ಪ್ಯಾನ್ ಅಥವಾ ಪರ್ಮನೆಂಟ್ ಅಕೌಂಟ್ ನಂಬರ್ ಕಾರ್ಡ್ ಆದಾಯ ತೆರಿಗೆ ಇಲಾಖೆಯು ವೈಯಕ್ತಿಕವಾಗಿ ಓರ್ವ ವ್ಯಕ್ತಿಗೆ, ಸಂಸ್ಥೆಗೆ ಅಥವಾ ಇತರೆ ಕಂಪನಿಗಳಿಗೆ ನೀಡುವ ಹತ್ತು ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಪ್ಯಾನ್ ಕಾರ್ಡ್ ಪ್ರಸ್ತುತ ಎಲ್ಲ ವಹಿವಾಟುಗಳಿಗೆ ಅತೀ ಮುಖ್ಯವಾಗಿದೆ. ನಮ್ಮ ಗುರುತಿನ ದಾಖಲೆಯನ್ನಾಗಿಯೂ ಪ್ಯಾನ್ ಕಾರ್ಡ್ ಅನ್ನು ಬಳಕೆ ಮಾಡಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಸಾಲ ಪಡೆಯಲು ಐಟಿಆರ್ ಸಲ್ಲಿಕೆಗೆ ಪ್ಯಾನ್ ಕಾರ್ಡ ಮುಖ್ಯವಾಗಿದೆ.
ಪ್ಯಾನ್ ಕಾರ್ಡ್‌ನಲ್ಲಿ ಹೆಸರು, ಛಾಯಾಚಿತ್ರ, ಜನನ ಪ್ರಮಾಣಪತ್ರ, ಪ್ಯಾನ್ ಸಂಖ್ಯೆಯನ್ನು ಹೊಂದಿರುತ್ತದೆ. ಪ್ಯಾನ್ ಸಂಖ್ಯೆಯು ಪ್ರತಿ ವ್ಯಕ್ತಿಗೆ ಬೇರೆ ಬೇರೆಯೇ ಆಗಿರುತ್ತದೆ. ಎಲ್ಲ ಹಣಕಾಸು ವಹಿವಾಟಿಗಳಿಗೆ ಈ ಪ್ಯಾನ್ ಸಂಖ್ಯೆಯಲ್ಲಿ ರೆಫೆರೆನ್ಸ್ ಆಗಿ ಬಳಕೆ ಮಾಡಲಾಗುತ್ತದೆ. ಯಾರು ತೆರಿಗೆಗೆ ಒಳಪಡುವ ಆದಾಯವನ್ನು ಗಳಿಸುತ್ತಾರೋ ಅವರಲ್ಲಿ ಪ್ಯಾನ್ ಕಾರ್ಡ್ ಇರುವುದು ಕಡ್ಡಾಯವಾಗಿದೆ. ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ಆದಾಯ ತೆರಿಗೆ ಸಂದರ್ಭ ತೊಂದರೆ ಉಂಟಾಗುತ್ತದೆ.

ಒಂದಕ್ಕಿಂತ ಅಧಿಕ ಪ್ಯಾನ್ ಕಾರ್ಡ್ ಹೊಂದಬಹುದೇ?
ಆದಾಯ ತೆರಿಗೆ ಇಲಾಖೆಯು ನಿಗದಿಪಡಿಸಿದ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ, ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಹೊಂದುವುದು ನಿಷೇಧವಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಅವರ ಹೆಸರಿನಲ್ಲಿ ನೀಡಲಾದ ಒಂದು ಪ್ಯಾನ್ ಕಾರ್ಡ್ ಅನ್ನು ಮಾತ್ರ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಈ ಪ್ಯಾನ್ ಕಾರ್ಡ್ ಅವರಿಗೆ ಮಾತ್ರ ಬಳಕೆಗೆ ಇರಲಿದೆ. ಇದನ್ನು ಬೇರೆಯವರು ಬಳಕೆ ಮಾಡಲು ಸಾಧ್ಯವಾಗುವಿದಿಲ್ಲ.
PAN, Aadhaar Safe: ಆಧಾರ್, ಪ್ಯಾನ್ ಸುರಕ್ಷಿತವಾಗಿರಿಸುವುದು ಹೇಗೆ, ವಂಚನೆ ಹೀಗೆ ತಡೆಯಿರಿ
ಒಂದಕ್ಕಿಂತ ಅಧಿಕ ಪ್ಯಾನ್ ಕಾರ್ಡ್ ಇದ್ದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಮತ್ತು ದಂಡವನ್ನು ಕೂಡಾ ತೆರಬೇಕಾಗುತ್ತದೆ. ಒಂದಕ್ಕಿಂತ ಅಧಿಕ ಪ್ಯಾನ್ ಕಾರ್ಡ್ ಅನ್ನು ಹೊಂದುವುದನ್ನು ಆದಾಯ ತೆರಿಗೆ ಇಲಾಖೆಯ ಪ್ರಕಾರ ನಿಯಮ ಉಲ್ಲಂಘನೆಯಾಗಿದೆ. ಹಾಗೆಯೇ ಇದು ಆದಾಯ ತೆರಿಗೆ ದಾಖಲೆಗಳಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಲಿದೆ. ಓರ್ವ ವ್ಯಕ್ತಿಯ ತೆರಿಗೆಯನ್ನು ಪರಿಶೀಲಿಸಲು ಇಲಾಖೆಗೆ ತೊಂದರೆ ಉಂಟು ಮಾಡಬಹುದು.
ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳಿಗೆ ದಂಡ
ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದರೆ ಆದಾಯ ತೆರಿಗೆ ಇಲಾಖೆಯು ಅವರ ವಿರುದ್ಧ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 272B ಅಡಿಯಲ್ಲಿ ವಿಚಾರಣೆಯನ್ನು ಪ್ರಾರಂಭಿಸಬಹುದು. ಈ ಸೆಕ್ಷನ್ ಪ್ರಕಾರ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವ ವ್ಯಕ್ತಿಯ ಮೇಲೆ ರೂಪಾಯಿ ಹತ್ತು ಸಾವಿರದವರೆಗೆ ದಂಡವನ್ನು ವಿಧಿಸಬಹುದು. ದಂಡವನ್ನು ತಪ್ಪಿಸಿಕೊಳ್ಳಬೇಕಾದರೆ ನಾವು ಒಂದು ಪ್ಯಾನ್ ಕಾರ್ಡ್ ಮಾತ್ರ ಹೊಂದಿರಬೇಕಾಗುತ್ತದೆ.
ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ - https://incometaxindiaefiling.gov.in/
ಹಂತ 2: ನಿಮ್ಮ ವಿವರ ಹಾಕಿ, ಪ್ಯಾನ್ ಬಳಕೆದಾರರ ಐಡಿ ಆಗಿರುತ್ತದೆ
ಹಂತ 3: ಯೂಸರ್ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ಬಳಸಿ ಲಾಗಿನ್ ಮಾಡಿ
ಹಂತ 4: ಪಾಪ್-ಅಪ್ ವಿಂಡೋದಲ್ಲಿ ನಿಮ್ಮ ಪ್ಯಾನ್ ಆಧಾರ್ ಲಿಂಕ್ ಆಯ್ಕೆ ಇರುತ್ತದೆ
ಹಂತ 5: ವಿಂಡೋ ಕಾಣಿಸದಿದ್ದರೆ, ಮೆನು ಬಾರ್‌ನಲ್ಲಿ 'Profile Settings' ಗೆ ಹೋಗಿ, 'Link Aadhaar' ಕ್ಲಿಕ್ ಮಾಡಿ
ಹಂತ 6: ಆಧಾರ್‌ನಲ್ಲಿರುವ ಪ್ಯಾನ್ ವಿವರ ಪರಿಶೀಲಿಸಿ, link now ಬಟನ್ ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣ
ಪ್ಯಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ದಂಡ: ಈ ಹಿಂದೆ ಜೂನ್ 2022ಕ್ಕೂ ಮುನ್ನ ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಯಾವುದೇ ದಂಡ ಇರಲಿಲ್ಲ. ಆದರೆ ಗಡುವು ವಿಸ್ತರಣೆ ಮಾಡುತ್ತಾ ಹೋದ ಹಾಗೆ ಜೂನ್ 30, 2022ರಂದು ಪ್ಯಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು 500 ರೂಪಾಯಿ ದಂಡವನ್ನು ವಿಧಿಸಲಾಗಿದೆ. ಜುಲೈ 1, 2022ರಿಂದ ಈ ದಂಡದ ಮೊತ್ತವನ್ನು 1000 ರೂಪಾಯಿಗೆ ಏರಿಕೆ ಮಾಡಲಾಗಿದೆ. ಪ್ರಸ್ತುತ 1 ಸಾವಿರ ದಂಡ ತೆತ್ತು ನೀವು ಜೂನ್ 30, 2023ರವರೆಗೆ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದಾಗಿದೆ.


Click it and Unblock the Notifications