ಅನೇಕರು ಉದ್ಯೋಗ ಎಲ್ಲಾ ಸಾಕು ಸ್ವಂತ ಬಿಜಿನೆಸ್ ಮಾಡಬೇಕು ಎಂದು ಆಸೆಯನ್ನಿಟ್ಟುಕೊಂಡಿರುತ್ತಾರೆ. ನನ್ನದೇ ಆದ ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಬೇಕು ಎಂದು ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಅದನ್ನು ಕಾರ್ಯ ರೂಪಕ್ಕೆ ತರುವುದು ಹೇಗೆ ಎಂಬುದು ತಿಳಿಯದೇ ಗೊಂದಲದಲ್ಲಿರುತ್ತಾರೆ. ಜೊತೆಗೆ ಮಾಹಿತಿಯ ಕೊರತೆಯು ಇರುವುದು ಸಹಜ.
ತನ್ನದೇ ಆದ ಸ್ವಂತ ಬಿಜಿನೆಸ್ ಆರಂಭಿಸಬೇಕು. 2020ರಲ್ಲಿ ಹೊಸ ಬಿಜಿನೆಸ್ ಆರಂಭಿಸಿ ಹೊಸ ಹೆಜ್ಜೆ ಇಡಬೇಕು ಎಂದು ಬಯಸುವವರಿಗೆ ಈ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ ಓದಿ.
1. ಚೈಲ್ ಕೇರ್ ಕೇಂದ್ರಗಳನ್ನು ಆರಂಭಿಸುವುದು
ಈಗಿನ ಕಾಲದಲ್ಲಿ ನಗರ, ಪಟ್ಟಣಗಳಲ್ಲಿರುವ ಬಹುತೇಕ ಪತಿ - ಪತ್ನಿಯರಿಗೆ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಮಯ ಇರುವುದಿಲ್ಲ. ಮಕ್ಕಳನ್ನು ಮನೆಯಲ್ಲಿ ಬಿಟ್ಟು ತೆರಳಲು ಸಾಧ್ಯವಿರುವುದಿಲ್ಲ. ಹೀಗಾಗಿಯೇ ಚೈಲ್ಡ್ ಕೇರ್ ಕೇಂದ್ರಗಳಿಗೆ ಬೇಡಿಕೆ ಹೆಚ್ಚಿದೆ. ನಿಮ್ಮಲ್ಲಿ ಸ್ವಲ್ಪ ವಿಶಾಲವೆನಿಸುವ ಮನೆಯಿದ್ದರೆ ಅದನ್ನೇ ಚೈಲ್ಡ್ ಕೇರ್ ಕೇಂದ್ರವಾಗಿ ಪರಿವರ್ತಿಸಬಹುದು. ಇಲ್ಲವೆ ಯಾವುದಾದರು ಜಾಗವನ್ನು ಬಾಡಿಗೆ ತೆಗೆದುಕೊಂಡು ಚೈಲ್ಡ್ ಕೇರ್ ಕೇಂದ್ರಗಳನ್ನು ತೆರೆಯಬಹುದು.
2. ಇಂಟರ್‌ನೆಟ್ ಟ್ಯೂಷನ್ ನೀಡಬಹುದು
ಈಗಿನ ಆಧುನಿಕತೆಯಲ್ಲಿ ಎಲವೂ ಇಂಟರ್‌ನೆಟ್ ನಲ್ಲಿ ಮುಗಿದುಬಿಡುತ್ತಿದೆ. ಶಾಲಾ ಮಕ್ಕಳು ಇಂಟರ್‌ನೆಟ್‌ನಲ್ಲೇ ಟ್ಯೂಷನ್ ಪಡೆಯುತ್ತಿದ್ದಾರೆ. ನಿಮಗೆ ಪಾಠ ಮಾಡಲು ಆಸಕ್ತಿಯಿದ್ರೆ, ಟ್ಯೂಟರ್ ಆಗಿ ಸ್ವ ಉದ್ಯೋಗ ಆರಂಭಿಸಬಹುದು. ಇದಕ್ಕೆ ಪೂರಕವಾಗಿ ಒಂದು ವೆಬ್‌ಸೈಟ್ ರಚಿಸಿಕೊಂಡು, ಮನೆಯ ಒಂದು ಕೋಣೆಯನ್ನೇ ಕ್ಲಾಸ್‌ರೂಂ ವಾತಾವರಣದಂತೆ ಮಾಡಿಕೊಳ್ಳಬಹುದು.
ಇತ್ತೀಚೆಗೆ ಆನ್‌ಲೈನ್ ಟ್ಯೂಟರ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಇಂಟರ್‌ನೆಟ್‌ನಲ್ಲೇ ಟ್ಯೂಷನ್ ನೀಡಬಹುದು. ಇದರಿಂದ ಉತ್ತಮ ಆದಾಯವನ್ನೂ ಗಳಿಸಬಹುದು.
3. ಡ್ಯಾನ್ಸ್, ಯೋಗ ಶಾಲೆ ಆರಂಭಿಸುವುದು
ನಿಮಗೆ ಮ್ಯೂಸಿಕ್, ಡ್ಯಾನ್ಸ್, ಯೋಗ ಇತ್ಯಾದಿಗಳಲ್ಲಿ ಆಸಕ್ತಿ ಇದ್ದರೆ ಈ ಕ್ಷೇತ್ರವು ಒಳ್ಳೆಯ ಆದಾಯ ಗಳಿಸಬಹುದಾಗಿದೆ. ಡ್ಯಾನ್ಸ್, ಮ್ಯೂಸಿಕ್ ಇಲ್ಲವೇ ಯೋಗದಲ್ಲಿ ಉತ್ತಮ ಹಿಡಿತವಿದ್ದರೆ ಇವುಗಳನ್ನು ಕಲಿಸುವ ಪುಟ್ಟ ಶಾಲೆಯನ್ನು ನೀವು ಆರಂಭಿಸಬಹುದು. ಮನೆಯ ಟೆರೇಸ್‌ನಲ್ಲಿ, ಮನೆಯ ಮುಂದಿರುವ ಖಾಲಿ ಜಾಗದಲ್ಲಿ ಕಲಿಸಬಹುದಾಗಿದೆ.
4. ಫ್ರೀಲ್ಯಾನ್ಸರ್ ಫೋಟೋಗ್ರಫಿ
ನೀವು ಫೋಟೋಗ್ರಫಿ ಕೇವಲ ಹವ್ಯಾಸವಾಗಿ ಮಾಡಿಕೊಂಡಿದ್ದೀರಾ? ನಿಮಗೆ ಈ ಫೀಲ್ಡ್‌ನಲ್ಲಿ ಮುಂದುವರಿಯುವ ಆಸಕ್ತಿ ಇದ್ದರೆ ಸ್ವಂತ ಸ್ಟುಡಿಯೋ ತೆರೆಯಬಹುದು. ಫ್ರೀಲ್ಯಾನ್ಸರ್ ಫೋಟೊಗ್ರಾಫರ್ ಸಹ ಆಗಬಹುದು. ಅಲ್ಲದೆ, ಮದುವೆ ಸೀಸನ್‌ಗಳಲ್ಲಿ ಛಾಯಾಗ್ರಹಕರಿಗೆ ಒಳ್ಳೆಯ ಬೇಡಿಕೆ ಹೆಚ್ಚಿದ್ದು, ಉತ್ತಮ ಆದಾಯ ಸಂಪಾದಿಸಬಹುದು.
5. ಕೆಟರಿಂಗ್ ಸೇವೆ ಆರಂಭಿಸುವುದು.
ಸದ್ಯ ನಗರ ಪಟ್ಟಣಗಳಲ್ಲಿ ಹೆಚ್ಚಾಗಿ ಬೇಡಿಕೆ ಇರುವುದು ಕೆಟರಿಂಗ್ ಸೇವೆ. ಮದುವೆ ಸಮಾರಂಭಗಳು, ಯಾವುದೇ ಪಾರ್ಟಿಗಳಿಗೆ ಕೆಟರಿಂಗ್ ಸೇವೆಯ ಬೇಡಿಕೆ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಅಡುಗೆಯವರನ್ನು ನೇಮಿಸಿಕೊಂಡು ಆಹಾರ ತಯಾರಿಸುವುದು ಕಡಿಮೆಯಾಗಿದೆ. ಹೀಗಾಗಿಯೇ ಕೆಟರಿಂಗ್ ಬೇಡಿಕೆ ಹೆಚ್ಚು.
ಈ ವರ್ಷ ಸ್ವಂತವಾದ ಬಿಜಿನೆಸ್ ಆರಂಭಿಸಬೇಕು ಎಂದು ಅಂದಕೊಂಡವರಿಗೆ ಇದು ಕೂಡ ಉತ್ತಮ ಆಯ್ಕೆಯಾಗಿದೆ.


Click it and Unblock the Notifications