ಕಳೆದ ಒಂದು ವರ್ಷದ ಅವಧಿಯನ್ನು ನಾವು ನೋಡಿದಾಗ ಭಾರತದಲ್ಲಿ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು ಅಧಿಕ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿರುವುದನ್ನು ಗಮನಿಸಬಹುದಾಗಿದೆ. ಈಗ ಫಿಕ್ಸಿಡ್ ಡೆಪಾಸಿಟ್ ಮೇಲಿನ ಹೂಡಿಕೆಗೆ ಅಧಿಕ ಬೇಡಿಕೆಯಿದೆ, ಎಫ್‌ಡಿ ಹೂಡಿಕೆಯಿಂದ ಅಧಿಕ ಲಾಭವು ಕೂಡಾ ನಮಗಿದೆ. ದೇಶದಲ್ಲಿ ಸಾಮಾನ್ಯ ಎಫ್‌ಡಿಗಳಂತೆ ಎನ್‌ಆರ್‌ಇ ಎಫ್‌ಡಿಗಳು ಕೂಡಾ ಇದೆ.
ನಾನ್-ರೆಸಿಡೆನ್ಶಿಯಲ್ ಎಕ್ಸ್‌ಟರ್ನಲ್ (ಎನ್‌ಆರ್‌ಇ) ಫಿಕ್ಸಿಡ್ ಡೆಪಾಸಿಟ್‌ಗಳಲ್ಲಿ (ಎಫ್‌ಡಿ) ಹೂಡಿಕೆ ಮಾಡುವಾಗ, ವಿವಿಧ ಬ್ಯಾಂಕ್‌ಗಳು ನೀಡುವ ಬಡ್ಡಿದರಗಳನ್ನು ಹೋಲಿಕೆ ಮಾಡಿ ನೋಡಿ, ಎಲ್ಲಿ ಅಧಿಕ ರಿಟರ್ನ್ ಅನ್ನು ಪಡೆಯಬಹುದು ಎಂದು ತಿಳಿಯವುದು ಅತೀ ಮುಖ್ಯವಾಗಿದೆ. ಭಾರತೀಯರಲ್ಲದ ನಿವಾಸಿಗಳು (ಎನ್‌ಆರ್‌ಐ) ವಿವಿಧ ಎನ್‌ಆರ್‌ಇ ಖಾತೆ ಆಯ್ಕೆಗಳನ್ನು ಹೊಂದಿದ್ದಾರೆ.

ಎನ್‌ಆರ್‌ಇಗಳಿಗೆ ಉಳಿತಾಯ ಖಾತೆ, ಕರೆಂಟ್ ಖಾತೆ, ರೆಕ್ಯೂರಿಂಗ್ ಡೆಪಾಸಿಟ್, ಫಿಕ್ಸಿಡ್ ಡೆಪಾಸಿಟ್ ಖಾತೆಗಳು ಎಂಬ ಹಲವಾರು ಆಯ್ಕೆಗಳು ಇದೆ. ನೀವು ವೈಯಕ್ತಿಕ ಅಥವಾ ಸಂಯೋಜಿತ ಎನ್‌ಆರ್‌ಇ ಖಾತೆಗಳನ್ನು ನಾವು ತೆರೆಯಬಹುದಾಗಿದೆ. ಬ್ಯಾಂಕ್ ಹಾಗೂ ನೀವು ಡೆಪಾಸಿಟ್ ಮಾಡುವ ಮೊತ್ತದ ಆಧಾರದಲ್ಲಿ ನಿಮ್ಮ ಎನ್‌ಆರ್‌ಇ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು ಅವಲಂಭಿತವಾಗಿದೆ. 2023ರಲ್ಲಿ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಪಿಎನ್‌ಬಿಯಲ್ಲಿ ಎನ್‌ಆರ್‌ಇ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರ ಎಷ್ಟಿದೆ ಎಂದು ತಿಳಿಯಿರಿ....
ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಎನ್‌ಆರ್‌ಇ ಎಫ್‌ಡಿ ಬಡ್ಡಿದರ
ಎಸ್‌ಬಿಐ: ಭಾರತದ ಅತೀ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎನ್‌ಆರ್‌ಇಗಳಿಗೆ ಫಿಕ್ಸಿಡ್ ಡೆಪಾಸಿಟ್ ಅನ್ನು ಹೊಂದಿದೆ. ಎಸ್‌ಬಿಐನಲ್ಲಿ ಒಂದು ವರ್ಷದಿಂದ ಹತ್ತು ವರ್ಷಗಳ ಅವಧಿಯ 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎನ್‌ಆರ್‌ಇ ಎಫ್‌ಡಿಗೆ ಶೇಕಡ 6.50ರಿಂದ ಶೇಕಡ 7.10ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಪರಿಷ್ಕೃತ ಬಡ್ಡಿದರವು ಫೆಬ್ರವರಿ 15, 2023ರಿಂದ ಜಾರಿಗೆ ಬರುತ್ತದೆ.
ಎಚ್‌ಡಿಎಫ್‌ಸಿ: ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರಮುಖ ಹಾಗೂ ಅತೀ ದೊಡ್ಡ ಬ್ಯಾಂಕ್ ಆಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎನ್‌ಆರ್‌ಇಗಳಿಗೆ ಹಲವಾರು ಅವಧಿಗಳ ಎಫ್‌ಡಿ ಇದೆ. 7 ದಿನದಿಂದ ಹಿಡಿದು ಹತ್ತು ವರ್ಷಗಳವರೆಗಿನ ಅವಧಿಯ ಎಫ್‌ಡಿಗಳು ಇದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎನ್‌ಆರ್‌ಇ ಎಫ್‌ಡಿ ಹೂಡಿಕೆಗೆ ಸಾಮಾನ್ಯ ನಾಗರಿಕರಿಗೆ ಶೇಕಡ 3ರಿಂದ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ.
ಈ ಪರಿಷ್ಕೃತ ಬಡ್ಡಿದರ ಮೇ 29, 2023ರಿಂದ ಜಾರಿಗೆ ಬರಲಿದೆ. ಇನ್ನು ಹಿರಿಯ ನಾಗರಿಕರಿಗೆ ಅದೇ ಮೌಲ್ಯದ ಎನ್‌ಆರ್‌ಇ ಎಫ್‌ಡಿ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಶೇಕಡ 3.50ರಿಂದ ಶೇಕಡ 7.75ರಷ್ಟು ಬಡ್ಡಿದರ ನೀಡಲಾಗುತ್ತದೆ. ಸಾಮಾನ್ಯ ನಾಗರಿಕರಿಗಿಂತ ಕೊಂಚ ಅಧಿಕ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ಈ ಬ್ಯಾಂಕ್‌ನಲ್ಲಿ ನೀಡಲಾಗುತ್ತದೆ.
ಐಸಿಐಸಿಐ ಬ್ಯಾಂಕ್: ಐಸಿಐಸಿಐ ಬ್ಯಾಂಕ್ ಇತ್ತೀಚೆಗೆ ತನ್ನ ಎನ್‌ಆರ್‌ಇ ಎಫ್‌ಡಿ ಬಡ್ಡಿದರವನ್ನು ಪರಿಷ್ಕರಣೆ ಮಾಡಿದೆ. ಈ ನೂತನ ಬಡ್ಡಿದರವು ಫೆಬ್ರವರಿ 24, 2023ರಿಂದ ಜಾರಿಗೆ ಬರುತ್ತದೆ. ಬ್ಯಾಂಕ್ ಈಗ 1 ವರ್ಷದಿಂದ 10 ವರ್ಷಗಳವರೆಗಿನ ಎನ್‌ಆರ್‌ಇ ಎಫ್‌ಡಿ ಅವಧಿಗಳಿಗೆ ಶೇಕಡ 6.70ರಿಂದ ಶೇಕಡ 7.10ರಷ್ಟು ಬಡ್ಡಿದರವನ್ನು ನೀಡುತ್ತದೆ.
ಪಿಎನ್‌ಬಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಎನ್‌ಆರ್‌ಇ ಫಿಕ್ಸಿಡ್ ಡೆಪಾಸಿಟ್‌ಗಳನ್ನು 1 ವರ್ಷದಿಂದ 10 ವರ್ಷಗಳ ಅವಧಿಗೆ ಶೇಕಡ 6.50ರಿಂದ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡುತ್ತದೆ. ಈ ಬಡ್ಡಿದರವು ಮೇ 18, 2023 ರಿಂದ ಜಾರಿಯಲ್ಲಿವೆ.


Click it and Unblock the Notifications