ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಭಾರತದಲ್ಲಿ ಹೂಡಿಕೆಯ ಅತ್ಯಂತ ಜನಪ್ರಿಯ ವಿಧಾನಗಳಲ್ಲಿ ಒಂದಾಗಿದೆ. ಎಫ್‌ಡಿ ಆದಾಯವನ್ನು ಖಚಿತವಾಗಿ ನೀಡುವುದರ ಜೊತೆಗೆಯೇ ಉಳಿತಾಯ ಖಾತೆಗಳಿಗಿಂತ ಅಧಿಕ ಬಡ್ಡಿದರವನ್ನು ನಿಮಗೆ ನೀಡುತ್ತದೆ. ಹಾಗೆಯೆ ಎಫ್‌ಡಿಗಳು ಆದಾಯ ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತವೆ.
ಪ್ರಸ್ತುತ, ಸಣ್ಣ ಹಣಕಾಸು ಬ್ಯಾಂಕುಗಳನ್ನು ಹೊರತುಪಡಿಸಿ ಕೆಲವು ಬ್ಯಾಂಕುಗಳು ಲಾಭದಾಯಕ ಬಡ್ಡಿದರಗಳನ್ನು ನೀಡುತ್ತಿವೆ. ಡಿಸಿಬಿ ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಶೇಕಡ 8 ರಷ್ಟು ಹೆಚ್ಚಿನ ಎಫ್‌ಡಿ ಬಡ್ಡಿದರವನ್ನು ನೀಡುತ್ತದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ರೆಪೋ ದರ ಮತ್ತು ಎಫ್‌ಡಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರಂತರವಾಗಿ ಆರು ಬಾರಿ ಬಡ್ಡಿದರಗಳನ್ನು ಹೆಚ್ಚಳ ಮಾಡಿದೆ. ಮೇ 2022 ರಲ್ಲಿ ಪ್ರಾರಂಭವಾದ ರೆಪೋ ದರ ನಿರಂತರವಾಗಿ ಏರಿದೆ. ಇದು ಎಫ್‌ಡಿ ಬಡ್ಡಿದರದ ಮೇಲೂ ಪ್ರಭಾವ ಬೀರಿದೆ. ನಿರಂತರವಾಗಿ ಎಫ್‌ಡಿ ಬಡ್ಡಿದರವೂ ಅಧಿಕವಾಗಿದೆ. ಆದರೆ ಎಫ್‌ಡಿ ಬಡ್ಡಿದರ ಹೆಚ್ಚು ಕಾಲ ಹೆಚ್ಚಾಗಿಯೇ ಉಳಿಯಲಾರದು ಎಂದು ವೈಯಕ್ತಿಕ ಹಣಕಾಸು ತಜ್ಞರು ನಂಬಿದ್ದಾರೆ.
ಎಫ್‌ಡಿ ಬಡ್ಡಿದರ ಅಧಿಕವಾಗಿಯೇ ಉಳಿಯದು
ಡಿಸೆಂಬರ್ 8 ರಂದು ಆರ್‌ಬಿಐ ರೆಪೊ ದರವನ್ನು ಶೇಕಡ 6.5 ರಷ್ಟು ಇರಿಸಿದೆ. ಸತತ ಐದನೇ ಬಾರಿಗೆ ಕೇಂದ್ರ ಬ್ಯಾಂಕ್ ತನ್ನ ರೆಪೋ ದರವನ್ನು ಸ್ಥಿರವಾಗಿರಿಸಿದೆ. ಹೆಚ್ಚುವರಿಯಾಗಿ, ಯುಎಸ್ ಫೆಡರಲ್ ರಿಸರ್ವ್ ಪ್ರಮುಖ ಬಡ್ಡಿದರಗಳನ್ನು ಬದಲಾಗದೆ ಇರಿಸಿದೆ. ಮುಂದಿನ ವರ್ಷ ಮೂರು ದರ ಬಾರಿ ದರ ಕಡಿತ ಮಾಡುವ ನಿರೀಕ್ಷೆಯಿದೆ.
ಹೆಚ್ಚಿನ ಹಣದುಬ್ಬರವನ್ನು ಎದುರಿಸಲು ಫೆಡ್ ಮಾರ್ಚ್ 2022 ರಿಂದ 11 ಬಾರಿ ದರಗಳನ್ನು ಹೆಚ್ಚಿಸಿದೆ. ರೆಪೊ ದರದಲ್ಲಿ ಬದಲಾವಣೆ ಮಾಡಿದ್ದಂತೆ ಫಿಕ್ಸಿಡ್ ಡೆಪಾಸಿಟ್ ಮತ್ತು ಇತರ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಲಾಗುತ್ತದೆ.
ರೆಪೋ ದರದ ಮೇಲೆ ಎಫ್‌ಡಿ ಪ್ರಭಾವ
ರೆಪೋ ದರವು ಹೆಚ್ಚಾದಾಗ, ಬ್ಯಾಂಕ್‌ಗಳು ಗ್ರಾಹಕರಿಗೆ ದರ ಹೆಚ್ಚಳವನ್ನು ಮಾಡುತ್ತದೆ. ಇದರ ಪರಿಣಾಮವಾಗಿ, ಎಫ್‌ಡಿ ಬಡ್ಡಿದರಗಳನ್ನು ಹೆಚ್ಚಿಸಲಾಗುತ್ತದೆ. ರೆಪೊ ದರ ಕಡಿಮೆಯಾದಾಗ, ಎಫ್‌ಡಿ ಬಡ್ಡಿದರಗಳು ಸಹ ಕುಸಿಯುತ್ತವೆ.
ಹೀಗಾದರೆ ಹೂಡಿಕೆದಾರರು ಮಾಡುವುದೇನು?
ದರ ಏರಿಕೆಯ ನಂತರ ಫಿಕ್ಸಿಡ್ ಡೆಪಾಸಿಟ್‌ಗಳು ಕೂಡ ಹೆಚ್ಚಿನ ಬಡ್ಡಿಗೆ ಸಾಕ್ಷಿಯಾಗಿದೆ. "ಗ್ರಾಹಕರು ಹೆಚ್ಚಿನ ಆದಾಯವನ್ನು ನೀಡುವ ಕಡಿಮೆ ಅವಧಿಯ ಎಫ್‌ಡಿಗಳಲ್ಲಿ ತಮ್ಮ ಹಣವನ್ನು ಇಟ್ಟುಕೊಳ್ಳಬಹುದು," ಎಂದು ಬ್ಯಾಂಕ್ ಬಜಾರ್ ಡಾಟ್ ಕಾಮ್‌ನ ಸಿಇಒ ಆದಿಲ್ ಶೆಟ್ಟಿ ಹೇಳಿದರು.
"ಆದರೆ ಪ್ರಸ್ತುತ ಹೆಚ್ಚಿನ ದರಗಳ ಲಾಭವನ್ನು ಪಡೆದುಕೊಳ್ಳುವುದು ಮತ್ತು ನಿಮ್ಮ ಎಫ್‌ಡಿಗಳನ್ನು ಸಾಧ್ಯವಾದಷ್ಟು ಬೇಗ ಖರೀದಿಸಲು ಸಲಹೆ ನೀಡಲಾಗುತ್ತದೆ. ನೀವು 3 ವರ್ಷಗಳವರೆಗಿನ ಅವಧಿಯ ಅಲ್ಪಾವಧಿಯಿಂದ ಮಧ್ಯಮ ಅವಧಿಯ ಎಫ್‌ಡಿಗಳ ಖರೀದಿಸಲು ಯೋಜಿಸುತ್ತಿದ್ದರೆ ಅಂತಹ ಎಫ್‌ಡಿಗಳಲ್ಲಿ ದರಗಳು ಕಡಿಮೆಯಾಗುವ ಸಾಧ್ಯತೆಯಿದೆ," ಎಂದು ಗೋಲ್ಡನ್‌ಪಿ ಸಿಇಒ ಅಭಿಜಿತ್ ರಾಯ್ ಹೇಳಿದ್ದಾರೆ.
ಬ್ಯಾಂಕ್ ಎಫ್‌ಡಿ ಏಣಿ
ದೀರ್ಘಾವಧಿಯವರೆಗೆ ಬ್ಯಾಂಕ್ ಫಿಕ್ಸಿಡ್ ಡೆಪಾಸಿಟ್‌ಗಳಲ್ಲಿ ಹೂಡಿಕೆ ಮಾಡಲು ಬಯಸುವ ಹೂಡಿಕೆದಾರರು ಲ್ಯಾಡರ್ ತಂತ್ರವನ್ನು ಪರಿಗಣಿಸಬಹುದು ಎಂದು ವೈಯಕ್ತಿಕ ಹಣಕಾಸು ತಜ್ಞರು ಸೂಚಿಸುತ್ತಾರೆ. "ರಿಟರ್ನ್ಸ್ ಅನ್ನು ಗರಿಷ್ಠಗೊಳಿಸಲು, ಅವರು ಏಣಿಯಂತಹ ತಂತ್ರಗಳನ್ನು ಅನ್ವೇಷಿಸಬಹುದು," ಎಂದು ಆದಿಲ್ ಶೆಟ್ಟಿ ಸಲಹೆ ನೀಡಿದರು.
ಇಲ್ಲಿ ಗಮನಿಸಿ
ಮೇಲೆ ನೀಡಲಾದ ಮಾಹಿತಿ ಮತ್ತು ಮೇಲೆ ನೀಡಲಾದ ಶಿಫಾರಸುಗಳು ವೈಯಕ್ತಿಕ ವಿಶ್ಲೇಷಕರದ್ದೇ ಹೊರತು ಗುಡ್‌ರಿಟರ್ನ್ಸ್ ಕನ್ನಡದ ಅಭಿಪ್ರಾಯವಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪ್ರಮಾಣೀಕೃತ ತಜ್ಞರ ಅಭಿಪ್ರಾಯವನ್ನು ಪಡೆಯಿರಿ ಎಂದು ನಾವು ಹೂಡಿಕೆದಾರರಿಗೆ ಸಲಹೆ ನೀಡುತ್ತೇವೆ.
More From GoodReturns

Alireza Arafi: ಇಸ್ರೇಲ್ ದಾಳಿಯಲ್ಲಿ ಖಮೇನಿ ನಿಧನ: ಅಲಿರೆಜಾ ಅರಾಫಿ ತಾತ್ಕಾಲಿಕ ಸುಪ್ರೀಂ ನಾಯಕನಾಗಿ ನೇಮಕ!

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Bengaluru Airport: ಫ್ರಾಂಕ್ಫರ್ಟ್ ಕಾರ್ಗೋ ಜೊತೆ ಕೆಂಪೇಗೌಡ ಏರ್ಪೋರ್ಟ್ ಮೈತ್ರಿ… ಭಾರತ–ಯುರೋಪ್ ವ್ಯಾಪಾರಕ್ಕೆ ಹೊಸ ವೇಗ!

Silver Rate Today: ಮತ್ತೆ ಸ್ಥಿರವಾದ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bus Fare Hike: ಯುಗಾದಿ ಹತ್ತಿರದಲ್ಲಿರೋವಾಗ್ಲೇ ಬಸ್ ಟಿಕೆಟ್ ಹೆಚ್ಚಳದ ಸೂಚನೆ! ಎಷ್ಟಾಗಲಿದೆ ಗೊತ್ತಾ ದರ?

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Gold Rate: ಅಂತೂ ಇಳಿಕೆ ಹಾದಿಗೆ ಬಂದ ಚಿನ್ನದ ಬೆಲೆ…ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು?

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ



Click it and Unblock the Notifications