಿದೆ...

ಎಲ್‌ಐಸಿ ಹೊಸ ಯೋಜನೆ ಬಗ್ಗೆ ಮಾಹಿತಿ
ಎಲ್‌ಐಸಿಯ ಗ್ರೂಪ್ ಪೋಸ್ಟ್ ರಿಟೈರ್ಮೆಂಟ್ ಮೆಡಿಕಲ್ ಬೆನಿಫಿಟ್ ಸ್ಕೀಮ್ ನಿಗದಿತ ಜೀವ ವಿಮಾ ಪ್ರಯೋಜನವನ್ನು ಪ್ರತಿ ಸದಸ್ಯರಿಗೆ ನೀಡುತ್ತದೆ. ತಮ್ಮ ಉದ್ಯೋಗಿಗಳ ಪ್ರಯೋಜನಕ್ಕಾಗಿ ಹಣವನ್ನು ನೀಡಲು ಸಿದ್ಧರಿರುವ ಯಾವುದೇ ಸಂಸ್ಥೆಗಳು ಈ ಯೋಜನೆಯನ್ನು ಅಳವಡಿಸಿಕೊಳ್ಳಬಹುದಾಗಿದೆ. ಎಲ್‌ಐಸಿಯ ಈ ಯೋಜನೆಯು ಹನ್ನೊಂದನೇ ಗ್ರೂಪ್ ಸ್ಕೀಮ್ ಆಗಿದೆ. ಒಂದು ಗ್ರೂಪ್ ಆಕ್ಸಿಡೆಂಟ್ ಬೆನಿಫಿಟ್ ರೈಡರ್ ಇದೆ.
"ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಲಿಸ್ಟಿಂಗ್ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯತೆಗಳು) ನಿಯಮಗಳು, 2015 ರ ನಿಯಮಾವಳಿ 30 ರ ಅನುಸಾರವಾಗಿ, ಭಾರತೀಯ ಜೀವ ವಿಮಾ ನಿಗಮ ತನ್ನ ಹೊಸ ಯೋಜನೆಯನ್ನು ಮೇ 2, 2023ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ ಎಂದಯ ನಿಮಗೆ ತಿಳಿಸಲಾಗುತ್ತದೆ," ಎಂದು ಎಲ್‌ಐಸಿ ರೆಗ್ಯೂಲೇಟರ್ ಫೈಲಿಂಗ್‌ನಲ್ಲಿ ಹೇಳಿದೆ.
ಎಲ್‌ಐಸಿಯ ಪ್ರಮುಖ ಯೋಜನೆಗಳಿವು
* ಎಲ್‌ಐಸಿ ಭಿಮಾ ಜ್ಯೋತಿ
* ಎಲ್‌ಐಸಿ ಭಿಮಾ ರತ್ನ
* ಎಲ್‌ಐಸಿ ಧನ ಸಂಚಯ್
* ಎಲ್‌ಐಸಿ ಧನ್ ವರ್ಷ
* ಎಲ್‌ಐಸಿ ಜೀವನ್ ಅಜಾದ್
* ಎಲ್‌ಐಸಿ ನ್ಯೂ ಎಂಡೋಮೆಂಟ್ ಪ್ಲ್ಯಾನ್
* ಎಲ್‌ಐಸಿ ನ್ಯೂ ಜೀವನ್ ಅಜಾದ್
* ಎಲ್‌ಐಸಿ ಸಿಂಗಲ್ ಪ್ರೀಮಿಯಂ ಎಂಡೋಮೆಂಟ್ ಪ್ಲ್ಯಾನ್
* ಎಲ್‌ಐಸಿ ಜೀವನ್ ಲಕ್ಷ್ಯ
* ಎಲ್‌ಐಸಿ ಜೀವನ್ ಲಾಭ್
* ಎಲ್‌ಐಸಿ ಆಧಾರ್ ಸ್ಟಾಂಬ್
* ಎಲ್‌ಐಸಿ ಆಧಾರ್ ಶಿಲಾ
* ಎಲ್‌ಐಸಿ ಧನ ರೇಖಾ
* ಎಲ್‌ಐಸಿ ನ್ಯೂ ಭಿಮಾ ಬಚತ್
* ಎಲ್‌ಐಸಿ ನ್ಯೂ ಮನಿ ಬ್ಯಾಕ್ ಪ್ಲ್ಯಾನ್
* ಎಲ್‌ಐಸಿ ಜೀವನ್ ಉಮಾಂಗ್
* ಎಲ್‌ಐಸಿ ಜೀವನ್ ತರುಣ್
* ಎಲ್‌ಐಸಿ ನ್ಯೂ ಚಿಲ್ಡ್ರನ್ಸ್ ಮನಿ ಬ್ಯಾಕ್ ಪ್ಲ್ಯಾನ್
* ಎಲ್‌ಐಸಿ ಜೀವನ್ ಶಿರೋಮಣಿ
* ಎಲ್‌ಐಸಿ ಭಿಮಾ ಶ್ರೀ
* ಎಲ್‌ಐಸಿ ಜೀವನ್ ಅಕ್ಷಯ್
* ಎಲ್‌ಐಸಿ ನ್ಯೂ ಜೀವನ್ ಶಾಂತಿ
* ಎಲ್‌ಐಸಿ ಸರಳ್ ಪಿಂಚಣಿ
* ಪ್ರಧಾನ ಮಂತ್ರಿ ವಯ ವಂದನ ಯೋಜನೆ
* ಎಲ್‌ಐಸಿ ನಿವೇಶ ಪ್ಲಸ್
* ಎಲ್‌ಐಸಿ ನ್ಯೂ ಪೆನ್ಶಣ್ ಪ್ಲಸ್


Click it and Unblock the Notifications