ನೀವು ನಿವೃತ್ತಿಯ ಬಗ್ಗೆ ಯೋಜನೆ ಹಾಕಿಕೊಂಡಿದ್ದೀರಾ ? ನೀವು ನಿವೃತ್ತಿ ಯೋಜನೆಯ ಬಗ್ಗೆ ಯೋಚಿಸದಿದ್ದರೆ, ಈಗಲೇ ಅದನ್ನು ಮಾಡಲು ಪ್ರಾರಂಭಿಸುವುದು ಒಳ್ಳೆಯದು. ಯಾಕೆಂದರೆ ಪರಿಪೂರ್ಣ ನಿವೃತ್ತ ಜೀವನ ನಡೆಸಲು ಸೂಕ್ತ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮುಂದೆ ಸಹಾಯಕ್ಕೆ ಬರುತ್ತದೆ. ಇಂತಹ ಯೋಜನೆಗಳಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಒಂದು ಆದರ್ಶ ಆಯ್ಕೆಯಾಗಿದೆ.
ಇದರಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿಯ ಸಮಯದಲ್ಲಿ ನಿಯಮಿತ ಆದಾಯವನ್ನು ಪಡೆಯಲು ಅನುಕೂಲವಾಗುತ್ತದೆ. ಎನ್‌ಪಿಎಸ್‌ನಲ್ಲಿ ಟೈರ್ I ಮತ್ತು ಟೈರ್ II ಎರಡು ರೀತಿಯ ಖಾತೆಗಳಿವೆ. ಟೈರ್ I ಖಾತೆದಾರರು ಮಾತ್ರ ಟೈರ್ II ನಲ್ಲಿ ಮಾತ್ರ ಹೂಡಿಕೆ ಮಾಡಬಹುದು. ಟೈರ್ II ಖಾತೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸನ್ನು ತಲುಪಿದ ನಂತರ, ಜೀವ ವಿಮಾ ಕಂಪನಿಯಿಂದ ವರ್ಷಾಶನವನ್ನು ಖರೀದಿಸಲು ನಿಮ್ಮ ಎನ್‌ಪಿಎಸ್ ನಿಧಿಯ ಕನಿಷ್ಠ ಶೇಕಡ 40 ಅನ್ನು ನೀವು ಬಳಸಿಕೊಳ್ಳಬೇಕು ಮತ್ತು ಶೇಕಡ 60 ವರೆಗಿನ ಮೊತ್ತವನ್ನು ಹಿಂಪಡೆಯಬಹುದಾಗಿದೆ.

7 ಅದ್ಬುತ ಅಂಶಗಳನ್ನೊಮ್ಮೆ ಓದಿ
ಕಡಿಮೆ ನಿರ್ವಹಣಾ ಶುಲ್ಕಗಳು : ರಾಷ್ಟ್ರೀಯ ಪಿಂಚಣಿ ಯೋಜನೆ ತೀರಾ ಕಡಿಮೆ ನಿರ್ವಹಣಾ ಶುಲ್ಕವನ್ನು ಹೊಂದಿದ್ದು, ಶೇಕಡ 0.09 ರಿಂದ ಪ್ರಾರಂಭವಾಗಿ , ನಿರ್ವಹಣೆಯ ಅಡಿಯಲ್ಲಿ ನಿಮ್ಮ ಸ್ವತ್ತು/ ಆಸ್ತಿಯೂ ಹೆಚ್ಚಾದಂತೆ ವೆಚ್ಚವೂ ಕಡಿಮೆಯಾಗುತ್ತಾ ಹೋಗುತ್ತದೆ.
ಈಕ್ವಿಟಿ ಎಕ್ಸ್ ಫೋಸರ್( Equity exposure): ನೀವು ಆಯ್ಕೆ ಮಾಡಿದ ಯೋಜನೆಯನ್ನು ಅವಲಂಬಿಸಿ, ಎನ್‌ಪಿಎಸ್ ಶೇಕಡ 75 ರವರೆಗೆ ಈಕ್ವಿಟಿ ಎಕ್ಸ್ ಫೋಸರ್ ನೀಡುತ್ತದೆ. ಆಕ್ಟಿವ್ ಮತ್ತು ಸ್ವಯಂ (Auto options) ಆಯ್ಕೆಗಳು ಲಭ್ಯವಿವೆ.
ಯುಪಿಐ ಬಳಸಿ ತಕ್ಷಣ ವರ್ಗಾವಣೆ ಮಾಡಬಹುದು: ಯುಪಿಐ ಮೂಲಕ ನೇರವಾಗಿ ಟ್ರಸ್ಟಿ ಬ್ಯಾಂಕ್‌ಗೆ ನೇರವಾಗಿ ಹಣವನ್ನು ವರ್ಗಾಯಿಸಬಹುದು ಮತ್ತು ಅದೇ ದಿನದ ನಿವ್ವಳ ಆಸ್ತಿ ಮೌಲ್ಯದ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ವೆಚ್ಚ ಕಡಿತಕ್ಕೆ ಆನ್‌ಲೈನ್ ಆಯ್ಕೆ: ಆನ್‌ಲೈನ್‌ನಲ್ಲಿ ಎನ್‌ಪಿಎಸ್ ಖಾತೆಯನ್ನು ತೆರೆಯುವುದು ಅತ್ಯಂತ ವೆಚ್ಚ ಕಡಿತದ ಪರಿಣಾಮಕಾರಿ ವಿಧಾನವಾಗಿದೆ. ಆರಂಭಿಕ ಖಾತೆ ತೆರೆಯುವ ಶುಲ್ಕ 400 ರೂಪಾಯಿ + ಜಿಎಸ್‌ಟಿ ಆಗಿದೆ.
ಪರ್ಯಾಯ ಹೂಡಿಕೆ ನಿಧಿ (ಎಐಎಫ್): ಎನ್‌ಪಿಎಸ್ ಪರ್ಯಾಯ ಹೂಡಿಕೆ ನಿಧಿಗಳು, REIT ಗಳು ಮತ್ತು ಮೂಲಸೌಕರ್ಯ ಹೂಡಿಕೆಗಳಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ಒದಗಿಸುತ್ತದೆ.
ಪಿಂಚಣಿ ಅರ್ಹತೆ: ಪಿಂಚಣಿ ಪ್ರಯೋಜನಗಳಿಗೆ ಅರ್ಹರಾಗಲು, ಕನಿಷ್ಠ ಮೂರು ವರ್ಷಗಳವರೆಗೆ ಕಾಂಟ್ರಿಬ್ಯೂಟ್ ನೀಡಿರಬೇಕು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಇದಲ್ಲದೇ ಜೀವ ವಿಮಾ ಕಂಪನಿಗಳಿಂದ ವಿವಿಧ ವರ್ಷಾಶನ ಯೋಜನೆಗಳನ್ನು ಆಯ್ಕೆ ಮಾಡಬಹುದಾಗಿದೆ.
ಪೋರ್ಟಬಿಲಿಟಿ: ಎನ್‌ಪಿಎಸ್ ತಡೆರಹಿತ ಪೋರ್ಟಬಿಲಿಟಿ ನೀಡುತ್ತದೆ. ನಿಮ್ಮ ಪಿಆರ್‌ಎಎನ್ ಸಂಖ್ಯೆಯನ್ನು ಬಳಸಿಕೊಂಡು ನೀವು ನಿಮ್ಮ ನಗರ ಅಥವಾ ಉದ್ಯೋಗವನ್ನು ಬದಲಾಯಿಸಿದರೂ ಸಹ ನಿಮ್ಮ ಖಾತೆಯನ್ನು ಯಾವುದೇ ಸ್ಥಳದಿಂದ ನಿರ್ವಹಿಸಬಹುದು.
ಪಿಂಚಣಿ ಯೋಜನೆಯಾಗಿ, 60 ವರ್ಷದವರೆಗೆ ಹೂಡಿಕೆಯನ್ನು ಮುಂದುವರೆಸುವುದು ನಿಮಗೆ ಮುಖ್ಯವಾಗಿದೆ. ಅದರೂ ನೀವು ಕನಿಷ್ಠ ಮೂರು ವರ್ಷಗಳವರೆಗೆ ಹೂಡಿಕೆ ಮಾಡುತ್ತಿದ್ದರೆ, ನೀವು ಕೆಲವು ಉದ್ದೇಶಗಳಿಗಾಗಿ ಶೇಕಡ 25 ರವರೆಗೆ ವಿತ್‌ಡ್ರಾ ಮಾಡಬಹುದು.
ಇವುಗಳು ಮಕ್ಕಳ ಮದುವೆ ಅಥವಾ ಉನ್ನತ ಅಧ್ಯಯನಗಳು, ಮನೆ ನಿರ್ಮಾಣ/ಖರೀದಿ ಅಥವಾ ಸ್ವಯಂ/ಕುಟುಂಬದ ವೈದ್ಯಕೀಯ ಚಿಕಿತ್ಸೆಯನ್ನು ಒಳಗೊಂಡಿವೆ. ಸಂಪೂರ್ಣ ಕಾಲಾವಧಿಯಲ್ಲಿ ನೀವು ಮೂರು ಬಾರಿ (ಐದು ವರ್ಷಗಳ ಅಂತರದೊಂದಿಗೆ) ವಿತ್‌ಡ್ರಾವಲ್ ಮಾಡಬಹುದು.


Click it and Unblock the Notifications