ಅತೀ ಶ್ರೀಮಂತ ವ್ಯಾಪಾರಿಯಾದ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಜರ್ಮನ್ ರಿಟೇಲ್ ವ್ಯಾಪಾರಿ ಸಂಸ್ಥೆಯಾದ ಮೆಟ್ರೋ ಎಜಿಯ ನಗದು ಮತ್ತು ಕ್ಯಾರಿ ವ್ಯವಹಾರವನ್ನು ಸ್ವಾಧೀನಕ್ಕೆ ಪಡೆಯಲು ಮುಂದಾಗಿದೆ. ಭಾರತದಲ್ಲಿ 500 ಮಿಲಿಯನ್ ಯುರೋ ಅಥವಾ 4,060 ಕೋಟಿ ರೂಪಾಯಿಗೆ ವ್ಯಾಪಾರವನ್ನು ತನ್ನ ಕಪಿಮುಷ್ಠಿಗೆ ಪಡೆಯಲು ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿ ಪ್ರಕಾರ ಈ ಒಪ್ಪಂದವು ಸುಮಾರು 31 ಸಗಟು ವಿತರಣಾ ಕೇಂದ್ರಗಳು, ಲ್ಯಾಂಡ್ ಬ್ಯಾಂಕ್‌ಗಳು ಮತ್ತು ಭಾರತದಲ್ಲಿ ಜರ್ಮನ್ ರಿಟೇಲ್ ವ್ಯಾಪಾರಿಗಳ ಒಡೆತನದ ಇತರ ಆಸ್ತಿಗಳನ್ನು ಸ್ವಾಧೀನ ಪಡೆಸಿಕೊಳ್ಳವು ಪ್ರಕ್ರಿಯೆಗೆ ಒಳಗೊಂಡಿದೆ. ಈ ಸ್ವಾಧೀನದ ಬಳಿಕ ಭಾರತದ ಎರಡನೇ ಶ್ರೀಮಂತ ವ್ಯಕ್ತಿಯ ಸಂಸ್ಥೆಯಾದ ದೇಶದ ಬಹುತೇಕ ರಿಲಯನ್ಸ್ ರಿಟೇಲ್ ಉದ್ಯಮವನ್ನು ತನ್ನ ಹತೋಟಿಗೆ ಪಡೆದುಕೊಂಡತೆ ಆಗುತ್ತದೆ.
ಈಗಾಗಲೇ ರಿಲಯನ್ಸ್ ಇಂಡಸ್ಟ್ರೀಸ್ ಬಹುತೇಕ ಎಲ್ಲ ಕ್ಷೇತ್ರದಲ್ಲಿ ತನ್ನ ಬಾಹುವನ್ನು ಚಾಚಿದೆ. ಬೇರೆ ಸಂಸ್ಥೆಗಳ ಉದ್ಯಮಗಳನ್ನು ತನ್ನ ಹತೋಟಿಗೆ ಪಡೆದುಕೊಳ್ಳುತ್ತಿದೆ. ಟೆಲಿಕಾಂ ಕ್ಷೇತ್ರವನ್ನು ಈಗಾಗಲೇ ರಿಲಯನ್ಸ್ ಜಿಯೋ ಬಾಚಿಕೊಳ್ಳುವ ಪ್ರಯತ್ನದಲ್ಲಿದೆ. ಈಗ ಜರ್ಮನ್ ಸಂಸ್ಥೆಯ ಜೊತೆಗೆ ಡೀಲ್ ಮಾಡಿಕೊಂಡಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಮಾತುಕತೆ ನಡೆದದ್ದು ಯಾವಾಗ?
ಕಳೆದ ಕೆಲವು ತಿಂಗಳುಗಳಿಂದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಮೆಟ್ರೋ ನಡುವೆ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ. ಇನ್ನು ಜರ್ಮನಿ ಮೂಲದ ಸಂಸ್ಥೆಯು ಕಳೆದ ವಾರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಪ್ರಸ್ತಾಪವನ್ನು ಒಪ್ಪಿಕೊಂಡಿದೆ. METRO AG (ಮೆಟ್ರೋ ಎಜಿ) ರಿಟೇಲ್ ವ್ಯಾಪಾರ, ದಿನಸಿ ಅಂಗಡಿ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಯಾಟರರ್‌ಗಳು, ಕಾರ್ಪೊರೇಟ್‌ಗಳು ಮತ್ತು ಕಂಪನಿಗಳಂತಹ ವ್ಯವಹಾರಗಳನ್ನು ಹೊಂದಿದೆ.
ಈ ಹಿಂದೆ ಏನಾಗಿತ್ತು?
ಒಂದು ವ್ಯಾಪಾರವನ್ನು ಇನ್ನೊಂದು ವ್ಯಾಪಾರ ಸಂಸ್ಥೆಯು ಖರೀದಿ ಮಾಡುವ ಪ್ರಕ್ರಿಯೆಯಲ್ಲಿ ಒಂದು ಬಹುರಾಷ್ಟ್ರೀಯ ಸಂಸ್ಥೆಯು ಸಂಪೂರ್ಣವಾಗಿ ವ್ಯಾಪಾರದಿಂದಲೇ ನಿರ್ಗಮನ ಹೊಂದುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮುನ್ನ 2014 ರಲ್ಲಿ ಫ್ರೆಂಚ್ ಕ್ಯಾರಿಫೋರ್ ಭಾರತದಲ್ಲಿ ವ್ಯಾಪಾರದಿಂದ ಹೊರಬಂದಿತ್ತು. ಇದಕ್ಕೂ ಮೊದಲು, 2020 ರಲ್ಲಿ, ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಗ್ರೂಪ್ ವಾಲ್‌ಮಾರ್ಟ್ ಇಂಡಿಯಾದ ಸಗಟು ವ್ಯಾಪಾರದಲ್ಲಿ ನೂರು ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಂಡಿತು. ಇದು ಅತ್ಯುತ್ತಮ ನಗದು ಮತ್ತು ಕ್ಯಾರಿ ಟ್ರೇಡಿಂಗ್ ವ್ಯವಹಾರವನ್ನು ನಿರ್ವಹಿಸುತ್ತದೆ.
ಮೆಟ್ರೋ ಎಜಿ ಬಗ್ಗೆ ಮಾಹಿತಿ
ಮೆಟ್ರೋ ಕ್ಯಾಶ್ & ಕ್ಯಾರಿ ಉದ್ಯಮ 2003 ರಲ್ಲಿ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿತು. 34 ದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿರುವ ಈ ಸಂಸ್ಥೆಯು ಬೆಂಗಳೂರಿನಲ್ಲಿ ಆರು, ಹೈದರಾಬಾದ್‌ನಲ್ಲಿ ನಾಲ್ಕು, ಮುಂಬೈ ಮತ್ತು ದೆಹಲಿಯಲ್ಲಿ ತಲಾ ಎರಡು, ಕೋಲ್ಕತ್ತಾ, ಜೈಪುರ, ಜಲಂಧರ್, ಜಿರಾಕ್‌ಪುರ, ಅಮೃತಸರ, ವಿಜಯವಾಡ, ಅಹಮದಾಬಾದ್, ಸೂರತ್, ಇಂದೋರ್, ಲಕ್ನೋ, ಮೀರತ್, ನಾಸಿಕ್, ಗಾಜಿಯಾಬಾದ್, ತುಮಕೂರು, ವಿಶಾಖಪಟ್ಟಣಂ, ಗುಂಟೂರು ಮತ್ತು ಹುಬ್ಬಳ್ಳಿಯಲ್ಲಿ ತಲಾ ಒಂದು ಸಗಟು ವ್ಯಾಪಾರವನ್ನು ಹೊಂದಿದೆ. ಸಣ್ಣ ಚಿಲ್ಲರೆ ವ್ಯಾಪಾರ, ದಿನಸಿ ಅಂಗಡಿ, ಹೋಟೆಲ್, ರೆಸ್ಟೋರೆಂಟ್‌ಗಳು, ಕ್ಯಾಟರಿಂಗ್ ವ್ಯವಸ್ಥೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಹೊಂದಿದೆ. ಗ್ರಾಹಕ ನೋಂದಣಿ ಕಾರ್ಡ್‌ನೊಂದಿಗೆ ನೊಂದಾವಣಿ ಮಾಡಿಕೊಂಡ ವ್ಯಾಪಾರಿಗಳು ಮಾತ್ರ ಮೆಟ್ರೋದಿಂದ ವಸ್ತುಗಳನ್ನು ಖರೀದಿ ಮಾಡಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ಹದಿನೆಂಟು ವರ್ಷಗಳ ಅನುಭವ ಮತ್ತು ಅಂತರಾಷ್ಟ್ರೀಯ ಪರಿಣತಿಯನ್ನು ಹೊಂದಿರುವ ಮೆಟ್ರೋ ಎಜಿ ಕ್ಯಾಶ್ & ಕ್ಯಾರಿ ಇಂಡಿಯಾ ಎಲ್ಲಾ ಗ್ರಾಹಕರ ಅಗತ್ಯ ಪೂರೈಕೆಗಾಗಿ ಕಾರ್ಯನಿರ್ವಹಣೆ ಮಾಡುತ್ತಿತ್ತು.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications