ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಖಾತೆಯು ನಿವೃತ್ತಿ ಉಳಿತಾಯವನ್ನು ಉತ್ತೇಜಿಸುವ ಹಾಗೂ ತೆರಿಗೆ ಪ್ರಯೋಜನಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿರುವ ಸರ್ಕಾರಿ ಬೆಂಬಲಿತ ದೀರ್ಘಾವಧಿಯ ಉಳಿತಾಯ ಯೋಜನೆಯಾಗಿದೆ. ಈ ಭವಿಷ್ಯ ನಿಧಿ ಯೋಜನೆಯು 15 ವರ್ಷಗಳ ಅವಧಿ ಮತ್ತು ಶೇ.7.1ರಷ್ಟು ವಾರ್ಷಿಕ ಬಡ್ಡಿ ದರದೊಂದಿಗೆ ಸ್ಥಿರವಾದ ಆದಾಯವನ್ನು ನೀಡುತ್ತದೆ.
ಅಲ್ಲದೆ ಸುರಕ್ಷಿತ ಹೂಡಿಕೆಯ ಆಯ್ಕೆಯನ್ನು ಕೂಡ ಒದಿಸುತ್ತದೆ. ತಮ್ಮ ಉತ್ತಮ ಭವಿಷ್ಯಕ್ಕಾಗಿ ಆನ್‌ಲೈನ್ ಮೂಲಕ ಎಸ್‌ಬಿಐ ಪಿಪಿಎಫ್ ಖಾತೆಯನ್ನು ತೆರೆಯುವುದು ಅತ್ಯಂತ ಸರಳ ವಿಧಾನವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (ಎಸ್‌ಬಿಐ) ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿಪಿಎಫ್ ಖಾತೆಯನ್ನು ಆನ್‌ಲೈನ್‌ನಲ್ಲಿ ತೆರೆಯುವುದಕ್ಕೆ ಹಂತ-ಹಂತವಾದ ಮಾಹಿತಿ ಇಲ್ಲಿದೆ. ಮುಂದೆ ಓದಿ...

ಎಸ್‌ಬಿಐನಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ತೆರೆಯುವುದು ಹೇಗೆ?
ಹಂತ 1: ನಿಮ್ಮ ಸರಿಯಾದ ರುಜುವಾತುಗಳನ್ನು ಬಳಸಿಕೊಂಡು www.onlinesbi.com ನಲ್ಲಿ ನಿಮ್ಮ ಎಸ್‌ಬಿಐ ಆನ್‌ಲೈನ್ ಖಾತೆಗೆ ಲಾಗಿನ್ ಆಗಬೇಕು.
ಹಂತ 2: ಮೇಲೆ ಬಲಗಡೆ ಇರುವ ರಿಕ್ವೆಸ್ಟ್ ಅಂಡ್ ಎನ್‌ಕ್ವಾರಿ ಸೆಕ್ಷನ್ ಮೇಲೆ ಕ್ಲಿಕ್ ಮಾಡಬೇಕು.
ಹಂತ 3: ಡ್ರಾಪ್ ಡೌನ್ ಮೆನುವಿನಿಂದ ಹೊಸ ಪಿಪಿಎಫ್ ಅಕೌಂಟ್ ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
ಹಂತ 4: ಈ ಪಿಪಿಎಫ್ ಅಕೌಂಟ್ ಪೇಜ್‌ನಲ್ಲಿ ನಿಮ್ಮ ಹೆಸರು, ವಿಳಾಸ, ಪ್ಯಾನ್ ಕಾರ್ಡ್ ಹಾಗೂ ಸಿಐಎಫ್ ಸಂಖ್ಯೆಯ ವಿವರಗಳನ್ನು ತೋರಿಸುತ್ತದೆ.
ಹಂತ 5: ಒಂದುವೇಳೆ ನೀವು ಅಪ್ರಾಪ್ತರ ಪರವಾಗಿ ಖಾತೆಯನ್ನು ತೆರೆಯುತ್ತಿದ್ದರೆ, ಅಲ್ಲಿ ನೀಡಿರುವ ಬಾಕ್ಸ್ ಅನ್ನು ಟಿಕ್ ಮಾಡಿ.
ಹಂತ 6: ಅಪ್ರಾಪ್ತ ವಯಸ್ಸಿನವರಿಗೆ ಖಾತೆಯನ್ನು ತೆರೆಯಲು ಬಯಸದಿದ್ದರೆ ನಿಮ್ಮ ಪಿಪಿಎಫ್ ಖಾತೆಯನ್ನು ಓಪನ್ ಮಾಡಲು ಬಯಸುವ ಶಾಖೆಯ ಕೋಡ್ ಅನ್ನು ನಮೂದಿಸಿ.
ಹಂತ 7: ನೀವು ಬಯಸುವ ಬ್ಯಾಂಕ್ ಶಾಖೆಯ ಹೆಸರು ಹಾಗೂ ಶಾಖೆಯ ಕೋಡ್ ಅನ್ನು ನಮೂದಿಸಿ. ಜತೆಗೆ ಆದ್ಯತೆ ಮೇರೆಗೆ ಕನಿಷ್ಠ ಐದು ಮಂದಿ ನಾಮಿನಿಗಳ ವಿವರಗಳನ್ನು ಒದಗಿಸಬೇಕು.
ಹಂತ 8: ಸಬ್ಮಿಟ್ ಬಟನ್ ಅನ್ನು ಕ್ಲಿಕ್ ಮಾಡಿ. ಆಗ ನಿಮ್ಮ ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಕೆ ಮಾಡಲಾಗಿದೆ ಎನ್ನುವ ಸೂಚನೆ ಕಾಣಿಸುತ್ತದೆ.
ಹಂತ 9: ಅಲ್ಲಿ ಕಾಣಿಸುವ ರೆಫರೆನ್ಸ್ ನಂಬರ್ ಹಾಗೂ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹಂತ 10: ಪ್ರಿಂಟ್ ಆನ್‌ಲೈನ್ ಅಪ್ಲಿಕೇಷನ್ ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಅಕೌಂಟ್ ಓಪನಿಂಗ್ ಫಾರ್ಮ್‌ನ ಪ್ರಿಂಟ್ ಅನ್ನು ತೆಗೆದು ಇಟ್ಟುಕೊಳ್ಳಬೇಕು.
ಹಂತ 11: ಕೊನೆಯದಾಗಿ ಪಿಡಿಎಫ್ ಮಾದರಿಯ ಫಾರ್ಮ್ ಅನ್ನು ನಿಮ್ಮ ಕೆವೈಸಿ ದಾಖಲೆಗಳು ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ 30 ದಿನದೊಳಗೆ ಎಸ್‌ಬಿಐ ಬ್ಯಾಂಕ್ ಶಾಖೆಗೆ ಸಲ್ಲಿಕೆ ಮಾಡಬೇಕು.
ಆನ್‌ಲೈನ್‌ನಲ್ಲಿ ಎಸ್‌ಬಿಐ ಪಿಪಿಎಫ್ ಖಾತೆ ತೆರೆಯಲು ಅಗತ್ಯವಿರುವ ದಾಖಲೆಗಳು:
1. ನಿಮ್ಮ ಆಧಾರ್ ಸಂಖ್ಯೆಯು ಎಸ್‌ಬಿಐ ಉಳಿತಾಯ ಖಾತೆಯೊಂದಿಗೆ ಲಿಂಕ್ ಮಾಡಿರಬೇಕು.
2. ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಒಟಿಪಿ ಪಡೆಯುವ ಮೂಲಕ ಆಕ್ಟಿವೇಟ್ ಮಾಡಿಕೊಳ್ಳಬೇಕು.
ಈ ರೀತಿಯ ಹಂತಗಳ ಪೂರೈಕೆ ಹಾಗೂ ದಾಖಲೆಗಳನ್ನು ಒದಗಿಸುವ ಮೂಲಕ ನೀವು ಆನ್‌ಲೈನ್ ಮೂಲಕ ಎಸ್‌ಬಿಐ ಪಿಪಿಎಫ್ ಖಾತೆಯನ್ನು ತೆರೆಯಬಹುದು. ನಿಮ್ಮ ಆರ್ಥಿಕ ಭವಿಷ್ಯವನ್ನು ರೂಪಿಸುವುದಕ್ಕೆ ಇದೊಂದು ಉತ್ತಮ ಹಾಗೂ ಸರಳ ವ್ಯವಸ್ಥೆಯಾಗಿದೆ.


Click it and Unblock the Notifications