ಪ್ರತಿ ತಿಂಗಳು ಬ್ಯಾಂಕ್‌ಗಳು ಎಫ್‌ಡಿ ಅಥವಾ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವನ್ನು ಪರಿಷ್ಕರಣೆ ಮಾಡುತ್ತಾ ಬರುತ್ತಿದೆ. ಆರ್‌ಬಿಐ ರೆಪೋ ದರ ಏರಿಕೆಯನ್ನು ಮಾಡದೆ ಸ್ಥಿರವಾಗಿರಿಸಿದ್ದರೂ ಕೂಡಾ ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರ ಪರಿಷ್ಕರಣೆ ಮಾಡುತ್ತಾ ಸಾಗುತ್ತಿದೆ.
ನವೆಂಬರ್ 2023 ರಲ್ಲಿ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಬ್ಯಾಂಕ್ ಬಡ್ಡಿದರ ಪರಿಷ್ಕರಣೆ ಮಾಡಿದೆ. ನವೆಂಬರ್ ತಿಂಗಳಿನಲ್ಲಿ ಯಾವೆಲ್ಲ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರವನ್ನು ಪರಿಷ್ಕರಿಸಿದೆ ಎಂಬ ವಿವರ ಇಲ್ಲಿ ನೀಡಲಾಗಿದೆ. ಮುಂದೆ ಓದಿ...

ಎಫ್‌ಡಿ ಬಡ್ಡಿದರ ಪರಿಷ್ಕರಿಸಿದ ಬ್ಯಾಂಕ್‌ಗಳು
ಪಂಜಾಬ್ ನ್ಯಾಷನಲ್ ಬ್ಯಾಂಕ್: 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಡೆಪಾಸಿಟ್‌ಗಳ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ನವೆಂಬರ್ 1 ರಂದು ಬಡ್ಡಿದರ ಪರಿಷ್ಕರಣೆ ಮಾಡಿದೆ. ಬ್ಯಾಂಕ್ ಈಗ 444 ದಿನಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7.25 ಬಡ್ಡಿದರ ನೀಡಲಾಗುತ್ತದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್: ನವೆಂಬರ್ 15 ರಿಂದ ಜಾರಿಗೆ ಬರುವಂತೆ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ತನ್ನ ಎಫ್‌ಡಿ ಬಡ್ಡಿದರವನ್ನು ಪರಿಷ್ಕರಿಸಿದೆ. 444 ದಿನಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7.10 ಆದಾಯವನ್ನು ನೀಡಲಾಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಈ ಬ್ಯಾಂಕ್ ಶೇಕಡ 7.60 ಬಡ್ಡಿದರ ನೀಡುತ್ತದೆ.
ಕೆನರಾ ಬ್ಯಾಂಕ್: ನವೆಂಬರ್ 16 ರಂದು ಕೆನರಾ ಬ್ಯಾಂಕ್ ಎಫ್‌ಡಿ ಬಡ್ಡಿದರ ಜಾರಿಗೆ ತಂದಿದೆ. ಪರಿಷ್ಕರಣೆಯ ನಂತರ, ಹಿರಿಯ ನಾಗರಿಕರು ಶೇಕಡ 7.25 ವರೆಗೆ ಗಳಿಸಬಹುದಾಗಿದೆ. ಹಿರಿಯ ನಾಗರಿಕರು 444 ದಿನಗಳ ಅವಧಿಗೆ ಶೇಕಡ 7.75 ಬಡ್ಡಿದರ ನೀಡುತ್ತದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ: 2 ಕೋಟಿ ರೂಪಾಯಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಆಫ್ ಮಹಾರಾಷ್ಟ್ರ ನವೆಂಬರ್ 14 ರಂದು ಬಡ್ಡಿದರಗಳನ್ನು ಪರಿಷ್ಕರಿಸಿದೆ. 1 ವರ್ಷದ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಈಗ ಗರಿಷ್ಠ ಶೇಕಡ 6.50 ಲಾಭವನ್ನು ನೀಡುತ್ತಿದೆ.
ಬ್ಯಾಂಕ್ ಆಫ್ ಇಂಡಿಯಾ: ನವೆಂಬರ್ 1, 2023 ರಂದು, ಬ್ಯಾಂಕ್ ಆಫ್ ಇಂಡಿಯಾ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಬಡ್ಡಿದರಗಳನ್ನು ಪರಿಷ್ಕರಿಸಿದೆ. 2 ವರ್ಷಗಳ ಮೆಚ್ಯೂರಿಟಿ ಅವಧಿಯ ಮೇಲೆ ಬ್ಯಾಂಕ್ ಶೇಕಡ 7.25 ಲಾಭವನ್ನು ನೀಡುತ್ತದೆ.
ಫೆಡರಲ್ ಬ್ಯಾಂಕ್: ನವೆಂಬರ್ 15ರಂದು ಖಾಸಗಿ ವಲಯದ ಬ್ಯಾಂಕ್ ಆದ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರಗಳನ್ನು ಪರಿಷ್ಕರಿಸಿದೆ. 400 ದಿನಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7.40ರಷ್ಟು ಬಡ್ಡಿದರ ನೀಡಲಾಗುತ್ತದೆ.
ಐಡಿಬಿಐ ಬ್ಯಾಂಕ್: ಐಡಿಬಿಐ ಬ್ಯಾಂಕ್ ನವೆಂಬರ್ 12 ರಂದು 2 ಕೋಟಿ ರೂಪಾಯಿಗಿಂತ ಕಡಿಮೆ ಅವಧಿಯ ಎಫ್‌ಡಿ ಬಡ್ಡಿದರವನ್ನು ಪರಿಷ್ಕರಿಸಿದೆ. 2 ರಿಂದ 3 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7 ರಷ್ಟು ಲಾಭವನ್ನು ನೀಡುತ್ತಿದೆ.
ಐಡಿಎಫ್‌ಸಿ ಫಸ್ಟ್ ಬ್ಯಾಂಕ್: ನವೆಂಬರ್ 2ರಿಂದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ತನ್ನ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಬಡ್ಡಿದರ ಪರಿಷ್ಕರಣೆಯನ್ನು ಘೋಷಿಸಿದೆ. 549 ದಿನಗಳು- 2 ವರ್ಷಗಳ ಬ್ಯಾಂಕ್ ಬಡ್ಡಿದರ ಶೇಕಡ 7.75 ಬಡ್ಡಿದರ ನೀಡುತ್ತದೆ.
ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್: ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ತನ್ನ ಎಫ್‌ಡಿ ದರಗಳನ್ನು ನವೆಂಬರ್ 11 ರಂದು ಪರಿಷ್ಕರಿಸಿದೆ. 555 ದಿನಗಳ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 7.50 ರಷ್ಟು ಬಡ್ಡಿಯನ್ನು ನೀಡುತ್ತದೆ.
ಕರ್ನಾಟಕ ಬ್ಯಾಂಕ್: ಬ್ಯಾಂಕಿನ ಇತ್ತೀಚಿನ ಎಫ್‌ಡಿ ದರಗಳು ನವೆಂಬರ್ 1 ರಿಂದ ಜಾರಿಗೆ ಬಂದಿದೆ. 444 ದಿನಗಳ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಶೇಕಡ 7.25 ರಷ್ಟು ಬಡ್ಡಿದರ ನೀಡುತ್ತದೆ.
ಆರ್‌ಬಿಎಲ್ ಬ್ಯಾಂಕ್: ನವೆಂಬರ್ 24 ರಂದು ಆರ್‌ಬಿಎಲ್ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ಅವಧಿಯ ಎಫ್‌ಡಿ ಬಡ್ಡಿದರವನ್ನು ಪರಿಷ್ಕರಿಸಿದೆ. 546 ದಿನಗಳಿಂದ 24 ತಿಂಗಳವರೆಗೆ (18 ತಿಂಗಳುಗಳಿಂದ 24 ತಿಂಗಳುಗಳು) ಅವಧಿಯ ಎಫ್‌ಡಿ ಮೇಲೆ ಶೇಕಡ 8 ರಷ್ಟು ಬಡ್ಡಿದರ ನೀಡುತ್ತದೆ.
ಯೆಸ್ ಬ್ಯಾಂಕ್: ಯೆಸ್ ಬ್ಯಾಂಕ್ ನವೆಂಬರ್ 21 ರಂದು ಎಫ್‌ಡಿ ಬಡ್ಡಿದರವನ್ನು ಪರಿಷ್ಕರಿಸಿದೆ. 18 ತಿಂಗಳಿಂದ 24 ತಿಂಗಳ ಅವಧಿಯ ಎಫ್‌ಡಿ ಮೇಲೆ ಶೇಕಡ 7.75 ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಶೇಕಡ 8.25 ವರೆಗೆ ಗಳಿಸಬಹುದು.


Click it and Unblock the Notifications