ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮತ್ತೆ ತನ್ನ ಬಡ್ಡಿದರವನ್ನು ಏರಿಕೆ ಮಾಡಿದೆ. ಕೆಲವು ಅವಧಿಯ ಎಫ್‌ಡಿ ಬಡ್ಡಿದರವನ್ನು ಮಾತ್ರ ಪಿಎನ್‌ಬಿ ಏರಿಕೆ ಮಾಡಿದೆ. ಇನ್ನು ಕೆಲವು ಅವಧಿಯ ಎಫ್‌ಡಿ ಬಡ್ಡಿದರವನ್ನು ಬ್ಯಾಂಕ್ ಇಳಿಕೆ ಮಾಡಿದೆ. ಈ ನೂತನ ಬಡ್ಡಿದರವು ಮೇ 18, 2023ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ.
ನೂತನ ಎಫ್‌ಡಿ ದರವು 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಮೇಲೆ ಅನ್ವಯವಾಗಲಿದೆ. ಪಿಎನ್‌ಬಿ ವೆಬ್‌ಸೈಟ್ ಪ್ರಕಾರ, 444 ದಿನಗಳ ಫಿಕ್ಸಿಡ್ ಡೆಪಾಸಿಟ್ ಮೇಲಿನ ಬಡ್ಡಿದರವನ್ನು ಶೇಕಡ 6.80ರಿಂದ ಶೇಕಡ 7.25ಕ್ಕೆ ಏರಿಕೆ ಮಾಡಲಾಗಿದೆ. ಇನ್ನು 666 ದಿನಗಳ ಎಫ್‌ಡಿ ಮೇಲಿನ ಬಡ್ಡಿದರವನ್ನು ಶೇಕಡ 7.25ರಿಂದ ಶೇಕಡ 7.05ಕ್ಕೆ ಇಳಿಕೆ ಮಾಡಲಾಗಿದೆ.

ಇನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವೆಬ್‌ಸೈಟ್‌ನಲ್ಲಿ ಉಲ್ಲೇಖ ಮಾಡಿರುವಂತೆ ಸಾಮಾನ್ಯ ನಾಗರಿಕರಿಗೆ 444 ದಿನಗಳ ಎಫ್‌ಡಿ ಮೇಲೆ ಗರಿಷ್ಠವಾಗಿ ಶೇಕಡ 7.25ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಇನ್ನು ಹಿರಿಯ ನಾಗರಿಕರಿಗೆ ಅದೇ ಅವಧಿಯ ಎಫ್‌ಡಿ ಮೇಲೆ ಶೇಕಡ 8.05ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ನೂತನ ಬಡ್ಡಿದರದ ವಿವರ ಇಲ್ಲಿದೆ ಮುಂದೆ ಓದಿ....
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ನೂತನ ಬಡ್ಡಿದರ
7-14 ದಿನಗಳು: 3.50 ಶೇಕಡ ಬಡ್ಡಿದರ
15-29 ದಿನಗಳು: 3.50 ಶೇಕಡ ಬಡ್ಡಿದರ
30-45 ದಿನಗಳು: 3.50 ಶೇಕಡ ಬಡ್ಡಿದರ
46-90 ದಿನಗಳು: 4.50 ಶೇಕಡ ಬಡ್ಡಿದರ
91-179 ದಿನಗಳು: 4.50 ಶೇಕಡ ಬಡ್ಡಿದರ
180-270 ದಿನಗಳು: 5.50 ಶೇಕಡ ಬಡ್ಡಿದರ
271 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ದಿನಗಳು: 5.80 ಶೇಕಡ ಬಡ್ಡಿದರ
1 ವರ್ಷ: 6.80 ಶೇಕಡ ಬಡ್ಡಿದರ
1 ವರ್ಷಕ್ಕಿಂತ ಮೇಲ್ಪಟ್ಟು 599 ದಿನಗಳು: 6.80 ಶೇಕಡ ಬಡ್ಡಿದರ
444 ದಿನಗಳು: 7.25 ಶೇಕಡ ಬಡ್ಡಿದರ
445-665 ದಿನಗಳು: 6.80 ಶೇಕಡ ಬಡ್ಡಿದರ
666 ದಿನಗಳು: 7.25 ಶೇಕಡ ಬಡ್ಡಿದರ
667 ದಿನದಿಂದ 2 ವರ್ಷದವರೆಗೆ: 6.80 ಶೇಕಡ ಬಡ್ಡಿದರ
2 ವರ್ಷಕ್ಕಿಂತ ಮೇಲ್ಪಟ್ಟು 3 ವರ್ಷದವರೆಗೆ: 7 ಶೇಕಡ ಬಡ್ಡಿದರ
3 ವರ್ಷಕ್ಕಿಂತ ಮೇಲ್ಪಟ್ಟು 5 ವರ್ಷದವರೆಗೆ: 6.50 ಶೇಕಡ ಬಡ್ಡಿದರ
5 ವರ್ಷಕ್ಕಿಂತ ಮೇಲ್ಪಟ್ಟು 10 ವರ್ಷದವರೆಗೆ: 6.50 ಶೇಕಡ ಬಡ್ಡಿದರ
ಹಿರಿಯ ನಾಗರಿಕರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ನೂತನ ಬಡ್ಡಿದರ
7-14 ದಿನಗಳು: 4.00 ಶೇಕಡ ಬಡ್ಡಿದರ
15-29 ದಿನಗಳು: 4.00 ಶೇಕಡ ಬಡ್ಡಿದರ
30-45 ದಿನಗಳು: 4.00 ಶೇಕಡ ಬಡ್ಡಿದರ
46-90 ದಿನಗಳು: 5.00 ಶೇಕಡ ಬಡ್ಡಿದರ
91-179 ದಿನಗಳು: 5.00 ಶೇಕಡ ಬಡ್ಡಿದರ
180-270 ದಿನಗಳು: 6.00 ಶೇಕಡ ಬಡ್ಡಿದರ
271 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ದಿನಗಳು: 6.30 ಶೇಕಡ ಬಡ್ಡಿದರ
1 ವರ್ಷ: 7.30 ಶೇಕಡ ಬಡ್ಡಿದರ
1 ವರ್ಷಕ್ಕಿಂತ ಮೇಲ್ಪಟ್ಟು 665 ದಿನಗಳು: 7.30 ಶೇಕಡ ಬಡ್ಡಿದರ
444 ದಿನಗಳು: 7.75 ಶೇಕಡ ಬಡ್ಡಿದರ
445-665 ದಿನಗಳು: 7.30 ಶೇಕಡ ಬಡ್ಡಿದರ
666 ದಿನಗಳು: 7.25 ಶೇಕಡ ಬಡ್ಡಿದರ
667 ದಿನದಿಂದ 2 ವರ್ಷದವರೆಗೆ: 7.30 ಶೇಕಡ ಬಡ್ಡಿದರ
2 ವರ್ಷಕ್ಕಿಂತ ಮೇಲ್ಪಟ್ಟು 3 ವರ್ಷದವರೆಗೆ: 7.50 ಶೇಕಡ ಬಡ್ಡಿದರ
3 ವರ್ಷಕ್ಕಿಂತ ಮೇಲ್ಪಟ್ಟು 5 ವರ್ಷದವರೆಗೆ: 7.00 ಶೇಕಡ ಬಡ್ಡಿದರ
5 ವರ್ಷಕ್ಕಿಂತ ಮೇಲ್ಪಟ್ಟು 10 ವರ್ಷದವರೆಗೆ: 7.30 ಶೇಕಡ ಬಡ್ಡಿದರ


Click it and Unblock the Notifications