ಅಂಚೆ ಕಚೇರಿ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಅತೀ ನಂಬಿಕಾರ್ಹ ಹೂಡಿಕೆಯಾಗಿದೆ. ಆದರೆ ಕೊಂಚ ಅಧಿಕ ಸಮಯವೇ ಬೇಕಾಗುತ್ತದೆ. ನಾವು ಯಾವುದೇ ವಯಸ್ಸಿನವರಾದರೂ ಹೂಡಿಕೆ ಮಾಡಲು ಸಾಧ್ಯವಾಗುವಂತಹ ಹಲವಾರು ಯೋಜನೆಗಳನ್ನು ಅಂಚೆ ಕಚೇರಿ ಹೊಂದಿದೆ. ಸುರಕ್ಷಿತವಾದ ಈ ಹೂಡಿಕೆಯಲ್ಲಿ ನಾವು ಯಾವುದೇ ಚಿಂತೆ ಇಲ್ಲದೆ ಹೂಡಿಕೆ ಮಾಡಬಹುದು.
ಇತ್ತೀಚೆಗೆ ಕೇಂದ್ರ ಬಜೆಟ್ 2023ರಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೆಲವು ಜನಪ್ರಿಯ ಅಂಚೆ ಕಚೇರಿ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಎಂಐಎಸ್) ಪ್ರತಿ ತಿಂಗಳು ಗ್ರಾಹಕರು ನಿಗದಿತ ಆದಾಯವನ್ನು ಪಡೆಯಲು ಅವಕಾಶ ನೀಡುತ್ತದೆ. ಅಧಿಕ ಮೊತ್ತವನ್ನು ಹೂಡಿಕೆ ಮಾಡಿ, ಮಾಸಿಕವಾಗಿ ಆದಾಯ ಪಡೆಯುವ ಯೋಜನೆ ಇದಾಗಿದೆ. ಕೇಂದ್ರ ಬಜೆಟ್ 2023ರಲ್ಲಿ ಈ ಯೋಜನೆಯ ಹೂಡಿಕೆ ಮೊತ್ತವನ್ನು ಸಿಂಗಲ್ ಅಕೌಂಟ್ 9 ಲಕ್ಷ ರೂಪಾಯಿ, ಜಾಯಿಂಟ್ ಅಕೌಂಟ್ 15 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಬಡ್ಡಿದರ ಸ್ಥಿರವಾಗಿದ್ದು ಶೇಕಡ 7.10 ಆಗಿದೆ.

ಇತರೆ ನಾಲ್ಕು ಯೋಜನೆಗಳು
ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಹಿರಿಯ ನಾಗರಿಕರಿಗೆ ಸುರಕ್ಷಿತ ಹೂಡಿಕೆ ಆಯ್ಕೆಯನ್ನು ನೀಡುತ್ತದೆ. ಇದು ವಾರ್ಷಿಕವಾಗಿ ಶೇಕಡ 8.00ರಷ್ಟು ಬಡ್ಡಿದರವನ್ನು ನೀಡುತ್ತದೆ. ಇದರ ಹೂಡಿಕೆ ಮಿತಿಯನ್ನು ಕೇಂದ್ರ ಸರ್ಕಾರವು 15 ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿಗೆ ಏರಿಸಿದೆ.
ಇನ್ನು ಯಾರು ತನ್ನ ಹೆಣ್ಣು ಮಗುವಿನ ಹಣಕಾಸು ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಬಯಸುತ್ತಾರೋ ಅವರು ಸುಕುನ್ಯ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು ಒಂದು ಹಣಕಾಸು ವರ್ಷದಲ್ಲಿ 250 ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಈ ಹೂಡಿಕೆಗೆ ಶೇಕಡ 7.6ರಷ್ಟು ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ.
ಕಿಸಾನ್ ವಿಕಾಸ್ ಪತ್ರ ಯೋಜನೆಯು ಕೂಡಾ ಅಂಚೆ ಕಚೇರಿ ಹೂಡಿಕೆಯಾಗಿದ್ದು, ಇದು ರೈತರಿಗಾಗಿ ಇರುವ ಯೋಜನೆಯಾಗಿದೆ. ಇಲ್ಲಿ ರೈತರು ಮಾಡಿದ ಹೂಡಿಕೆಗೆ ಶೇಕಡ 7.2ರಷ್ಟು ರಿಟರ್ನ್ ಅನ್ನು ಪಡೆಯಲು ಸಾಧ್ಯವಾಗುತ್ತದೆ. 1000 ರೂಪಾಯಿಯಿಂದ ಹೂಡಿಕೆ ಮಾಡಲು ಅವಕಾಶವಿದೆ. ನೀವು ಮಾಡಿದ ಹೂಡಿಕೆಯು 120 ತಿಂಗಳಲ್ಲಿ ದುಪ್ಪಟ್ಟು ಆಗುತ್ತದೆ.
ಅಂಚೆ ಕಚೇರಿಯ ಇನ್ನೊಂದು ಪ್ರಮುಖ ಯೋಜನೆ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಅಥವಾ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಆಗಿದೆ. ಇದು ಸಣ್ಣ ಉಳಿತಾಯ ಯೋಜನೆಯಾಗಿದೆ. ಶೇಕಡ 7.00ಯಷ್ಟು ರಿಟರ್ನ್ ಅನ್ನು ನೀಡುತ್ತದೆ. ಇದರಲ್ಲಿ ನೀವು 1000 ರೂಪಾಯಿಯಿಂದ 100 ರೂಪಾಯಿವರೆಗೆ ಹೂಡಿಕೆ ಮಾಡಬಹುದು. ಇದರ ಒಟ್ಟು ಹೂಡಿಕೆ ಅವಧಿ 5 ವರ್ಷವಾಗಿದೆ.


Click it and Unblock the Notifications