ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ಏರಿಕೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಉದ್ಯೋಗ ನೀಡುವ ಭರವಸೆ ನೀಡಿದ ವಂಚನೆ ಮಾಡುವ ಪ್ರಕರಣಗಳು ಅಧಿಕವಾಗುತ್ತಿದೆ. ಮೋಸಗಾರರ ಬಲೆಗೆ ಹಲವಾರು ಮಂದಿ ಬಿದ್ದಿದ್ದು ಅಪಾರ ಪ್ರಮಾಣದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗೆ ವಂಚನೆಗೆ ಒಳಗಾದ ಗುರುಗ್ರಾಮದ ವ್ಯಕ್ತಿಯೊಬ್ಬರು 25 ಲಕ್ಷ ರೂಪಾಯಿ ವಂಚನೆಗೆ ಒಳಗಾಗಿದ್ದಾರೆ.
ನಿಮ್ಮ ಒಟಿಪಿಯನ್ನು ಕೇಳಿ ಕರೆ ಮಾಡುವ ವಂಚಕರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಇನ್ನು ನಕಲಿ ಉದ್ಯೋಗದ ಆಫರ್‌ಗಳ ನೆಪದಲ್ಲಿ ಜನರನ್ನು ಆಕರ್ಷಣೆ ಮಾಡಿ ವಂಚನೆ ಮಾಡುವವರ ಬಗ್ಗೆಯೂ ನಿಮಗೆ ತಿಳಿದಿದೆ. ಇತ್ತೀಚೆಗೆ ಗುರುಗ್ರಾಮದ ನಿವಾಸಿಯೊಬ್ಬರು ವರ್ಕ್ ಫ್ರಮ್ ಹೋಮ್ ಕೆಲಸವನ್ನು ಪಡೆಯುವ ಪ್ರಯತ್ನದಲ್ಲಿ ಒಟ್ಟಾಗಿ ಸುಮಾರು 24 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದಾರೆ.

ಟೆಲಿಗ್ರಾಮ್‌ನಲ್ಲಿ ಸ್ಕ್ಯಾಮರ್‌ಗಳು ಈ ವಂಚನೆಗೆ ಒಳಗಾದ ವ್ಯಕ್ತಿಯನ್ನು ಸಂಪರ್ಕ ಮಾಡಿದ್ದಾರೆ. ಸಣ್ಣ ಕೆಲಸಗಳು ಇದೆ ಎಂದು ಕೇಳಿಕೊಂಡಿದ್ದಾರೆ. ವರದಿ ಪ್ರಕಾರ ಗುರುಗ್ರಾಮದ ಸೆಕ್ಟರ್ 57ರಲ್ಲಿ ವಾಸಿಸುವ ಸುಬ್ರತಾ ಘೋಷ್ ಎಂಬ ವ್ಯಕ್ತಿ ಟೆಲಿಗ್ರಾಮ್ ಅಪ್ಲಿಕೇಶನ್‌ನಲ್ಲಿ ಈ ಉದ್ಯೋಗದ ಪ್ರಸ್ತಾಪವನ್ನು ಪಡೆದಿದ್ದಾರೆ. ಈ ಆಫರ್‌ಗೆ ಆಸಕ್ತಿ ಇರುವಂತೆ ಕಂಡರೆ ಸುಳ್ಳು ಭರವಸೆಗಳ ಆಮಿಷ ಒಡ್ಡಿ ನಿಮ್ಮನ್ನು ವಂಚನೆಗೆ ಒಳಪಡಿಸಲಾಗುತ್ತದೆ.
ಎಚ್ಚರ, ವರ್ಕ್ ಫ್ರಮ್ ಹೋಮ್ ನೆಪದಲ್ಲಿ ಮಹಿಳೆಗೆ 11 ಲಕ್ಷ ರೂ ಪಂಗನಾಮ!
ಸುಬ್ರತಾ ಘೋಷ್ ತನಗೆ ವರ್ಕ್ ಫ್ರಮ್ ಹೋಮ್ ಮಾಡುವ ಇಷ್ಟವಿದೆ ಎಂದು ಹೇಳಿದಾಗ, ಕರೆ ಮಾಡಿದ ವ್ಯಕ್ತಿಯೊಬ್ಬ ಸುಳ್ಳು ಭರವಸಸೆಗಳನ್ನು ನೀಡಿದ್ದಾರೆ. ನಂತರ ಪ್ರತಿದಿನ ಒಂದೊಂದು ಕೆಲಸವನ್ನು ನೀಡಿದ್ದಾರೆ. ಹಾಗೆಯೇ ಬಳಿಕ ಲಿಂಕ್ ಒಂದನ್ನು ಫಾರ್ವರ್ಡ್ ಮಾಡಲಾಗಿದ್ದು, 5 ಸ್ಟಾರ್ ರೇಟಿಂಗ್ ನೀಡುವಂತೆ ತಿಳಿಸಲಾಗಿದೆ.
ಇದರ ಜೊತೆಗೆ ವಂಚಕರು ಹೂಡಿಕೆಯ ಆಫರ್ ಅನ್ನು ಕೂಡಾ ನೀಡಿದ್ದಾರೆ. ಹೂಡಿಕೆ ಮಾಡಿ ಅದರಿಂದ ಲಾಭ ಉಂಟಾಗಲಿದೆ ಎಂದು ತಿಳಿಸಿದ್ದಾರೆ. ನಂತರ 10 ಸಾವಿರ ರೂಪಾಯಿ ಹೂಡಿಕೆ ಮಾಡುವಂತೆ ತಿಳಿಸಲಾಗಿದೆ. ನಂತರ 30 ಲಿಂಕ್‌ಗಳಲ್ಲಿ 5 ಸ್ಟಾರ್ ರೇಟಿಂಗ್ ನೀಡುವಂತೆ ಹೇಳಲಾಗಿದೆ. ಈ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಘೋಷ್ ವಂಚಕರನ್ನು ನಂಬಲು ಪ್ರಾರಂಭ ಮಾಡಿದ್ದಾರೆ.
ನಂತರ ವಂಚಕರು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಘೋಷ್ ಅನುಮಾನವನ್ನು ವ್ಯಕ್ತಪಡಿಸಿದಾಗ, ಸ್ಕ್ಯಾಮರ್‌ಗಳು ಅನುಸರಿಸದಿದ್ದರೆ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಲಾಗುತ್ತದೆ ಮತ್ತು ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.
"ಹೀಗೆ ಒಟ್ಟಾಗಿ 25,29,176 ರೂಪಾಯಿಗಳಷ್ಟು ಮೊತ್ತವನ್ನು ನಾನು ಹೂಡಿಕೆ ಮಾಡಿದೆ. ಆದರೆ ಆರೋಪಿಗಳು ಹಣ ಹಿಂಪಡೆಯಲು ಅವಕಾಶ ನೀಡಿರಲಿಲ್ಲ. ಇನ್ನು 12 ಲಕ್ಷ ರೂಪಾಯಿ ಜಮಾ ಮಾಡದಿದ್ದರೆ ನನ್ನ ಬ್ಯಾಂಕ್ ಖಾತೆ ಹ್ಯಾಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದಾದ ನಂತರ ನಾನು ಪೊಲೀಸರ ಮೊರೆ ಹೋದೆ," ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಹೂಡಿಕೆ ವಂಚನೆ ಬಗ್ಗೆ ನೆಟ್ಟಿಗರಿಗೆ ಜೆರೋಧಾ ಸಂಸ್ಥಾಪಕರ ಎಚ್ಚರಿಕೆ
ಈ ಹಿಂದೆ ಇಂತಹ ವಂಚನೆಗಳ ಬಗ್ಗೆ ಜೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ಎಚ್ಚರಿಕೆಯನ್ನು ನೀಡಿದ್ದಾರೆ. ವಾಟ್ಸಾಪ್‌ನಲ್ಲಿ ನಡೆಯುತ್ತಿರುವ ಹೊಸ ರೀತಿಯ ಅರೆಕಾಲಿಕ ಉದ್ಯೋಗ ಆಫರ್ ಹಗರಣದ ಬಗ್ಗೆ ಜೆರೋಧಾ ಸಂಸ್ಥಾಪಕ ನಿತಿನ್ ಕಾಮತ್ ನೆಟಿಜನ್‌ಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ತಮ್ಮ ಪರಿಚಯದವರು ಒಬ್ಬರು ಈ ವಾಟ್ಸಾಪ್ ವಂಚನೆಗೆ ಒಳಗಾದ ಬಗ್ಗೆ ನಿತಿನ್ ಕಾಮತ್ ಮಾಹಿತಿಯನ್ನು ನೀಡಿದ್ದಾರೆ. ಅರೆಕಾಲಿಕ ಉದ್ಯೋಗದ ಹಗರಣದ ಬಗ್ಗೆ ತಮ್ಮ ಟ್ವಿಟ್ಟರ್‌ನಲ್ಲಿ ನಿತಿನ್ ಕಾಮತ್ ವಿವರಿಸಿದ್ದಾರೆ.
ಡಿಜಿಟಲ್ ಪಾವತಿ ವೇಳೆ ಈ ತಪ್ಪು ಮಾಡದಿರಿ
* ನಿಮ್ಮ ಬ್ಯಾಂಕ್ ಅಥವಾ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಅಪರಿಚಿತ ವ್ಯಕ್ತಿ ಯಾವುದೇ ಮಾಹಿತಿಯನ್ನು ಕೇಳಿದರೆ ಮಾಹಿತಿಯನ್ನು ನೀವು ನೀಡದಿರಿ.
* ಡೆಬಿಟ್ ಕಾರ್ಡ್ ಪಿನ್ ಮತ್ತು ಯುಪಿಐ ಪಿನ್‌ಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ
* ರಿಮೋಟ್ ಆಕ್ಸಸ್/ ಸ್ಕ್ರೀನ್ ಶೇರಿಂಗ್ ಆಪ್‌ಗಳನ್ನು ವಂಚಕರು ಬಳಕೆ ಮಾಡಬಹುದು, ಅದಕ್ಕಾಗಿ ಎಂದಿಗೂ ಕೂಡಾ ಸ್ಕ್ರೀನ್ ಶೇರಿಂಗ್ ಆಪ್ ಬಳಕೆ ಮಾಡುವಾಗ ಎಚ್ಚರವಾಗಿರಿ. ಹಣಕಾಸು ವಹಿವಾಟು ನಡೆಸುವಾಗ ಸ್ಟ್ರೀನ್ ಶೇರಿಂಗ್ ಆಪ್ ಬಳಕೆ ಮಾಡಬೇಡಿ
* ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ವಹಿವಾಟಿನ ವಿವರಗಳನ್ನು ಎಂದಿಗೂ ಪೋಸ್ಟ್ ಮಾಡಬೇಡಿ
* ಕರೆ ಮಾಡಿ ಮೂರನೇ ವ್ಯಕ್ತಿಯೊಂದಿಗೆ ಮಾತನಾಡುವಾಗ ವಹಿವಾಟು ನಡೆಸುವುದನ್ನು ತಪ್ಪಿಸಿ


Click it and Unblock the Notifications