ಗಾತ್ರದ ವಿಷಯದಲ್ಲಿ ಮೊದಲ ದೊಡ್ಡ ಐಪಿಒ ಆದ ಮ್ಯಾನ್‌ಕೈಂಡ್ ಫಾರ್ಮಾ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ನಾಳೆ ಏಪ್ರಿಲ್ 25 ರಂದು ಚಂದಾದಾರಿಕೆಗಾಗಿ ತೆರೆಯಲಿದೆ. ಈ ವರ್ಷದ ಎರಡನೇ ಆರಂಭಿಕ ಸಾರ್ವಜನಿಕ ಕೊಡುಗೆ ಇದಾಗಿದೆ. ಇದಕ್ಕೂ ಮುನ್ನ ಅವಲಾನ್ ಟೆಕ್ನಾಲಜೀಸ್ ಐಪಿಒ ನಡೆದಿದೆ. 4,326.36 ಕೋಟಿ ರೂಪಾಯಿ ಮೌಲ್ಯದ ಐಪಿಒ ಇದಾಗಿದ್ದು, 27 ಏಪ್ರಿಲ್ 2023 ರವರೆಗೆ ಬಿಡ್ಡಿಂಗ್‌ಗೆ ತೆರೆದುಕೊಳ್ಳಲಿದೆ.
IQVIA ಡೇಟಾಸೆಟ್‌ನ ಪ್ರಕಾರ, ಮ್ಯಾನ್‌ಕೈಂಡ್ ಫಾರ್ಮಾ ದೇಶೀಯ ಮಾರಾಟದ ವಿಷಯದಲ್ಲಿ ಭಾರತದ ನಾಲ್ಕನೇ ಅತಿದೊಡ್ಡ ಔಷಧೀಯ ಕಂಪನಿಯಾಗಿದೆ. MAT ಅಡಿಯಲ್ಲಿ ಡಿಸೆಂಬರ್ 2022ರಲ್ಲಿ ಮಾರಾಟದ ಪ್ರಮಾಣ ನೋಡಿದಾಗ ಮ್ಯಾನ್‌ಕೈಂಡ್ ಫಾರ್ಮಾ ಮೂರನೇ-ಅತಿದೊಡ್ಡ ಕಂಪನಿಯಾಗಿದೆ. ಸಂಸ್ಥೆಯು ವಿವಿಧ ಔಷಧೀಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ತಯಾರಿಸುತ್ತದೆ.

ಮ್ಯಾನ್‌ಕೈಂಡ್ ಫಾರ್ಮಾ ಐಪಿಒ ದಿನಾಂಕ, ದರ
ಏಪ್ರಿಲ್ 25ರಂದು ಮ್ಯಾನ್‌ಕೈಂಡ್ ಫಾರ್ಮಾ ಐಪಿಒ ಆರಂಭವಾಗಲಿದೆ. ಒಟ್ಟು ಮೂರು ದಿನಗಳ ಕಾಲ ಅಂದರೆ ಏಪ್ರಿಲ್ 27ರವರೆಗೆ ಚಂದಾದಾರಿಕೆಗೆ ತೆರೆದುಕೊಳ್ಳಲಿದೆ. ಕಂಪನಿಯು ಮ್ಯಾನ್‌ಕೈಂಡ್ ಫಾರ್ಮಾ ಐಪಿಒ ಬೆಲೆ ಪ್ರತಿ ಈಕ್ವಿಟಿ ಷೇರಿಗೆ 1026 ರೂಪಾಯಿಯಿಂದ 1080 ರೂಪಾಯಿಗೆ ನಿಗದಿಪಡಿಸಿದೆ.
ಮ್ಯಾನ್‌ಕೈಂಡ್ ಫಾರ್ಮಾ ಐಪಿಒ ಆಫರ್ ಗಾತ್ರ
ಪ್ರವರ್ತಕರು ಮತ್ತು ಹೂಡಿಕೆದಾರರಿಂದ 4 ಕೋಟಿಗೂ ಹೆಚ್ಚು ಈಕ್ವಿಟಿ ಷೇರುಗಳನ್ನು ಮಾರಾಟ ಮಾಡಲು ಮೊದಲ ಸಾರ್ವಜನಿಕ ಕೊಡುಗೆಯನ್ನು ಆರಂಭ ಮಾಡಲಾಗಿದ್ದು, ಯಾವುದೇ ಹೊಸ ಇಶ್ಯು ಇಲ್ಲ. ಕನಿಷ್ಠವಾಗಿ ಕಂಪನಿಯ ಒಟ್ಟು ನಿಧಿಸಂಗ್ರಹವು 4,110.03 ರೂಪಾಯಿ ಆಗಿದ್ದರೆ, ಗರಿಷ್ಠವಾಗಿ 4,326.35 ಕೋಟಿ ರೂಪಾಯಿ ಬ್ಯಾಂಡ್ ದರ ಆಗಿರುತ್ತದೆ. ಮಾರುಕಟ್ಟೆ ವೀಕ್ಷಕರ ಪ್ರಕಾರ, ಮ್ಯಾನ್‌ಕೈಂಡ್ ಫಾರ್ಮಾ ಷೇರುಗಳು ಇಂದು ಗ್ರೇ ಮಾರ್ಕೇಟ್‌ನಲ್ಲಿ ಪ್ರತಿ ಈಕ್ವಿಟಿ ಷೇರಿಗೆ 90 ರೂಪಾಯಿಯಂತೆ ಲಭ್ಯವಿದೆ.
ಮ್ಯಾನ್‌ಕೈಂಡ್ ಫಾರ್ಮಾ ಐಪಿಒ ಉದ್ದೇಶಗಳು
ಮ್ಯಾನ್‌ಕೈಂಡ್ ಫಾರ್ಮಾ ಐಪಿಒನ ಮುಖ್ಯ ಉದ್ದೇಶಗಳು ಮಾರಾಟ ಮಾಡುವ ಷೇರುದಾರರಿಂದ ಮಾಡುವುದು ಮತ್ತು ಷೇರು ವಿನಿಮಯ ಕೇಂದ್ರಗಳಲ್ಲಿ ಈಕ್ವಿಟಿ ಷೇರುಗಳನ್ನು ಲೀಸ್ಟಿಂಗ್ ಮಾಡುವ ಪ್ರಯೋಜನವನ್ನು ಪಡೆಯುವುದು ಆಗಿದೆ. ಪಬ್ಲಿಕ್ ಇಶ್ಯೂವಿನಿಂದ ಮೂಲಕ ಸಂಗ್ರಹಿಸಿದ ಎಲ್ಲಾ ಹಣವು ಷೇರುದಾರರನ್ನು ಮಾರಾಟ ಮಾಡಲು ಬಳಸಲಾಗುತ್ತದೆ. ಕಂಪನಿಯು ಇದರಿಂದ ಹಣವನ್ನು ಪಡೆಯುವುದಿಲ್ಲ.
ಮ್ಯಾನ್‌ಕೈಂಡ್ ಫಾರ್ಮಾ ಹಣಕಾಸು ಸ್ಥಿತಿ ಹೇಗಿದೆ?
ಮ್ಯಾನ್‌ಕೈಂಡ್ ಫಾರ್ಮಾದ ಮಾರುಕಟ್ಟೆ ಮೌಲ್ಯವು 43,264 ಕೋಟಿ ರೂಪಾಯಿಗಳಾಗಿದೆ. ಔಷಧೀಯ ಕಂಪನಿಯು ಡಿಸೆಂಬರ್‌ಗೆ ಕೊನೆಗೊಂಡ ಒಂಬತ್ತು ತಿಂಗಳ ಅವಧಿಯಲ್ಲಿ 996.4 ಕೋಟಿ ರೂಪಾಯಿಗಳ ಲಾಭವನ್ನು ಪಡೆದಿದೆ. ವರ್ಷದಿಂದ ವರ್ಷಕ್ಕೆ ಹೋಲಿಕೆ ಮಾಡಿದಾಗ ಆದಾಯದಲ್ಲಿ ಶೇಕಡ 20ರಷ್ಟು ಇಳಿಕೆ ಕಂಡು ಬಂದಿದೆ. ಉದ್ಯೋಗಿಗಳಿಗಾಗಿ ಅಧಿಕ ವೆಚ್ಚ ಮತ್ತು ಇತರೆ ಕಾರ್ಯಗಳಿಂದಾಗಿ ಲಾಭ ಕುಗ್ಗಿದೆ.
9MFY23ನಲ್ಲಿ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 10.6ರಷ್ಟು ಏರಿಕೆಯಾಗಿ 6,697 ಕೋಟಿ ರೂಪಾಯಿಗೆ ತಲುಪಿದೆ. EBITDA (ಬಡ್ಡಿದರ, ತೆರಿಗೆ, ಕಡಿತ ಮತ್ತು ಸಾಲ ಸಲ್ಲಿಕೆ ಬಳಿಕ ಬರುವ ಮೊತ್ತ) ಸುಮಾರು ಶೇಕಡ 13ರಷಷ್ಟು ಕುಸಿತ ಕಂಡಿದೆ. ಮಾರ್ಚ್ 2022ರಲ್ಲಿ ಕೊನೆಯಾದ ಹಣಕಾಸು ವರ್ಷದಲ್ಲಿ ಸಂಸ್ಥೆಯ ಬೆಳವಣಿಗೆಯು ಉತ್ತಮವಾಗಿದೆ.
ಲಾಭವು ಹಣಕಾಸು ವರ್ಷ 2021-22ರಲ್ಲಿ ಶೇಕಡ 13.3ರಷ್ಟು ಏರಿಕೆಯಾಗಿ 1,433.5 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದಲ್ಲಿ ಆದಾಯವು ಶೇಕಡ 25.2ರಷ್ಟು ಏರಿಕೆಯಾಗಿ, 7,782 ಕೋಟಿ ರೂಪಾಯಿಗೆ ತಲುಪಿದೆ. EBITDA 2021-22ರಲ್ಲಿ ಶೇಕಡ 20.7ರಷ್ಟು ಏರಿಕೆಯಾಗಿ 1,989.35 ಕೋಟಿ ರೂಪಾಯಿಗೆ ತಲುಪಿದೆ.
ಲೀಸ್ಟಿಂಗ್ ದಿನಾಂಕದ ಬಗ್ಗೆ ಮಾಹಿತಿ
ಮ್ಯಾನ್‌ಕೈಂಡ್ ಮೇ 3 ರೊಳಗೆ ಐಪಿಒ ಷೇರು ಹಂಚಿಕೆಯನ್ನು ಅಂತಿಮಗೊಳಿಸುತ್ತದೆ. ಹೂಡಿಕೆಯು ವಿಫಲವಾದಲ್ಲಿ ಮೇ 4 ರೊಳಗೆ ಹೂಡಿಕೆದಾರರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಮರುಪಾವತಿ ಮಾಡಲಾಗುತ್ತದೆ. ಆದರೆ ಷೇರುಗಳನ್ನು ಮೇ 8 ರೊಳಗೆ ಅರ್ಹ ಹೂಡಿಕೆದಾರರ ಡಿಮ್ಯಾಟ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಇದು ಮೇ 9 ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇಗೆ ಎಂಟ್ರಿ ನೀಡಲಿದೆ.


Click it and Unblock the Notifications