ನಿವೃತ್ತಿ ಬಳಿಕ ನಮ್ಮ ಜೀವನ ಹೇಗೆ ಎಂಬುವುದನ್ನು ನಾವು ಉಳಿತಾಯ ಮಾಡಿರುವ ನಿವೃತ್ತಿ ನಿಧಿಯಿಂದ ನಿರ್ಧಾರವಾಗುತ್ತದೆ. ನಾವು ಎಷ್ಟು ಅಧಿಕ ಉಳಿತಾಯ ಮಾಡಲು ಸಾಧ್ಯವಾಗುತ್ತದೆಯೋ ಅಷ್ಟು ನಮ್ಮ ನಿವೃತ್ತಿ ಜೀವನ ಸರಾಗವಾಗಿ ನಡೆಯುತ್ತದೆ. ನಿವೃತ್ತಿ ಎಂದಾಗ ಕಾಯಿಲೆಗಳು ಸಾಮಾನ್ಯ, ಆರೋಗ್ಯ ಚಿಕಿತ್ಸೆಗೆ ಈ ಹಣವು ಸಹಕಾರಿಯಾಗಲಿದೆ.
ಪ್ರಸ್ತುತ ನಿವೃತ್ತಿ ನಿಧಿಗೆ ಜನರು ಅಧಿಕವಾಗಿ ಪ್ರಾಶಸ್ತ್ಯ ನೀಡುತ್ತಾ ಬರುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮಾಡುವವರು ನಿವೃತ್ತಿ ನಿಧಿಯ ತಯಾರಿಯಲ್ಲಿ ತಮ್ಮ ಸಣ್ಣ ವಯಸ್ಸಿನಲ್ಲೇ ತೊಡಗುತ್ತಾರೆ. ನಾವು ನಿವೃತ್ತಿ ನಿಧಿಯ ಯೋಚನೆಯಲ್ಲಿದ್ದರೆ ನಮಗೆ ಉತ್ತಮ ಆಯ್ಕೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಅಥವಾ ನ್ಯಾಷನಲ್ ಪೆನ್ಶನ್ ಸಿಸ್ಟಮ್ (ಎನ್‌ಪಿಎಸ್) ಆಗಿದೆ.

ತೆರಿಗೆ ಪ್ರಯೋಜನವೂ ಕೂಡಾ ಲಭ್ಯ
2 ಕೋಟಿ ರೂಪಾಯಿಯಿಂದ 6 ಕೋಟಿ ರೂಪಾಯಿಯವರೆಗೆ ನಿವೃತ್ತಿ ನಿಧಿಯನ್ನು ನಾವು ಈ ಯೋಜನೆ ಮೂಲಕ ಸಂಗ್ರಹ ಮಾಡಲು ಸಾಧ್ಯವಾಗುತ್ತದೆ. ಎನ್‌ಪಿಎಸ್‌ನಿಂದ ನೀವು ನಿರ್ದಿಷ್ಟ ಪ್ರಮಾಣದಲ್ಲಿ ನಿವೃತ್ತಿ ನಿಧಿಯನ್ನು ಸಂಗ್ರಹ ಮಾಡುವುದು ಮಾತ್ರವಲ್ಲ, ನಿಮಗೆ ತೆರಿಗೆ ಪ್ರಯೋಜನವು ಕೂಡಾ ಈ ಯೋಜನೆಯಿಂದ ಲಭ್ಯವಾಗುತ್ತದೆ.
ನಿಮಗೆ ನಿಗಧಿತ ಪ್ರಮಾಣದ ಮಾಸಿಕ ಪಿಂಚಣಿಯು ಲಭ್ಯವಾಗುತ್ತದೆ ಅಥವಾ ನಿವೃತ್ತಿ ವೇಳೆಗೆ ದೊಡ್ಡ ಪ್ರಮಾಣದ ಮೊತ್ತವು ನಿಮಗೆ ಲಭ್ಯವಾಗುತ್ತದೆ. ಹಾಗೆಯೇ ನಿವೃತ್ತಿ ಸಂದರ್ಭದಲ್ಲಿ ಬರುವ ಹಣಕಾಸು ಆತಂಕವನ್ನು ಕೂಡಾ ನಿವಾರಿಸುತ್ತದೆ. ಎನ್‌ಪಿಎಸ್ ಪಿಂಚಣಿ ಪಡೆಯುವವರ ವಿಶ್ವಾಸಾರ್ಹವಾಗಿದೆ.
ಉದಾಹರಣೆಯೊಂದಿಗೆ ತಿಳಿಯಿರಿ
2009ರಿಂದ ಆರಂಭವಾದ ಎಸ್‌ಬಿಐ ಪಿಂಚಣಿ ಫಂಡ್ ವಾರ್ಷಿಕವಾಗಿ ಶೇಕಡ 10.43ರಷ್ಟು ರಿಟರ್ನ್ ಅನ್ನು ನೀಡುತ್ತದೆ. ಎಚ್‌ಡಿಎಫ್‌ಸಿ ಪಿಂಚಣಿ ಫಂಡ್ ಆಗಸ್ಟ್ 2013ರಿಂದ ಶೇಕಡ 14.14ರಷ್ಟು ರಿಟರ್ನ್ ಅನ್ನು ನೀಡುತ್ತದೆ. ಈ ನಡುವೆ ಎಲ್‌ಐಸಿ ಪಿಂಚಣಿ ಫಂಡ್ ಶೇಕಡ 12.24ರಷ್ಟು ರಿಟರ್ನ್ ಅನ್ನು ನೀಡುತ್ತದೆ.
ಇತರೆ ಪಿಂಚಣಿ ಸಂಸ್ಥೆಗಳಾದ ಯುಟಿಐ ಎಸ್‌ಆರ್‌ಎಲ್, ಐಸಿಐಸಿಐ ಪಿಂಚಣಿ ಫಂಡ್, ಕೋಟಕ್ ಪಿಂಚಣಿ ಫಂಡ್, ಬಿರ್ಲಾ ಪಿಂಚಣಿ ಫಂಡ್ ಆರಂಭವಾದಾಗಿನಿಂದ ಈವರೆಗೆ ಸುಮಾರು ಶೇಕಡ 11ರಷ್ಟು ರಿಟರ್ನ್ ಅನ್ನು ನೀಡುತ್ತಾ ಬರುತ್ತಿದೆ. ಆದರೆ ಎನ್‌ಪಿಎಸ್ ಚಂದಾದಾರರು ಉತ್ತಮ ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.
ಎನ್‌ಪಿಎಸ್‌ನಲ್ಲಿ ಸುಮಾರು ಶೇಕಡ 10ರಷ್ಟು ರಿಟರ್ನ್ ಲಭ್ಯವಾಗುತ್ತದೆ. 35 ವರ್ಷ, 30 ವರ್ಷ ಮತ್ತು 25 ವರ್ಷಗಳಲ್ಲಿ ಮಾಸಿಕವಾಗಿ 5000 ರೂಪಾಯಿ ಹೂಡಿಕೆಯಿಂದಾಗಿ ಕ್ರಮವಾಗಿ 1.89 ಕೋಟಿ ರೂಪಾಯಿ, 1.13 ಕೋಟಿ ರೂಪಾಯಿ, 66 ಲಕ್ಷ ರೂಪಾಯಿಯನ್ನು ಪಡೆಯಲು ಸಾಧ್ಯವಾಗುತ್ತದೆ.
ಇನ್ನು ನೀವು ಮಾಸಿಕ ಹೂಡಿಕೆಯನ್ನು 10 ಸಾವಿರ ರೂಪಾಯಿಗೆ ಏರಿಕೆ ಮಾಡಿದರೆ, ಅಥವಾ 15 ಸಾವಿರ ರೂಪಾಯಿಗೆ ಏರಿಕೆ ಮಾಡಿದರೆ ನೀವು ಮುಂದಿನ 35 ವರ್ಷಗಳ ಅವಧಿಯಲ್ಲಿ ಕ್ರಮವಾಗಿ 3.8 ಕೋಟಿ ರೂಪಾಯಿ ಅಥವಾ 5.69 ಕೋಟಿ ರೂಪಾಯಿ ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ.
1.89 ಕೋಟಿ ರೂಪಾಯಿ ಪಡೆಯುವುದು ಹೇಗೆ ತಿಳಿಯೋಣ
ಎನ್‌ಪಿಎಸ್ Tier-1 ಖಾತೆಯು ಪ್ರಮುಖವಾಗಿ ನಿವೃತ್ತಿ ನಿಧಿಗಾಗಿ ಮೀಸಲಾಗಿದೆ. ನಿವೃತ್ತಿ ಹೊಂದಿದ ಬಳಿಕ ನೀವು ಒಟ್ಟು ಮೊತ್ತದ ಶೇಕಡ 60ರಷ್ಟನ್ನು ಹಿಂಪಡೆಯಲು ಅವಕಾಶವಿದೆ. ಉಳಿದ ಶೇಕಡ 40ರಷ್ಟು ಮೊತ್ತವನ್ನು ಆನ್ಯೂಟಿ ಲೆಕ್ಕಾಚಾರದಲ್ಲಿ, ಮಾಸಿಕ ಪಿಂಚಣಿ ಲೆಕ್ಕಾಚಾರದಲ್ಲಿ ನಿಮಗೆ ನೀಡಲಾಗುತ್ತದೆ.
ಯಾರು ಸುಮಾರು 2.5 ಕೋಟಿ ರೂಪಾಯಿಯಷ್ಟು ಮೊತ್ತವನ್ನು ಉಳಿತಾಯ ಮಾಡಿರುತ್ತಾರೋ ಅವರು ಮಾಸಿಕವಾಗಿ 50 ಸಾವಿರ ರೂಪಾಯಿ ಪಿಂಚಣಿಯನ್ನು ಪಡೆಯಲು ಅವಕಾಶವಿದೆ. ನೀವು ನಿವೃತ್ತಿ ಹೊಂದುರವಾಗ ಶೇಕಡ 60ರಷ್ಟು ಅಥವಾ 1.5 ಕೋಟಿ ರೂಪಾಯಿ ಮೊತ್ತವನ್ನು ನೀವು ವಿತ್‌ಡ್ರಾ ಮಾಡಿಕೊಳ್ಳಬಹುದಾಗಿದೆ.
ಉಳಿದ 1 ಕೋಟಿ ರೂಪಾಯಿಯು ಆನ್ಯೂಟಿಯಾಗಿ ಲಭ್ಯವಾಗುತ್ತದೆ. ಹಾಗೆಯೇ ಮಾಸಿಕವಾಗಿ 50 ಸಾವಿರ ರೂಪಾಯಿ ಪಿಂಚಣಿಗೆ ಅರ್ಹರಾಗಿರುತ್ತೀರಿ. ಶೇಕಡ 6ರಷ್ಟು ವಾರ್ಷಿಕ ಆನ್ಯೂಟಿ ಇರುತ್ತದೆ. ನೀವು ತೆರೆಗೆ ವಿನಾಯಿತಿಯನ್ನು ಕೂಡಾ ಪಡೆಯಲು ಸಾಧ್ಯವಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ಸುಮಾರಯ 1.5 ಲಕ್ಷ ರೂಪಾಯಿಯವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.


Click it and Unblock the Notifications