ನಿಯಮಿತ ಆದಾಯವಿಲ್ಲದೇ ಯಾರಿಗಾದರೂ ನಿವೃತ್ತಿ ನಂತರ ಜೀವನ ಸವಾಲಿನದ್ದಾಗಿರಬಹುದು. ಯಾಕೆಂದರೆ ಉದ್ಯೋಗಸ್ಥರಿಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ನಿವೃತ್ತಿಯಾಗುವುದು ಕಷ್ಟದಾಯಕವಾಗಬಹುದು. ಇದಕ್ಕಾಗಿ ಸರ್ಕಾರ ವಿವಿಧ ಪಿಂಚಣಿ ಯೋಜನೆಗಳನ್ನು ಪರಿಚಯಿಸಿದೆ.
ಅದು ನಿವೃತ್ತ ಅಥವಾ ಹಿರಿಯ ನಾಗರಿಕರಿಗೆ ನಿಯಮಿತ ಆದಾಯವನ್ನು ಒದಗಿಸುತ್ತದೆ. ಇದರಿಂದ ಮುಂದೆ ಆರಾಮದಾಯಕ ಜೀವನ ಸಾಗಿಸಬಹುದಾಗಿದೆ. ಅದರಲ್ಲೂ ಪಿಂಚಣಿ ಯೋಜನೆ ಸಾಮಾನ್ಯ ವರ್ಗದ ಜನರಿಗೆ ಒಂದು ಪ್ರಮುಖ ಆರ್ಥಿಕ ಬೆಂಬಲವಾಗಿ ಕೆಲಸ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ಮೌಲ್ಯಯುತ ಹೂಡಿಕೆ ಆಯ್ಕೆಯಾಗುತ್ತದೆ.

ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ವು, ಓಲ್ಡ್ ಪೆನ್ಷನ್ ಸ್ಕೀಮ್ (OPS) ಯು 2004 ಎನ್‌ಪಿಎಸ್ ಆಗಿ ಬದಲಾಯಿಸಿತು. ಇದು ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಸೇವೆಯನ್ನು ನೀಡುತ್ತದೆ. ಆರಂಭದಲ್ಲಿ, ಇದು ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿತ್ತು, ಆದರೆ ನಂತರ ಅದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು.
ಎನ್‌ಪಿಎಸ್ ಪಿಂಚಣಿಯನ್ನು ಖಾತ್ರಿಪಡಿಸುವುದು ಮಾತ್ರವಲ್ಲದೆ ಹೂಡಿಕೆಯ ಅವಕಾಶಗಳನ್ನು ನೀಡುತ್ತದೆ. ಇದು ನಿಗದಿತ ಪಿಂಚಣಿ ಮೊತ್ತವನ್ನು ಖಾತ್ರಿಪಡಿಸದಿದ್ದರೂ, ಹೂಡಿಕೆಯ ಮೇಲೆ ಹೆಚ್ಚಿನ ಆದಾಯದ ಸಾಮರ್ಥ್ಯವನ್ನು ಹೊಂದಿದೆ.
ಎನ್‌ಪಿಎಸ್ ಅನ್ನು ಎರಡು ಶ್ರೇಣಿ (ಟೈರ್) ಗಳಾಗಿ ವಿಭಜಿಸಲಾಗಿದೆ. ಇದರಲ್ಲಿ ಟೈರ್ I ಮತ್ತು ಟೈರ್II ಎರಡು ರೀತಿಯ ಖಾತೆಗಳಿವೆ. ಟೈರ್ I ಖಾತೆಯನ್ನು ಆಯ್ಕೆ ಮಾಡುವುದರಿಂದ ವ್ಯಕ್ತಿಗಳು ನಿವೃತ್ತಿಯ ನಂತರ ಮಾತ್ರ ಹಣವನ್ನು ಹಿಂಪಡೆಯಬಹುದಾಗಿದೆ.
ಆದರೆ ಟೈರ್II ನಲ್ಲಿಎರಡು ಬಾರಿ ಅಕಾಲಿಕವಾಗಿ ಹಣ ಹಿಂಪಡೆಯಬಹುದಾಗಿದೆ. ಇದರೊಂದಿಗೆ ಎನ್ ಪಿಎಸ್ ನಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿಸಿಡಿ ಅಡಿಯಲ್ಲಿ 1.5 ಲಕ್ಷ ರೂಪಾಯಿವರೆಗೆ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ.
ವರದಿಗಳ ಪ್ರಕಾರ, ಎನ್‌ಪಿಎಸ್ ಕಾರ್ಪಸ್‌ನ ಶೇಕಡಾ 60 ರಷ್ಟು ಹಿಂತೆಗೆದುಕೊಂಡರೆ, ಅದು ತೆರಿಗೆ-ವಿನಾಯತಿಯಾಗುತ್ತದೆ. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್) ನಿವೃತ್ತಿ ಯೋಜನೆಗೆ ಆಕರ್ಷಕ ಆಯ್ಕೆಯಾಗಿದೆ. ಇದರಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿಯ ಸಮಯದಲ್ಲಿ ನಿಯಮಿತ ಆದಾಯವನ್ನು ಪಡೆಯಲು ಅನುಕೂಲವಾಗುತ್ತದೆ.
ಟೈರ್ I ಖಾತೆದಾರರು ಮಾತ್ರ ಟೈರ್ II ನಲ್ಲಿ ಮಾತ್ರ ಹೂಡಿಕೆ ಮಾಡಬಹುದು. ಟೈರ್II ಖಾತೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸನ್ನು ತಲುಪಿದ ನಂತರ, ಜೀವ ವಿಮಾ ಕಂಪನಿಯಿಂದ ವರ್ಷಾಶನವನ್ನು ಖರೀದಿಸಲು ನಿಮ್ಮ ಎನ್‌ಪಿಎಸ್ ನಿಧಿಯ ಕನಿಷ್ಠ ಶೇಕಡ 40 ಅನ್ನು ನೀವು ಬಳಸಿಕೊಳ್ಳಬೇಕು ಮತ್ತು ಶೇಕಡ 60 ವರೆಗಿನ ಮೊತ್ತವನ್ನು ಹಿಂಪಡೆಯಬಹುದಾಗಿದೆ.
ಎನ್‌ಪಿಎಸ್‌ಗೆ ಸಂಬಂಧಿಸಿದ ಕೆಲವು ಅನಾನುಕೂಲತೆಗಳನ್ನು ಕೂಡಾ ಇದೆ. ಯಾಕೆಂದರೆ ಇದುಸಂಬಳದಿಂದ ಕಡ್ಡಾಯವಾದ ಹಣ ಕಡಿತವನ್ನು ಮಾಡುತ್ತದೆ . ಮಾತ್ರವಲ್ಲದೇ ನಿವೃತ್ತಿಯ ನಂತರ ಪಡೆದ ಹಣವು ತೆರಿಗೆಗೆ ಒಳಪಟ್ಟಿರುತ್ತದೆ. ಇದಲ್ಲದೆ, ಟೈರ್ I ಖಾತೆ ಆಯ್ಕೆ ಮಾಡಿಕೊಂಡ ವ್ಯಕ್ತಿಯು 60 ವರ್ಷವನ್ನು ತಲುಪುವವರೆಗೆ ಹಣವನ್ನು ಹಿಂಪಡೆಯಲಾಗುವುದಿಲ್ಲ.
1950 ರ ದಶಕದಲ್ಲಿ ಸ್ಥಾಪಿಸಲಾದ ಓಲ್ಡ್ ಪೆನ್ಷನ್ ಸ್ಕೀಮ್(OPS), ಸರ್ಕಾರಿ ನೌಕರರಿಗೆ ಮಾತ್ರ ಲಭ್ಯವಿತ್ತು. ಈ ಯೋಜನೆಯಡಿಯಲ್ಲಿ, ನೌಕರರು ತಮ್ಮ ನಿವೃತ್ತಿಯಾಗುವ ವೇಳೆ ಇದ್ದ ವೇತನದ 50 ಪ್ರತಿಶತವನ್ನು ಮಾಸಿಕ ಪಿಂಚಣಿಯಾಗಿ ತುಟ್ಟಿ ಭತ್ಯೆಯೊಂದಿಗೆ ಪಡೆಯುತ್ತಿದ್ದರು. ಎನ್‌ಪಿಎಸ್‌ಗಿಂತ ಭಿನ್ನವಾಗಿ, ಇದು ಉದ್ಯೋಗಿಗಳ ವೇತನದಿಂದ ಹಣ ಕಡಿತವಾಗುತ್ತಿರಲಿಲ್ಲ. ಮಾತ್ರವಲ್ಲದೇ ಈ ಯೋಜನೆಯ ಮೂಲಕ ಪಡೆದ ಆದಾಯವು ತೆರಿಗೆ ಮುಕ್ತವಾಗಿತ್ತು.


Click it and Unblock the Notifications