ಹೂಡಿಕೆ ಮಾಡುವುದು ನಮ್ಮ ಭವಿಷ್ಯಕ್ಕೆ, ಪ್ರಸ್ತುತ ಜೀವನಕ್ಕೆ ನಾವು ಮಾಡುವ ಒಂದು ರೀತಿಯ ದುಡಿಮೆಯೂ ಹೌದು. ನಮ್ಮ ಭವಿಷ್ಯದಲ್ಲಿ ಏನೇ ತೊಂದರೆ ಉಂಟಾದರೂ ನಮಗೆ ನಾವು ಮಾಡಿದ ಹೂಡಿಕೆಗಳು ಸಹಕಾರಿ ಆಗಲಿದೆ ಎಂಬುವುದು ಹಲವಾರು ಜನರ ನಂಬಿಕೆಯಾಗಿದೆ. ಅಧಿಕವಾಗಿ ಭಾರತೀಯರು ಹೂಡಿಕೆ ಮಾಡುವುದು ತಮ್ಮ ಭವಿಷ್ಯದ ಹಿತಾದೃಷ್ಟಿಯಿಂದಾಗಿ.
ನಾವು ನಮ್ಮ ಜೀವನದಲ್ಲಿ ಉಳಿತಾಯವನ್ನು ಮಾಡುವುದು ಎಷ್ಟು ಮುಖ್ಯವೋ ಅಷ್ಟೇ ಹೂಡಿಕೆಯನ್ನು ಕೂಡಾ ಅತೀ ಮುಖ್ಯ. ಆದರೆ ಅದೆಷ್ಟೋ ಮಂದಿಗೆ ಹೂಡಿಕೆ ಮಾಡುವ ಸಂದರ್ಭದಲ್ಲಿ ಎಲ್ಲಿ ಹೂಡಿಕೆ ಮಾಡಬೇಕು, ಎಷ್ಟು ಹೂಡಿಕೆ ಮಾಡಬೇಕು ಎಂಬ ಬಗ್ಗೆ ಮಾಹಿತಿ ಇರುವುದಿಲ್ಲ ಇನ್ನು ಈ ಮಾಹಿತಿಯನ್ನು ಬೇರೆಯವರಿಂದ ತಿಳಿದು ಕೊಳ್ಳುವ ವೇಳೆ ಹಾಗೂ ನಾವು ಆ ಬಗ್ಗೆ ಯೋಚನೆ ಮಾಡುವ ವೇಳೆ ಹಲವಾರು ಎಡವಟ್ಟುಗಳನ್ನು ಮಾಡುವುದೂ ಇದೆ. ಲಾಭವಿಲ್ಲದೆಡೆ ಹೂಡಿಕೆ ಮಾಡಿ, ನಷ್ಟವನ್ನು ಕಾಣುವ ಅದೇಷ್ಟೋ ಮಂದಿ ಇದ್ದಾರೆ.
ನೀವು ತಪ್ಪಾದ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರೆ, ನಿಮಗೆ ಭಾರೀ ನಷ್ಟ ಉಂಟಾದೀತು. ಆದ್ದರಿಂದ ನೀವು ಹೂಡಿಕೆ ಮಾಡುವ ಸಂದರ್ಭದಲ್ಲಿ ಬಹಳ ಎಚ್ಚರದಿಂದ ಇರಬೇಕು. ಹೂಡಿಕೆ ಮಾಡುವ ಸಂದರ್ಭದಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡಲೇ ಬಾರದು. ಆ ತಪ್ಪುಗಳು ಯಾವುದು ಎಂದು ತಿಳಿಯಲು ಮುಂದೆ ಓದಿ.
ಹೂಡಿಕೆ ಎಲ್ಲಿ ಮಾಡುವುದು, ನನಗೆ ಗೊತ್ತಿಲ್ಲ!
ನೀವು ಹೂಡಿಕೆ ಮಾಡುವ ಬಗ್ಗೆ ಯೋಚನೆ ಮಾಡುವುದು ಮುಖ್ಯ ಆದರೆ ಅದಕ್ಕಾಗಿ ಅತೀಯಾಗಿ ಯೋಚಿಸಿ ಕೊನೆಗೆ ಯಾವ ನಿರ್ಧಾರಕ್ಕೂ ಬಾರದಿದ್ದರೆ ನಿಮ್ಮ ಸಮಯವೂ ವ್ಯರ್ಥ, ನಿಮಗೆ ಹೂಡಿಕೆಯ ಲಾಭವು ಇರಲ್ಲ. ಜನರು ಹೆಚ್ಚಾಗಿ ನನ್ನ ಗೆಳೆಯನಿಂತ ಉತ್ತಮವಾಗಿ ಜೀವನ ಸಾಗಿಸಬೇಕು ಎಂದು ಆಲೋಚನೆ ಮಾಡುತ್ತಲಿರುತ್ತಾರೆ ಎಂದು ಅಧ್ಯಯನಗಳು ಹೇಳಿದೆ. ಆದರೆ ಈ ನಡುವೆ ನಾವು ಎಲ್ಲಿ ಹೂಡಿಕೆ ಮಾಡುವುದು ಎಂಬುವುದೇ ನಮಗೆ ತಿಳಿಯದಿರುವುದು ಸರಿಯಲ್ಲ. ಇದರಿಂದಾಗಿ ಭಾರೀ ಆರ್ಥಿಕ ನಷ್ಟವು ಉಂಟಾದೀತು. ನಿಮ್ಮ ಮಕ್ಕಳ ಶಿಕ್ಷಣಕ್ಕೆ, ನಿಮ್ಮ ನಿವೃತ್ತಿ ಜೀವನಕ್ಕಾಗಿ ಅಥವಾ ನಿಮ್ಮ ಇತರೆ ಖರ್ಚಿಗಾಗಿ ಉಳಿತಾಯ ಮಾಡುವುದು ನೀವು ಹೂಡಿಕೆಗೆ ಅಧಿಕ ಆದ್ಯತೆಯನ್ನು ನೀಡಬಹುದಾದ ಅಂಶವಾಗಿದೆ. ಇದಕ್ಕಾಗಿ ನೀವು ಚಂಚಲವಾಗಿರದೆ ಒಂದು ಗುರಿ ಇಟ್ಟುಕೊಳ್ಳಬೇಕು.
"ಹೂಡಿಕೆ ಮಾಡಿದ್ಧೇನೆ, ಆದರೆ ನನಗೆ ಅದು ಸರಿಯಾಗಿ ತಿಳಿದಿಲ್ಲ"
ಇನ್ನೂ ಕೆಲವು ಮಂದಿ ಇದ್ದಾರೆ. ತಾವು ಹೂಡಿಕೆ ಮಾಡುತ್ತಾರೆ, ಆದರೆ ಆ ಬಗ್ಗೆ ಯಾವ ಮಾಹಿತಿಯೂ ಕೂಡಾ ಅವರಿಗೆ ಇರುವುದಿಲ್ಲ. ಇದರಿಂದಾಗಿ ಹೂಡಿಕೆದಾರರು ಮೋಸಕ್ಕೆ ಒಳಗಾಗುವ ಸಾಧ್ಯತೆ ಅಥವಾ ನಷ್ಟ ಅನುಭವಿಸುವ ಸಾಧ್ಯತೆಗಳು ಇರುತ್ತದೆ. ಸ್ಟಾಕ್ ಮಾರುಕಟ್ಟೆಯಲ್ಲಿ ಹಲವಾರು ಮಂದಿ ಹೂಡಿಕೆ ಮಾಡುತ್ತಾರೆ. ಆದರೆ ಕಂಪನಿಯ ಜೊತೆ ಒಂದು ಉತ್ತಮ ಸಂಬಂಧ, ಸಂಪರ್ಕವನ್ನು ಹೊಂದಿರುವುದಿಲ್ಲ. ನೀವು ಕಂಪನಿಯ ಸ್ಟಾಕ್ ಅನ್ನು ಖರೀದಿ ಮಾಡಿದಾಗ ನೀವು ಆ ಬಗ್ಗೆ ಅಧಿಕ ಮಾಹಿತಿಯನ್ನು ಬಲ್ಲವರಿಂದ ಪಡೆದುಕೊಳ್ಳಿ. ಇದರಿಂದಾಗಿ ಆ ಸ್ಟಾಕ್ ಸುರಕ್ಷಿತವಲ್ಲ ಎಂದು ತಿಳಿದ ಕೂಡಲೇ ನೀವು ಬೇರೆ ಸ್ಟಾಕ್ ಖರೀದಿ ಮಾಡಬಹುದು, ಅಥವಾ ಆ ಸ್ಟಾಕ್ ಅನ್ನು ಮಾರಾಟ ಮಾಡಿಬಿಡಬಹುದು.
ತಾಳ್ಮೆಯನ್ನು ಸ್ವಲ್ಪ ದಾನ ಮಾಡಿ ಪ್ಲೀಸ್
ಸದ್ಯ ಹೂಡಿಕೆದಾರರು ನಮಗೆ ತಾಳ್ಮೆಯನ್ನು ಸ್ವಲ್ಪ ದಾನ ಮಾಡಿ ಪ್ಲೀಸ್ ಎಂಬ ಸ್ಥಿತಿಗೆ ಬಂದಿದ್ದಾರೆ. ಹೆಚ್ಚಿ ಹೂಡಿಕೆದಾರರಿಗೆ ತಾಳ್ಮೆ ಎಂಬುವುದು ಇರುವುದಿಲ್ಲ, ಅಧಿಕ ಟರ್ಮ್‌ನ ಹೂಡಿಕೆಯು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ. ಆದರೆ ಹೂಡಿಕೆದಾರರು ಈ ಅವಧಿ ಮುಗಿಯುವ ಮುನ್ನವೇ ತಾಳ್ಮೆ ಕಳೆದುಕೊಂಡು ಹೂಡಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳುತ್ತಾರೆ. ಇದರಿಂದಾಗಿ ಎಫ್‌ಡಿಗಳಲ್ಲಿ ನಷ್ಟ ಆಗುತ್ತದೆ, ಬೇರೆ ಬೇರೆ ಹೂಡಿಕೆ ಕ್ಷೇತ್ರದಲ್ಲಿ ನಷ್ಟವೂ ಆದೀತು ಲಾಭವೂ ಆದೀತು. ಆದ್ದರಿಂದ ಜನರು ಕಡಿಮೆ ಅವಧಿಯ ಹೂಡಿಕೆ ಮಾಡುವುದು ಉತ್ತಮ. ಇದರಿಂದಾಗಿ ನಿಮಗೆ ಲಾಂಗ್ ಟರ್ಮ್‌ನ ಸುರಕ್ಷತೆಯ ಭಯವೂ ಇರುವುದಿಲ್ಲ.
ದಿಢೀರ್ ಮಾರುಕಟ್ಟೆ ಬದಲಾಯಿಸುವ ಯತ್ನ
ಷೇರು ವಹಿವಾಟಿನಲ್ಲಿ ಹಣವನ್ನು ಹೂಡಿಕೆ ಮಾಡುವಾಗ ನ್ನೊಂದು ಸಾಮಾನ್ಯ ತಪ್ಪು ಎಂದರೆ ಮಾರುಕಟ್ಟೆಯನ್ನು ಬದಲಿಸಲು ಪ್ರಯತ್ನಿಸುವುದು. ಮಾರುಕಟ್ಟೆಯ ಬಗ್ಗೆ ತುಲನೆ ಮಾಡಿಕೊಳ್ಳುವುದು, ಯಾವ ಮಾರುಕಟ್ಟೆ ಸರಿಯಾದುದು, ಲಾಭದಾಯಕ ಎಂದು ತಿಳಿಯುವುದು ಕಷ್ಟ. ಅದೇಷ್ಟೇ ಅನುಭವಿ ಹೂಡಿಕೆದಾರರು ಕೂಡ ಈ ವಿಚಾರದಲ್ಲಿ ವಿಫಲರಾಗುತ್ತಾರೆ. ಆದ್ದರಿಂದ ನಾವು ದಿಢೀರ್ ಆಗಿ ಹೂಡಿಕೆ ಮಾಡುವ ಷೇರು ಮಾರುಕಟ್ಟೆಯನ್ನು ಬದಲಾಯಿಸಿಕೊಳ್ಳುವುದು ಸರಿಯಲ್ಲ. ಇದರಿಂದಾಗಿ ಅಧಿಕ ನಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ.
ಬುಲ್ ಮಾರ್ಕೆಟ್ ಬಗ್ಗೆ ಯೋಚಿಸಿ ಮೆದುಳಿಗೆ ತೊಂದರೆ ಕೊಡದಿರಿ
ಇನ್ನು ಕೆಲವರು ಬುಲ್ ಮಾರ್ಕೆಟ್ ಬಗ್ಗೆ ಯೋಚನೆ ಮಾಡಿಯೇ ತಮ್ಮ ಮೆದುಳಿಗೆ ತಾವೇ ತೊಂದರೆ, ಹಿಂಸೆಯನ್ನು ಕೊಡುತ್ತಾರೆ. ಈ ತಪ್ಪನ್ನು ಕೂಡಾ ನಾವು ಮಾಡಬಾರದು. ಈ ಬುಲ್ ಮಾರ್ಕೆಟ್‌ನಲ್ಲಿ ನಷ್ಟ ಉಂಟಾಗುವ ಸಾಧ್ಯತೆಯ ಬಗ್ಗೆ ನುರಿತ ಹೂಡಿಕೆದಾರರೇ ತಿಳಿದಿದ್ದಾರೆ. ಆದ್ದರಿಂದ ನೀವು ಬುಲ್ ಮಾರುಕಟ್ಟೆಯತ್ತ ಗಮನ ಹರಿಸಿ ನಿಮ್ಮ ಮೆದುಳಿಗೆ ಹಿಂಸೆಯನ್ನು ನೀಡಬೇಡಿ.
"ಹೂಡಿಕೆ ಮಾಡಲು ನಾನು ಸಾಲ ತೆಗೆದುಕೊಂಡೆ, ಏನಾಗಲ್ಲ ಬಿಡಿ"
ಇನ್ನೂ ಕೆಲವರು ಇದ್ದಾರೆ ಹೂಡಿಕೆ ಮಾಡಲು ಸಾಲವನ್ನು ಪಡೆಯುತ್ತಾರೆ. ಆದರೆ ಇದು ಅತೀಯಾದ ಅಪಾಯವನ್ನು ಉಂಟು ಮಾಡುತ್ತದೆ. ತಾನು ಮಾಡಿದ ಹೂಡಿಕೆಯಿಂದ ಉತ್ತಮ ರಿಟರ್ನ್ ಲಭಿಸಿತು ಎಂದು ಸಾಲ ಮಾಡಿ ಅಧಿಕ ಹೂಡಿಕೆ ಮಾಡಿ ಮತ್ತೆ ನಷ್ಟಕ್ಕೆ ಒಳಗಾಗುವುದು ನಿಮ್ಮನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಿದೆ. ಆದ್ದರಿಂದ ಈ ಹಿಂದಿನ ರಿಟರ್ನ್ ಅನ್ನು ನೋಡಿ ನೀವು ಹೂಡಿಕೆ ಮಾಡಲು ಮುಂದಾಗಬೇಡಿ. ನಿಮ್ಮಲ್ಲಿ ಹಣ ಇದ್ದು ಅದನ್ನು ಹೂಡಿಕೆ ಮಾಡಿ ಅಪಾಯವನ್ನು ಎದುರಿಸಲು ಸಿದ್ಧವಿದ್ದರೆ ಪರವಾಗಿಲ್ಲ. ಆದರೆ ನೀವು ಸಾಲ ಮಾಡಿ ಹೂಡಿಕೆಯನ್ನು ಮಾಡಿದರೆ ಅಪಾಯವನ್ನು ನಿಮ್ಮ ಮೈಮೇಲೆ ಎಳೆದುಕೊಂಡತೆ.


Click it and Unblock the Notifications